Vijayanagara Election 2023 Winner: ಅನುಭವಿ ರಾಜಕಾರಣಿ ಗವಿಯಪ್ಪ ಮುಂದೆ ಬಿಜೆಪಿಯ ಸಿದ್ದಾರ್ಥ್ ಸಿಂಗ್ ಪರಾಭವ

HR Gaviyappa ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಚ್ ಆರ್ ಗವಿಯಪ್ಪ 32 ಸಾವಿರ ಮತಗಳ ಅಂತರದಿಂದ ಗೆದ್ದಿದ್ದು, ಸಿದ್ಧಾರ್ಥ್ ಸಿಂಗ್ ಸೋಲು ಅನುಭವಿಸಿದ್ದಾರೆ. 

Vijayanagara Election 2023 Winner: ಅನುಭವಿ ರಾಜಕಾರಣಿ ಗವಿಯಪ್ಪ ಮುಂದೆ ಬಿಜೆಪಿಯ ಸಿದ್ದಾರ್ಥ್ ಸಿಂಗ್ ಪರಾಭವ
ಎಚ್. ಆರ್ ಗವಿಯಪ್ಪ

Updated on: May 13, 2023 | 12:47 PM

ಈ ಬಾರಿ ವಿಜಯನಗರ ವಿಧಾನಸಭಾ ಕ್ಷೇತ್ರ (Vijayanagara Assembly Election) ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಚ್ ಆರ್  ಗವಿಯಪ್ಪ (HR Gaviappa)32 ಸಾವಿರ ಮತಗಳ ಅಂತರದಿಂದ ಗೆದ್ದಿದ್ದು, ಸಿದ್ಧಾರ್ಥ್ ಸಿಂಗ್ (Siddharth Singh) ಸೋಲು ಅನುಭವಿಸಿದ್ದಾರೆ. 2018ರ ಚುನಾವಣೆವರೆಗೂ ಆನಂದ್‌ ಸಿಂಗ್‌ ಈ ಕ್ಷೇತ್ರದ ಏಕಮಾತ್ರ ಶಾಸಕರಾಗಿ ಉಳಿದುಕೊಂಡಿದ್ದಾರೆ. 2008ಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಆನಂದ್ ಸಿಂಗ್ (52418 ಮತ) ಕಾಂಗ್ರೆಸ್‌ನ ಎಚ್ ಆರ್ ಗವಿಯಪ್ಪ (25921ಮತ) ಎದುರು ಜಯ ಗಳಿಸಿದ್ದರು. ಇವರಿಬ್ಬರ ನಡುವಿನ ಗೆಲುವಿನ ಅಂತರ 26497 ಮತಗಳದ್ದಾಗಿತ್ತು. 2013ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಆನಂದ್ ಸಿಂಗ್ ಕಾಂಗ್ರೆಸ್‌ನ ಎಚ್ ಅಬ್ದುಲ್ ವಹಾಬ್ ವಿರುದ್ದ ಗೆದ್ದಿದ್ದರು. 2018ರಲ್ಲಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಆನಂದ್ ಸಿಂಗ್ 83214 ಮತ ಗಳಿಸಿ ಶಾಸಕರಾದರು.

2018 ರ ವಿಧಾನಸಭಾ ಚುನಾವಣೆಯಲ್ಲಿ, ಕಾಂಗ್ರೆಸ್‌ನ ಮತದಾನದ ಶೇಕಡಾವಾರು ಶೇಕಡಾ 72.47 ರಷ್ಟಿತ್ತು, ಆನಂದ್ ಸಿಂಗ್ 83,214 ಮತಗಳನ್ನು ಪಡೆದು ಜಯಗಳಿಸಿದರೆ, ಬಿಜೆಪಿಯ ಎಚ್ ಆರ್ ಗವಿಯಪ್ಪ ಅವರು 74,986 ಮತಗಳನ್ನು ಗಳಿಸಿದರು. ಈ ಬಾರಿ ಎಎಪಿಯಿಂದ ಶಂಕರದಾಸ, ಕಾಂಗ್ರೆಸ್ ಪಕ್ಷದಿಂದ ಎಚ್.ಆರ್‌.ಗವಿಯಪ್ಪ ಮತ್ತು ಬಿಜೆಪಿಯಿಂದ ಸಿದ್ದಾರ್ಥ ಸಿಂಗ್ ಕಣದಲ್ಲಿದ್ದಾರೆ. ಸಿದ್ದಾರ್ಥ ಸಿಂಗ್, ಆನಂದ್ ಸಿಂಗ್ ಪುತ್ರ. ಎಚ್.ಆರ್‌.ಗವಿಯಪ್ಪ ಅನುಭವಿ ರಾಜಕಾರಣಿ, ಅವರ ಹಿರಿತನದ ಮುಂದೆ ಬಿಜೆಪಿಯ ಅತಿ  ಕಿರಿಯ ಅಭ್ಯರ್ಥಿ ಸಿದ್ಧಾರ್ಥ್ ಸಿಂಗ್  ಸೋಲು ಅನುಭವಿಸಿದ್ದಾರೆ.

ಚುನಾವಣೆ ಫಲಿತಾಂಶ ಲೈವ್​ ಅಪ್ಡೇಟ್​ ಇಲ್ಲಿ ಕ್ಲಿಕ್ ಮಾಡಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ