Lok Sabha Election 2024 Voting News Updates in Kannada: 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102 ಕ್ಷೇತ್ರಗಳಿಗೆ ಇಂದು ನಡೆದಿದ್ದ ಲೋಕಸಭಾ ಚುನಾವಣೆಯ (Lok Sabha Elections 2024) ಮೊದಲ ಹಂತದ ಮತದಾನ ಮತದಾನ (Voting) ಅಂತ್ಯವಾಗಿದೆ. ಇದರೊಂದಿಗೆ 102 ಕ್ಷೇತ್ರಗಳ ಒಟ್ಟು 1625 ಅಭ್ಯರ್ಥಿಗಳ ಭವಿಷ್ಯ ಇವಿಎಂ ಸೇರಿದೆ. 9 ಲೋಕಸಭಾ ಸ್ಥಾನಗಳನ್ನು (Lok Sabha Constituencies) ಹೊಂದಿರುವ ಈಶಾನ್ಯದ ಆರು ರಾಜ್ಯಗಳು, ತಮಿಳುನಾಡಿನ ಎಲ್ಲಾ 39 ಕ್ಷೇತ್ರಗಳು, ಲಕ್ಷದ್ವೀಪದ 1 ಕ್ಷೇತ್ರ, ಅರುಣಾಚಲ ಪ್ರದೇಶದ 2, ಬಿಹಾರದ 4, ಅಸ್ಸಾಂನ 4, ಛತ್ತೀಸ್‌ಗದ 1, ಮಧ್ಯಪ್ರದೇಶದ 6, ಮಹಾರಾಷ್ಟ್ರದ 5, ಮಣಿಪುರದ 2, ಮೇಘಾಲಯದ 2, ಮಿಜೋರಾಂದ 1, ನಾಗಾಲ್ಯಾಂಡ್‌ನ 1, ರಾಜಸ್ಥಾನದ 12, ಸಿಕ್ಕಿಂನ 1, ತ್ರಿಪುರಾದ 1, ಉತ್ತರ ಪ್ರದೇಶದ 8, ಉತ್ತರಾಖಂಡದ 5, ಪಶ್ಚಿಮ ಬಂಗಾಳದ 3, ತಮಿಳುನಾಡಿನ 39, ಅಂಡಮಾನ್ ಮತ್ತು ನಿಕೋಬಾರ್‌ನ 1, ಜಮ್ಮು ಮತ್ತು ಕಾಶ್ಮೀರದ 1, ಲಕ್ಷದ್ವೀಪದ 1 ಮತ್ತು ಪುದುಚೇರಿಯ 1 ಲೋಕಸಭಾ ಕ್ಷೇತ್ರಕ್ಕೆ ನಡೆದ ಮತದಾನ ಮುಕ್ತಾಯವಾಗಿದ್ದು, ಎಲ್ಲಿ ಎಷ್ಟು ಮತದಾನವಾಗಿದೆ ಎನ್ನುವ ಹೈಲೇಟ್ಸ್ ಇಲ್ಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇಂದು(ಏಪ್ರಿಲ್ 19) ಬೆಳಗ್ಗೆ 7 ಗಂಟೆ ನಡೆದಿದ್ದ ಮತದಾನ ಪ್ರಕ್ರಿಯೆ ಇದೀಗ ಮುಗಿದಿದೆ. ಇದರೊಂದಿಗೆ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಯಶಸ್ವಿಯಾಗಿ ಅಂತ್ಯವಾದಂತಾಗಿದೆ. ಇನ್ನು ಮೊದಲ ಹಂತದಲ್ಲಿ ಯಾವ ರಾಜ್ಯದಲ್ಲಿ ಎಷ್ಟು ಪರ್ಸೆಂಟ್ ಮತದಾನವಾಗಿದೆ ಎನ್ನುವುದು ಇನ್ನೂ ಚುನಾವಣೆ ಆಯೊಗ ಅಧಿಕೃತವಾಗಿ ತಿಳಿಸಿಲ್ಲ. ಬದಲಿಗೆ 5 ಗಂಟೆ ವರೆಗಿನ ಅಂಕಿ-ಅಂಶ ಸಿಕ್ಕಿದೆ. ಐದು ಗಂಟೆವರೆಗೆ ಎಷ್ಟು ಮತದಾನವಾಗಿತ್ತು ಎನ್ನುವುದು ಚಾಟ್ನಲ್ಲಿದೆ ನೋಡಿ.
ಇಂದು (ಏಪ್ರಿಲ್ 19) ದೇಶದಲ್ಲಿ ಲೋಕಸಭಾ ಚುನಾವಣೆಯ ಮೊದಲನೇ ಹಂತ ಮತದಾನ ಮುಕ್ತಾಯವಾಗಿದೆ. ಕೇಂದ್ರಾಡಳಿತ ಪ್ರದೇಶಗಳು ಸೇರಿ 21 ರಾಜ್ಯಗಳ 102 ಕ್ಷೇತ್ರಗಳ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಅಂತ್ಯವಾಗಿದ್ದು, ಕೆಲ ಕಡೆಗಳಲ್ಲಿ ಅಹಿತಕರ ಘಟನೆ ಹೊರತುಪಡಿಸಿ ಉಳಿದೆಡೆ ಶಾಂತಿಯುತವಾಗಿ ಮತದಾನ ನಡೆದಿದೆ.
ಉತ್ತರ ಪ್ರದೇಶದ 8 ಲೋಕಸಭಾ ಕ್ಷೇತ್ರಗಳ ಪೈಕಿ ಮಧ್ಯಾಹ್ನ 1 ಗಂಟೆಯವರೆಗೆ ಸಹರಾನ್‌ಪುರದಲ್ಲಿ ಶೇ 42.32, ಕೈರಾನಾದಲ್ಲಿ ಶೇ 37.92, ಮುಜಾಫರ್‌ನಗರದಲ್ಲಿ ಶೇ 34.51, ಬಿಜ್ನೋರ್‌ನಲ್ಲಿ ಶೇ 36.08, ನಗೀನಾದಲ್ಲಿ ಶೇ 38.28, ಮೊರಾದಾಬಾದ್‌ನಲ್ಲಿ ಶೇ 35.25 ಮತದಾನವಾಗಿದೆ. ಉತ್ತರ ಪ್ರದೇಶದಲ್ಲಿ ಸರಾಸರಿ 36.96 ರಷ್ಟು ಮತದಾನವಾಗಿದೆ. ಉಳಿದ ರಾಜ್ಯಗಳ ಮಧ್ಯಾಹ್ನ 1 ಗಂಟೆಯವರೆಗಿನ ಮತದಾನದ ವಿವರ ಇಲ್ಲಿದೆ.
ಪಶ್ಚಿಮ ಬಂಗಾಳದಲ್ಲಿ ಬಂಪರ್ ಮತದಾನ ನಡೆಯುತ್ತಿದೆ. ಮಧ್ಯಾಹ್ನ 1 ಗಂಟೆವರೆಗೆ ರಾಜ್ಯದಲ್ಲಿ ಶೇ 50ಕ್ಕೂ ಹೆಚ್ಚು ಮತದಾನ ನಡೆದಿದೆ. ಅದೇ ವೇಳೆ ತ್ರಿಪುರಾದಲ್ಲೂ ಉತ್ತಮ ಪ್ರಮಾಣದ ಮತದಾನ ನಡೆಯುತ್ತಿದೆ. ಶೇ 53.04 ರಷ್ಟು ಮತದಾನ ಇಲ್ಲಿ ನಡೆದಿದೆ. ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಬೆಳಿಗ್ಗೆಗೆ ಹೋಲಿಸಿದರೆ ಮತದಾನ ವೇಗ ಪಡೆದುಕೊಂಡಿದೆ. ಮಧ್ಯಾಹ್ನ 1 ಗಂಟೆವರೆಗೆ ಉತ್ತರ ಪ್ರದೇಶದಲ್ಲಿ ಶೇ 37ರಷ್ಟು ಮತದಾನವಾಗಿದೆ. ಬಿಹಾರದಲ್ಲಿ ಶೇ 32.41ರಷ್ಟು ಮತದಾನವಾಗಿದೆ.
ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ನಲ್ಲಿ ಮತದಾನದ ವೇಳೆ ಹಿಂಸಾಚಾರ ನಡೆದಿದೆ. ಇಲ್ಲಿ ಬಿಜೆಪಿ ಬೆಂಬಲಿಗರ ಮನೆಗಳನ್ನು ಧ್ವಂಸಗೊಳಿಸಲಾಗಿದೆ. ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಬಿಜೆಪಿ ಆರೋಪ ಮಾಡಿದೆ. ಆದರೆ, ದಾಳಿಯ ಆರೋಪವನ್ನು ತೃಣಮೂಲ ಕಾಂಗ್ರೆಸ್ ತಳ್ಳಿಹಾಕಿದೆ.
ತಮಿಳುನಾಡಿನಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆ ನಡೆಯುತ್ತಿದೆ. ರಾಜ್ಯಪಾಲ ಆರ್ ಎನ್ ರವಿ ಮತ್ತು ಅವರ ಪತ್ನಿ ಲಕ್ಷ್ಮಿ ಚೆನ್ನೈನ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ. ಸರ್ಕಾರ ಮತ್ತು ರಾಜ್ಯಪಾಲ ಆರ್ ಎನ್ ರವಿ ನಡುವೆ ಒಂದಲ್ಲ ಒಂದು ವಿವಾದಗಳು ನಡೆಯುತ್ತಿರುತ್ತದೆ. ಈ ಕಾರಣದಿಂದ ಆರ್ ಎನ್ ರವಿ ಸುದ್ದಿಯಲ್ಲಿ ಇರುತ್ತಿದ್ದರು.
ಜಮ್ಮು ಮತ್ತು ಕಾಶ್ಮೀರದ ಉಧಂಪುರದಲ್ಲಿ ನೂತನ ವಧೂವರರು ಮತದಾನ ಮಾಡಿದರು. ಬಳಿಕ ಮಾತನಾಡಿದ ವಧು ರಾಧಿಕಾ ಶರ್ಮಾ, ನಿನ್ನೆ ನಮ್ಮ ಮದುವೆ ಸಮಾರಂಭ ನಡೆದಿದ್ದು, ಇಂದು ನಮ್ಮ ಮತವನ್ನು ಕಡ್ಡಾಯವಾಗಿ ಚಲಾಯಿಸುವಂತೆ ತಿಳಿಸಿ ಮತಗಟ್ಟೆಗೆ ಬಂದೆವು. ಯಾರೂ ಸಹ ಮತಗಳನ್ನು ವ್ಯರ್ಥ ಮಾಡಬಾರದು ಎಂದು ಎಲ್ಲರಲ್ಲಿಯೂ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
#WATCH | Udhampur, J&K: As the first phase of #LokSabhaElections2024 is underway, after the wedding newly married couple heads straight to vote as they exercise their franchise. pic.twitter.com/WbJeL4PN3M
— ANI (@ANI) April 19, 2024
ಆಧ್ಯಾತ್ಮಿಕ ಗುರು ಮತ್ತು ಇಶಾ ಫೌಂಡೇಶನ್‌ನ ಸಂಸ್ಥಾಪಕರಾದ ಸದ್ಗುರು ಜಗ್ಗಿ ವಾಸುದೇವ್ ತಮಿಳುನಾಡಿನ ಕೊಯಮತ್ತೂರಿನಲ್ಲಿ ಮತದಾನ ಮಾಡಿದರು.
#LokSabhaElections2024 pic.twitter.com/js7xPgVCnU
— Sadhguru (@SadhguruJV) April 19, 2024
ಪಶ್ಚಿಮ ಬಂಗಾಳದ 3 ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಮತದಾನ ಭರದಿಂದ ಸಾಗುತ್ತಿದೆ. ಬೆಳಗ್ಗೆ 9 ಗಂಟೆ ವೇಳೆಗೆ ಶೇ 15ರಷ್ಟು ಮತದಾನವಾಗಿದೆ.
ಉತ್ತರ ಪ್ರದೇಶದ ಕೈರಾನಾ ಲೋಕಸಭೆಯ ಕೈರಾನಾ ನಗರ ಇಸ್ಲಾಮಿಯಾ ಇಂಟರ್ ಕಾಲೇಜಿನಲ್ಲಿ ಮತದಾನ ನಿಧಾನಗತಿಯಲ್ಲಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷ ಆರೋಪಿಸಿದೆ. ಮತದಾನ ನಿಧಾನವಾಗುವಂತೆ ಆಡಳಿತ ಬಲವಂತವಾಗಿ ಪ್ರಭಾವ ಬೀರುತ್ತಿದೆ. ಚುನಾವಣಾ ಆಯೋಗ ಗಮನಹರಿಸಬೇಕು. ನ್ಯಾಯಸಮ್ಮತ ಮತದಾನವಾಗುವಂತೆ ನೋಡಿಕೊಳ್ಳಬೇಕು ಎಂದು ಸಮಾಜವಾದಿ ಪಕ್ಷ ಆಗ್ರಹಿಸಿದೆ.
कैराना लोकसभा के कैराना नगर इस्लामिया इंटर कॉलेज में धीमी गति से चल रहा मतदान, प्रशासन जबरन मतदान की गति को कर रहा प्रभावित।
संज्ञान ले चुनाव आयोग, निष्पक्ष मतदान सुनिश्चित हो।@ecisveep @ceoup @dm_shamli pic.twitter.com/EcQdX6Ukbm
— Samajwadi Party (@samajwadiparty) April 19, 2024
ಉತ್ತರಾಖಂಡದ ಐದು ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ, ಇದರಲ್ಲಿ ಪೌರಿ-ಗಢವಾಲ್, ತಿಹ್ರಿ, ಅಲ್ಮೋರಾ, ಹರಿದ್ವಾರ ಮತ್ತು ನೈನಿತಾಲ್ ಸ್ಥಾನಗಳು ಸೇರಿವೆ. ಆದರೆ, ಮತದಾನ ಆರಂಭವಾಗುತ್ತಿದ್ದಂತೆಯೇ ವಿವಿಧ ಬೂತ್‌ಗಳಲ್ಲಿ ಸಮಸ್ಯೆಗಳು ಕಾಣಿಸಿಕೊಂಡವು. ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ.
2024ರ ಲೋಕಸಭೆ ಚುನಾವಣೆ ಇಂದಿನಿಂದ ಆರಂಭವಾಗಿದೆ. 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ 102 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿರುವುದರಿಂದ, ಈ ಕ್ಷೇತ್ರಗಳಿಗೆ ಮತ ಚಲಾಯಿಸುವ ಎಲ್ಲರಿಗೂ ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ನಾನು ಮನವಿ ಮಾಡುತ್ತೇನೆ. ಯುವ ಮತ್ತು ಮೊದಲ ಬಾರಿಗೆ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ವಿಶೇಷವಾಗಿ ಮನವಿ ಮಾಡುತ್ತೇನೆ. ಪ್ರತಿ ಮತವು ಎಣಿಕೆಯಾಗಲಿದೆ ಮತ್ತು ಪ್ರತಿಯೊಬ್ಬರ ಧ್ವನಿಯು ಮುಖ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಮನವಿ ಮಾಡಿದ್ದಾರೆ.
2024 च्या लोकसभा निवडणुकीला आजपासून सुरुवात! 21 राज्ये आणि केंद्रशासित प्रदेशातील 102 जागांसाठी मतदान होत असल्याने, या जागांसाठी मतदान करणाऱ्या सर्वांनी विक्रमी संख्येनं मतदान करावं असं मी आवाहन करतो. विशेषतः तरुण आणि प्रथमच मतदान करणाऱ्या मतदारांना मोठ्या संख्येनं मतदान करण्याचं…
— Narendra Modi (@narendramodi) April 19, 2024
ತಮಿಳುನಾಡಿನಲ್ಲಿ ನಟ ರಜನಿಕಾಂತ್ ಮತದಾನ ಮಾಡಿದರು.
ಕಾಂಗ್ರೆಸ್ ಮುಖಂಡರಾದ ಕಮಲ್ ನಾಥ್, ನಕುಲ್ ನಾಥ್ ಹಾಗೂ ಅವರ ಕುಟುಂಬಸ್ಥರು ಮತದಾನ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು, ಸತ್ಯಕ್ಕೆ ಜಯ ಸಿಗಲಿದೆ ಎಂದರು.
ಇಂದು ದೇಶದಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿರುವ ಪ್ರಮುಖ ದಿನವಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಈ ಹಂತದ ಎಲ್ಲಾ ಮತದಾರರು ಗರಿಷ್ಠ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಮನವಿ ಮಾಡುತ್ತೇನೆ. ಏಕೆಂದರೆ ನಿಮ್ಮ ಒಂದು ಮತವು ಸುರಕ್ಷಿತ, ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ಭಾರತವನ್ನು ಮಾಡುವ ಶಕ್ತಿಯನ್ನು ಹೊಂದಿದೆ. ನಿಮ್ಮ ಒಂದು ಮತವು ಕೇವಲ ಒಬ್ಬ ಲೋಕಸಭೆ ಅಥವಾ ಅಭ್ಯರ್ಥಿಯ ಫಲಿತಾಂಶವನ್ನು ನಿರ್ಧರಿಸುವುದಲ್ಲ. ಭಾರತದ ಉಜ್ವಲ ಭವಿಷ್ಯಕ್ಕಾಗಿ, ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ತುಷ್ಟೀಕರಣದಿಂದ ದೇಶವನ್ನು ಮುಕ್ತಗೊಳಿಸುವುದರೊಂದಿಗೆ ಭರವಸೆಗಳನ್ನು ಈಡೇರಿಸುವ ಪ್ರಬಲ ಮತ್ತು ನಿರ್ಣಾಯಕ ನಾಯಕತ್ವವನ್ನು ಆಯ್ಕೆ ಮಾಡಬೇಕೆಂದು ಅವರು ಮನವಿ ಮಾಡಿದ್ದಾರೆ.
ಲೋಕಸಭೆಯ 102 ಕ್ಷೇತ್ರಗಳಿಗೆ ಮತದಾನ ಆರಂಭವಾಗಿದೆ. 21 ರಾಜ್ಯಗಳಲ್ಲಿ ಮತದಾನ ನಡೆಯುತ್ತಿದೆ.
ನಿತಿನ್ ಗಡ್ಕರಿ ಸೇರಿದಂತೆ ಎಂಟು ಮಂದಿ ಕೇಂದ್ರ ಸಚಿವರ ಭವಿಷ್ಯವನ್ನು ಮತದಾರರು ನಿರ್ಧರಿಸಲಿದ್ದಾರೆ. ಬೆಳಗ್ಗೆ 8 ಗಂಟೆಯಿಂದ ಸಂಜೆ 5ರವರೆಗೆ ಮತದಾನಕ್ಕೆ ಅವಕಾಶ ಇದೆ.
ಲೋಕಸಭಾ ಚುನಾವಣೆ: ಮೊದಲ ಹಂತದ ಮತದಾನ ಇಂದು; 108 ಕ್ಷೇತ್ರಗಳ ಅಭ್ಯರ್ಥಿಗಳ ಹಣೆಬರಹ ನಿರ್ಧಾರ#LokSabhaElection2024 #LokSabhaElections #voteforchange2024 #voting #vote https://t.co/RDFyowyNQE
— TV9 Kannada (@tv9kannada) April 19, 2024
2019 ರ ಲೋಕಸಭೆ ಚುನಾವಣೆಯಲ್ಲಿ, ಈ 102 ಕ್ಷೇತ್ರಗಳಲ್ಲಿ ಬಿಜೆಪಿ 60 ಕ್ಷೇತ್ರ ಮತ್ತು ಕಾಂಗ್ರೆಸ್ 65 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದವು. ಇದಲ್ಲದೇ 24 ಕ್ಷೇತ್ರಗಳಲ್ಲಿ ಡಿಎಂಕೆ ಸ್ಪರ್ಧಿಸಿತ್ತು. ಕಳೆದ ಚುನಾವಣೆಯಲ್ಲಿ ಬಿಜೆಪಿ 40, ಕಾಂಗ್ರೆಸ್ 15 ಮತ್ತು ಡಿಎಂಕೆ 24 ಕ್ಷೇತ್ರಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದವು. ಇದಲ್ಲದೇ ಬಿಎಸ್‌ಪಿ 3 ಮತ್ತು ಎಸ್‌ಪಿ 2 ಸ್ಥಾನಗಳನ್ನು ಗೆದ್ದುಕೊಂಡಿದ್ದವು. 18 ಸ್ಥಾನಗಳನ್ನು ಇತರೆ ಪಕ್ಷಗಳು ಗೆದ್ದಿದ್ದವು. ಈ ಮೂಲಕ 102 ಕ್ಷೇತ್ರಗಳ ಪೈಕಿ ಯುಪಿಎ 45 ಮತ್ತು ಎನ್ ಡಿಎ 41 ಸ್ಥಾನಗಳನ್ನು ಗೆದ್ದುಕೊಂಡಿದ್ದವು.
ಬಿಎಸ್‌ಪಿಯಿಂದ 86, ಬಿಜೆಪಿಯಿಂದ 77, ಕಾಂಗ್ರೆಸ್‌ನಿಂದ 56, ಎಐಎಡಿಎಂಕೆಯಿಂದ 36, ಡಿಎಂಕೆಯಿಂದ 5, ಆರ್‌ಜೆಡಿಯಿಂದ 4, ಎಸ್‌ಪಿಯಿಂದ 7, ಆರ್‌ಎಲ್‌ಡಿಯಿಂದ 1, ಎಲ್‌ಜೆಪಿ (ಆರ್) ಮತ್ತು ಜಿತನ್ ರಾಮ್ ಮಾಂಝಿ ಅವರ ಪಕ್ಷದ 1 ಅಭ್ಯರ್ಥಿಯು ಅದೃಷ್ಟವನ್ನು ಪರೀಕ್ಷಿಸುತ್ತಿದ್ದಾರೆ.
ಮೊದಲ ಹಂತದ ಮತದಾನದಲ್ಲಿ 102 ಸ್ಥಾನಗಳಲ್ಲಿ 1625 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅದರಲ್ಲಿ 134 ಮಹಿಳಾ ಅಭ್ಯರ್ಥಿಗಳು ಮತ್ತು 1491 ಪುರುಷ ಅಭ್ಯರ್ಥಿಗಳಾಗಿದ್ದಾರೆ.
Published On - 6:52 am, Fri, 19 April 24