Annamalai: ಮೇಕೆಗೆ ಅಣ್ಣಾಮಲೈ ಫೋಟೋ ಹಾಕಿ ಕುತ್ತಿಗೆ ಕತ್ತರಿಸಿದ ವಿಡಿಯೋ ವೈರಲ್; ಬಿಜೆಪಿ ನಾಯಕ ಹೇಳಿದ್ದೇನು?

|

Updated on: Jun 06, 2024 | 6:43 PM

ಸಾಮಾಜಿಕ ಜಾಲತಾಣವಾದ ಎಕ್ಸ್​ನಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಮೇಕೆಗೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಫೋಟೋ ನೇತುಹಾಕಿ, ರಸ್ತೆಯಲ್ಲೇ ಆ ಮೇಕೆಯ ಕುತ್ತಿಗೆ ಕತ್ತರಿಸಲಾಗಿದೆ. ತಮ್ಮ ದ್ವೇಷಿಗಳು ಪೋಸ್ಟ್ ಮಾಡಿರುವ ಈ ವಿಡಿಯೋಗೆ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರೇ ಪ್ರತಿಕ್ರಿಯಿಸಿದ್ದಾರೆ.

Annamalai: ಮೇಕೆಗೆ ಅಣ್ಣಾಮಲೈ ಫೋಟೋ ಹಾಕಿ ಕುತ್ತಿಗೆ ಕತ್ತರಿಸಿದ ವಿಡಿಯೋ ವೈರಲ್; ಬಿಜೆಪಿ ನಾಯಕ ಹೇಳಿದ್ದೇನು?
ಅಣ್ಣಾಮಲೈ
Follow us on

ಚೆನ್ನೈ: ಲೋಕಸಭಾ ಚುನಾವಣೆಯಲ್ಲಿ (Lok Sabha Elections) ತಮಿಳುನಾಡಿನಲ್ಲಿ ಬಿಜೆಪಿ ಖಾತೆ ತೆರೆಯಬೇಕೆಂದು ಶತಾಯಗತಾಯ ಹೋರಾಡಿದ್ದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ (Annamalai) ಕೊಯಮತ್ತೂರು ಕ್ಷೇತ್ರದಲ್ಲಿ ಸೋಲನ್ನು ಅನುಭವಿಸಿದ್ದರು. ಅಣ್ಣಾಮಲೈ ಸೋಲನ್ನು ಸಂಭ್ರಮಿಸಿದ್ದ ಡಿಎಂಕೆ ಕಾರ್ಯಕರ್ತರು ಚುನಾವಣಾ ಫಲಿತಾಂಶದ ದಿನವೇ ಮಟನ್ ಬಿರಿಯಾನಿ ಹಂಚಿ ಸಂಭ್ರಮಿಸಿದ್ದರು. ಇದೀಗ ಡಿಎಂಕೆ ಕಾರ್ಯಕರ್ತರು ಅಣ್ಣಾಮಲೈ ಫೋಟೋವನ್ನು ಹಾಕಿದ ಮೇಕೆಯ ಕುತ್ತಿಗೆಯನ್ನು ಕಡಿಯುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಈ ವಿಡಿಯೋಗೆ ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ ಪ್ರತಿಕ್ರಿಯೆ ನೀಡಿದ್ದು, ನನ್ನ ಮೇಲಿನ ದ್ವೇಷವನ್ನು ಮೂಕ ಪ್ರಾಣಿಯ ಮೇಲೇಕೆ ತೀರಿಸಿಕೊಳ್ಳುತ್ತೀರಿ? ನಾನು ಕೊಯಮತ್ತೂರಿನಲ್ಲಿದ್ದೇನೆ. ನನ್ನ ಬಳಿಯೇ ಬನ್ನಿ ಎಂದಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾಮಲೈ, ಸಾರ್ವಜನಿಕವಾಗಿ ಪ್ರಾಣಿಗಳನ್ನು ಕೊಂದು ಫೋಟೋ ತೆಗೆಸಿ ಶಿರಚ್ಛೇದ ಮಾಡುವುದು ತಪ್ಪು. “ಕೋಪ ಇದ್ದರೆ ನನ್ನ ಬಳಿಗೆ ಬನ್ನಿ, ನಾನು ಕೊಯಮತ್ತೂರಿನಲ್ಲಿ ಇದ್ದೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರಾ ಎನ್​.ಚಲುವರಾಯಸ್ವಾಮಿ? ವಿಡಿಯೋ ವೈರಲ್

ಕೃಷ್ಣಗಿರಿ ಜಿಲ್ಲೆಯ ಪೈಯೂರು ಪಂಚಾಯಿತಿಯಲ್ಲಿ ಈ ಘಟನೆ ನಡೆದಿದೆ. ಅಣ್ಣಾಮಲೈ ಅವರ ಫೋಟೋವನ್ನು ತಲೆಗೆ ನೇತುಹಾಕಿ ಮೇಕೆಯನ್ನು ಕಡಿಯುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಜನರು ಆ ಮೇಕೆಯ ಶಿರಚ್ಛೇದಕ್ಕೆ ಮುಂದಾಗುವ ಮೊದಲು ಮೇಕೆಯನ್ನು ಹಾರದಿಂದ ಅಲಂಕರಿಸಲಾಯಿತು. ಒಬ್ಬ ವ್ಯಕ್ತಿ ಮೇಕೆಯ ಕಾಲುಗಳನ್ನು ಹಿಡಿದು, ಮತ್ತೊಬ್ಬನು ಅದರ ಶಿರಚ್ಛೇದವನ್ನು ಮಾಡಿದ್ದಾನೆ.

ಈ ವಿಡಿಯೋವನ್ನು ಬಿಜೆಪಿ ಟೀಕಿಸಿದೆ. ಬಿಜೆಪಿಯ ರಾಷ್ಟ್ರೀಯ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ಉಸ್ತುವಾರಿ ಅಮಿತ್ ಮಾಳವಿಯಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಈ ಘಟನೆಯನ್ನು ಖಂಡಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ