ಪಟ್ಟು ಸಡಿಲಿಸಿ ಹೈಕಮಾಂಡ್ ಸೂತ್ರಕ್ಕೆ ಒಪ್ಪಿದ ಡಿಕೆ ಶಿವಕುಮಾರ್: ಏನದು ಸೂತ್ರ? ತಡರಾತ್ರಿ ಏನೆಲ್ಲ ಆಯ್ತು? ಇಲ್ಲಿದೆ ಡಿಟೇಲ್ಸ್
ಕರ್ನಾಟಕ ಮುಖ್ಯಮಂತ್ರಿ ಆಯ್ಕೆ ಕಗ್ಗಂಟು ಬಗೆಹರಿದಿದೆ. ಹೈಕಮಾಂಡ್ನ ಸೂತ್ರಕ್ಕೆ ಕೆಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪಟ್ಟು ಸಡಿಲಿಸಿ ಒಪ್ಪಿಕೊಂಡಿದ್ದಾರೆ. ಹಾಗಾದ್ರೆ, ಏನದು ಹೈಕಮಾಂಡ್ ಸೂತ್ರ? ತಡಾತ್ರಿ ನಡೆದ ಬೆಳವಣಿಗೆಗಳ ಸಂಪೂರ್ಣ ವಿವರ ಇಲ್ಲಿದೆ.
ನವದೆಹಲಿ: ಕರ್ನಾಟಕದ ಮುಖ್ಯಮಂತ್ರಿ ಆಯ್ಕೆ ಕಗ್ಗಂಟನ್ನು ಹೈಕಮಾಂಡ್ ಕೊನೆಗೂ ಬಿಡಿಸಿದೆ. ಕಳೆದ ನಾಲ್ಕೈದು ದಿನಗಳಿಂದ ಸರಣಿ ಸಭೆಗಳ ಮೂಲಕ ಹೈಕಮಾಂಡ್ ನಾಯಕರು ಡಿಕೆ ಶಿವಕುಮಾರ್ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು, ಮೇ 20ರಂದು ನೂತನ ಸಿಎಂ ಆಗಿ ಸಿದ್ದರಾಮಯ್ಯ ಅವರು ಪ್ರಮಾಣವಚನ ಸ್ವೀಕರಿಸುವುದು ಬಹುತೇಕ ಖಚಿತವಾಗಿದೆ. ಇನ್ನು ಸಿಎಂ ಹುದ್ದೆ ಪಟ್ಟು ಸಡಿಲಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಹೈಕಮಾಂಡ್ ಸೂತ್ರಕ್ಕೆ ಒಪ್ಪಿದ್ದಾರೆ. ಸೋನಿಯಾ ಗಾಂಧಿ ಅವರು ರೂಪಿಸಿದ್ದ ಸೂತ್ರವನ್ನು ಮುಂದಿಟ್ಟು ಡಿಕೆ ಶಿವಕುಮಾರ್ ಅವರನ್ನ ಮನವೊಲಿಸಿದ್ದಾರೆ. ಹಾಗಾದ್ರೆ, ಏನದು ಸೂತ್ರ? ತಡರಾತ್ರಿ ನಡೆದ ಚರ್ಚೆ ಏನು? ಇಲ್ಲಿದೆ ನೋಡಿ ಮಿಡ್ನೈಟ್ ಮೀಟಿಂಗ್ ಸಕ್ಸಸ್.
ಕಳೆದ ನಾಲ್ಕೈದು ದಿನಗಳಿಂದ ಕಗ್ಗಂಟಾಗಿದ್ದ ಸಿಎಂ ಆಯ್ಕೆ ಸಂಬಂಧ ಕೊನೆಗೂ ಹೈಕಮಾಂಡ್ ಬಗೆಹರಿಸಿದೆ. ಬುಧವಾರ ತಡರಾತ್ರಿ ವರೆಗೆ ಕೆಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾಜುರ್ನ ಖರ್ಗೆ ಸುದೀರ್ಘ ರ್ಚೆ, ಸಭೆಗಳನ್ನು ಮಾಡಿ ಡಿಕೆ ಶಿವಕುಮಾರ್ ಅವರ ಮನವೊಲಿಸಿದ್ದಾರೆ. ಸಿಎಂ ಸ್ಥಾನಕ್ಕೆ ಪಟ್ಟು ಹಿಡಿದಿದ್ದ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ಗೆ ಅಧಿಕಾರ ಹಂಚಿಕೆ ಸೂತ್ರದ ಮೂಲಕ ಇಬ್ಬರ ಮಧ್ಯೆ ಸಂಧಾನ ಮಾಡಿದೆ. ಅದೇನೆಂದರೆ ಸಿದ್ದರಾಮಯ್ಯ ಅವರಿಗೆ ಮೊದಲ ಎರಡುವರೆ ವರ್ಷ ನಂತರ ಡಿಕೆ ಶಿವಕುಮಾರ್ ಅವರಿಗೆ ಎರೆಡುವರೆ ವರ್ಷ ಸಿಎಂ ಪಟ್ಟ ಕಟ್ಟುವ ತೀರ್ಮಾನ ಮಾಡಲಾಗಿದೆ. ಇದಕ್ಕೆ ಡಿಕೆ ಶಿವಕುಮಾರ್ ಸಹ ಒಪ್ಪಿದ್ದಾರೆ. ಇದರೊಂದಿಗೆ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದ್ದು, ಮೇ 20ರಂದು ಕಂಠೀರವ ಸ್ಟೇಡಿಯಂನಲ್ಲಿ ಸಿದ್ದರಾಮಯ್ಯ ಸಿಎಂ ಆಗಿ, ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಅಧಿಕಾರ ಹಂಚಿಕೆ; ಮೊದಲ ಅವಧಿಗೆ ಸಿದ್ದು ಸಿಎಂ
ಕರ್ನಾಟಕದ ಮುಖ್ಯಮಂತ್ರಿ ಆಯ್ಕೆ ವಿಚಾರ ಬಗೆಹರಿದಿದೆ. ಅಧಿಕಾರ ಹಂಚಿಕೆ ಮಾಡಲಾಗಿದ್ದು, 5 ವರ್ಷಗಳ ಅಧಿಕಾರ ಅವಧಿಯಲ್ಲಿ ತಲಾ ಎರಡೂವರೆ ವರ್ಷಗಳ ಕಾಲ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸಿಎಂ ಆಗಿ ಅಧಿಕಾರ ಅನುಭವಿಸಲಿದ್ದಾರೆ. ಮೊದಲನೇ ಅವಧಿಗೆ ಸಿದ್ದರಾಮಯ್ಯ ಸಿಎಂ ಹಾಗೂ ಡಿಕೆಶಿ ಡಿಸಿಎಂ ಆಗಲಿದ್ದಾರೆ. ಶನಿವಾರ (ಮೇ 20) ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಹುಲ್ ಗಾಂಧಿ ಸೇರಿದಂತೆ ಯಾವೊಬ್ಬ ವರಿಷ್ಠ ಮಾತಿಗೂ ಬಗ್ಗೆ ಡಿಕೆ ಶಿವಕುಮಾರ್ ಅಂತಿಮವಾಗಿ ಸೋನಿಯಾ ಗಾಂಧಿ ಸೂತ್ರಕ್ಕೆ ಬಗ್ಗಿದ್ದಾರೆ.
ಮೂವರನ್ನು ಡಿಸಿಎಂ ಮಾಡಲು ಡಿಕೆಶಿ ವಿರೋಧ
ಇನ್ನು ಕಾಂಗ್ರೆಸ್ ಮುಂದಿನ ಲೋಕಸಭೆ ಚುನಾವಣೆ ದೃಷ್ಟಿಯಿಂದ ಮೂರು ಸಮುದಾಯಗಳ ಮೂವರನ್ನು ಉಪಮುಖ್ಯಮಂತ್ರಿ ಮಾಡಲು ಹೈಕಮಾಂಡ್ ಪ್ಲ್ಯಾನ್ ಮಾಡಿಯತ್ತು. ಆದ್ರೆ, ಇದಕ್ಕೆ ಡಿಕೆ ಶಿವಕುಮಾರ್ ವಿರೋಧಿಸಿದ್ದಾರೆ. ಮೂವರನ್ನು ಡಿಸಿಎಂ ಮಾಡಿದರೆ ಅಧಿಕಾರ ಹಸ್ತಕ್ಷೇಪಗಳು ಆಗುತ್ತವೆ. ಅಲ್ಲದೇ ಜನಕ್ಕೆ ಬೇರೆ ಸಂದೇಶ ಹೋಗುತ್ತದೆ. ಇತರ ಡಿಸಿಎಂ ಸೃಷ್ಠಿಯಿಂದ ಮಹತ್ವ ಕಮ್ಮಿಯಾಗಲಿದೆ. ಹೀಗಾಗಿ ಮೂವರು ಡಿಸಿಎಂ ಬೇಡ ಎಂದು ಹೈಕಮಾಂಡ್ಗೆ ಹೇಳಿದ್ದಾರೆ. ಇದರಿಂದ ಹೈಕಮಾಂಡ್ ಸಹಗ ಮೂವರು ಉಪಮುಖ್ಯಮಂತ್ರಿ ಪ್ಲ್ಯಾನ್ ಕೈಬಿಟ್ಟಿದ್ದಾರೆ.
10 ಗಂಟೆಗೆ ಖರ್ಗೆ ಮಹತ್ವದ ಸುದ್ದಿಗೋಷ್ಠಿ
ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವಿನ ಗುದ್ದಾಟವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಗೆಹರಿಸಿದ್ದಾರೆ. ಸರಣಿ ಸಭೆ ಮೂಲಕ ಎಲ್ಲವನ್ನೂ ಗೊಂದಲಗಳನ್ನು ನಿವಾರಿಸಿದ್ದಾರೆ. ಹೀಗಾಗಿ ಕಳೆದ ನಾಲ್ಕೈದು ದಿನಗಳಿಂದ ದೆಹಲಿಯಲ್ಲಿ ನಡೆದ ರಾಜಕೀಯ ಬೆಳವಣಿಗೆಗಳಿಗೆ ಫುಲ್ ಸ್ಟಾಪ್ ಬಿದ್ದಿದೆ. ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಬೆಳಗ್ಗೆ 10 ಗಂಟೆ ಸುದ್ದಿಗೋಷ್ಠಿ ಕರೆದಿದ್ದಾರೆ. ಇನ್ನು ಈ ಮಾಧ್ಯಮಗೋಷ್ಠಿಯಲ್ಲಿ ಅಧಿಕೃತವಾಗಿ ಸಿಎಲ್ಪಿ ನಾಯಕನ ಹೆಸರು ಘೋಷಣೆ ಮಾಡಿಲಿದ್ದಾರಾ? ಅಥವಾ ಅಧಿಕಾರ ಹಂಚಿಕೆ ಬಗ್ಗೆ ಬಹಿರಂಗಪಡಿಸಲಿದ್ದಾರಾ? ಎನ್ನುವ ಕುತೂಹಲ ಮೂಡಿಸಿದೆ.
ಸಂಜೆ ಕಾಂಗ್ರೆಸ್ ಶಾಸಕಾಂಗ ಸಭೆ
ಇನ್ನು ಎಲ್ಲಾ ಸೂತ್ರಗಳಿಗೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಒಪ್ಪಿಕೊಂಡಿದ್ದು, ಎಲ್ಲಾ ಹಗ್ಗಜಗ್ಗಾಟಕ್ಕೆ ತೆರೆ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಇಂದು(ಮೇ 18) ಸಂಜೆ 7ಗಂಟೆಗೆ ಬೆಂಗಳೂರಿನಲ್ಲಿ ಶಾಸಕಾಂಗ ಸಭೆ ಕರೆಯಲಾಗಿದ್ದು, ಈ ಸಭೆಗೆ ನೂತನ ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಸಂಸದರನ್ನು ಆಹ್ವಾನಿಸಲಾಗಿದ್ದು, ಎಲ್ಲರ ಸಮ್ಮುಖದಲ್ಲೇ ಒಮ್ಮತದ ಅಧಿಕೃತವಾಗಿ ಸಿಎಲ್ಪಿ ನಾಯಕನ ಘೋಷಣೆಯಾಗಲಿದೆ.
Published On - 8:34 am, Thu, 18 May 23