ಧಾರವಾಡ, ಜೂನ್ 04: ಧಾರವಾಡ ಲೋಕಸಭಾ ಕ್ಷೇತ್ರ (Dharwad Lok Sabha Constituency) ಈ ಬಾರಿಯೂ ಬಿಜೆಪಿಯ ತೆಕ್ಕೆಗೆ ಬಿದ್ದಿದೆ. ಐದನೇ ಬಾರಿಯೂ ಗೆಲ್ಲುವ ಮೂಲಕ ಪ್ರಲ್ಹಾದ್ ಜೋಶಿ (Pralhad Joshi) ಇತಿಹಾಸ ಸೃಷ್ಟಿಸಿದ್ದಾರೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಪ್ರಲ್ಹಾದ್ ಜೋಶಿ ಐದನೇ ಬಾರಿಗೆ ಕಣಕ್ಕೆ ಇಳಿದಿದ್ದರು. ಇನ್ನು ಕಾಂಗ್ರೆಸ್ ಹೊಸ ಮುಖಕ್ಕೆ ಮಣೆ ಹಾಕಿದ್ದು ವಿನೋದ ಅಸೂಟಿ (Vinod Sooti) ಅವರನ್ನು ಕಣಕ್ಕಿಳಿತ್ತು. ಸಂಸದ ಪ್ರಲ್ಹಾದ್ ಜೋಶಿಯವರು ವಿನೋದ್ ಅಸೂಟಿ ಅವರನ್ನು ಸೋಲಿಸಿದ್ದಾರೆ.
ಕಳೆದ 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಪ್ರಹ್ಲಾದ್ ಜೋಶಿಯವರು 6,84,837 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ನ ಹಾಲಿ ಶಾಸಕ ವಿನಯ್ ಕುಲಕರ್ಣಿ ಅವರು 4,79,765 ಮತಗಳನ್ನು ಪಡೆದಿದ್ದರು. ಪ್ರಹ್ಲಾದ್ ಜೋಶಿಯವರು ವಿನಯ್ ಕುಲಕರ್ಣಿ ಅವರನ್ನು ಎರಡು ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು.
ಇದಕ್ಕೂ ಮುನ್ನ 2014ರ ಲೋಕಸಭಾ ಚುನಾವಣೆಯಲ್ಲೂ ಸಂಸದ ಪ್ರಹ್ಲಾದ್ ಜೋಶಿಯವರೇ ಗೆಲವು ಸಾಧಿಸಿದ್ದರು. ಈ ಚುನಾವಣೆಯಲ್ಲೂ ಪ್ರಹ್ಲಾದ್ ಜೋಶಿಯವರ ವಿರುದ್ಧ ವಿನಯ ಕುಲಕರ್ಣಿಯವರು ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಪ್ರಹ್ಲಾದ್ ಜೋಶಿಯವರು 5,43,395 ಮತಗಳನ್ನು ಪಡೆದಿದ್ದರು. ಇನ್ನು ವಿನಯ್ ಕುಲಕರ್ಣಿಯವರು 4,31,738 ಮತಗಳನ್ನು ಪಡೆದಿದ್ದರು.
ಇನ್ನು ಧಾರವಾಡ ಲೋಕಸಭಾ ಕ್ಷೇತ್ರ 1996ರ ಲೋಕಸಭಾ ಚುನಾವಣೆವರೆಗೂ ಕಾಂಗ್ರೆಸ್ನ ಭದ್ರಕೋಟೆಯಾಗಿತ್ತು. 1996ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು ಕಾಂಗ್ರೆಸ್ ಕೋಟೆ ಮೇಲೆ ಮೊದಲ ಬಾರಿಗೆ ತನ್ನ ಬಾವುಟ ಹಾರಿಸಿತು. ಅಲ್ಲಿಂದ ಇಲ್ಲಿಯವರೆಗೂ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಾಡುತ್ತಿದೆ. ಬಿಜೆಪಿಯ ಭದ್ರಕೋಟೆಯಾಗಿದೆ.
ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:04 pm, Tue, 4 June 24