AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಧಿಕಾರದಲ್ಲಿ ಉಳಿಯಲು ಮೋದಿ ಹಿಂದೂಗಳಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ; ಫಾರೂಕ್ ಅಬ್ದುಲ್ಲಾ ಆರೋಪ

ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಇಂದು (ಮೇ 4) ಪ್ರಧಾನಿ ನರೇಂದ್ರ ಮೋದಿ ಅಧಿಕಾರದಲ್ಲಿ ಉಳಿಯಲು ಹಿಂದೂಗಳಲ್ಲಿ ಭಯದ ವಾತಾವರಣ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಅಧಿಕಾರದಲ್ಲಿ ಉಳಿಯಲು ಮೋದಿ ಹಿಂದೂಗಳಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ; ಫಾರೂಕ್ ಅಬ್ದುಲ್ಲಾ ಆರೋಪ
ಫಾರೂಕ್ ಅಬ್ದುಲ್ಲಾ
Follow us
ಸುಷ್ಮಾ ಚಕ್ರೆ
|

Updated on: May 04, 2024 | 5:02 PM

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅಧಿಕಾರದಲ್ಲಿ ಉಳಿಯಲು ಹಿಂದೂಗಳಲ್ಲಿ ಭಯದ ವಾತಾವರಣ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರು ಮೋದಿ ಅಧಿಕಾರಕ್ಕೆ ಬಂದ ನಂತರ ಸಾಮಾನ್ಯ ಜನರ ಸಮಸ್ಯೆಗಳ ಬಗ್ಗೆ ಇನ್ನು ಮುಂದೆ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ. ಮೋದಿಯ ಈ ಒಡೆದು ಆಳುವ ರಾಜಕೀಯದಿಂದ ದೂರವಿರಲು ಜನರ ಬಳಿ ಮನವಿ ಮಾಡಿಕೊಂಡಿದ್ದಾರೆ.

ಖನ್ಯಾರ್ ಪ್ರದೇಶದಲ್ಲಿ ಎನ್‌ಸಿಯ ಲೋಕಸಭಾ ಚುನಾವಣಾ ಅಭ್ಯರ್ಥಿ ಆಗಾ ಸೈಯದ್ ರುಹುಲ್ಲಾ ಮೆಹದಿ ಅವರನ್ನು ಬೆಂಬಲಿಸಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಫಾರೂಕ್ ಅಬ್ದುಲ್ಲಾ, ಪ್ರಧಾನಿ ಮೋದಿ ಹಿಂದೂಗಳಲ್ಲಿ ಭಯವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಈಗ ನಡೆಯುತ್ತಿರುವ ಚುನಾವಣೆಯ ನಂತರ ಭಾರತ ವಿರೋಧ ಪಕ್ಷವು ಅಧಿಕಾರಕ್ಕೆ ಬಂದರೆ ಜನರ ಉಳಿತಾಯಕ್ಕೆ ತೆರಿಗೆ ವಿಧಿಸಲಾಗುವುದು ಮತ್ತು ಅವರ ಬಳಿ ಎರಡು ಮನೆಗಳಿದ್ದರೆ, ಒಂದನ್ನು ತೆಗೆದುಕೊಂಡು ಮುಸ್ಲಿಮರಿಗೆ ನೀಡಲಾಗುವುದು ಎಂದು ಪ್ರಧಾನಿ ಹಿಂದೂಗಳಿಗೆ ಹೇಳುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Lok Sabha Election: ರಾಹುಲ್​ ಗಾಂಧಿ ರಾಯ್​ಬರೇಲಿಯಿಂದ ಸ್ಪರ್ಧೆ, ಅಮೇಥಿಯಲ್ಲಿ ಯಾರು?

ಮೋದಿ ಮುಸ್ಲಿಮರ ಬಗ್ಗೆ ಹಿಂದೂಗಳಲ್ಲಿ ದ್ವೇಷವನ್ನು ಹುಟ್ಟುಹಾಕುತ್ತಿದ್ದಾರೆ ಮತ್ತು ನಂತರ ಮುಸ್ಲಿಮರು ಹೆಚ್ಚು ಮಕ್ಕಳನ್ನು ಉತ್ಪಾದಿಸುತ್ತಾರೆ ಎಂದು ಅವರು ಹೇಳುತ್ತಾರೆ. ದೇವರು ಮಕ್ಕಳನ್ನು ಕೊಡುತ್ತಾನೆ. ಅನೇಕ ಜನರಿಗೆ ಮಕ್ಕಳೇ ಆಗುವುದಿಲ್ಲ. ಮೋದಿಗೆ ಮಕ್ಕಳಿಲ್ಲದಿರುವಾಗ ಈ ಬಗ್ಗೆ ಅವರಿಗೆ ಏನು ಗೊತ್ತು? ಅವರು ತನ್ನ ಹೆಂಡತಿಯನ್ನು ಸಹ ಗೌರವಿಸಲಿಲ್ಲ, ಅಂಥವರು ಮಕ್ಕಳನ್ನು ಹೇಗೆ ಗೌರವಿಸುತ್ತಾರೆ? ಎಂದು ಅಬ್ದುಲ್ಲಾ ಸಭೆಯನ್ನು ಕೇಳಿದ್ದಾರೆ.

ಇದನ್ನೂ ಓದಿ: Lok Sabha Polls: ನಿಮ್ಮ ಒಂದು ಮತ 2014ರಲ್ಲಿ ಭ್ರಷ್ಟ ಕಾಂಗ್ರೆಸ್​ ಸರ್ಕಾರವನ್ನು ಕಿತ್ತೊಗೆದಿತ್ತು; ಚುನಾವಣಾ ಪ್ರಚಾರದಲ್ಲಿ ಮೋದಿ

ವಿರೋಧ ಪಕ್ಷದವರು ಮುಸ್ಲಿಮರಿಗೆ ಹಣ ನೀಡಲು ನಿಮ್ಮ ಮಂಗಳಸೂತ್ರಗಳನ್ನು ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಾರೆ ಎಂದು ಹಿಂದೂಗಳಲ್ಲಿ ಮೋದಿ ಭಯ ಸೃಷ್ಟಿಸುತ್ತಿದ್ದಾರೆ. ನಾವು ನಮ್ಮ ತಾಯಿ ಮತ್ತು ಸಹೋದರಿಯರಿಂದ ಮಂಗಳಸೂತ್ರಗಳನ್ನು ಕಸಿದುಕೊಳ್ಳುವಷ್ಟು ಕೆಟ್ಟ ಜನರೇ?” ಎಂದು ಫಾರೂಕ್ ಅಬ್ದುಲ್ಲಾ ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಟಿವಿ9 ಕನ್ನಡ ವರದಿಗಾರನೊಂದಿಗೆ ಆರೆಮನಸ್ಸಿನಿಂದ ಮಾತಾಡಿದ ವಿದ್ಯಾರ್ಥಿ
ಟಿವಿ9 ಕನ್ನಡ ವರದಿಗಾರನೊಂದಿಗೆ ಆರೆಮನಸ್ಸಿನಿಂದ ಮಾತಾಡಿದ ವಿದ್ಯಾರ್ಥಿ
ಇದು ರಾಜಕೀಯ ಮಾಡುವ ಸಂದರ್ಭ ಅಲ್ಲ, ರೂಪಾನಿ ಅತ್ಮಕ್ಕೆ ಶಾಂತಿ ಸಿಗಲಿ: ಈಶ್ವರ್
ಇದು ರಾಜಕೀಯ ಮಾಡುವ ಸಂದರ್ಭ ಅಲ್ಲ, ರೂಪಾನಿ ಅತ್ಮಕ್ಕೆ ಶಾಂತಿ ಸಿಗಲಿ: ಈಶ್ವರ್
ರಮೋಲಾ ಮನೆಗೆ ಹೋದ ರಕ್ಷಕ್​ಗೆ ಭರ್ಜರಿ ಆತಿಥ್ಯ
ರಮೋಲಾ ಮನೆಗೆ ಹೋದ ರಕ್ಷಕ್​ಗೆ ಭರ್ಜರಿ ಆತಿಥ್ಯ
ಭಾರತದ ಪೈಲಟ್ ಮತ್ತು ಇಂಜಿನೀಯರ್​ಗಳು ವಿಶ್ವದಲ್ಲೇ ಅತ್ಯುತ್ತಮ: ಇಬ್ರಾಹಿಂ
ಭಾರತದ ಪೈಲಟ್ ಮತ್ತು ಇಂಜಿನೀಯರ್​ಗಳು ವಿಶ್ವದಲ್ಲೇ ಅತ್ಯುತ್ತಮ: ಇಬ್ರಾಹಿಂ
ವಿಮಾನ ದುರಂತ: ರಾಜೀನಾಮೆ ಏಕೆ ಕೊಡಬೇಕು? ಮೋದಿ ಪರ ಇಬ್ರಾಹಿಂ ಬ್ಯಾಟಿಂಗ್
ವಿಮಾನ ದುರಂತ: ರಾಜೀನಾಮೆ ಏಕೆ ಕೊಡಬೇಕು? ಮೋದಿ ಪರ ಇಬ್ರಾಹಿಂ ಬ್ಯಾಟಿಂಗ್
ವಿಮಾನ ದುರಂತ ಹಿಂದಿನ ಕಾರಣವನ್ನು ಬಿಚ್ಚಿಡಲಿರುವ ಬ್ಲ್ಯಾಕ್ ಬಾಕ್ಸ್
ವಿಮಾನ ದುರಂತ ಹಿಂದಿನ ಕಾರಣವನ್ನು ಬಿಚ್ಚಿಡಲಿರುವ ಬ್ಲ್ಯಾಕ್ ಬಾಕ್ಸ್
ಜೋಶಿಯ ಚಿಕ್ಕಮಕ್ಖಳನ್ನು ನೆನೆದು ಕರುಳು ಕಿತ್ತುಬಂದಂತಾಗುತ್ತಿದೆ: ಸಹಪಾಠಿಗಳು
ಜೋಶಿಯ ಚಿಕ್ಕಮಕ್ಖಳನ್ನು ನೆನೆದು ಕರುಳು ಕಿತ್ತುಬಂದಂತಾಗುತ್ತಿದೆ: ಸಹಪಾಠಿಗಳು
ಸಂಬಂಧಿಯ ಡಿಎನ್​ಎ ಜೊತೆ ಮೃತರ ಡಿಎನ್​ಎ ಮ್ಯಾಚ್ ಆದರೆ ದೇಹ ಹಸ್ತಾಂತರ
ಸಂಬಂಧಿಯ ಡಿಎನ್​ಎ ಜೊತೆ ಮೃತರ ಡಿಎನ್​ಎ ಮ್ಯಾಚ್ ಆದರೆ ದೇಹ ಹಸ್ತಾಂತರ
ಶಾಸಕ ವಿನಯ್ ಕುಲಕರ್ಣಿ ಮತ್ತೆ ಜೈಲಿಗೆ: ಸ್ಫೋಟಕ ಅಂಶ ಬಿಚ್ಚಿಟ್ಟ ಲಾಯರ್
ಶಾಸಕ ವಿನಯ್ ಕುಲಕರ್ಣಿ ಮತ್ತೆ ಜೈಲಿಗೆ: ಸ್ಫೋಟಕ ಅಂಶ ಬಿಚ್ಚಿಟ್ಟ ಲಾಯರ್
Ahmedabad Plane Crash: ವೈದ್ಯ ಪ್ರತೀಕ್ ನೆನೆದು ಸ್ನೇಹಿತ ಭಾವುಕ
Ahmedabad Plane Crash: ವೈದ್ಯ ಪ್ರತೀಕ್ ನೆನೆದು ಸ್ನೇಹಿತ ಭಾವುಕ