AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿಯಲ್ಲಿ ಸಾಹುಕಾರ್​ಗೆ ಮುಖಭಂಗ: ರಮೇಶ್ ಜಾರಕಿಹೊಳಿ ವಿರುದ್ದ ಸಿಡಿದೆದ್ದ ಮೂಲ ಬಿಜೆಪಿಗರು

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ ಕಂಟ್ರೋಲ್ ತೆಗೆದುಕೊಂಡು ಅತೀ ಹೆಚ್ಚು ಸ್ಥಾನ ಗೆಲ್ಲಿಸಬೇಕು ಅನ್ನೋ ಪ್ಲ್ಯಾನ್​ನಲ್ಲಿದ್ದ ಸಾಹುಕಾರ್​ಗೆ ಇದೀಗ ತೀವ್ರ ಹಿನ್ನಡೆಯಾಗಿದೆ. ಮೂತುವರ್ಜಿವಹಿಸಿ ಟಿಕೆಟ್ ಕೊಡಿಸಿದ್ದ ಅಭ್ಯರ್ಥಿಗಳೆಲ್ಲರೂ ಸೋತು ಸುಣ್ಣವಾಗಿದ್ದಾರೆ. ಜಿಲ್ಲೆಯಲ್ಲಿ ಆರು ಕ್ಷೇತ್ರದಲ್ಲಿ ಟಿಕೆಟ್ ಕೊಡಿಸಿ ಭಾರಿ ಮುಖಭಂಗವನ್ನ ರಮೇಶ್ ಅನುಭವಿಸಿದ್ದಾರೆ. ಅಷ್ಟಕ್ಕೂ ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಹೊರಟ ಬಿಜೆಪಿಗೆ ಹಿನ್ನಡೆ ಆಗಿದ್ದು ಹೇಗೆ? ರಮೇಶ್ ಜಾರಕಿಹೊಳಿ ಟಿಕೆಟ್ ಕೊಡಿಸಿದ ಅಭ್ಯರ್ಥಿಗಳೆಲ್ಲರೂ ಸೋತಿದ್ದು ಹೇಗೆ? ಬೆಳಗಾವಿಯಲ್ಲಿ ಮೂಲ ಬಿಜೆಪಿಗರು ಸಾಹುಕಾರ್ ವಿರುದ್ದ ಸಿಡಿದೆದಿದ್ಯಾಕೆ ಈ ಸ್ಟೋರಿ ನೋಡಿ.

ಬೆಳಗಾವಿಯಲ್ಲಿ ಸಾಹುಕಾರ್​ಗೆ ಮುಖಭಂಗ: ರಮೇಶ್ ಜಾರಕಿಹೊಳಿ ವಿರುದ್ದ ಸಿಡಿದೆದ್ದ ಮೂಲ ಬಿಜೆಪಿಗರು
ರಮೇಶ್ ಜಾರಕಿಹೊಳಿ
ಕಿರಣ್ ಹನುಮಂತ್​ ಮಾದಾರ್
|

Updated on: May 16, 2023 | 8:28 AM

Share

ಬೆಳಗಾವಿ: ರಾಜಧಾನಿಯನ್ನ ಹೊರತುಪಡಿಸಿ ರಾಜ್ಯದಲ್ಲಿ ಬೆಳಗಾವಿ(Belagavi) ಜಿಲ್ಲೆ ಅತೀ ಹೆಚ್ಚು ವಿಧಾನಸಭಾ ಕ್ಷೇತ್ರಗಳು ಹೊಂದಿರುವ ಜಿಲ್ಲೆ. ಹದಿನೆಂಟು ಕ್ಷೇತ್ರದ ಪೈಕಿ ಅತೀ ಹೆಚ್ಚು ಸ್ಥಾನ ಗೆಲ್ಲಲು ಬಿಜೆಪಿ, ಕಾಂಗ್ರೆಸ್ ಸಾಕಷ್ಟು ರಣತಂತ್ರವನ್ನ ರೂಪಿಸಿದ್ದವು. ಮುಖ್ಯವಾಗಿ ಜಿಲ್ಲೆಯ ಉಸ್ತುವಾರಿ ಹೊತ್ತು ಅತೀ ಹೆಚ್ಚು ಸ್ಥಾನ ಗೆಲ್ಲಲು ಹೊರಟಿದ್ದ ರಮೇಶ್ ಜಾರಕಿಹೊಳಿ(Ramesh Jarkiholi)ಗೆ ಚುನಾವಣೆ ಫಲಿತಾಂಶದಲ್ಲಿ ತೀವ್ರ ಹಿನ್ನಡೆಯಾಗಿದೆ. ಜಿಲ್ಲೆಯಲ್ಲಿ ಹಿಡಿತ ಸಾಧಿಸಲು ಹೈಕಮಾಂಡ್ ಮನವೊಲಿಸಿ 6 ಜನ ತಮ್ಮ ಆಪ್ತರಿಗೆ ಟಿಕೆಟ್ ಕೊಡಿಸಿ ಕಣಕ್ಕಿಳಿಸಿದ್ದರು. ಬೆಳಗಾವಿ ಗ್ರಾಮೀಣದಲ್ಲಿ ನಾಗೇಶ್ ಮನ್ನೊಳ್ಕರ್, ಉತ್ತರದಲ್ಲಿ ಡಾ.ರವಿ ಪಾಟೀಲ್, ಯಮಕನಮರಡಿಯಲ್ಲಿ ಬಸವರಾಜ ಹುಂದ್ರಿ, ರಾಮದುರ್ಗದಲ್ಲಿ ಚಿಕ್ಕರೇವಣ್ಣ, ಅಥಣಿಯಲ್ಲಿ ಮಹೇಶ್ ಕುಮಟಳ್ಳಿ, ಕಾಗವಾಡದಲ್ಲಿ ಶ್ರೀಮಂತ ಪಾಟೀಲ್ ಅವರಿಗೆ ಟಿಕೆಟ್ ಕೊಡಿಸುವಲ್ಲಿ ರಮೇಶ್ ಯಶಸ್ವಿಯಾಗಿದ್ದರು. ಈ 6 ಕ್ಷೇತ್ರದಲ್ಲಿ ಅಭ್ಯರ್ಥಿಗಳು ಸೋತಿದ್ದು ಇದೀಗ ಸಾಹುಕಾರ್​ಗೆ ಭಾರಿ ಹಿನ್ನಡೆಯಾಗಿದೆ.

ಅಷ್ಟಕ್ಕೂ ರಮೇಶ್ ಜಾರಕಿಹೊಳಿ ಟಿಕೆಟ್ ಕೊಡಿಸುವುದರಲ್ಲೇ ಎಡವಿ ಈ ಮಟ್ಟಿಗೆ ಮುಖಬಂಗ ಅನುಭವಿಸಿದ್ರೂ ಎನ್ನುವ ಚರ್ಚೆ ಇದೀಗ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಪಕ್ಷಕ್ಕೆ ಸಂಬಂಧ ಇಲ್ಲದ ನಾಗೇಶ್ ಮನ್ನೋಳ್ಕರ್ ಮತ್ತು ಚಿಕ್ಕರೇವಣ್ಣನವರಿಗೆ ಟಿಕೆಟ್ ಕೊಡಿಸಿದ್ರೆ, ಆ್ಯಕ್ಟೀವ್ ಇಲ್ಲದ ರವಿ ಪಾಟೀಲ್ ಗೆ ಟಿಕೆಟ್ ಕೊಡಿಸಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಯಿತು. ಅಥಣಿಯಲ್ಲಿ ಸವದಿ ವಿರುದ್ದ ಸೋತ್ರೆ, ಕಾಗವಾಡದಲ್ಲಿ ಗೆಲ್ತೇವಿ ಎನ್ನುವ ಹುಮ್ಮಸ್ಸಿನಲ್ಲಿ ಮತದಾರರನ್ನ ಮರೆತು ಸೋಲು ಕಂಡ್ರು. ಇನ್ನು ಯಮಕನಮರಡಿಯಲ್ಲಿ ಟಿಕೆಟ್ ಕೊಡಿಸಿ, ಒಂದೇ ಒಂದು ದಿನ ಪ್ರಚಾರಕ್ಕೆ ಹೋಗದೇ ಒಳಗೊಳಗೆ ಅಡ್ಜಸ್ಟ್ ಮಾಡಿಕೊಂಡು ಸೋತ್ರು ಅನ್ನೋ ಲೆಕ್ಕಾಚಾರ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ.

ಇದನ್ನೂ ಓದಿ:Gokak Election 2023 Winner: ಏಳನೇ ಬಾರಿ ಗೆದ್ದು ಬೀಗಿದ ರಮೇಶ್ ಜಾರಕಿಹೊಳಿ

ಟಿಕೆಟ್ ಕೊಡಿಸಿ ಸರಿಯಾದ ರೀತಿಯಲ್ಲಿ ಪ್ಲ್ಯಾನ್ ಮಾಡದ ಸಾಹುಕಾರ್​

ರಮೇಶ್ ಜಾರಕಿಹೊಳಿ ಟಿಕೆಟ್ ಕೊಡಿಸಿದ ನಂತರ ಸರಿಯಾದ ರೀತಿಯಲ್ಲಿ ಪ್ಲ್ಯಾನ್ ಮಾಡಲಿಲ್ಲ. ರಮೇಶ್ ನಂಬಿ ಕ್ಷೇತ್ರದಲ್ಲಿ ವರ್ಕೌಟ್ ಮಾಡದೇ ಕೈಚಲ್ಲಿ ಅಭ್ಯರ್ಥಿಗಳು ಹೀನಾಯ ಸೋಲು ಕಾಣುವಂತಾಯಿತು. ಇನ್ನು ರಮೇಶ್ ಜಾರಕಿಹೊಳಿಯ ಈ ನಡೆಯಿಂದ ಮೂಲ ಬಿಜೆಪಿಗರು ಬೇಸರಗೊಂಡಿದ್ದು, ಚುನಾವಣೆ ಸಂದರ್ಭದಲ್ಲಿ ಪ್ರಚಾರ ಸೇರಿದಂತೆ ಮತದಾರರನ್ನ ಸೆಳೆಯುವ ಕೆಲಸದಿಂದ ಅಂತರ ಕಾಯ್ದುಕೊಂಡರು. ಕೆಲವು ಕಡೆಗಳಲ್ಲಿ ಸ್ಥಳೀಯ ಮುಖಂಡರು ಬಿಜೆಪಿ ಬಿಟ್ಟು ಕಾಂಗ್ರೆಸ್ ಅಭ್ಯರ್ಥಿಗೆ ಸಪೋರ್ಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಸೋಲಿನಿಂದ ಎಚ್ಚೆತ್ತ ಮೂಲ ಬಿಜೆಪಿಗರು ರಮೇಶ್ ವಿರುದ್ದ ಇದೀಗ ಹೈಕಮಾಂಡ್​ಗೆ ದೂರು ನೀಡಿದ್ದಾರಂತೆ.

ಬೆಳಗಾವಿಯಲ್ಲಿ 18ಕ್ಷೇತ್ರಗಳ ಪೈಕಿ ಕೇವಲ ಏಳು ಸ್ಥಾನದಲ್ಲಿ ಗೆಲ್ಲಲು 11ಸ್ಥಾನದಲ್ಲಿ ಸೋಲಲು ನೇರವಾಗಿ ಕಾರಣ ರಮೇಶ್ ಎಂದು ಹೇಳಿದ್ದಾರೆ. ಪಕ್ಷ ಸಂಘಟನೆ ಮಾಡುವುದನ್ನ ಬಿಟ್ಟು ಬರೀ ಟಾರ್ಗೆಟ್ ರಾಜಕಾರಣ ಮಾಡುತ್ತಾ ಬಿಜೆಪಿ ಹೀನಾಯ ಸೋಲಿಗೆ ಕಾರಣವಾಗಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಬೇಕು ಅಂದ್ರೆ, ಪಕ್ಷದಲ್ಲಿ ರಮೇಶ್​ಗೆ ಜವಾಬ್ದಾರಿಯನ್ನ ನೀಡುವುದನ್ನ ಬಿಡಬೇಕು ಎಂದು ರಮೇಶ್ ವಿರುದ್ದ ನೇರವಾಗಿ ಮೂಲ ಕಾರ್ಯಕರ್ತರು ಹೈಕಮಾಂಡ್​ಗೆ ದೂರು ನೀಡುವ ಕೆಲಸ ಮಾಡಿದ್ದಾರಂತೆ. ಸದ್ಯ ಜಿಲ್ಲೆಯಲ್ಲಿ ರಮೇಶ್ ವಿರುದ್ದ ಮೂಲ ಬಿಜೆಪಿಗರು ಸಿಡಿದೆದ್ದಿದ್ದು, ಮತ್ತೆ ಬಣ ಬಡಿದಾಟ ಜಿಲ್ಲೆಯಲ್ಲಿ ಜೋರಾಗಿದೆ. ಇನ್ನು ರಮೇಶ್ ಜಾರಕಿಹೊಳಿಗೆ ತಿರುಗೇಟು ನೀಡಿರುವ ಎಂಎಲ್​ಸಿ ಚನ್ನರಾಜ ಹಟ್ಟಿಹೊಳಿ ‘ಮಟಾಷ್ ಲೆಗ್ ಯಾರದ್ದು ಅನ್ನೋದು ಈಗ ಗೊತ್ತಾಯಿತಾ? ಕಾಂಗ್ರೆಸ್​ನಲ್ಲಿದ್ದಾಗ ಎನೂ ಮಾಡಿದ್ರು, ಇಲ್ಲಿಂದ ಬಿಟ್ಟು ಹೋಗಿ ಇದೀಗ ಬಿಜೆಪಿಯನ್ನ ಯಾವ ಪರಿಸ್ಥಿತಿಗೆ ತಂದಿದ್ದಾರೆ. ಗೋಕಾಕ್ ಹಗಣರವನ್ನೂ ಹೊರ ತೆಗೆಯುತ್ತೇನೆ ಎಂದು ರಮೇಶ್ ವಿರುದ್ದ ಚನ್ನರಾಜ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ:Mamata Banerjee: 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ನಮ್ಮ ಬೆಂಬಲ: ಮಮತಾ ಬ್ಯಾನರ್ಜಿ

ಒಟ್ಟಾರೆ ಬೆಳಗಾವಿಯಲ್ಲಿ ಅತೀ ಹೆಚ್ಚು ಸ್ಥಾನ ಗೆಲ್ಲಿಸುತ್ತೇನೆ ಎಂದು ಓಡಾಡುತ್ತಿದ್ದ ರಮೇಶ್, ಇದೀಗ ಜಿಲ್ಲೆಯಲ್ಲಿ ಹೆಚ್ಚು ಸ್ಥಾನ ಸೋತು, ತುಟಿ ಬಿಚ್ಚುತ್ತಿಲ್ಲ. ಗೆದ್ದ ದಿನ ಪ್ರಮಾಣ ಪತ್ರ ಪಡೆಯಲು ಕೂಡ ಚುನಾವಣಾಧಿಕಾರಿ ಕಡೆ ಬಾರದ ರಮೇಶ್. ಸದ್ಯ ಸ್ಥಳೀಯ ಮುಖಂಡರಿಂದಲೂ ಅಂತರ ಕಾಯ್ದುಕೊಂಡು ಓಡಾಡುತ್ತಿದ್ದಾರೆ. ಇತ್ತ ಮೂಲ ಬಿಜೆಪಿಗರು ಕೂಡ ಸಿಟ್ಟಾಗಿದ್ದು, ಈ ಫೈಟ್ ಯಾವ ಹಂತಕ್ಕೆ ಹೋಗಿ ನಿಲ್ಲುತ್ತೆ ಕಾದುನೋಡಬೇಕಿದೆ. ಜಿಲ್ಲೆಯಲ್ಲಿನ ನಾಯಕರ ನಡುವಿನ ಕಿತ್ತಾಟವನ್ನ ಬಿಜೆಪಿ ಹೈಕಮಾಂಡ್ ಹೇಗೆ ಸರಿಪಡಿಸುತ್ತೆ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ.

ವರದಿ: ಸಹದೇವ ಮಾನೆ ಟಿವಿ9 ಬೆಳಗಾವಿ

ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ