ಬಾಗಲಕೋಟೆ, ಜೂನ್ 4: ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ (Bagalkot Lok Sabha Constituency) ಬಿಜೆಪಿ (BJP) ಈ ಬಾರಿಯೂ ಕೂಡ ಪಿಸಿ ಗದ್ದಿಗೌಡರ್ (PC Gaddigoudar) ಅವರು ಗೆಲುವಿನ ನಗೆ ಬೀರಿದ್ದಾರೆ. ಸತತ ನಾಲ್ಕು ಬಾರಿ ಗೆದ್ದಿದ್ದ ಪಿಸಿ ಗದ್ದಿಗೌಡರ್ ಅವರು ಐದನೇ ಬಾರಿಗೆ ವಿಜಯಶಾಲಿಯಾಗಿ ದಾಖಲೆ ನಿರ್ಮಿಸಿದ್ದಾರೆ . ಸತತ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಈ ಚುನಾವಣೆಯಲ್ಲಿ ಸಚಿವ ಶಿವಾನಂದ ಪಾಟೀಲ್ ಪುತ್ರಿ, ಯುವ ಮುಖ ಸಂಯಕ್ತಾ ಪಾಟೀಲ್ (Samyukta Shivanand Patil) ಅವರನ್ನು ಅಖಾಡಕ್ಕಿಳಿಸಿತ್ತು. ಆದರೆ ಸಂಯುಕ್ತ ಪಾಟೀಲ್ ಅವರಿಗೆ ಗಜಕೇಸರಿ ಯೋಗ ಕೈ ಹಿಡಿದಿಲ್ಲ, ಸೋಲುಂಡಿದ್ದಾರೆ.
ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 18,06,183 ಮತದಾರರಿದ್ದಾರೆ. ಇದರಲ್ಲಿ 13,12,319 ಮತದಾರರು ಮತ ಚಲಾಯಿಸಿದ್ದಾರೆ. ಒಟ್ಟು ಶೇ 72.66 ರಷ್ಟು ಮತದಾನವಾಗಿದೆ.
ಪಿಸಿ ಗದ್ದಿಗೌಡರ: ಮತ ಅಂತರಗಳಿಂದ ಮುನ್ನಡೆ
ಸಂಯುಕ್ತ ಪಾಟೀಲ್:
ಪಿಸಿ ಗದ್ದಿಗೌಡರ ಕಳೆದ ಒಂದು ದಶಕದಿಂದ ಬಾಗಲೋಟೆ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ. ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಪಿಸಿ ಗದ್ದಿಗೌಡರ್ ಅವರು 6,64,638 ಮತಗಳನ್ನು ಪಡೆದಿದ್ದರು. ಇನ್ನು ಇವರ ವಿರುದ್ಧ ನಿಂತಿದ್ದ ವೀಣಾ ಕಾಶಪ್ಪನವರ್ 4,96,451 ಮತಗಳನ್ನು ತಮ್ಮದಾಗಿಸಿಕೊಂಡಿದ್ದರು. ಈ ಮೂಲಕ ವೀಣಾ ಕಾಶಪ್ಪನವರ್ ಅವರು ಪಿಸಿ ಗದ್ದಿಗೌಡರ್ ಅವರ ಎದುರು ಪರಾಭವಗೊಂಡಿದ್ದರು.
2014ರ ಲೋಕಸಭಾ ಚುನಾವಣೆಯಲ್ಲಿ ಪಿಸಿ ಗದ್ದಿಗೌಡರ್ ಅವರು ವೀಣಾ ಕಾಶಪ್ಪನವರ್ ಅವರ ವಿರುದ್ಧ ಒಂದು ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. ಈ ಚುನಾವಣೆಯಲ್ಲಿ ಪಿಸಿ ಗದ್ದಿಗೌಡರ್ 5,71,548 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ನ ವೀಣಾ ಕಾಶಪ್ಪನವರ್ 4,54,988 ಮತಗಳನ್ನು ಪಡೆದಿದ್ದರು.
ಬಾಗಲಕೋಟೆ ಲೋಕಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ಕಾಂಗ್ರೆಸ್ಗೆ ಕಗ್ಗಂಟಾಗಿತ್ತು. ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಅವರ ಪತ್ನಿ ವೀಣಾ ಕಾಶಪ್ಪನವರ್ ಅವರು ಕೂಡ ಟಿಕೆಟ್ಗಾಗಿ ಸಾಕಷ್ಟು ಪ್ರಯತ್ನ ಪಟ್ಟರೂ ಸಿಗಲಿಲ್ಲ.
ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:28 am, Tue, 4 June 24