Stock market holiday: ಮತ ಎಣಿಕೆ ದಿನವಾದ ಜೂನ್ 4ರಂದು ಷೇರು ಮಾರುಕಟ್ಟೆಗೆ ರಜೆಯಾ?

LS Election 2024 Result day holiday: ಮೇ 20, ಮತದಾನ ದಿನ ದಿನದಂದು ಷೇರು ಮಾರುಕಟ್ಟೆಗೆ ರಜೆ ಇತ್ತು. ಬಿಎಸ್ಇ ಮತ್ತು ಎನ್​ಎಸ್​ಇ ಕೇಂದ್ರಗಳು ಮುಂಬೈನಲ್ಲಿ ಇವೆ. ಮೇ 20ರಂದು ಮುಂಬೈನಲ್ಲಿ ಚುನಾವಣೆ ಇದ್ದರಿಂದ ರಜೆ ನೀಡಲಾಗಿತ್ತು. ಆದರೆ, ಜೂನ್ 4ರಂದು ಯಾವ ರಜೆ ಇರುವುದಿಲ್ಲ. ಷೇರು ಮಾರುಕಟ್ಟೆ ಯಥಾ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಜೂನ್ 4, ಮಂಗಳವಾರದಂದು ಬೆಳಗ್ಗೆ ಎಂಟು ಗಂಟೆಗೆ ಮತ ಎಣಿಕೆ ಕೆಲಸ ಶುರುವಾಗುತ್ತದೆ. ಮಧ್ಯಾಹ್ನದ ವೇಳೆಗೆ ಫಲಿತಾಂಶ ಯಾರ ಪರವಾಗಿ ಹೋಗಬಹುದ ಎನ್ನುವ ಸ್ಪಷ್ಟ ಟ್ರೆಂಡ್ ಸಿಕ್ಕಬಹುದು. ಸಂಜೆ ಅಥವಾ ರಾತ್ರಿಯ ಒಳಗೆ ಬಹುತೇಕ ಫಲಿತಾಂಶ ಹೊರಬರಬಹುದು.

Stock market holiday: ಮತ ಎಣಿಕೆ ದಿನವಾದ ಜೂನ್ 4ರಂದು ಷೇರು ಮಾರುಕಟ್ಟೆಗೆ ರಜೆಯಾ?
ಷೇರು ಮಾರುಕಟ್ಟೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jun 02, 2024 | 11:14 AM

ನವದೆಹಲಿ, ಜೂನ್ 2: ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಎಲ್ಲರೂ ಎದುರು ನೋಡುತ್ತಿದ್ದಾರೆ. ಈಗಾಗಲೇ ಎಕ್ಸಿಟ್ ಪೋಲ್​ಗಳ ಫಲಿತಾಂಶ ಬಂದಾಗಿದೆ. ಮತ ಎಣಿಕೆ ಬಳಿಕ ವಾಸ್ತವ ಚಿತ್ರಣ ಗೊತ್ತಾಗಲಿದೆ. ಮೇ 20ರಂದು ಮತದಾನ ದಿನದಂದು ಷೇರು ಮಾರುಕಟ್ಟೆಗೆ ರಜೆ ಇತ್ತು. ಬಹಳ ಜನರು ಜೂನ್ 4, ಫಲಿತಾಂಶ ದಿನದಂದೂ ಮಾರುಕಟ್ಟೆಗೆ ರಜೆ ಇರಬಹುದು ಎಂದು ಭಾವಿಸಿರಬಹುದು. ಆದರೆ, ಜೂನ್ 4, ಮಂಗಳವಾರ ಷೇರು ಮಾರುಕಟ್ಟೆಗೆ ರಜೆ ಇರುವುದಿಲ್ಲ.

2024ರ ಮೇ 20ರಂದು ಮತದಾನ ದಿನವಾಗಿತ್ತು. ಅಂದು ಸೋಮವಾರವಾದರೂ ಷೇರು ಮಾರುಕಟ್ಟೆ ಬಂದ್ ಆಗಿತ್ತು. ಅದಕ್ಕೆ ಕಾರಣ ಷೇರು ವಿನಿಮಯ ಕೇಂದ್ರಗಳಾದ ಬಿಎಸ್​ಇ ಮತ್ತು ಎನ್​ಎಸ್​ಇಗಳ ಕಚೇರಿ ಇರುವುದು ಮುಂಬೈನಲ್ಲಿ. ಮೇ 20ರಂದು ಮುಂಬೈನಲ್ಲಿ ಲೋಕಸಭಾ ಚುನಾವಣೆಗೆ ಮತದಾನವಾಗಿತ್ತು. ಹೀಗಾಗಿ, ಮತ ಚಲಾವಣೆಗೆ ಆಸ್ಪದವಾಗಲೆಂದು ಸಾರ್ವತ್ರಿಕ ರಜೆ ಕೊಡಲಾಗಿತ್ತು. ಅಂತೆಯೇ ಷೇರುಪೇಟೆಗೂ ರಜೆ ಕೊಡಲಾಗಿತ್ತು. ಆದರೆ, ಮತ ಎಣಿಕೆಯ ದಿನದಂದು ಸಾರ್ವತ್ರಿಕ ರಜೆ ಕೊಡಲಾಗಿಲ್ಲ.

ಇದನ್ನೂ ಓದಿ: ಲೋಕಸಭೆ ಚುನಾವಣೆ ಮತ ಎಣಿಕೆ: ಜೂ. 4ರಂದು ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ

ಷೇರು ಮಾರುಕಟ್ಟೆ ಪ್ರತೀ ಶನಿವಾರ ಮತ್ತು ಭಾನುವಾರಗಳಂದು ರಜೆ ಇರುತ್ತದೆ. ಜೂನ್ ತಿಂಗಳಲ್ಲಿ ಇವೇ 10 ದಿನಗಳಿವೆ. ಇದರ ಜೊತೆಗೆ ಜೂನ್ 17, ಸೋಮವಾರದಂದು ಬಕ್ರೀದ್ ಹಬ್ಬದ ನಿಮಿತ್ತ ರಜೆ ಇದೆ. ಅಲ್ಲಿಗೆ ಜೂನ್ ತಿಂಗಳಲ್ಲಿ ಒಟ್ಟಾರೆ 11 ದಿನ ಷೇರು ಮಾರುಕಟ್ಟೆಯಲ್ಲಿ ವಹಿವಾಟು ಇರುವುದಿಲ್ಲ.

543 ಸ್ಥಾನಗಳಿರುವ ಲೋಕಸಭೆಗೆ ಏಳು ಹಂತಗಳಲ್ಲಿ ಚುನಾವಣೆ ನಡೆದಿದೆ. ಜೂನ್ 1ಕ್ಕೆ ಏಳನೇ ಹಾಗೂ ಕೊನೆಯ ಹಂತದ ಮತದಾನವಾಗಿತ್ತು. 272 ಸ್ಥಾನಗಳನ್ನು ಗೆಲ್ಲುವ ಪಕ್ಷ ಅಥವಾ ಮೈತ್ರಿಕೂಟ ಸರ್ಕಾರ ರಚನೆ ಮಾಡಲಿದೆ. ಅಥವಾ ಸರ್ಕಾರ ರಚಿಸುವ ಪಕ್ಷ ಅಥವಾ ಮೈತ್ರಿಕೂಟ 272 ಸದಸ್ಯರ ಬೆಂಬಲ ಹೊಂದಿರಬೇಕು. ಬಹುಮತ ಸಾಬೀತು ಪಡಿಸಬೇಕು.

ಇದನ್ನೂ ಓದಿ: ಯಾವ ಪ್ರಧಾನಿಯೂ ಇಂತಹ ದ್ವೇಷದ ಮಾತುಗಳನ್ನಾಡಿಲ್ಲ; ಮೋದಿ ವಿರುದ್ಧ ಮನಮೋಹನ್ ಸಿಂಗ್ ಅಸಮಾಧಾನ

ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಮೈತ್ರಿಕೂಟ ಸತತ ಮೂರನೇ ಬಾರಿ ಅಧಿಕಾರದ ಗದ್ದುಗೆ ಹಿಡಿಯಲು ಹೊರಟಿದೆ. 2014ರಲ್ಲಿ 284 ಸ್ಥಾನಗಳನ್ನು ಎನ್​ಡಿಎ ಗೆದ್ದಿತ್ತು. 2019ರ ಚುನಾವಣೆಯಲ್ಲಿ 303 ಸ್ಥಾನಗಳು ಸಿಕ್ಕಿದ್ದವು. ಈ ಬಾರಿ 400 ಸ್ಥಾನ ಗೆಲ್ಲುವ ಗುರಿ ಇಟ್ಟುಕೊಂಡಿದೆ.

ಇನ್ನೊಂದೆಡೆ ಕಾಂಗ್ರೆಸ್ ಮೊದಲಾದ ಪಕ್ಷಗಳು ಸೇರಿ ರಚಿಸಿರುವ ಇಂಡಿಯಾ ಕೂಟ ಕೂಡ ಸರ್ಕಾರ ರಚನೆಯ ವಿಶ್ವಾಸದಲ್ಲಿದೆ. 2004ರಿಂದ 2014ರವರೆಗೆ ಎರಡು ಸತತ ಅವಧಿ ಆಡಳಿತ ಮಾಡಿದ್ದ ಯುಪಿಎ ಪಕ್ಷದ ಹೊಸ ಅವತಾರವಾದ ಇಂಡಿಯಾ ಕೂಟಕ್ಕೆ ಈ ಬಾರಿ ಸರ್ಕಾರ ರಚಿಸುವ ಅವಕಾಶವನ್ನು ಮತದಾರರು ಕಲ್ಪಿಸುತ್ತಾರಾ ನೋಡಬೇಕು.

ಇನ್ನಷ್ಟು ಚುನಾವಣೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:13 am, Sun, 2 June 24

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ