AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Joe Root: 11 ಪಂದ್ಯಗಳಲ್ಲಿ 22 ಸೆಂಚುರಿ ಸಿಡಿಸಿದರೂ ಸಚಿನ್ ದಾಖಲೆ ಮುರಿಯೋದು ಡೌಟ್..!

Sachin Tendulkar - Joe Root: 200 ಟೆಸ್ಟ್ ಪಂದ್ಯಗಳ ಮೂಲಕ 329 ಇನಿಂಗ್ಸ್​ ಆಡಿರುವ ಸಚಿನ್ ತೆಂಡೂಲ್ಕರ್ ಒಟ್ಟು 15921 ರನ್ ಕಲೆಹಾಕಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದೀಗ ಈ ಪಟ್ಟಿಯಲ್ಲಿ ಜೋ ರೂಟ್ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

Joe Root: 11 ಪಂದ್ಯಗಳಲ್ಲಿ 22 ಸೆಂಚುರಿ ಸಿಡಿಸಿದರೂ ಸಚಿನ್ ದಾಖಲೆ ಮುರಿಯೋದು ಡೌಟ್..!
Sachin Tendulkar - Joe Root
ಝಾಹಿರ್ ಯೂಸುಫ್
|

Updated on: Aug 11, 2025 | 10:57 AM

Share

ಯಾರಾಗ್ತಾರೆ ಟೆಸ್ಟ್ ಕ್ರಿಕೆಟ್​ನ ರನ್ ಸರದಾರ?.. ಈ ಒಂದು ಪ್ರಶ್ನೆ ಹುಟ್ಟಿಕೊಳ್ಳಲು ಮುಖ್ಯ ಕಾರಣ ಜೋ ರೂಟ್. ಭಾರತದ ವಿರುದ್ಧದ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ರೂಟ್ ಬರೋಬ್ಬರಿ 537 ರನ್ ಕಲೆ ಹಾಕಿದ್ದರು. ಈ 537 ರನ್ ಗಳೊಂದಿಗೆ ಜೋ ರೂಟ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ರನ್ ಗಳಿಸಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅಂದರೆ ಟೆಸ್ಟ್ ಕ್ರಿಕೆಟ್​ನ ರನ್ ಸರದಾರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅವರ ನಂತರದ ಸ್ಥಾನದಲ್ಲಿ ರೂಟ್ ಕಾಣಿಸಿಕೊಂಡಿದ್ದಾರೆ.

ಅತ್ತ 15921 ರನ್ ಗಳೊಂದಿಗೆ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದರೆ, ಜೋ ರೂಟ್ ಈಗಾಗಲೇ 13453 ರನ್ ಗಳಿಸಿದ್ದಾರೆ. ಅಂದರೆ ಮಾಸ್ಟರ್ ಬ್ಲಾಸ್ಟರ್ ಹಾಗೂ ರೂಟ್ ನಡುವಿನ ವ್ಯತ್ಯಾಸ ಕೇವಲ 2468 ರನ್ ಗಳು. ಆದರೆ ಈ ವ್ಯತ್ಯಾಸವನ್ನು ಇನ್ನೆರಡು ವರ್ಷಗಳಲ್ಲಿ ಸರಿದೂಗಿಸಲು ಸಾಧ್ಯವಾಗುವುದಿಲ್ಲ ಎಂಬುದೇ ಸತ್ಯ.

ಏಕೆಂದರೆ ಈ ವರ್ಷ ಇಂಗ್ಲೆಂಡ್ ಮುಂದಿರುವುದು ಕೇವಲ 5 ಟೆಸ್ಟ್ ಪಂದ್ಯಗಳು ಮಾತ್ರ. ಅದು ಸಹ ಆಸ್ಟ್ರೇಲಿಯಾ ವಿರುದ್ಧದ ಆ್ಯಶಸ್ ಸರಣಿ. ಈ ಸರಣಿ ನಡೆಯಲಿರುವುದು ಆಸ್ಟ್ರೇಲಿಯಾದಲ್ಲಿ. ಇಂಟ್ರೆಸ್ಟಿಂಗ್ ವಿಷಯ ಎಂದರೆ ಆಸ್ಟ್ರೇಲಿಯಾದಲ್ಲಿ ಜೋ ರೂಟ್ ಈವರೆಗೆ ಒಂದು ಸೆಂಚುರಿ ಬಾರಿಸಿಲ್ಲ.

ಆಸ್ಟ್ರೇಲಿಯಾದಲ್ಲಿ ಈವರೆಗೆ 27 ಇನಿಂಗ್ಸ್ ಆಡಿರುವ ಜೋ ರೂಟ್ ಕೇವಲ 892 ರನ್​ಗಳನ್ನು ಮಾತ್ರ ಗಳಿಸಿದ್ದಾರೆ. ಈ ವೇಳೆ 89 ರನ್​ಗಳಿಸಿದ್ದೇ ಅವರ ಗರಿಷ್ಠ ಸ್ಕೋರ್. ಅಂದರೆ 2013 ರಿಂದ 2022 ರವರೆಗೆ ಆಸ್ಟ್ರೇಲಿಯಾ ಪಿಚ್​ನಲ್ಲಿ 14 ಟೆಸ್ಟ್ ಪಂದ್ಯಗಳನ್ನಾಡಿರುವ ಜೋ ರೂಟ್​ ಒಂದೇ ಒಂದು ಶತಕ ಸಿಡಿಸಿಲ್ಲ. ಹೀಗಾಗಿ ಈ ಬಾರಿ ಕೂಡ ಅವರ ಬ್ಯಾಟ್​ನಿಂದ ಭರ್ಜರಿ ಪ್ರದರ್ಶನ ನಿರೀಕ್ಷಿಸುವಂತಿಲ್ಲ.

ಇತ್ತ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯ ಬಳಿಕ ಇಂಗ್ಲೆಂಡ್ 2026 ರಲ್ಲಿ 6 ಟೆಸ್ಟ್ ಪಂದ್ಯಗಳನ್ನಾಡಲಿದೆ. ಅಂದರೆ ಇಂಗ್ಲೆಂಡ್ ತಂಡವು ಇನ್ನು 2026ರ ಅಂತ್ಯದವರೆಗೆ  ಕೇವಲ 11 ಟೆಸ್ಟ್ ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿಯಲಿದೆ.

ಈ 11 ಮ್ಯಾಚ್ ಗಳ 22 ಇನಿಂಗ್ಸ್ ಗಳಲ್ಲಿ ಪವಾಡ ಸದೃಶ ಜೋ ರೂಟ್ 22 ಸೆಂಚುರಿ ಸಿಡಿಸಿದರೂ, ಒಟ್ಟು 2200 ರನ್ ಗಳಾಗಬಹುದು. ಅಂದರೆ 2026ರ ವರೆಗೆ 22 ಶತಕಗಳನ್ನು ಬಾರಿಸಿದರೂ  ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿಯಲು ಜೋ ರೂಟ್​ಗೆ ಇನ್ನೂ 269 ರನ್​ಗಳ ಬೇಕಾಗುತ್ತದೆ.

ಆದರೆ 22 ಇನಿಂಗ್ಸ್​ಗಳಲ್ಲಿ 22 ಶತಕ ಬಾರಿಸಿರುವುದು ಅಸಾಧ್ಯದ ಲೆಕ್ಕಾಚಾರ. ಹೀಗಾಗಿ 2026 ರವರೆಗೆ ಜೋ ರೂಟ್​ಗೆ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿಯಲು ಸಾಧ್ಯವಾಗುವುದಿಲ್ಲ ಎಂಬುದು ಖಚಿತ. ಇದಾದ ಬಳಿಕ ರೂಟ್ ಟೆಸ್ಟ್ ಕ್ರಿಕೆಟ್ ನಲ್ಲಿ ಮುಂದುವರೆಯಲಿದ್ದಾರಾ ಎಂಬುದೇ ಸದ್ಯದ ಪ್ರಶ್ನೆ.

ಏಕೆಂದರೆ 2026ರ ಅಂತ್ಯಕ್ಕೆ ಜೋ ರೂಟ್ ಅವರ ವಯಸ್ಸು 36 ಆಗಿರಲಿದೆ. ಈ ವಯಸ್ಸಿನ ವೇಳೆಗೆ ಇಂಗ್ಲೆಂಡ್ ಆಟಗಾರರು ನಿವೃತ್ತಿ ಘೋಷಿಸುವುದು ಸಾಮಾನ್ಯ. ಇಂಗ್ಲೆಂಡ್ ಪರ 12472 ರನ್ ಬಾರಿಸಿ ಇತಿಹಾಸ ನಿರ್ಮಿಸಿದ್ದ ಅಲಸ್ಟ್ರೈರ್ ಕುಕ್ ತಮ್ಮ 33ನೇ ವಯಸ್ಸಿನಲ್ಲಿ ನಿವೃತ್ತಿ ಘೋಷಿಸಿದ್ದರು ಎಂಬುದು ಇಲ್ಲಿ ಉಲ್ಲೇಖಾರ್ಹ.

ಇದಾಗ್ಯೂ ಇಂಗ್ಲೆಂಡ್ ವೇಗಿ ಜೇಮ್ಸ್ ಅ್ಯಂಡರ್ಸನ್ 41ನೇ ವಯಸ್ಸಿನವರೆಗೆ ಆಡಿದ್ದರು. ಅದರಂತೆ ಜೋ ರೂಟ್ ಇನ್ನೂ ಮೂರು ನಾಲ್ಕು ವರ್ಷಗಳ ಕಾಲ ಆಡಿದರೆ ಮಾತ್ರ ಸಚಿನ್ ತೆಂಡೂಲ್ಕರ್ ಅವರ ವಿಶ್ವ ದಾಖಲೆ ಮುರಿಯಬಹುದು. ಅಂದರೆ ರೂಟ್ ತಮ್ಮ 38 ಅಥವಾ 39ನೇ ವಯಸ್ಸಿನವರೆಗೆ ಟೆಸ್ಟ್ ಆಡಬೇಕು. ಆದರೆ ಇಲ್ಲಿ ರೂಟ್ 39ನೇ ವಯಸ್ಸಿನವರೆಗೆ ಟೆಸ್ಟ್ ಆಡಲಿದ್ದಾರಾ? ಎಂಬುದೇ ಪ್ರಶ್ನೆ.

ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್​ನಲ್ಲಿ ವಿಶೇಷ ವಿಶ್ವ ದಾಖಲೆ ನಿರ್ಮಿಸಿದ ತ್ರಿಮೂರ್ತಿಗಳು

ಈ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗಲು 2026 ರ ಅಂತ್ಯದವರೆಗೆ ಕಾಯಬೇಕು. ಒಂದು ವೇಳೆ ಜೋ ರೂಟ್ 2028 ರವರೆಗೆ ತಮ್ನ ಟೆಸ್ಟ್ ಕೆರಿಯರ್ ಅನ್ನು ಮುಂದುವರೆಸದಿದ್ದರೆ ಸಚಿನ್ ತೆಂಡೂಲ್ಕರ್ ಅವರ ವಿಶ್ವ ದಾಖಲೆ ಮುರಿಯುವುದು ಅಸಾಧ್ಯ ಎಂದೇ ಹೇಳಬಹುದು.

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ