
ಸಿಂಧನೂರು ಮತಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಹಾಲಿ ಶಾಸಕ ಜೆಡಿಎಸ್ನ ವೆಂಕಟ್ ರಾವ್ , ಬಿಜೆಪಿಯ ಕೆ ಕರಿಯಪ್ಪ, ಕಾಂಗ್ರೆಸ್ ನ ಹಂಪನಗೌಡ ಬಾದರ್ಲಿ ನಡುವೆ ಹಣಾಹಣಿ ನಡೆದಿತ್ತು. ಆದರೆ ಅಂತಿಮವಾಗಿ ವಿಜಯಲಕ್ಷ್ಮಿ ಒಲಿದಿದ್ದು ಹಂಪನಗೌಡ ಬಾದರ್ಲೀ ಅವರಿಗೆ. 2018ರ ವಿಧಾನಸಭಾ ಚುನಾವಣೆಯಲ್ಲಿ ನಾಡಗೌಡ ಅವರು ಆಗಿನ ಹಾಲಿ ಶಾಸಕರಾಗಿದ್ದ ಬದರ್ಲಿ ಅವರನ್ನು 1,600 ಕ್ಕಿಂತ ಕಡಿಮೆ ವೋಟುಗಳ ಅಂತರದಿಂದ ಸೋಲಿಸಿದ್ದರು. 2013 ರಲ್ಲಿ ಬದರ್ಲಿ ಆಗ ಬಿಎಸ್ ಆರ್ ಸಿಪಿ ಪಕ್ಷದಿಂದ ಸ್ಪರ್ಧಿಸಿದ್ದ ಕರಿಯಪ್ಪ ವಿರುದ್ಧ 13,000 ಕ್ಕಿಂತ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯರು ಕ್ಷೇತ್ರಕ್ಕೆ ಬಂದು ಭಾಷಣ ಮಾಡಿದ್ದು ಸಮೀಕರಣ ಬದಲಾಗಯತ್ತದೆ ಅಂತ ಭಾವಿಸಲಾಗುತ್ತು. ಆದರೆಮ ಬಾದರ್ಲಿ ಕ್ಷೇತ್ರದಲ್ಲಿ ಹಳೆಹುಲಿ, 1989ರಿಂದ ಚುನಾವಣಾ ರಾಜಕೀಯಲ್ಲಿದ್ದಾರೆ. ಅವರ ಜನಪ್ರಿಯತೆ ಬಗ್ಗೆ ಎರಡು ಮಾತಿಲ್ಲ. ನಾಡಗೌಡ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸಿದ್ದು ಕಡಿಮೆ ಎಂಬ ಅರೋಪದೊಂದಿಗೆ ಕಣಕ್ಕಿಳಿದಿದ್ದರು.
ಲೋಕಸಭಾ ಚುನಾವಣೆಯಲ್ಲಿ ಸಿಂಧನೂರು ಕೊಪ್ಪಳ ಲೋಕಸಭಾ ಕ್ಷೇತ್ರದ ಭಾಗವಾಗುತ್ತದೆ.
Published On - 12:31 am, Sat, 13 May 23