Karnataka Assembly Election 2023: ರಾಜ್ಯದಲ್ಲಿ 16,973 ಜನ ಶತಾಯುಷಿ ಮತದಾರರು

ಬೆಳಗಾವಿ ಜಿಲ್ಲಾ ಚುನಾವಣಾ ಆಯೋಗದ ವರದಿಗಳ ಪ್ರಕಾರ ಜಿಲ್ಲೆಯಲ್ಲಿ 100 ವರ್ಷ ದಾಟಿದ 1,536 ಮತದಾರರಿದ್ದು, ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹರಾಗಿದ್ದಾರೆ.

Karnataka Assembly Election 2023: ರಾಜ್ಯದಲ್ಲಿ 16,973 ಜನ ಶತಾಯುಷಿ ಮತದಾರರು
ಮತದಾನ
Follow us
ವಿವೇಕ ಬಿರಾದಾರ
|

Updated on: Apr 08, 2023 | 6:41 AM

ಬೆಳಗಾವಿ: ರಾಜ್ಯ ವಿಧಾನಸಭೆ ಚುನಾವಣೆ (Karnataka Assembly Election) ಹತ್ತಿರವಾಗುತ್ತಿದ್ದು, ಚುನಾವಣಾ ಆಯೋಗ (Karnataka Election Commission) ಈ ಬಾರಿ ಶೇ 90 ರಷ್ಟು ಮತದಾನದ ಗುರಿಯನ್ನು ಹೊಂದಿದೆ. ಚುನಾವಣಾ ಆಯೋಗ ರಾಜ್ಯದಲ್ಲಿ 100 ವರ್ಷ ಮೇಲ್ಪಟ್ಟ ಮತದಾರರ ಅಂಕಿಅಂಶವನ್ನು ಬಿಡುಗಡೆ ಮಾಡಿದೆ. ಅದರಂತೆ ಬೆಳಗಾವಿ ಜಿಲ್ಲಾ ಚುನಾವಣಾ ಆಯೋಗದ ವರದಿಗಳ ಪ್ರಕಾರ ಜಿಲ್ಲೆಯಲ್ಲಿ 100 ವರ್ಷ ದಾಟಿದ (Centenarian) 1,536 ಮತದಾರರಿದ್ದು, ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹರಾಗಿದ್ದಾರೆ.

ರಾಜ್ಯದಲ್ಲಿ ಬೆಳಗಾವಿ ಎರಡನೇ ಸ್ಥಾನದಲ್ಲಿದ್ದರೇ, ಮೈಸೂರು ಮೊದಲ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ 100 ವರ್ಷ ದಾಟಿದ 16,973 ನೋಂದಾಯಿತ ಮತದಾರರಿದ್ದು, ಅವರಲ್ಲಿ 9,985 ಮಹಿಳೆಯರು. ಇನ್ನು 100 ವರ್ಷ ದಾಟಿದ ಶೇ 40 ರಷ್ಟು ಮತದಾರರು ಮೈಸೂರು, ಬೆಳಗಾವಿ ಮತ್ತು ಬೆಂಗಳೂರು (ನಗರ, ಉತ್ತರ, ದಕ್ಷಿಣ) ದಲ್ಲಿದ್ದಾರೆ. ಮೈಸೂರು (1,744), ಬೆಳಗಾವಿ (1,536), ಬೆಂಗಳೂರು ನಗರ (1,191), ಬೆಂಗಳೂರು ಉತ್ತರ (1,133), ಮತ್ತು ಬೆಂಗಳೂರು ದಕ್ಷಿಣ (922) ಮತದಾರರ ಪಟ್ಟಿಯಲ್ಲಿನ ಟಾಪ್ 5 ಜಿಲ್ಲೆಗಳಾಗಿವೆ.

ಬೆಳಗಾವಿ ಜಿಲ್ಲಾ ಚುನಾವಣಾ ಆಯೋಗದ ಪ್ರಕಾರ , ಜಿಲ್ಲೆಯ 18 ಕ್ಷೇತ್ರಗಳಲ್ಲಿ 1,536 ನೋಂದಾಯಿತ ಶತಾಯುಷಿ ಮತದಾರರಲ್ಲಿ, ಕುಡಚಿ ಕ್ಷೇತ್ರ (190) ಮೊದಲ ಸ್ಥಾನದಲ್ಲಿದ್ದರೆ, ಕಿತ್ತೂರು ಕ್ಷೇತ್ರ (38) ಕೊನೆ ಸ್ಥಾನದಲ್ಲಿದೆ. ಈ ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ ಸುಮಾರು 1.1 ಲಕ್ಷ ಮತದಾರರಿದ್ದಾರೆ. ಇವರ ಮತದಾನಕ್ಕೆ ಅನುಕೂಲವಾಗಲು, ಚುನಾವಣಾ ಆಯೋಗವು ಮನೆಯಿಂದ ಮತದಾನ ಸೌಲಭ್ಯದ ಅಡಿಯಲ್ಲಿ ಅಂಚೆ ಮತದಾನವನ್ನು  ಪರಿಚಯಿಸಿದೆ.

ಇದನ್ನೂ ಓದಿ: ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಬೇಕಾ? ಏನು ಮಾಡಬೇಕು? ಇಲ್ಲಿದೆ ಮಾಹಿತಿ?

ಮಾರ್ಚ್ 27 ರವರೆಗಿನ ಅಂಕಿಅಂಶಗಳ ಪ್ರಕಾರ, ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 39,01,645 ಮತದಾರರಿದ್ದಾರೆ. ಅದರಲ್ಲಿ 19,68,928 ಪುರುಷರು ಮತ್ತು 19,32,576 ಮಹಿಳೆಯರು ಮತ್ತು 141 ಇತರರು ನೋಂದಾಯಿಸಿಕೊಂಡಿದ್ದಾರೆ. ಕುಡಚಿಯಲ್ಲಿ ಅತಿ ಕಡಿಮೆ ಮಹಿಳಾ ಮತದಾರರಿದ್ದರೇ, ಗೋಕಾಕದಲ್ಲಿ ಅತಿ ಹೆಚ್ಚು ಮಹಿಳಾ ಮತದಾರರಿದ್ದಾರೆ. 30-39 ವರ್ಷದೊಳಗಿನ 9,12,169 ಮತದಾರರು, 40-49 ವರ್ಷದೊಳಗಿನ 7,96,696, 20-29 ವರ್ಷದೊಳಗಿನ 7,81,767, 50-59 ವರ್ಷದೊಳಗಿನ 6,12,718, 60-69 ವರ್ಷದೊಳಗಿನ 4,03,404, 70-79 ವರ್ಷದೊಳಗಿನ 2,22,777, 80-89 ವರ್ಷದೊಳಗಿನ 80,973, 90-99 ವರ್ಷದೊಳಗಿನ 17,525 ಮತದಾರರು ಇದ್ದಾರೆ.

ಇದೇ ವೇಳೆ ಬೆಳಗಾವಿ ಜಿಲ್ಲೆಯಲ್ಲಿ 18-19 ವರ್ಷದೊಳಗಿನ 83,073 ಯುವ ಮತದಾರರು (ಏಪ್ರಿಲ್ 3ರವರೆಗೆ) ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಈ ಮತದಾರರು ಭಾಗವಹಿಸುವ ನಿರೀಕ್ಷೆಯಿದೆ. ಮೊದಲ ಬಾರಿಗೆ ಮತದಾರರು ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.

ನಾಮಪತ್ರ ಸಲ್ಲಿಕೆ ಆರಂಭವಾಗುವ ಮುನ್ನ ಏಪ್ರಿಲ್ 11ರವರೆಗೆ ಮತದಾರರ ಪಟ್ಟಿಗೆ ಹೆಸರು ಸೇರಿಸಬಹುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ. ಶತಕವೀರ ಮತದಾರರ ಸಂಖ್ಯೆ ಇದುವರೆಗೆ ಅತ್ಯಧಿಕವಾಗಿದೆ. ಇವರಲ್ಲಿ ಬಹುತೇಕರು ರಾಜ್ಯದ ಎಲ್ಲಾ ಚುನಾವಣೆಗಳಿಗೆ ಸಾಕ್ಷಿಯಾಗಿದ್ದಾರೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ