ಚುನಾವಣೆ ಕಾರ್ಯಗಳಿಗಾಗಿ ವಾಹನಗಳಿಗೆ ಬಾಡಿಗೆ ದರ ನಿಗದಿ: ಯಾವ ವಾಹನಕ್ಕೆ ಎಷ್ಟೆಷ್ಟು? ಇಲ್ಲಿದೆ ನೋಡಿ
ವಿಧಾನಸಭೆ ಚುನಾವಣೆ ಕಾರ್ಯಗಳಿಗೆ ಪಡೆಯುವ ವಾಹನಗಳಿಗೆ ಬಾಡಿಗೆ ದರ ನಿಗದಿ ಮಾಡಲಾಗಿದೆ. ಹಾಗಾದ್ರೆ ಯಾವ ವಾಹನಕ್ಕೆ ಎಷ್ಟೆಷ್ಟು? ಇಲ್ಲಿದೆ ನೋಡಿ.
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ದಿನಾಂಕ ನಿಗದಿಯಾಗಿದೆ. ಇದೇ ಮೇ.10ರಂದು ರಾಜ್ಯದ 224 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಮೇ.13ರಂದು ಫಲಿತಾಂಶ ಪ್ರಕಟವಾಗಲಿದೆ. ಇನ್ನು ಸರ್ಕಾರ ಚುನಾವಣೆ ಕಾರ್ಯಗಳಿಗೆ ಪಡೆಯುವ ವಾಹನಗಳಿಗೆ ದರ ನಿಗದಿ ಮಾಡಿದೆ. ಈ ಸಂಬಂಧ ಚುನಾವಣಾ ಆಯೋಗದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಾರಿಗೆ ಇಲಾಖೆಗಳ ಜೊತೆಯಲ್ಲಿ ಸಭೆ ಮಾಡಿದ್ದು, ಸರ್ಕಾರಿ, ಖಾಸಗಿ, ಗೂಡ್ಸ್, ಟ್ಯಾಕ್ಸಿಗಳಿಗೆ ಸರ್ಕಾರದಿಂದ ಬಾಡಿಗೆ ದರ ಫಿಕ್ಸ್ ಮಾಡಲಾಗಿದೆ. ಆ ಸಭೆಯಲ್ಲಿ ಪೆಟ್ರೋಲ್, ಡೀಸೆಲ್, ಭತ್ಯೆ, ಬಿಡಿ ಭಾಗಗಳ ದರ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ, ಎನ್ ಡಬ್ಲ್ಯೂಕೆಆರ್ಟಿಸಿ, ಕೆಕೆಆರ್ಟಿಸಿ, ಬಿಎಂಟಿಸಿ ಬಸ್ ಹಾಗೂ ಖಾಸಗಿ ಬಸ್ ಗಳಿಗೆ ಬಾಡಿಗೆ ದರಗಳನ್ನು ನಿಗದಿ ಮಾಡದಲಾಗಿದ್ದು, ಬಸ್ ದರ ಈ ಕೆಳಗಿನಂತಿದೆ.
KSRTC, NWKRTC, KKRTC , BMTC ಬಸ್ ದರ ಹೀಗಿದೆ
- ಪ್ರತಿ ಕಿಲೋಮೀಟರ್ ಗೆ ರೂ. 57.50 ದರ ನಿಗದಿ.
- ಒಂದು ದಿನಕ್ಕೆ 11500 ರೂ ಹಣ ನೀಡಬೇಕು.
- ಮುಂಗಡವಾಗಿ ಹಣ ನೀಡಬೇಕು.
- ಎರಡು ಗಂಟೆಗೂ ಹೆಚ್ಚು ಸಮಯ ಆದ್ರೆ ಒಂದು ದಿನದ ಲೆಕ್ಕದಲ್ಲಿ ಬಾಡಿಗೆ ನೀಡಬೇಕು.
ಬೆಂಗಳೂರು ವ್ಯಾಪ್ತಿಯ ಖಾಸಗಿ ವಾಹನಗಳಿಗೆ ದರ
- 35+1 ಸೀಟ್ ಕ್ಯಾಪಾಸಿಟಿ ಹೊಂದಿರುವಂತ ವಾಹನಗಳಿಗೆ ಪ್ರತಿ ಕಿಲೋ ಮೀಟರ್ ಗೆ 47.50 ರೂ. ದರ ನಿಗದಿ.
- ಒಂದು ದಿನಕ್ಕೆ 8700 ಬಾಡಿಗೆ ದರ ನಿಗದಿ.
- ಬಾಡಿಗೆ ಪಡೆದು ಬಳಕೆ ಮಾಡದ ವಾಹನಗಳಿಗೆ 4350 ನೀಡುವುದು.
ಬೆಂಗಳೂರು ಹೊರತುಪಡಿಸಿ ಖಾಸಗಿ ವಾಹನಗಳಿಗೆ ದರ
- ಬೆಂಗಳೂರು ನಗರ ಹೊರತುಪಡಿಸಿ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಚುನಾವಣಾ ಕಾರ್ಯಕ್ಕೆ ವಾಹನ ಬಾಡಿಗೆ ಪಡೆದರೆ ಪ್ರತಿ ಕಿಲೋಮೀಟರ್ ಗೆ 47.50 ರೂ.
- ದಿನದ ಬಾಡಿಗೆ ದರ 8200 ರೂ.
- ಬಾಡಿಗೆ ಪಡೆದು ಬಳಕೆ ಮಾಡದೇ ಇದ್ದರೇ 5200 ರೂ.
ಬೆಂಗಳೂರು ವ್ಯಾಪ್ತಿಯ ಲಘು ಗೂಡ್ಸ್ ವಾಹನಗಳ ದರ
- ಪ್ರತಿ ಕಿಲೋ ಮೀಟರ್ ಗೆ 29 ರೂ.
- ದಿನದ ಬಾಡಿಗೆ ರೂ. 2900 ರೂ.
- ಒಂದು ಗಂಟೆಗೆ 200. ರೂ.
ಬೆಂಗಳೂರು ಹೊರತು ಪಡಿಸಿ ಲಘು ಗೂಡ್ಸ್ ವಾಹನಗಳ ದರ
- ಪ್ರತಿ ಕಿಲೋಮೀಟರ್ ಗೆ 29 ರೂ.
- ದಿನಕ್ಕೆ 2900 ರೂ.
- ಗಂಟೆಗೆ 200. ರೂ.ಬಾಡಿಗೆ ನಿಗದಿ.
ಬೆಂಗಳೂರು ಸಿಟಿ ಮ್ಯಾಕ್ಸಿ ಕ್ಯಾಬ್ ಗಳಿಗೆ ದರ
- ಪ್ರತಿ ಕಿಲೋಮೀಟರ್ ಗೆ 20 ರೂ.
- ದಿನದ ಬಾಡಿಗೆ 4000ರೂ.
- ಬಾಡಿಗೆ ಪಡೆದು ಬಳಕೆ ಮಾಡದೇ ಇದ್ದರೇ 3500 ರೂ.
- ಗಂಟೆಯ ಲೆಕ್ಕದಲ್ಲಿ 220 ರೂ.
ಬೆಂಗಳೂರು ನಗರ ಹೊರತುಪಡಿಸಿ ಮ್ಯಾಕ್ಸಿ ಕ್ಯಾಬ್ ಗಳಿಗೆ ದರ
- -ಪ್ರತಿ ಕಿಲೋಮೀಟರ್ ಗೆ 19 ರೂ.
- ದಿನದ ಬಾಡಿಗೆ 3800 ರೂ.
- ಬಳಕೆ ಮಾಡದೇ ಇದ್ದರೂ 3400 ಬಾಡಿಗೆ ನೀಡಬೇಕು.
- ಗಂಟೆಯ ಲೆಕ್ಕದಲ್ಲಿ 210 ರೂ..
ಬೆಂಗಳೂರು ನಗರ ವ್ಯಾಪ್ತಿಯ ಗೂಡ್ಸ್ ವಾಹನಗಳಿಗೆ ದರ
- -ಪ್ರತಿ ಕಿಲೋಮೀಟರ್ ಗೆ 34 ರೂ.
- ದಿನದ ಬಾಡಿಗೆ ದರ 6000 ರೂ.
ಬೆಂಗಳೂರು ನಗರ ಹೊರತುಪಡಿಸಿ ಇತರೆ ಜಿಲ್ಲೆಗಳ ಗೂಡ್ಸ್ ವಾಹನ ಬಾಡಿಗೆ ದರ
- ಪ್ರತಿ ಕಿಲೋಮೀಟರ್ ಗೆ 34 ರೂ.
- ದಿನದ ಬಾಡಿಗೆ ದರ 6000ರೂ.
- ಒಂದು ಗಂಟೆಗೆ ಒಂದು ಸಾವಿರ.
- 4 ಗಂಟೆಗೂ ಹೆಚ್ಚಾದ್ರೆ ಪ್ರತಿ ಕಿಲೋಮೀಟರ್ ಗೆ 34 ರೂ.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮೋಟರ್ ಕ್ಯಾಬ್ ಗಳಿಗೆ ದರ ( 6+1 ಸೀಟ್)
- ಪ್ರತಿ ಕಿಲೋಮೀಟರ್ ಗೆ 16ರೂ.
- ದಿನದ ಬಾಡಿಗೆ ದರ 2800 ರೂ
- ಬಾಡಿಗೆ ಪಡೆದು ಬಳಕೆ ಮಾಡದೇ ಇದ್ದರೇ 2000 ರೂ ಫಿಕ್ಸ್.
ಬೆಂಗಳೂರು ಹೊರತುಪಡಿಸಿ ಮೋಟಾರ್ ಕ್ಯಾಬ್ ಗಳ ಬಾಡಿಗೆ ಧರ ( 6+1 ಸೀಟ್)
- -ಪ್ರತಿ ಕಿಲೋಮೀಟರ್ ಗೆ 14.5 ರೂ. ನಿಗದಿ.
- 2700 ರೂ. ಒಂದು ದಿನದ ಬಾಡಿಗೆ.
- ಬಳಕೆ ಮಾಡದೇ ಇದ್ದರೇ 1550 ರೂ.ನೀಡಬೇಕು.
ಆದರೆ ಇದಕ್ಕೆ ಕ್ಯಾಬ್ ಮಾಲೀಕರು ಮತ್ತು ಚಾಲಕ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಕಾರಣ ಕಳೆದ ಬಾರಿ ಎಲೆಕ್ಷನ್ ಸಂದರ್ಭದಲ್ಲಿ ನಿಗದಿ ಮಾಡಿದ್ದ ದರವನ್ನು ಈ ಬಾರಿಯ ಎಲೆಕ್ಷನ್ ನಲ್ಲಿಯೂ ನಿಗದಿ ಮಾಡಿದ್ದಾರೆ. ಕಳೆದ ಬಾರಿಯ ಎಲೆಕ್ಷನ್ಗೂ ಈ ಬಾರಿಯ ಎಲೆಕ್ಷನ್ಗೂ ಡಿಸೇಲ್ನಲ್ಲಿ ಸಾಕಷ್ಟು ವ್ಯತ್ಯಾಸವಾಗಿದೆ. ಸುಮಾರು 15 ರಿಂದ 20 ರುಪಾಯಿ ಅಷ್ಟು ವ್ಯತ್ಯಾಸವಿದೆ. ಹಾಗಾಗಿ ದಯವಿಟ್ಟು ದರವನ್ನು ಮರು ಪರಿಶೀಲನೆ ಮಾಡಿ ಇವತ್ತಿನ ಡಿಸೇಲ್ ದರಕ್ಕೆ ಹೊಂದಾಣಿಕೆ ಆಗುವ ರೀತಿಯಲ್ಲಿ ದರವನ್ನು ನಿಗದಿ ಮಾಡಬೇಕು.
ಈ ಬಾರಿಯ ಎಲೆಕ್ಷನ್ ಡ್ಯೂಟಿ ಗಾಗಿ ಬಲವಂತವಾಗಿ ಕ್ಯಾಬ್ ಗಳನ್ನು ಪಡೆದ್ರೆ ಉಗ್ರ ಹೋರಾಟದ ಎಚ್ಚರಿಕೆ
ಕಳೆದ ಬಾರಿಯ ಎಲೆಕ್ಷನ್ ವೇಳೆ ಬಾಡಿಗೆಗೆ ಪಡೆದಿದ್ದ ಕ್ಯಾಬ್ಗಳ ಮಾಲೀಕರಿಗೆ ಸಾಕಷ್ಟು ಸತಾಯಿಸಿ ಹಣ ನೀಡಿದ್ದಾರೆ. ಸುಮಾರು ಮೂರು ತಿಂಗಳು ಅಲೆದಾಡಿದ ಮೇಲೆ ಹಣ ಪಾವತಿ ಮಾಡಲಾಗಿದೆ. ಕ್ಯಾಬ್ ಬಾಡಿಗೆ ಯಿಂದ ಬರುವ ಹಣವನ್ನು ನಂಬಿಕೊಂಡು ಬ್ಯಾಂಕ್ ಲೋನ್ ಫೈನಾನ್ಸ್ ಮೂಲಕ ಇಎಂಐ ಕಟ್ಟಬೇಕಾಗಿರುತ್ತದೆ. ದಯವಿಟ್ಟು ಸಾರಿಗೆ ಇಲಾಖೆಯ ಅಧಿಕಾರಿಗಳು ಖಾಸಗಿ ವಾಹನಗಳನ್ನು ಯೂಸ್ ಮಾಡಿಕೊಳ್ಳಬೇಡಿ. ನಮ್ಮ ವಾಹನಗಳನ್ನು ಕೇಳಲು ಬರಬೇಡಿ ಎಂದು ಮನವಿ ಮಾಡಿದ್ರೆ, ಮತ್ತೊಂದು ಕಡೆ ಸರ್ಕಾರಿ ಇಲಾಖೆಯಲ್ಲಿ ಸಾವಿರಾರು ವಾಹನಗಳಿವೆ ಅವುಗಳನ್ನು ಬಳಸಿಕೊಳ್ಳಿ ಅದನ್ನು ಬಿಟ್ಟು ಎಲೆಕ್ಷನ್ ಕಾರಣ ಕೊಟ್ಟು ಖಾಸಗಿ ವಾಹನಗಳನ್ನು ಟ್ರಾವೆಲ್ಸ್ ವಾಹನಗಳನ್ನು ಬಲವಂತವಾಗಿ ತೆಗೆದುಕೊಳ್ಳುವುದು ಸರಿಯಲ. ಇದರಿಂದ ನಮ್ಮ ಬದುಕು ಬೀದಿಗೆ ಬರುತ್ತದೆ ಕಳೆದ ಬಾರಿಯ ಎಲೆಕ್ಷನ್ ಸಂದರ್ಭದಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳು ನೂರಾರು ವಾಹನಗಳನ್ನು ರೋಡ್ನಲ್ಲಿ ಅಡ್ಡ ಹಾಕಿ ಹೆದರಿಸಿ ಬೆದರಿಸಿ ನಿಮ್ಮ ವಾಹನಗಳನ್ನು ಬ್ಲಾಕ್ ಲಿಸ್ಟ್ಗೆ ಹಾಕ್ತಿವಿ ಎಂದು ಪಡೆದುಕೊಂಡಿದ್ದಾರೆ. ಈ ಬಾರಿ ಹಾಗೆ ಮಾಡಿದ್ರೆ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ವರದಿ: ಕಿರಣ್ ಸೂರ್ಯ ಟಿವಿ9 ಬೆಂಗಳೂರು
Published On - 12:33 pm, Thu, 30 March 23