AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

64 ಕ್ಷೇತ್ರಗಳ ಟಿಕೆಟ್​ ಬೇಡಿಕೆ ಇಟ್ಟ ಕಾಂಗ್ರೆಸ್ ವೀರಶೈವ ಲಿಂಗಾಯತ ನಾಯಕರು, ಆ ಕ್ಷೇತ್ರಗಳು ಯಾವುವು? ಇಲ್ಲಿದೆ ಪಟ್ಟಿ

ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕ್ಷೇತ್ರಗಳಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಇತ್ತ ಪಕ್ಷದಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಭರದಿಂದ ಸಾಗಿದೆ. ಇನ್ನು ಕಾಂಗ್ರೆಸ್ ಲಿಂಗಾಯತ ನಾಯಕರು 64 ಕ್ಷೇತ್ರಗಳಿಗೆ ಟಿಕೆಟ್​ ಬೇಡಿಕೆ ಇಟ್ಟಿದ್ದು, ಆ ಕ್ಷೇತ್ರಗಳು ಈ ಕೆಳಗಿನಂತಿವೆ ನೋಡಿ.

64 ಕ್ಷೇತ್ರಗಳ ಟಿಕೆಟ್​ ಬೇಡಿಕೆ ಇಟ್ಟ ಕಾಂಗ್ರೆಸ್ ವೀರಶೈವ ಲಿಂಗಾಯತ ನಾಯಕರು, ಆ ಕ್ಷೇತ್ರಗಳು ಯಾವುವು? ಇಲ್ಲಿದೆ ಪಟ್ಟಿ
ಸಾಂದರ್ಭಿಕ ಚಿತ್ರ
TV9 Web
| Updated By: ರಮೇಶ್ ಬಿ. ಜವಳಗೇರಾ|

Updated on: Feb 15, 2023 | 6:26 PM

Share

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ(Karnataka Assembly Elections 2023)  ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಶುರುವಾಗಿದೆ.ಈಗಾಗಲೇ ಜನತಾ ದಳ ತನ್ನ ಮೊದಲ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದೆ. ಈಗ ಕಾಂಗ್ರೆಸ್‌ (Congress) ಕೂಡ ಹುರಿಯಾಳುಗಳನ್ನ ಅಖಾಡಕ್ಕಿಳಿಸಲು ತಯಾರಾಗಿದೆ. ಈಗಾಗಲೇ ಕಾಂಗ್ರೆಸ್‌ ಸ್ಕ್ರೀನಿಂಗ್‌ ಕಮಿಟಿ 106 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಫೈನಲ್‌ ಮಾಡಿದೆ ಎನ್ನುವ ಮಾಹಿತಿ ಇದೆ. ಇನ್ನೊಂದೆಡೆ ವೀರಶೈವ ಲಿಂಗಾಯತ(veerashaiva lingayat ) ಸಮುದಾಯದ ಕಾಂಗ್ರೆಸ್​ ನಾಯಕರು ಸಭೆ ಮಾಡಿದ್ದು, 68 ಕ್ಷೇತ್ರಗಳಲ್ಲಿ ತಮ್ಮ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು ಕ್ಷೇತ್ರಗಳ ಪಟ್ಟಿ ಮಾಡಿದೆ.

ಇದನ್ನೂ ಓದಿ: ಸ್ಯಾಂಡಲ್​ವುಡ್ ಸ್ಟಾರ್ ನಟ ಕಾಂಗ್ರೆಸ್ ಸೇರ್ಪಡೆ ಫೈನಲ್​ ಆಯ್ತಾ? ಸುದೀಪ್​ಗೆ ಹೂಮಾಲೆ ಹಾಕಲು ಹೊರಟ ಕೈ ಹಿಂದೆ ಹತ್ತು ಹಲವು ಪ್ಲ್ಯಾನ್

ಹೌದು…ನಿನ್ನೆ(ಫೆ.15)ವೀರಶೈವ ಲಿಂಗಾಯತ ಸಮುದಾಯದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ನೇತೃತ್ವದಲ್ಲಿ ನಡೆ ಸಭೆಯಲ್ಲಿ 68 ಕ್ಷೇತ್ರಗಳ ಪಟ್ಟಿ ಮಾಡಿದೆ. ಕೆಟಗರಿ A(ಹಾಲಿ ಲಿಂಗಾಯತ ಶಾಸಕರು), B (ಕಳೆದ ಬಾರಿ ಪರಾಭವಗೊಂಡ ಲಿಂಗಾಯತ ಅಭ್ಯರ್ಥಿಗಳು), C (ಹೊಸದಾಗಿ ಟಿಕೆಟ್ ಬಯಸುತ್ತಿರುವ ಲಿಂಗಾಯತ ಆಕಾಂಕ್ಷಿಗಳು ) ಹೀಗೆ ಮೂರು ಕೆಟಗೆರಿಯಲ್ಲಿ ಲಿಂಗಾಯತ ಅಭ್ಯರ್ಥಿಗಳ ಪಟ್ಟಿ ಕೈ ಲಿಂಗಾಯತ ನಾಯಕರು ಸಿದ್ಧಪಡಿಸಿದ್ದು, 68ರ ಪೈಕಿ 64 ಕ್ಷೇತ್ರಗಳ ಲಿಸ್ಟ್ ಮಾಡಿ ಸ್ಕ್ರೀನಿಂಗ್ ಕಮಿಟಿಗೆ ನೀಡಿದೆ. ಅಲ್ಲದೇ ಈ ಎಲ್ಲಾ ಕ್ಷೇತ್ರಗಳಲ್ಲಿ ವೀರಶೈವ ಲಿಂಗಾಯತ ಸಮುದಾಯದ ವ್ಯಕ್ತಿಗೆ ಟಿಕೆಟ್ ನೀಡಬೇಕೆಂದು ಮನವಿ ಮಾಡಿದೆ. ಹಾಗಾದ್ರೆ, ಯಾವ್ಯಾವ ಕ್ಷೇತ್ರದಲ್ಲಿ ಲಿಂಗಾಯತ ನಾಯಕರು ಟಿಕೆಟ್ ಬೇಡಿಕೆ ಇಟ್ಟಿದ್ದಾರೆ ಎನ್ನುವುದು ಈ ಕೆಳಗಿನಂತಿದೆ ನೋಡಿ.

ಹಾಲಿ ಶಾಸಕರ ಕ್ಷೇತ್ರಗಳು

1. ದಾವಣಗೆರೆ ದಕ್ಷಿಣ, 2. ಭದ್ರಾವತಿ, 3. ಬೆಳಗಾವಿ ಗ್ರಾಮೀಣ, 4. ಚಿಕ್ಕೋಡಿ ಸದಲಗಾ, 5. ಬೈಲಹೊಂಗಲ. 6. ಬಸವನ ಬಾಗೇವಾಡಿ, 7. ಬಬಲೇಶ್ವರ, 8. ಇಂಡಿ, 9. ಜಮಖಂಡಿ, 10. ಅಫ್ಜಲ್‌ಪುರ , 11. ಶಹಾಪುರ, 12. ಭಾಲ್ಕಿ , 13. ಹುಮ್ನಾಬಾದ್, 14. ಕುಷ್ಟಗಿ

ಪರಾಭವಗೊಂಡಿರುವ ಅಭ್ಯರ್ಥಿಗಳ ಕ್ಷೇತ್ರಗಳು

1. ದಾಣಗೆರೆ ಉತ್ತರ, 2. ಚಿತ್ರದುರ್ಗ, 3. ತಿಪಟೂರು, 4. ಬೆಳಗಾವಿ ಉತ್ತರ, 5. ಕಾಗವಾಡ. 6. ಕಿತ್ತೂರು, 7. ರಾಮದುರ್ಗ, 8. ಧಾರವಾಡ, 9. ಮುದ್ದೇಬಿಹಾಳ, 10. ಸಿಂಧಗಿ, 11. ಬಾಗಲಕೋಟೆ, 12. ಹುನಗುಂದ, 13. ಬೀಳಗಿ, 14. ರೋಣ, 15. ಬ್ಯಾಡಗಿ, 16. ಹಿರೆಕೆರೂರು, 17. ಸೇಡಂ, 18. ಆಳಂದ, 19. ಬೀದರ್ ದಕ್ಷಿಣ, 20. ಸಿಂಧನೂರು, 21. ಯಲಬುರ್ಗಾ

ಹೊಸ ಆಕಾಂಕ್ಷಿಗಳು ಟಿಕೆಟ್ ಬಯಸುತ್ತಿರುವ ಕ್ಷೇತ್ರಗಳು

1. ರಾಜಾಜಿನಗರ, 2. ಚಿಕ್ಕಪೇಟೆ, 3. ತುಮಕೂರು ಸಿಟಿ, 4. ಚನ್ನಗಿರಿ, 5. ಶಿವಮೊಗ್ಗ, 6. ಶಿಕಾರಿಪುರ, 7. ಸಾಗರ 8. ಕೃಷ್ಣ ರಾಜ (ಮೈಸೂರು), 9. ಗುಂಡ್ಲುಪೇಟೆ, 10. ಮಡಿಕೇರಿ, 11. ಅರಸೀಕೆರೆ, 12. ಬೇಲೂರು, 13. ಚಿಕ್ಕಮಗಳೂರು,14. ತರೀಕೆರೆ, 15. ಕಡೂರು, 16. ಅಥಣಿ, 17. ಸವದತ್ತಿ, 18. ಅರಬಾವಿ, 19. ಗೋಕಾಕ್. 20. ಹುಬ್ಬಳ್ಳಿ-ಧಾರವಾಡ ಕೇಂದ್ರ. 21. ಹು-ಧಾ ಪಶ್ಚಿಮ, 22. ಕಲಘಟಗಿ, 23. ದೇವರ ಹಿಪ್ಪರಗಿ, 24. ತೇರದಾಳ, 25. ನರಗುಂದ, 26. ಶಿಗ್ಗಾವಿ , 27. ರಾಣೆಬೆನ್ನೂರು. 28. ಕಲಬುರಗಿ ದಕ್ಷಿಣ 29. ಯಾದಗಿರಿ.

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!