Karnataka Assembly Election Highlights: ಬಿಜೆಪಿಗೆ ರಾಜೀನಾಮೆ ಘೋಷಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್
Karnataka Election Highlights Updates: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜ್ಯ ರಾಜಕರಣದಲ್ಲಿ ಅನೇಕ ಬೆಳವಣಿಗೆಗಳು ನಡೆಯುತ್ತಿದ್ದು, ಈ ಕುರಿತಾದ ಕ್ಷಣ ಕ್ಷಣದ ಮಾಹಿತಿ ಟಿವಿ9 ಡಿಜಿಟಲ್ನಲ್ಲಿ

ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನ ಎಣಿಕೆ ಶುರುವಾಗಿದೆ. ಪ್ರಮುಖ ಮೂರು ಪಕ್ಷಗಳು ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಬಿಡುಗಡೆ ಮಾಡಿವೆ. ರಾಜ್ಯ ರಾಜಕಾರಣದಲ್ಲಿ ಮಹತ್ತರವಾದ ಬೆಳವಣಿಗೆಗಳು ನಡೆದಿವೆ. ಬಿಜೆಪಿಯ ಘಟಾನುಘಟಿ ನಾಯಕ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ನಿನ್ನೆ (ಏ.14) ಎಂಎಲ್ಸಿ ಸ್ಥಾನಕ್ಕೆ ರಾಜಿನಾಮೆ ನೀಡಿ, ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ. ಇದರಿಂದ ರಾಜ್ಯ ಬಿಜೆಪಿಗೆ ಬಹಳ ದೊಡ್ಡ ಪೆಟ್ಟು ಬಿದ್ದಿದೆ ಎಂದು ರಾಜಕೀಯ ಪಡಸಾಲೆಯಿಂದ ಮಾತುಗಳು ಕೇಳಿ ಬರುತ್ತಿವೆ. ಇನ್ನು ಜೆಡಿಎಸ್ 2ನೇ ಪಟ್ಟಿಯಲ್ಲಿ ಹಾಸನ ಟಿಕೆಟ್ ಅನ್ನು ಜೆಡಿಎಸ್ ಸ್ಥಳಿಯ ನಾಯಕ ಸ್ವರೂಪ್ ಅವರಿಗೆ ಒಲಿಯುವ ಮೂಲಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಹಿಡಿದ ಹಠವನ್ನು ಸಾಧಿಸಿದ್ದಾರೆ. ಇನ್ನು ಕಡೂರು ಕ್ಷೇತ್ರ ಮಾಜಿ ಶಾಸಕ ವೈ.ಎಸ್.ವಿ ದತ್ತಾ ಮರಳಿ ಜೆಡಿಎಸ್ ಸೇರಿ ಕಡೂರು ಕ್ಷೇತ್ರದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಇಂದಿನ ಅಪ್ಡೇಟ್ಸ್
LIVE NEWS & UPDATES
-
Karnataka Assembly Election Live: ನನ್ನ ವಿರುದ್ದ ಕುತಂತ್ರ, ಷಡ್ಯಂತ್ರ ನಡೆದಿದೆ
ನನ್ನ ವಿರುದ್ದ ಕುತಂತ್ರ, ಷಡ್ಯಂತ್ರ ನಡೆದಿದೆ. ನನ್ನ ಟ್ರಿಟ್ ಮಾಡಿರೋದು ನನಗೆ ಶಾಂಕಿಂಗ್ ಆಗಿದೆ. ನಮ್ಮ ಕುಟುಂಬಕ್ಕೆ ಟಿಕೆಟ್ ಕೊಡುತ್ತೇವೆ ಅಂತಾರೆ, ಆದರೆ ನನಗೆ ಯಾಕಿಲ್ಲ. ಇವತ್ತೆ ಅವರಿಗೆ ನಾನು ಶಾಸಕನಾಗ್ತೀನಿ ಎಂದು ಹೇಳಿದ್ದೇನೆ ಎಂದರು.
-
Karnataka Assembly Election Live: ರಾಜೀನಾಮೆ ಘೋಷಣೆ ಮಾಡಿದ ಶೆಟ್ಟರ್
ಧಾರವಾಡ: ಈ ಬಾರಿ ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದ ಟಿಕೆಟ್ ಕೈತಪ್ಪುವ ಭೀತಿ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್(Jagadish Shettar) ಅವರು ಬಿಜೆಪಿಗೆ ರಾಜೀನಾಮೆ ಘೋಷಿಸಿದ್ದಾರೆ. ನಾಳೆ ರಾಜೀನಾಮೆ ಸಲ್ಲಿಸೋದಾಗಿ ಹೇಳಿದ್ದಾರೆ. ಭಾರವಾದ ಹೃದಯದಿಂದ ಇದನ್ನು ಹೇಳುತ್ತಿದ್ದೇನೆ. ಪಾರ್ಟಿ ಕಟ್ಟಿ ಬೆಳಸಿದ್ದೆ, ಪಾರ್ಟಿ ಬಿಟ್ಟು ಹೋಗಬೇಕಾಗಿದೆ. ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ಬಾರದೆ ಕೆಲಸ ಆಗತ್ತೆ ಎಂದು ಹೇಳಿದರು.
ಸಂಧಾನ ಸಭೆ ವಿಫಲ: ಬಿಜೆಪಿಗೆ ರಾಜೀನಾಮೆ ಘೋಷಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್
-
-
Karnataka Assembly Election Live: ನನಗೆ ಇನ್ನೂ ಟಿಕೆಟ್ ನೀಡದಿರುವುದು ಅಚ್ಚರಿ ತಂದಿದೆ
ರಾಜ್ಯದಲ್ಲಿ ಬಿಜೆಪಿ ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೇನೆ. ನನ್ನ ಮೇಲೆ ಯಾವುದೇ ಕಪ್ಪುಚುಕ್ಕೆ ಇಲ್ಲ ಎಂದು ಜಗದೀಶ್ ಶೆಟ್ಟರ್ ಹೇಳಿದರು. ನನ್ನದು ಯಾವುದೇ ಭ್ರಷ್ಟಾಚಾರ, ಸೆಕ್ಸ್ ಸಿಡಿಯೂ ಇಲ್ಲ. ಹೈಕಮಾಂಡ್ ಸರ್ವೆ ವರದಿಯೂ ಸಹ ನನ್ನ ಪರ ಬಂದಿದೆ. ಆದ್ರೂ ನನಗೆ ಇನ್ನೂ ಟಿಕೆಟ್ ನೀಡದಿರುವುದು ಅಚ್ಚರಿ ತಂದಿದೆ. ನಾನು ಶಿಸ್ತಿನ ರಾಜಕಾರಣಿಯಾದರೂ ಟಿಕೆಟ್ ಘೋಷಿಸಿಲ್ಲ ಎಂದರು.
-
Karnataka Assembly Election Live: ಪಕ್ಷ ಎಲ್ಲ ನನಗೆ ಗೌರವ ಕೊಟ್ಟಿದೆ: ಜಗದೀಶ್ ಶೆಟ್ಟರ್
ಹುಬ್ಬಳ್ಳಿ: ನನ್ನ ಮೂವತ್ತು ವರ್ಷ ರಾಜಕಾರಣದ ಕಳೆದ ಮೂರು ತಿಂಗಳು ಅತ್ಯಂತ ಕೆಟ್ಡ ದಿನ. ನಾನು ಮುಖ್ಯಮಂತ್ರಿಯಾಗಿ, ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಪಕ್ಷವನ್ನು ಕೆಳ ಮಟ್ಟದಿಂದ ಕಟ್ಟಿದ್ದೇನೆ. ಪಕ್ಷ ಎಲ್ಲ ನನಗೆ ಗೌರವ ಕೊಟ್ಟಿದೆ. ಹೀಗಾಗಿ ಹೃದಯಪೂರ್ವಕ ಧನ್ಯವಾದ ಎಂದು ಶೆಟ್ಟರ್ ಹೇಳಿದರು.
-
Karnataka Assembly Election Live: ಬಿಜೆಪಿ ನಾಯಕರ ಜೊತೆ ಸಂಧಾನ ಸಭೆ ಬಳಿಕ ಸುದ್ದಿಗೋಷ್ಠಿ
ಹುಬ್ಬಳ್ಳಿ: ಪಕ್ಷ ನನಗೆ ಎಲ್ಲಾ ಸ್ಥಾನಮಾನ ನೀಡಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು. ನಿವಾಸದಲ್ಲಿ ಜಗದೀಶ್ ಶೆಟ್ಟರ್ ಮತ್ತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೇನೆ ಎಂದರು.
-
-
Karnataka Assembly Election Live: ಶೆಟ್ಟರ್ ಸಂಧಾನ ಸಭೆ ವಿಫಲ?
ಹುಬ್ಬಳ್ಳಿ: ಜಗದೀಶ್ ಶೆಟ್ಟರ್ ಜೊತೆ ಬಿಜೆಪಿ ನಾಯಕರ ಗೌಪ್ಯ ಸಭೆ ಅಂತ್ಯವಾಗಿದ್ದು, ಗೌಪ್ಯ ಸಭೆ ಮುಗಿಸಿ ಶೆಟ್ಟರ್ ನಿವಾಸದಿಂದ ನಾಯಕರು ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ಹೊರಟು ಹೋಗಿದ್ದಾರೆ. ಶೆಟ್ಟರ್ ಸಂಧಾನ ಸಭೆ ಬಹುತೇಕ ವಿಫಲ ಎನ್ನಲಾಗುತ್ತಿದೆ.
-
Karnataka Assembly Election Live: ವಿಧಾನಸಭಾ ಚುನಾವಣೆಗೆ ದಿನಗಣನೆ: ಪೊಲೀಸರಿಂದ ಮುಂದುವರೆದ ಪರಿಶೀಲನೆ
ಬೆಂಗಳೂರು: ವಿಧಾನಸಭಾ ಚುನಾವಣೆ ದಿನಗಣನೆ ಹಿನ್ನೆಲೆ ನಗರದಲ್ಲಿ ಪೊಲೀಸರಿಂದ ಪರಿಶೀಲನೆ ಮುಂದುವರೆದಿದೆ. ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಸ್ತು ತಿರುಗಿ ಪರಿಶೀಲನೆ ಮಾಡಲಾಗಿದೆ. ಠಾಣಾ ವ್ಯಾಪ್ತಿಯ ರೌಡಿ ಆಸಾಮಿಗಳ ಮನೆ, ಅನುಮಾನಿತ ವಾಹನಗಳ ಓಡಾಟದ ಬಗ್ಗೆ ನಿಗಾ ಇಡಲಾಗಿದೆ. ರೌಡಿ ಆಸಾಮಿಗಳ ಮನೆಗೆ ತೆರಳಿ 110 ನಿಮಯ ಉಲ್ಲಂಘಿಸದಂತೆ ಎಚ್ಚರಿಕೆ ನೀಡಲಾಗಿದೆ.
-
Karnataka Assembly Election Live: ನಾಳೆ ಶಾಸಕ ಸ್ಥಾನಕ್ಕೆ ನೆಹರು ಓಲೇಕಾರ್ ರಾಜೀನಾಮೆ
ಹಾವೇರಿ: ಬಿಜೆಪಿಯ ಮತ್ತೊಂದು ವಿಕೆಟ್ ಪತನವಾಗಿದ್ದು, ನಾಳೆ ಶಾಸಕ ಸ್ಥಾನಕ್ಕೆ ನೆಹರು ಓಲೇಕಾರ್ ರಾಜೀನಾಮೆ ನೀಡಲಿದ್ದಾರೆ. ಶಿರಸಿಗೆ ತೆರಳಿ ಸ್ಪೀಕರ್ ಕಾಗೇರಿಗೆ ರಾಜೀನಾಮೆ ಪತ್ರ ಸಲ್ಲಿಸುವೆ ಎಂದು ಟಿವಿ9ಗೆ ಹಾವೇರಿ ಕ್ಷೇತ್ರದ ಬಿಜೆಪಿ ಶಾಸಕ ನೆಹರು ಓಲೇಕಾರ್ ಹೇಳಿದ್ದಾರೆ.
-
Karnataka Assembly Election Live: ಕಾಂಗ್ರೆಸ್ ನಾಯಕರಿಗೆ ಸವಾಲ್ ಹಾಕಿದ ಎಸ್ಆರ್ ಪಾಟೀಲ್ ಅಭಿಮಾನಿ
ಬಾಗಲಕೋಟೆ: ನಿಮಗೆಲ್ಲರೂ ಅನ್ಯಾಯ ಮಾಡಿದ್ದಾರೆ. ಎಂಬಿ ಪಾಟೀಲ್‌ರಿಂದ ಅನ್ಯಾಯ ಆಗಿದೆ. ನಿಮ್ಮನ್ನ ಬಿಟ್ಟು ನಾವಿಲ್ಲ, ದಯವಿಟ್ಟು ಒಂದು ತೀರ್ಮಾನಕ್ಕೆ ಬನ್ನಿ. ನೀವಿಲ್ಲದೇ ಜಿಲ್ಲೆಯಲ್ಲಿ ಒಂದೇ ಒಂದು ಸೀಟ್ ತಗೊಂಡ ಬರಲಿ ತಾಕತ್ತಿದ್ದರೇ ಎಂದು ಜಿಲ್ಲೆಯ ಕೈ ನಾಯಕರಿಗೆ ಎಸ್ಆರ್ ಪಾಟೀಲ್ ಅಭಿಮಾನಿ ಸವಾಲ್ ಹಾಕಿದ್ದಾರೆ.
-
Karnataka Assembly Election Live: ಕಾಂಗ್ರೆಸ್ ಮುಖಂಡರಿಗೆ ಧನ್ಯವಾದ ಅರ್ಪಿಸಿದ ಕೆಎಂ ಶಿವಲಿಂಗೇಗೌಡ
ಹಾಸನ: ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ನನಗೆ ಇಂದು ಬಿ ಫಾರಂ ಕೊಟ್ಟಿದೆ. ಕೆಪಿಸಿಸಿ ಅಧ್ಯಕ್ಷರು, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹಾಗೂ ಎಲ್ಲಾ ಕಾಂಗ್ರೆಸ್ ಮುಖಂಡರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಕೆ.ಎಂ.ಶಿವಲಿಂಗೇಗೌಡ ಹೇಳಿದರು. ನೀವು ಕೊಟ್ಟಿರುವ ಬಿ ಫಾರಂನಿಂದ ಗೆದ್ದು ನನ್ನ ಕ್ಷೇತ್ರದ ಜನತೆಯ ವಿಶ್ವಾಸ ಗಳಿಸಿ, ಅಭಿವೃದ್ದಿ ಕಾರ್ಯಗಳನ್ನು ಮಾಡಲು ಸದಾವಕಾಶ ಮಾಡಿಕೊಟ್ಟಿರುವ ಎಲ್ಲರಿಗೂ ನಾನು ಧನ್ಯವಾದ ಸಮರ್ಪಣೆ ಮಾಡುತ್ತೇನೆ ಎಂದರು.
-
Karnataka Assembly Election Live: ಲಿಂಗಾಯತರಿಗೆ ಯಾಕೆ ಟಿಕೆಟ್ ಕೊಟ್ಟಿಲ್ಲ?
ಬೆಂಗಳೂರು: ಪಕ್ಷ ಟಿಕೆಟ್ ಕೊಡುತ್ತೆ ಅನ್ನೊ ವಿಶ್ವಾಸವಿದೆ ಎಂದು ಮಾಜಿ ಮೇಯರ್ ಗಂಗಾಬಿಕೆ ಹೇಳಿದರು. ಪಕ್ಷ ಹೇಳಿದ ಎಲ್ಲ ಕೆಲಸವನ್ನೂ ಶ್ರದ್ಧೆಯಿಂದ ಮಾಡಿದ್ದೇನೆ. ಒಂದು ವೇಳೆ ಸಿಗದ್ದರೆ ಯಾವ ಕಾರಣಕ್ಕೆ ಟಿಕೆಟ್ ಕೊಟ್ಟಿಲ್ಲ ಅಂತ ವರಿಷ್ಠರನ್ನ ಕೇಳ್ಳುತ್ತೇನೆ. ಲಿಂಗಾಯತರಿಗೆ ಯಾಕೆ ಟಿಕೆಟ್ ಕೊಟ್ಟಿಲ್ಲ ಎಂದು ಪ್ರಶ್ನಿಸಿದರು. ಯಾರೂ ಲಿಂಗಾಯತ ಆಕಾಂಕ್ಷಿಗಳೇ ಇರಬಾರದಾ? ನನ್ನಲ್ಲಿ ಬೇರೆ ಏನು ಲೋಪ ಇದೆ ಅಂತ ನಾನೇ ಪ್ರಶ್ನೆ ಮಾಡಿಕೊಳ್ಬೇಕಿದೆ ಎಂದು ಹೇಳಿದರು.
-
Karnataka Assembly Election Live: ಶೆಟ್ಟರ್ ಮನವೊಲಿಕೆ ಸಂಬಂಧ ನಾಯಕರ ನಡುವೆ ಸಮಾಲೋಚನೆ
ಹುಬ್ಬಳ್ಳಿ: ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಜೋಶಿ, ಧರ್ಮೇಂದ್ರ ಪ್ರಧಾನ್ ಆಗಮಿಸಿದ್ದು, ಜಗದೀಶ್ ಶೆಟ್ಟರ್ ಭೇಟಿಗೂ ಮುನ್ನ ಮೂವರು ನಾಯಕರು ಚರ್ಚೆ ಮಾಡಿದ್ದಾರೆ. ಶೆಟ್ಟರ್ ಮನವೊಲಿಕೆ ಸಂಬಂಧ ನಾಯಕರ ನಡುವೆ ಸಮಾಲೋಚನೆ ನಡೆಸಲಾಗಿದೆ.
-
Karnataka Assembly Election Live: ಎಂಟು ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದ ಬಂಡಾಯ ಮಾತ್ರ ಶಮನ
ಬೆಳಗಾವಿ: ಟಿಕೆಟ್ ಹಂಚಿಕೆ ಬಳಿಕ ಬೆಳಗಾವಿ ಜಿಲ್ಲಾ ಬಿಜೆಪಿಯಲ್ಲಿ ಬಂಡಾಯ ಶಮನ ಮಾಡಲು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ನಡೆಸಿದ್ದ ಸಭೆ ವಿಫಲವಾಗಿದೆ. ನಗರದ ಯುಕೆ27 ಹೋಟೆಲ್‌ನಲ್ಲಿ ಸಭೆ ನಡೆಸಿದ್ದು, ಟಿಕೆಟ್ ವಂಚಿತ ಶಾಸಕರು, ಆಕಾಂಕ್ಷಿಗಳ ಜೊತೆ ಒನ್ ಟು ಒನ್ ಸಭೆ ಮಾಡಿದ್ದು, ಎಂಟು ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದ ಬಂಡಾಯ ಮಾತ್ರ ಶಮನವಾಗಿದೆ.
-
Karnataka Assembly Election Live: ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಡಲ್ಲ ಎಂದು ಹೇಳಿದ್ದೇನೆ
ಮೈಸೂರು: ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಡಲ್ಲ ಎಂದು ಹೇಳಿದ್ದೇನೆ. ಇದು ನನ್ನ ಕೊನೆಯ ಚುನಾವಣೆ ಎಂದು ವರಿಷ್ಠರಿಗೆ ಹೇಳಿದ್ದೇನೆ. ಟಿಕೆಟ್ ಸಿಗದಿದ್ದರೆ ಕಾರ್ಯಕರ್ತರ ಜತೆ ಸಮಾಲೋಚನೆ ಮಾಡಿ ಕಾರ್ಯಕರ್ತರು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದು ಮೈಸೂರಿನಲ್ಲಿ ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ಹೇಳಿದರು.
-
Karnataka Assembly Election Live: ಸೂಕ್ತ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 50 ಲಕ್ಷ ರೂಪಾಯಿ ಜಪ್ತಿ
ಉಡುಪಿ: ಸೂಕ್ತ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 50 ಲಕ್ಷ ರೂ. ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಜಿಲ್ಲೆಯ ಕಾರ್ಕಳ ತಾಲೂಕಿನ ಸಾಣೂರು ಚೆಕ್ಪೋಸ್ಟ್ನಲ್ಲಿ ಬೊಲೆರೊ ವಾಹನದಲ್ಲಿ 50 ಲಕ್ಷ ಪತ್ತೆಯಾಗಿದೆ. ಸಾಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಪ್ರಕರಣ ದಾಖಲಾಗಿದೆ.
-
Karnataka Assembly Election Live: ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗುತ್ತಿರಾ ಜಗದೀಶ್ ಶೆಟ್ಟರ್?
ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗುತ್ತಿರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಬಗ್ಗೆ ಚರ್ಚೆ ಇದೀಗ ಅಪ್ರಸ್ತುತ. ಕಾಂಗ್ರೆಸ್ ಬಗ್ಗೆ ಕಮೆಂಟ್ ಮಾಡಲ್ಲ ಎಂದರು. ಆ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ಕಡೆ ಮುಖ ಮಾಡಿದ್ರಾ ಎಂಬ ಅನುಮಾಗಳು ಹುಟ್ಟಿಕೊಂಡಿವೆ ಎನ್ನಲಾಗುತ್ತಿದೆ.
-
Karnataka Assembly Election Live: ಬೇರೆ ಪಕ್ಷದವರು ಯಾರೂ ನನ್ನನ್ನು ಸಂಪರ್ಕಿಸಿಲ್ಲ: ಶೆಟ್ಟರ್
ಹುಬ್ಬಳ್ಳಿ: ರಾತ್ರಿ 8.30ಕ್ಕೆ ಹುಬ್ಬಳ್ಳಿಯ ನಿವಾಸಕ್ಕೆ ಪ್ರಧಾನ್, ಸಿಎಂ, ಕೇಂದ್ರ ಸಚಿವ ಜೋಶಿ ಆಗಮಿಸಲಿದ್ದಾರೆ. ಮೂವರು ನಾಯಕರ ಭೇಟಿ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳುವೆ. ನನಗೆ ಅವಕಾಶ ನೀಡಿದ್ರೆ ಸ್ಪರ್ಧಿಸುತ್ತೇನೆ, ಕುಟುಂಬದವರು ಸ್ಪರ್ಧಿಸಲ್ಲ. ಟಿಕೆಟ್ ಹೊರತುಪಡಿಸಿ ಬೇರೆ ಆಫರ್‌ಗೆ ನಾನು ಒಪ್ಪುವುದಿಲ್ಲ. ಕ್ಷೇತ್ರದ ಶಾಸಕನಾಗಿ ಸೇವೆ ಸಲ್ಲಿಸಲು ಅವಕಾಶ ನೀಡಲು ಕೇಳಿದ್ದೇನೆ. ಬೇರೆ ಪಕ್ಷದವರು ಯಾರೂ ನನ್ನನ್ನು ಸಂಪರ್ಕಿಸಿಲ್ಲ ಎಂದು ಹೇಳಿದರು.
-
Karnataka Assembly Election Live: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸುದ್ದಿಗೋಷ್ಠಿ
ಹುಬ್ಬಳ್ಳಿ: ಬೆಳಗ್ಗೆ ಬೆಂಬಲಿಗರ ಸಭೆ ಕರೆದು ಚರ್ಚೆ ನಡೆಸಿದ್ದೆ. ನೀವು ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧರೆಂದು ಹೇಳಿದ್ದಾರೆ. ಹೀಗಾಗಿ ನಾನು ನಿರ್ಧಾರ ಕೈಗೊಳ್ಳುವ ಹಂತದಲ್ಲಿದ್ದೇನೆ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸುದ್ದಿಗೋಷ್ಠಿ ಹೇಳಿದರು.
-
Karnataka Assembly Election Live: ಜಗದೀಶ ಶೆಟ್ಟರ್ ಉತ್ತರ ಕರ್ನಾಟಕದ ಪ್ರಭಾವಿ ನಾಯಕ
ಗದಗ: ಜಗದೀಶ ಶೆಟ್ಟರ ಕರ್ನಾಟಕದ ಹಿರಿಯ ನಾಯಕ. ಉತ್ತರ ಕರ್ನಾಟಕದ ಪ್ರಭಾವಿ ನಾಯಕ. ಅವರಿಗೆ ರಾಜಕೀಯವಾದ ಅವಮಾನ, ಟಿಕೆಟ್ ನಿರಾಕರಿಸೋದು ಬೇರೆ. ಆದರೆ ಅವರನ್ನ ನಡೆಸಿಕೊಂಡ ರೀತಿ ಅದು ರಾಜಕೀಯ ಕ್ಷೇತ್ರದಲ್ಲಿ ಸರಿಯಾದದ್ದಲ್ಲ. ಯಾವುದೇ ರಾಷ್ಟ್ರೀಯ ಪಕ್ಷಕ್ಕೆ ಶೋಭೆ ತರತಕ್ಕಂತದ್ದಲ್ಲ. ಅದಕ್ಕಿಂತ ಹೆಚ್ಚು ನಾ ಹೇಳೋದಿಲ್ಲ, ಯಾಕಂದ್ರೆ ಅದು ಅವರ ಪಕ್ಷದ ಆಂತರಿಕ ವಿಷಯ ಎಂದು ಶಾಸಕ ಎಚ್ಕೆ ಪಾಟೀಲ್ ಹೇಳಿದ್ದಾರೆ.
-
Karnataka Assembly Election Live: ಶೆಟ್ಟರ್ಗೆ ಟಿಕೆಟ್ ಕೊಟ್ಟಿಲ್ಲಾ ಅನ್ನೋದು ಆಶ್ಚರ್ಯ
ಬೆಳಗಾವಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಮನೆತನ ಬಿಜೆಪಿಗೆ ಮೀಸಲಿಟ್ಟವರು. ಅವರಿಗೆ ಟಿಕೆಟ್ ಯಾಕೆ ಕೊಟ್ಟಿಲ್ಲಾ ಅನ್ನೋದು ಆಶ್ಚರ್ಯ ತಂದಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಸವದಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
-
Karnataka Assembly Election Live: ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಫೈಟರ್ ರವಿ ರಾಜೀನಾಮೆ
ಬೆಂಗಳೂರು: ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಫೈಟರ್ ರವಿ ರಾಜೀನಾಮೆ ನೀಡಿದ್ದಾರೆ. ಟಿಕೆಟ್ ಆಕಾಂಕ್ಷಿಯಾಗಿದ್ದ ಮಲ್ಲಿಕಾರ್ಜುನ ಅಲಿಯಾಸ್ ಫೈಟರ್ ರವಿ ನಗರದ ಮಲ್ಲೇಶ್ವರಂನಲ್ಲಿರುವ ಕಚೇರಿಗೆ ಶನಿವಾರ ತೆರಳಿ ರಾಜೀನಾಮೆ ನೀಡಿದ್ದಾರೆ.
-
Karnataka Assembly Election Live: ಸಿದ್ಧರಾಮಯ್ಯಗೆ ಕೋಲಾರ ಕೈ ತಪ್ಪಿದ್ದು ಹೇಗೆ?
ಬೆಂಗಳೂರು: ಸಿದ್ದರಾಮಯ್ಯ ಎರಡು ಕ್ಷೇತ್ರ ಆಯ್ಕೆಗೆ ಕಾಂಗ್ರೆಸ್ನಲ್ಲೇ ವಿರೋಧ ವ್ಯಕ್ತವಾಗಿದೆ. ಸಿದ್ದುಗೆ ಎರಡು ಕ್ಷೇತ್ರ ಕೊಟ್ಟರೆ ಸಿದ್ದು ಮುಂದಿನ ಸಿಎಂ ಎಂದು ಅಘೋಷಿತ ನಿರ್ಣಯ ಆದಂತಾಗುತ್ತದೆ. ಹೀಗಾಗಿ ಬಹಿರಂಗವಾಗಿ ಅಲ್ಲದೇ ಹೈಕಮಾಂಡ್ ಮಟ್ಟದಲ್ಲಿ ಕೈ ನಾಯಕರಿಂದ ವಿರೋಧ ವ್ಯಕ್ತವಾಗಿದೆ. ವಿರೋಧದ ಬಗ್ಗೆ ಖರ್ಗೆ ಹಾಗೂ ರಾಹುಲ್ ಗಾಂಧಿಗೆ ಮನವರಿಕೆ ಮಾಡಿದ್ದು, ರಾಹುಲ್ ಗಾಂಧಿಗೆ ಕೋಲಾರ ಸಿದ್ದು ಗೆಲುವಿನ ವರದಿ ರವಾನೆ ಮಾಡಲಾಗಿದೆ.
-
Karnataka Assembly Election Live: ಟೈರ್ಗೆ ಬೆಂಕಿ ಹಚ್ಚಿ ಗೋಪಿಕೃಷ್ಣ ಬೆಂಬಲಿಗರಿಂದ ಆಕ್ರೋಶ
ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ಕಾಂಗ್ರೆಸ್ ಭಿನ್ನಮತ ಸ್ಫೋಟವಾಗಿದ್ದು, ಟಿಕೆಟ್ ಕೈತಪ್ಪಿದ್ದಕ್ಕೆ ಗೋಪಿಕೃಷ್ಣ ಕಣ್ಣೀರು ಹಾಕಿದ್ದಾರೆ. ಕಾಂಗ್ರೆಸ್ ಟಿಕೆಟ್ಗಾಗಿ ಶ್ರೀನಿವಾಸ್-ಗೋಪಿಕೃಷ್ಣ ಮಧ್ಯೆ ಪೈಪೋಟಿ ಉಂಟಾಗಿದೆ. ಅಂತಿಮವಾಗಿ ಶ್ರೀನಿವಾಸ್ಗೆ ಕಾಂಗ್ರೆಸ್ ಟಿಕೆಟ್ ಘೋಷಿಸಿದೆ. ಈ ಹಿನ್ನೆಲೆ ಗೋಪಿಕೃಷ್ಣ ಬೆಂಬಲಿಗರಿಂದ ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
-
Karnataka Assembly Election Live: ಪಕ್ಷಕ್ಕೆ ದ್ರೋಹ ಮಾಡಲ್ಲವೆನ್ನು ಸಂದೇಶವನ್ನ ಈಶ್ವರಪ್ಪ ನೀಡಿದ್ದಾರೆ
ವಿಜಯಪುರ: ಈಶ್ವರಪ್ಪ ಗೌರವಯುತವಾಗಿ ನಡೆದುಕೊಂಡರು. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಪಕ್ಷಕ್ಕೆ ದ್ರೋಹ ಮಾಡಲ್ಲ ಅನ್ನುವ ಸಂದೇಶವನ್ನ ಈಶ್ವರಪ್ಪ ನೀಡಿದ್ದಾರೆ. ಎಲ್ಲ ಕಾರ್ಯಕರ್ತರಲ್ಲಿ ಈ ಭಾವನೆ ಬರಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
-
Karnataka Assembly Election Live: ಕೋಲಾರ ಭಾಗದ ಶಾಸಕರಿಗೆ ಬೇಸರ
ಕೋಲಾರ: ಕಾಂಗ್ರೆಸ್ ಮೂರನೇ ಪಟ್ಟಿಯಲ್ಲಿ ಸಿದ್ದರಾಮಯ್ಯಗೆ ಕೋಲಾರ ಟಿಕೆಟ್ ಘೋಷಣೆ ಮಾಡಲಾಗುತ್ತದೆ ಎಂಬ ಭರವಸೆ ಇತ್ತು. ಆದರೆ ಆ ಭರವಸೆ ಸುಳ್ಳಾಗಿದ್ದು, ಕೋಲಾರ ಟಿಕೆಟ್ ಕೈ ತಪ್ಪಿದೆ. ಈ ಹಿನ್ನೆಲೆ ಕೋಲಾರ ಭಾಗದ ಶಾಸಕರಿಗೆ ಬೇಸರವಾಗಿದೆ ಎನ್ನಲಾಗಿದೆ. ಜೊತೆಗೆ ಕೋಲಾರ ಜಿಲ್ಲಾ ರಾಜಕಾರಣದ ಮೇಲೆ ಇದರ ನೆಗೆಟಿವ್ ಇಂಪ್ಯಾಕ್ಟ್ ಆತಂಕ ಶುರುವಾಗಿದೆ. ಸಿದ್ದರಾಮಯ್ಯ ಕೋಲಾರಕ್ಕೆ ಬಂದರೆ ದೊಡ್ಡ ಮಟ್ಟಿನ ಗೆಲುವು ಸಾಧಿಸಬಹುದು ಎಂಬ ಲೆಕ್ಕದಲ್ಲಿ ಶಾಸಕರಿದ್ದರು.
-
Karnataka Assembly Election Live: ಕಾಂಗ್ರೆಸ್ನವರು ಗಿಫ್ಟ್ ರಾಜಕೀಯ ಮಾಡುತ್ತಿದ್ದಾರೆ
ಬಳ್ಳಾರಿ: 10 ವರ್ಷದಿಂದ ಕೆಲಸವನ್ನೆ ಮಾಡದ ಕಾಂಗ್ರೆಸ್ನವರು ಗಿಫ್ಟ್ ರಾಜಕೀಯ ಮಾಡುತ್ತಿದ್ದಾರೆ. ಮತದಾರರು ಮತದಾನದ ನಂತರ ಕಾಂಗ್ರೆಸ್ನವರಿಗೆ ಸೋಲಿನ ಗಿಫ್ಟ್ ನೀಡಲಿದ್ದಾರೆ. ಕಾಂಗ್ರೆಸ್ನವರು ಎಷ್ಟೇ ಪ್ರಯತ್ನ ಮಾಡಿದ್ರು ಈ ಭಾರಿ ಗೆಲುವು ಸಾಧಿಸುವುದಿಲ್ಲ. ಜನರು ಬಿಜೆಪಿ ಹಾಗೂ ಮೋದಿ ಪರವಾಗಿದ್ದಾರೆ ಎಂದು ಶಾಸಕ ಸೋಮಶೇಖರರೆಡ್ಡಿ ನಾಮಪತ್ರ ಸಲ್ಲಿಕೆ ನಂತರ ಸಚಿವ ಶ್ರೀರಾಮುಲು ಹೇಳಿದರು.
-
Karnataka Assembly Election Live: ಎಸ್ಆರ್ ಪಾಟೀಲ್ ಪಕ್ಷಕ್ಕೆ ಬಂದ್ರೆ ಖಂಡಿತವಾಗಿಯೂ ಸ್ವಾಗತ ಮಾಡ್ತೇನೆ
ಮುಧೋಳ: ಎಸ್.ಆರ್ ಪಾಟೀಲರನ್ನ ಅವಮಾನ ಮಾಡಿದ್ದನ್ನ ನೋಡಿದ್ರೆ, ನೀವು ಕಾಂಗ್ರೆಸ್ ಬಗ್ಗೆ ಮಾತೇ ಆಡಬಾರದು. ಕಾಂಗ್ರೆಸ್ ಯಾವ ರೀತಿ ಇದೆ ಎಂದು ನಿಮಗೆ ಅರ್ಥವಾಗುತ್ತೆ. ಎಸ್ಆರ್ ಪಾಟೀಲ್ ಒಬ್ಬ ಹಿರಿಯ ರಾಜಕಾರಣಿ. ನಮ್ಮ ಜಿಲ್ಲೆಯಲ್ಲಿ ಎಲ್ಲರಿಗೂ ಮಾರ್ಗದರ್ಶನ ಮಾಡುವ ಹಿರಿಯರು ಅವರು. ಅವರು ಪಕ್ಷಕ್ಕೆ ಬಂದ್ರೆ ಖಂಡಿತವಾಗಿಯೂ ಸ್ವಾಗತ ಮಾಡ್ತೇನೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು.
-
Karnataka Assembly Election Live: ಟಿಕೆಟ್ ಸಿಕ್ಕಿದ್ದಕ್ಕೆ ಕುಸುಮಾ ಶಿವಳ್ಳಿ ಹರ್ಷ
ಹುಬ್ಬಳ್ಳಿ: ಕಾಂಗ್ರೆಸ್ ಅಭ್ಯರ್ಥಿಗಳ 3ನೇ ಪಟ್ಟಿಯನ್ನು ಎಐಸಿಸಿ ಬಿಡುಗಡೆ ಮಾಡಿದೆ. 3ನೇ ಪಟ್ಟಿಯಲ್ಲಿ 43 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಕುಂದಗೋಳ ಕಾಂಗ್ರೆಸ್ ಟಿಕೆಟ್ ಸಿಕ್ಕಿದ್ದಕ್ಕೆ ಕುಸುಮಾ ಶಿವಳ್ಳಿ ಹರ್ಷ ವ್ಯಕ್ತಪಡಿಸಿದ್ದಾರೆ.
-
Karnataka Assembly Election Live: ಬಂಡಾಯ ಶಮನಕ್ಕೆ ಬೆಳಗಾವಿಗೆ ಆಗಮಿಸಿದ ಧರ್ಮೇಂದ್ರ ಪ್ರಧಾನ್
ಬೆಳಗಾವಿ: ಟಿಕೆಟ್ ಹಂಚಿಕೆ ಬೆನ್ನಲ್ಲೇ ಬೆಳಗಾವಿ ಬಿಜೆಪಿಯಲ್ಲಿ ಬಂಡಾಯದ ಬಿರುಗಾಳಿ ಶುರುವಾಗಿದ್ದು, ಈ ಬಂಡಾಯ ಶಮನಕ್ಕೆ ಕರ್ನಾಟಕ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಆಗಮಿಸಿದ್ದಾರೆ. ಸಾಂಬ್ರಾ ಏರ್ಪೋರ್ಟ್ನಿಂದ ಖಾಸಗಿ ಹೋಟೆಲ್ಗೆ ತೆರಳಿದ ಪ್ರಧಾನ್, ಟಿಕೆಟ್ ವಂಚಿತ ಶಾಸಕರು, ಆಕಾಂಕ್ಷಿಗಳ ಜತೆ ಸಭೆ ನಡೆಸಲಿದ್ದಾರೆ.
-
Karnataka Assembly Election Live: ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ್ ಯತ್ನಾಳ್ ನಾಮಪತ್ರ ಸಲ್ಲಿಕೆ
ವಿಜಯಪುರ: ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಬಸನಗೌಡ ಪಾಟೀಲ್ ಯತ್ನಾಳ್ ಶನಿವಾರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಎಪ್ರೀಲ್ 18 ರಂದು ಮತ್ತೊಮ್ಮೆ ನಾಮಪತ್ರ ಸಲ್ಲಿಕೆ ಮಾಡೋದಾಗಿ ಯತ್ನಾಳ್ ಹೇಳಿದರು.
-
Karnataka Assembly Election Live: ಭಾವುಕರಾಗಿ ಕಣ್ಣೀರು ಹಾಕಿದ ಹಿರಿಯ ಮುಖಂಡ ಗೋವಿಂದ ಕಾರಜೋಳ
ಬಾಗಲಕೋಟೆ: ದಿ. ರಾಮಕೃಷ್ಟ ಹೆಗಡೆ, ಎಸ್ ಆರ್ ಬೊಮ್ಮಾಯಿ ಅವರನ್ನ ನೆನೆಸಿಕೊಳ್ಳಬೇಕು. 29 ವರ್ಷ ಮುಧೋಳದ ಜನರು ಪ್ರೀತಿ ವಿಶ್ವಾಸದಿಂದ ಇದ್ದಾರೆ. ನಾನು ಈ ಸಲ ಟಿಕೆಟ್ ಬೇಡ ಎಂದಿದ್ದೆ. ಜನರ ಬಯಕೆ ಇದೆ ನಿಲ್ಲುತೆ ಒತ್ತಾಯ ಮಾಡಿದರು. ತಮ್ಮನ್ನ ಮುಧೋಳದ ರಾಜಕಾರಣಕ್ಕೆ ಕರೆತಂದ ವ್ಯಕ್ತಿಯನ್ನು ನೆನೆದು ಹಿರಿಯ ಮುಖಂಡ ಗೋವಿಂದ ಕಾರಜೋಳ ಭಾವುಕರಾದರು.
-
Karnataka Assembly Election Live: ಹಾಲಿ ನಾಲ್ಕು ಕ್ಷೇತ್ರಗಳ ಟಿಕೇಟ್ ಮತ್ತೆ ಪೆಂಡಿಂಗ್
ಬೆಂಗಳೂರು: ಕಾಂಗ್ರೆಸ್ ಅಭ್ಯರ್ಥಿಗಳ 3ನೇ ಪಟ್ಟಿಯನ್ನು ಎಐಸಿಸಿ ಬಿಡುಗಡೆ ಮಾಡಿದೆ. ಹಾಲಿ ನಾಲ್ಕು ಕ್ಷೇತ್ರಗಳ ಟಿಕೆಟ್ ಮತ್ತೆ ಪೆಂಡಿಂಗ್ ಇಡಲಾಗಿದೆ. ಶಿಡ್ಲಘಟ್ಟ, ಲಿಂಗಸೂಗುರು, ಪುಲಕೇಶಿ ನಗರ, ಹರಿಹರ ಟಿಕೆಟ್ಗಳನ್ನು ಕಾಂಗ್ರೆಸ್ ಹೈಕಮಾಂಡ್ ಬಾಕಿ ಉಳಿಸಿಕೊಂಡಿದೆ.
-
Karnataka Assembly Election Live: ಕಾಂಗ್ರೆಸ್ ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ ಮಾಡಿದ ಎಐಸಿಸಿ
ಬೆಂಗಳೂರು: ಕಾಂಗ್ರೆಸ್ ಅಭ್ಯರ್ಥಿಗಳ 3ನೇ ಪಟ್ಟಿಯನ್ನು ಎಐಸಿಸಿ ಬಿಡುಗಡೆ ಮಾಡಿದೆ. 3ನೇ ಪಟ್ಟಿಯಲ್ಲಿ 43 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಅಥಣಿ ಕ್ಷೇತ್ರದಿಂದ ಲಕ್ಷ್ಮಣ ಸವದಿಗೆ ಟಿಕೆಟ್ ನೀಡಲಾಗಿದೆ.
-
Karnataka Election Live: ನಾಮಪತ್ರ ಸಲ್ಲಿಸಿದ ಶ್ರೀನಿವಾಸಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ
ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುಂಜೂರು ಶ್ರೀನಿವಾಸರೆಡ್ಡಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದ್ದಾರೆ.
-
Karnataka Election Live: ಬಿಜೆಪಿಗೆ ಗುಡ್ಬೈ ಹೇಳಿದ ಮಾಜಿ ಸಚಿವ ಡಾ.ಎ.ಬಿ.ಮಾಲಕರೆಡ್ಡಿ
ಯಾದಗಿರಿ: ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಮಾಜಿ ಸಚಿವ ಡಾ.ಎ.ಬಿ.ಮಾಲಕರೆಡ್ಡಿ ರಾಜಿನಾಮೆ ಸಲ್ಲಿಸಿದ ಪತ್ರವನ್ನು ರಾಜ್ಯಾಧ್ಯಕ್ಷರಿಗೆ ರವಾನಿಸಿದ್ದಾರೆ. ನಂತರ ಹೆಚ್.ಡಿ.ದೇವೇಗೌಡರನ್ನು ಭೇಟಿಯಾಗಿ ಬಿ ಫಾರಂ ಪಡೆದರು.
-
Karnataka Election Live: ನಾಮಪತ್ರ ಸಲ್ಲಿಸಿದ ಬಂಟ್ವಾಳ ಬಿಜೆಪಿ ಅಭ್ಯರ್ಥಿ
ಮಂಗಳೂರು: ಬಂಟ್ವಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಇಂದು (ಏ.15) ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ತಾಲೂಕು ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದ್ದಾರೆ.
-
Karnataka Election Live: ಸಿಎಂ ರೇಸ್ನಲ್ಲಿದ್ದವರಿಗೆ ಟಿಕೆಟ್ ಸಿಗದಾಗೆ ಪ್ರಹ್ಲಾದ್ ಜೋಷಿ ಮಾಡಿದ್ದಾರೆ: ಯು.ಟಿ.ಖಾದರ್
ಮಂಗಳೂರು: ಹಿಂದೆಲ್ಲ ಬಿಜೆಪಿಯದ್ದು ಮೂರು ಬಾಗಿಲು ಇತ್ತು ಈಗ 25 ಬಾಗಿಲು ಆಗಿದೆ. ಈ ಬಾರಿಯ ಟಿಕೆಟ್ ಘೋಷಣೆಯಲ್ಲೇ ಎಲ್ಲವೂ ಗೊತ್ತಾಗುತ್ತೆ. ಯಾರೆಲ್ಲ ಮುಖ್ಯಮಂತ್ರಿ ರೇಸ್ ನಲ್ಲಿದ್ದರು, ಅವರೆಲ್ಲರಿಗೂ ಟಿಕೆಟ್ ಸಿಗದಾಗೆ ಪ್ರಹ್ಲಾದ್ ಜೋಷಿ ಮಾಡಿದ್ದಾರೆ. ಯಾರೂ ಮುಖ್ಯಮಂತ್ರಿ ರೇಸ್ಗೆ ಬರದಂತೆ ಅವರು ಮಾಡಿದ್ದಾರೆ ಎಂದು ಮಂಗಳೂರಿನಲ್ಲಿ ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.
-
ನನಗೆ ಕ್ಷೇತ್ರ ಇಲ್ಲ ಎನ್ನುತ್ತಿದ್ದ ಕೆಎಸ್ ಈಶ್ವರಪ್ಪಗೆ ಟಿಕೆಟ್ ಸಿಗಲಿಲ್ಲ: ಸಿದ್ದರಾಮಯ್ಯ ಲೇವಡಿ
ಶಿಗ್ಗಾಂವಿ: ನನಗೆ ಕ್ಷೇತ್ರ ಇಲ್ಲ ಎನ್ನುತ್ತಿದ್ದ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರಿಗೆನೇ ಟಿಕೆಟ್ ಸಿಗಲಿಲ್ಲ. ನನಗೆ ರಾಜ್ಯದ 25 ಕ್ಷೇತ್ರಗಳಿಂದ ಸ್ಪರ್ಧೆಗೆ ಆಹ್ವಾನ ಬಂದಿದೆ. ಹಿರಿಯ ನಾಯಕ ಈಶ್ವರಪ್ಪಗೆ ಪಕ್ಷ ಹೀಗೆ ಮಾಡಬಾರದಿತ್ತು ಈಶ್ವರಪ್ಪ ಅಷ್ಟೇ ಅಲ್ಲ ಸವದಿ, ಶೆಟ್ಟರ್ ನಡೆಸಿಕೊಂಡ ರೀತಿ ಸರಿಯಲ್ಲ ಎಂದು ಕೆ.ಎಸ್.ಈಶ್ವರಪ್ಪ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
-
Karnataka Election Live: ಕಾಂಗ್ರೆಸ್ ಅಭ್ಯರ್ಥಿಗಳ 3ನೇ ಪಟ್ಟಿ ಇಂದೇ ಬಿಡುಗಡೆ ಆಗಬಹುದು: ಸಿದ್ದರಾಮಯ್ಯ
ಬೆಳಗಾವಿ: ಕಾಂಗ್ರೆಸ್ ಅಭ್ಯರ್ಥಿಗಳ 3ನೇ ಪಟ್ಟಿ ಇಂದೇ ಬಿಡುಗಡೆ ಆಗಬಹುದು ಎಂದು ಬೆಳಗಾವಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬೆಳಗಾವಿ ಜಿಲ್ಲೆಯ 5 ಕ್ಷೇತ್ರಗಳ ಹೆಸರು ಘೋಷಣೆಯಾಗಲಿದೆ. ಲಕ್ಷ್ಮಣ ಸವದಿ ಕಾಂಗ್ರೆಸ್ ಪಕ್ಷದಲ್ಲಿ ಪ್ರಚಾರ ನಡೆಸುವ ವಿಚಾರವಾಗಿ ಮಾತನಾಡಿದ ಅವರು ನನ್ನನ್ನು ಎಲ್ಲಿ ಬೇಕಾದರೂ ಬಳಸಿಕೊಳ್ಳಿ ಎಂದು ಸವದಿ ಹೇಳಿದ್ದಾರೆ. ಬೆಳಗಾವಿ ಸೇರಿ ಹಲವೆಡೆ ಕಾಂಗ್ರೆಸ್ ಪರ ಸವದಿ ಪ್ರಚಾರ ಮಾಡಲಿದ್ದಾರೆ ಎಂದು ಹೇಳಿದರು.
-
Karnataka Election Live: ಬೆಂಬಲಿಗರನ್ನು ಉದ್ದೇಶಿಸಿ ಶೆಟ್ಟರ ಭಾವುಕ ಮಾತು
ಹುಬ್ಬಳ್ಳಿ: ಇವತ್ತು ವಿಶೇಷ ಸಂದರ್ಭದಲ್ಲಿ ನಾವು ಕೂಡಿದ್ದೇವೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ಚಿರಋಣಿ. ನಿಮ್ಮೆಲ್ಲರ ಪ್ರೀತಿ ವಿಶ್ವಾಸದಿಂದ ಒಂದು ಶಕ್ತಿಯಿಂದ ನಾನು ರಾಜ್ಯ ನಾಯಕನಾದೆ. ಹಲವಾರು ಇಲಾಖೆ ಮಂತ್ರಿ, ವಿರೋಧ ಪಕ್ಷದ ನಾಯಕ,ಮುಖ್ಯಮಂತ್ರಿ ಆಗಿ ಕೆಲಸ ಮಾಡಿದ್ದೇನೆ ನಾನು ಬಿಜೆಪಿಗೆ ಯಾವಾಗಲೂ ಚಿರಖುಣಿ ಎಂದು ಭಾವುಕಾರಾಗಿದ್ದಾರೆ.
-
Karnataka Election Live: ಶೆಟ್ಟರ್ ಪಕ್ಷದ ಸೇವೆ ಮಾಡಿದ್ದನ್ನು ಅಲ್ಲಗಳೆಯಲು ಆಗಲ್ಲ: ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಪಕ್ಷದ ಸೇವೆ ಮಾಡಿದ್ದನ್ನು ಅಲ್ಲಗಳೆಯಲು ಆಗಲ್ಲ. ಜಗದೀಶ್ ಶೆಟ್ಟರ್ ವಿಚಾರವಾಗಿ ಪಕ್ಷ ಸೂಕ್ತ ತೀರ್ಮಾನ ಮಾಡುತ್ತೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
-
Karnataka Election Live: ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ ಸಿಎಂ ಬೊಮ್ಮಾಯಿ
ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು (ಏ.15) ಶಿಗ್ಗಾಂವಿ ತಹಶೀಲ್ದಾರ್ ಕಚೇರಿಗೆ ತೆರಳಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಸಿಎಂ ಬೊಮ್ಮಾಯಿಯವರಿಗೆ ಹಾವೇರಿ ಸಂಸದ ಶಿವಕುಮಾರ ಉದಾಸಿ, ಸಚಿವ ಸಿ.ಸಿ.ಪಾಟೀಲ್, ಸಿಎಂ ಪುತ್ರ ಭರತ ಬೊಮ್ಮಾಯಿ ಸಾಥ್ ನೀಡಿದರು.
-
Karnataka Election Live: ವರುಣಾ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಬದಲಾವಣೆ ಮಾಡಿದ ಜೆಡಿಎಸ್
ಮೈಸೂರು: ವರುಣಾ ಕ್ಷೇತ್ರದಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಬದಲಾವಣೆ ಮಾಡಿದೆ. ಅಭಿಷೇಕ್ಗೆ ಕೊಕ್ ನೀಡಿ ಭಾರತಿ ಶಂಕರ್ ಎಂಬುವರಿಗೆ ಟಿಕೆಟ್ ಘೋಷಣೆ ಮಾಡಿದೆ.
-
Karnataka Election Live: ನಾಳೆ ಕನಕಪುರಕ್ಕೆ ಆರ್ ಅಶೋಕ್ ಭೇಟಿ, ಸ್ಥಳೀಯ ಬಿಜೆಪಿ ಮುಖಂಡರೊಂದಿಗೆ ಸಭೆ
ರಾಮನಗರ: ಕನಕಪುರ ಕ್ಷೇತ್ರದಲ್ಲಿ ಡಿ.ಕೆ ಶಿವಕುಮಾರ್ ವಿರುದ್ಧ ಆರ್.ಅಶೋಕ್ ಸ್ಪರ್ಧೆ ಮಾಡುತ್ತಿದ್ದು, ನಾಳೆ ಜಿಲ್ಲೆಯ ಕನಕಪುರಕ್ಕೆ ಆರ್.ಅಶೋಕ್ ಭೇಟಿ ನೀಡಿವ ಸಾಧ್ಯತೆ ಇದೆ. ಅಲ್ಲಿ ಕ್ಷೇತ್ರದ ಬಿಜೆಪಿ ಮುಖಂಡರ ಜತೆ ಸಭೆ ನಡೆಸಲಿದ್ದಾರೆ. ಏ.19ರಂದು ಕನಕಪುರದಲ್ಲಿ ಆರ್.ಅಶೋಕ್ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ.
-
Karnataka Election Live: ರಣದೀಪ್ ಸಿಂಗ್ ಸುರ್ಜೇವಾಲ ಹೆಲಿಕಾಪ್ಟರ್ ಪರಿಶೀಲಿಸಿದ ಚುನಾವಣಾಧಿಕಾರಿಗಳು
ಕೋಲಾರ: ಮಾಜಿ ಸಭಾಪತಿ ರಮೇಶ್ ಕುಮಾರ್ ಮುನಿಸನ್ನು ಶಮನ ಮಾಡಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಕೋಲಾರಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ರಣದೀಪ್ ಸಿಂಗ್ ಸುರ್ಜೇವಾಲ ಹೆಲಿಕಾಪ್ಟರ್ ಅನ್ನು ಚುನಾವಣಾಧಿಕಾರಿಗಳು ಪರಿಶೀಲಿಸಿದ್ದಾರೆ.
-
Karnataka Election Live: ಮುಸ್ಲಿಂ ಸಮುದಾಯಕ್ಕೆ ಶೇ 4 ರಷ್ಟು ಮೀಸಲಾತಿ ಕೊಟ್ಟಿದ್ದೆ ನಾನು: ಹೆಚ್.ಡಿ.ದೇವೇಗೌಡ
ಬೆಂಗಳೂರು: ಮುಸ್ಲಿಂ ಸಮುದಾಯಕ್ಕೆ ನಾನು ಶೇ 4 ರಷ್ಟು ಮೀಸಲಾತಿ ಕೊಟ್ಟಿದ್ದೆ. ಈ ಜೀವ ಯಾರಿಗೂ ಮೋಸ ಮಾಡಿಲ್ಲ. ಎಲ್ಲಾ ವರ್ಗದವರಿಗೂ ಸಮಾನವಾದ ಅವಕಾಶ ಕೊಟ್ಟಿದ್ದೇನೆ. ಆಕಸ್ಮಿಕವಾಗಿ ಪ್ರಧಾನಿ ಆಗಿರಲಿಲ್ಲ, ಎಲೆಕ್ಟೆಡ್ ಪ್ರೈಮ್ ಮಿನಿಸ್ಟರ್. ಈಗ ವಾಲ್ಮೀಕಿ ಸಮುದಾಯಕ್ಕೆ ಏನು ಮಾಡಿದ್ದಾರೆ ಗೊತ್ತಿದೆ. ಸಿದ್ದರಾಮಯ್ಯ ಏನು ಮಾಡಿದರು ಎಂಬುದು ಸಹ ಗೊತ್ತಿದೆ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಹೇಳಿದ್ದಾರೆ.
-
Karnataka Election Live: ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ ರಹಸ್ಯ ಸಭೆ
ಹುಬ್ಬಳ್ಳಿ: ಟಿಕೆಟ್ ಸಿಗದ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಜದೀಶ್ ಶೆಟ್ಟರ್ ಮುನಿಸಿಕೊಂಡಿದ್ದಾರೆ. ಹೀಗಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು, ಜದೀಶ್ ಶೆಟ್ಟರ್ ಅವರ ಮನೆಗೆ ತೆರಳಿ ರಹಸ್ಯ ಸಭೆ ನಡೆಸಿದ್ದಾರೆ.
-
Karnataka Election Live: ರಮೇಶ್ ಕುಮಾರ್ ಮುನಿಸು ಶಮನ ಮಾಡಲು ಕೋಲಾರಕ್ಕೆ ಹೊರಟ ಕೈ ನಾಯಕರು
ಕೋಲಾರ: ವಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸಲು ನಿರಾಕರಣೆ ಮಾಡಿದ ಹಿನ್ನೆಲೆ ಸಿದ್ದರಾಮಯ್ಯ ಹಾಗೂ ಪಕ್ಷದ ವಿರುದ್ಧ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮುನಿಸಿಕೊಂಡಿದ್ದಾರೆ. ಈ ಹಿನ್ನೆಲೆ ರಮೇಶ್ ಕುಮಾರ್ ಅವರ ಮನವೊಲಿಸಲು ನಾಯಕರು ಯತ್ನಿಸುತ್ತಿದ್ದಾರೆ. ಹೀಗಾಗಿ ಇಂದು (ಏ.15) ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ ಗ್ರಾಮದಲ್ಲಿನ ರಮೇಶ್ ಕುಮಾರ್ ಮನೆಗೆ ರಣದೀಪ್ ಸಿಂಗ್ ಸುರ್ಜೇವಾಲ, ಭೈರತಿ ಸುರೇಶ್ ಭೇಟಿ ನೀಡಲಿದ್ದಾರೆ.
-
Karnataka Election Live: ಜೆಡಿಎಸ್ ಭರವಸೆ ಪತ್ರ ಬಿಡುಗಡೆ ಮಾಡಿದ ದೇವೇಗೌಡರು
ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡರು ಇಂದು (ಏ.15) ಜೆಡಿಎಸ್ ಭರವಸೆ ಪತ್ರ ಬಿಡುಗಡೆ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ,ಪರಿಷತ್ ಸದಸ್ಯ ಟಿ ಎ ಶರವಣ ಉಪಸ್ಥಿತರಿದ್ದರು.
-
Karnataka Election Live: ಸಿಎಂ ಬೊಮ್ಮಾಯಿ ಇಂದು ನಾಮಪತ್ರ ಸಲ್ಲಿಕೆ
ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು (ಏ.15)ಶಿಗ್ಗಾಂವಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ಈ ಸಂಬಂಧ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ನಂತರ ಶಿಗ್ಗಾಂವಿ ತಹಶೀಲ್ದಾರ್ ಕಚೇರಿಗೆ ತೆರಳಿ ಬೆಳಗ್ಗೆ 11 ಗಂಟೆಗೆ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಹುಬ್ಬಳ್ಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಇಂದು ಶಿಗ್ಗಾಂವಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸುತ್ತೇವೆ. ಒಳ್ಳೆ ಮೂಹುರ್ತ ಇರುವ ಕಾರಣ ನಾಮಪತ್ರ ಸಲ್ಲಿಸುತ್ತಿದ್ದೇನೆ. 19 ರಂದು ಜನ ಸೇರಿಸಿ ನಾಮಪತ್ರ ಸಲ್ಲಿಸುತ್ತೇನೆ. ಇವತ್ತು ಇಡಿ ದಿನ ಕ್ಷೇತ್ರದಲ್ಲಿ ಇರುತ್ತೇನೆ ಎಂದು ಹೇಳಿದರು.
-
Karnataka Election Live: ಜಗದೀಶ್ ಶೆಟ್ಟರ್ ಟಿಕೆಟ್ ಮುನಿಸು, ಇಂದು ಬೆಂಬಲಿಗರ ಜೊತೆ ಸಭೆ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಟಿಕೆಟ್ ಯಾರಿಗೆ ಎಂದು ಇನ್ನೂ ಘೋಷೆಯಾಗಿಲ್ಲ. ಈ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮುನಿಸಿಕೊಂಡು, ದೆಹಲಿ ಪ್ರವಾಸ ಮಾಡಿ ಹೈಕಮಾಂಡ್ ಭೇಟಿಯಾಗಿದ್ದರು. ಈ ವೇಳೆ ಕೇಂದ್ರ ನಾಯಕರಿಗೆ ಎರಡು ದಿನದ ಗಡುವು ನೀಡಿ, ರಾಜ್ಯಕ್ಕೆ ಆಗಮಿಸಿದ್ದಾರೆ. ಎರಡು ದಿನ ಗಡುವು ಮುಗಿದ ಹಿನ್ನೆಲೆಯಲ್ಲಿ ಇಂದು (ಏ.15) ಬೆಂಬಲಿಗರ ಸಭೆ ಬೆಳಗ್ಗೆ 11 ಗಂಟೆಗೆ ಬೆಂಬಲಿಗರ ಸಭೆ ಕರೆದಿದ್ದಾರೆ. ಹುಬ್ಬಳ್ಳಿಯ ಕೇಶ್ವಾಪುರದ ಮಧುರಾ ಕಾಲೋನಿಯ ನಿವಾಸದಲ್ಲಿ ಸಭೆ ನಡೆಯಲಿದೆ.
Published On - Apr 15,2023 9:29 AM




