AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ ಕಮಲ ಅರಳಿಸಲು ನೀರೆರೆಯುತ್ತಿರುವ ಮೋದಿ: ಇಲ್ಲಿದೆ ಪ್ರಧಾನಿಯವರ ಸರಣಿ ಪ್ರವಾಸದ ವೇಳಾಪಟ್ಟಿ

ಇಂದಿನಿಂದ ಮೇ 7ರ ವರಗೆ ಪ್ರಧಾನಿ ಮೋದಿಯವರ ರಾಜ್ಯ ಪ್ರವಾಸ ಮಾಡಲಿದ್ದಾರೆ. ಹಾಗಿದ್ದರೆ ಪ್ರಧಾನಿ ಮೋದಿಯವರ ಪ್ರಚಾರದ ವೇಳಾಪಟ್ಟಿ ಹೇಗೆ ಹೆಣೆಯಲಾಗಿದೆ? ಇಲ್ಲಿದೆ ವಿವರ

ಕರ್ನಾಟಕದಲ್ಲಿ ಕಮಲ ಅರಳಿಸಲು ನೀರೆರೆಯುತ್ತಿರುವ ಮೋದಿ: ಇಲ್ಲಿದೆ ಪ್ರಧಾನಿಯವರ ಸರಣಿ ಪ್ರವಾಸದ ವೇಳಾಪಟ್ಟಿ
ಪ್ರಧಾನಿ ನರೇಂದ್ರ ಮೋದಿ
ವಿವೇಕ ಬಿರಾದಾರ
|

Updated on: Apr 29, 2023 | 3:34 PM

Share

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election) ಬಿಸಿಲಿನ ತಾಪಮಾನ ಹೆಚ್ಚುವಂತೆ ಹೆಚ್ಚುತ್ತಿದೆ. ಏಟಿಗೆ ಎದಿರೇಟು, ಆರೋಪಕ್ಕೆ ಪ್ರತ್ಯಾರೋಪ, ತಂತ್ರಕ್ಕೆ ಪ್ರತಿತಂತ್ರದಿಂದ ನಾಯಕರು ಮತದಾರರನ್ನು ಸೆಳೆಯಲು ಪ್ರಚಾರಕ್ಕೆ ಇಳಿದಿದ್ದಾರೆ. ಅದರಲ್ಲೂ ಆಡಳಿತಾರೂಢ ಬಿಜೆಪಿ ಮತ್ತೊಮ್ಮೆ ಆಡಳಿತ ಚುಕ್ಕಾಣಿ ಹಿಡಿಯಬೇಕು ಎಂಬ ತಣತೊಟ್ಟು ಮುನ್ನುಗ್ಗಿದೆ. ದಕ್ಷಿಣ ಭಾರತದಲ್ಲಿ ಅತಿ ದೊಡ್ಡ ರಾಜ್ಯವಾದ ಕರ್ನಾಟಕದಲ್ಲಿ ಅಧಿಕಾರಿದ ಗದ್ದುಗೆ ಏರಿದರೇ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸುಲಭವಾಗಿ ಜಯಗಳಿಸಬಹು ಎಂದು ಬಿಜೆಪಿ (BJP) ಲೆಕ್ಕಾಚಾರ ಹಾಕುತ್ತಿದೆ. ಈ ಹಿನ್ನೆಲೆ ಬಿಜೆಪಿ ಸ್ಥಳೀಯ ನಾಯಕರು ಮತ್ತು ಕೇಂದ್ರ ನಾಯಕರು ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಈಗಾಗಲೆ ಕೇಂದ್ರ ಗೃಹ ಸಚಿವ ಅಮಿತ್​ ಶಾ (Amith Shah), ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda), ಸಚಿವೆ ಸ್ಮೃತಿ ಇರಾನಿ, ಸಿಎಂ ಯೋಗಿ ಆದಿತ್ಯನಾಥ್ ಹೀಗೆ ಹಲವು ನಾಯಕರು ರಾಜ್ಯಕ್ಕೆ ಆಗಮಿಸಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಇನ್ನು ಮತದಾನಕ್ಕೆ ಬೆರಳೆಣಿಕೆಯಷ್ಟು ದಿನಗಳು ಉಳಿದಿದ್ದು, ಕೊನೆ 10 ದಿನಗಳಲ್ಲಿ ರಾಜ್ಯದಲ್ಲಿ ಮೋದಿ ಅಲೆ ಸೃಷ್ಟಿಸಲು ಬಿಜೆಪಿ ಪ್ಲಾನ್​​ ಮಾಡಿಕೊಂಡಿದೆ. ಇದರಂತೆ ಪ್ರಧಾನಿ ನರೇಂದ್ರ ಮೋದಿಯವರು ಇಂದಿನಿಂದ (ಏ.29) ರಾಜ್ಯ ಪ್ರವಾಸ ಆರಂಭಿಸಿದ್ದು ಈಗಾಗಲೆ 3 ಜಿಲ್ಲೆಗಳಲ್ಲಿ ಮೋದಿ ಮೇನಿಯಾ ಸೃಷ್ಟಿಸಿದ್ದಾರೆ. ಪ್ರಧಾನಿ ಮೋದಿಯಂದರೇ ಬಿಜೆಪಿಯ ಪಾಲಿಗೆ ಯುವಮತದಾರರನ್ನು ಆಕರ್ಷಿಸುವ ಅಯಸ್ಕಾಂತವಾಗಿದ್ದಾರೆ. ಹೀಗಾಗಿ ಇಂದಿನಿಂದ (ಏ.29) ಮೇ 7ರ ವರಗೆ ಪ್ರಧಾನಿ ಮೋದಿ ರಾಜ್ಯ ಪ್ರವಾಸ ಮಾಡಲಿದ್ದಾರೆ. ಹಾಗಿದ್ದರೆ ಮೋದಿ ಪ್ರಚಾರದ ವೇಳಾಪಟ್ಟಿ ಹೇಗೆ ಹೆಣೆಯಲಾಗಿದೆ? ಇಲ್ಲಿದೆ ವಿವರ

ಪ್ರಧಾನಿ ಮೋದಿ ಕರ್ನಾಟಕ ಪ್ರಾವಾಸ ವೇಳಾಪಟ್ಟಿ

ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದಲ್ಲಿ ಮೂರು ಹಂತಗಳಲ್ಲಿ ಆರು ದಿನ ಭರ್ಜರಿ ಪ್ರಚಾರ ಮಾಡಲಿದ್ದಾರೆ. ಈ ಆರು ದಿನಗಳಲ್ಲಿ 16 ಜಿಲ್ಲೆಗಳ 23 ಕ್ಷೇತ್ರಗಳಲ್ಲಿ ಪ್ರಧಾನಿ ಮೋದಿಯವರು ಕ್ಯಾಂಪೇನ್ ಮಾಡಲಿದ್ದಾರೆ. ಈ 16 ಜಿಲ್ಲೆಗಳಲ್ಲಿ 5 ಕಡೆ ಪ್ರಧಾನಿ ಮೋದಿಯವರು ಬೃಹತ್ ರೋಡ್ ಶೋ ನಡೆಸಲಿದ್ದಾರೆ. ಬೆಂಗಳೂರು, ಮೈಸೂರು ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ರೋಡ್ ಶೋ ಆಯೋಜಿಸಲಾಗಿದೆ. 20 ಕ್ಷೇತ್ರಗಳಲ್ಲಿ ಬೃಹತ್ ಸಾರ್ವಜನಿಕ ಸಮಾವೇಶಗಳಲ್ಲಿ ಪ್ರಧಾನಿ ಮೋದಿಯವರು ಭಾಷಣ ಮಾಡಲಿದ್ದಾರೆ.

ಇದನ್ನೂ ಓದಿ: ನಾಳೆ ಮೈಸೂರಿನ ಜಂಬೂ ಸವಾರಿ ಮಾರ್ಗದಲ್ಲಿ ಪ್ರಧಾನಿ ಮೋದಿ ರೋಡ್ ಶೋ

ಪ್ರಧಾನಿ ಮೋದಿ ಪ್ರಾಂತ್ಯವಾರು ಪ್ರಚಾರ

  • ಬೆಂಗಳೂರು- ಬೆಂಗಳೂರು ಉತ್ತರ, ದಕ್ಷಿಣ ಮತ್ತು ಕೇಂದ್ರ ಜಿಲ್ಲೆಗಳು
  • ಹಳೆ ಮೈಸೂರು- ಕೋಲಾರ, ಚನ್ನಪಟ್ಟಣ, ಬೇಲೂರು, ಮೈಸೂರು
  • ಕಲ್ಯಾಣ ಕರ್ನಾಟಕ- ಹುಮ್ನಾಬಾದ್, ವಿಜಯನಗರ, ಕಲಬುರಗಿ, ಚಿತ್ತಾಪುರ
  • ಕಿತ್ತೂರು ಕರ್ನಾಟಕ- ಕುಡಚಿ, ಕಿತ್ತೂರು, ವಿಜಯಪುರ, ಸಿಂಧನೂರು, ಬಾದಾಮಿ, ಹಾವೇರಿ
  • ಕರಾವಳಿ ಕರ್ನಾಟಕ- ಮೂಡಬಿದಿರೆ, ಕಾರವಾರ,
  • ಮಲೆನಾಡು- ಶಿವಮೊಗ್ಗ ಗ್ರಾಮಾಂತರ
  • ಮಧ್ಯ ಕರ್ನಾಟಕ- ಚಿತ್ರದುರ್ಗ

ಪ್ರಧಾನಿ ಮೋದಿ ಪ್ರಚಾರದ ದಿನಾಂಕಗಳು

  • ಏಪ್ರಿಲ್ 30- ಕೋಲಾರ, ಚನ್ನಪಟ್ಟಣ, ಬೇಲೂರು, ಮೈಸೂರು
  • ಮೇ 2- ಚಿತ್ರದುರ್ಗ, ವಿಜಯನಗರ, ಸಿಂಧನೂರು, ಕಲಬುರಗಿ
  • ಮೇ 3- ಮೂಡುಬಿದಿರೆ, ಹಾವೇರಿ, ಶಿವಮೊಗ್ಗ ಗ್ರಾಮಾಂತರ, ಬೆಂಗಳೂರು ಸೆಂಟ್ರಲ್
  • ಮೇ 6- ಚಿತ್ತಾಪುರ, ನಂಜನಗೂಡು, ತುಮಕೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ
  • ಮೇ 7 ಬಾದಾಮಿ, ಹಾವೇರಿ,ಶಿವಮೊಗ್ಗ ಗ್ರಾಮಾಂತರ, ಬೆಂಗಳೂರು ದಕ್ಷಿಣ