2019 ರ ಲೋಕಸಭಾ ಚುನಾವಣೆಯಲ್ಲಿ (Lok Sabha Elections) ಕರ್ನಾಟಕದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಬಿಜೆಪಿ ಈ ಬಾರಿ ಕೆಲವು ಸ್ಥಾನಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂಬುದು ಸಮೀಕ್ಷೆ ಎಂದು ತಿಳಿದುಬಂದಿದೆ. ಅತ್ತ ಕಾಂಗ್ರೆಸ್, ಉಚಿತ ಗ್ಯಾರಂಟಿ ಕೊಡುಗೆಗಳ ಹೊರತಾಗಿಯೂ ಗಮನಾರ್ಹ ಸಾಧನೆ ಮಾಡುವುದು ಕಷ್ಟಕರ ಎನ್ನಲಾಗಿದೆ. ಸಾರ್ವಜನಿಕರು ಯಾವ ಪಕ್ಷದ ಮೇಲೆ ಭರವಸೆ ಇಟ್ಟಿದ್ದಾರೆ ಎಂಬ ಕುರಿತು ‘ಟಿವಿ9’ ಹಾಗೂ ಪೋಲ್ಸ್ಟ್ರಾಟ್ (Polstrat) ಚುನಾವಣಾ ಪೂರ್ವ ಸಮೀಕ್ಷೆ (Tv9 Opinion Poll) ನಡೆಸಿದೆ. ಅದರ ವಿವರ ಇಲ್ಲಿದೆ.
ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟ 23 ಸ್ಥಾನ ಗಳಿಸಲಿದೆ ಎಂದು ಸಮೀಕ್ಷಾ ವರದಿ ತಿಳಿಸಿದೆ. ಕಾಂಗ್ರೆಸ್ ಪಕ್ಷ ಐದು ಸ್ಥಾನ ಗಳಿಸಲಿದೆ. 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಒಂದು ಸ್ಥಾನ ಗೆದ್ದಿತ್ತು. ಬಿಜೆಪಿ 25, ಜೆಡಿಎಸ್ 1 ಹಾಗೂ ಒಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಜಯಗಳಿಸಿದ್ದರು.
ಇನ್ನು ದೇಶದ ಲೆಕ್ಕಾಚಾರಕ್ಕೆ ಬಂದರೆ, ಎನ್ಡಿಎ ಮೈತ್ರಿಕೂಟದಲ್ಲಿ ಬಿಜೆಪಿ 333, ಜೆಡಿಯು 15, ಟಿಡಿಪಿ 14, ಎಸ್ಎಚ್ಎಸ್ + ಎಪಿ 11, ಎಲ್ಜೆಪಿ 5, ಆರ್ಎಲ್ಡಿ 3, ಎಚ್ಎಎಂ 1, ಎಡಿಎಸ್ 1, ಜೆಡಿಎಸ್ 1 ಸೇರಿ ಒಟ್ಟು 383 ಸ್ಥಾನ ಗಳಿಸಲಿದೆ ಎಂದು ಸಮೀಕ್ಷಾ ವರದಿ ತಿಳಿಸಿದೆ.
ಇಂಡಿಯಾ ಮೈತ್ರಿಕೂಟದಲ್ಲಿ ಕಾಂಗ್ರೆಸ್ 49, ಡಿಎಂಕೆ 23, ಎಂವಿಎ 20, ಎಸ್ಪಿ 6, ಐಯುಎಂಎಲ್ 3, ಸಿಪಿಐ 2, ಸಿಪಿಐಎಂ 1, ಎನ್ಸಿಪಿ 1, ವಿಸಿಕೆ 1 ಸೇರಿದಂತೆ ಒಟ್ಟು 106 ಸ್ಥಾನ ಗಳಿಸಲಿವೆ.
ಉಳಿದಂತೆ ಟಿಎಂಸಿ 16, ಎಎಪಿ (ಪಂಜಾಬ್) 11, ಬಿಜೆಡಿ 9, ವೈಎಸ್ಆರ್ಪಿ 7, ಜೆಕೆಎನ್ಸಿ 3, ಎಂಎನ್ಎಫ್ 1, ಎನ್ಡಿಪಿಪಿ 1 ಸೇರಿ ಒಟ್ಟು 54 ಸ್ಥಾನ ಗಳಿಸಲಿವೆ.
ಉತ್ತರ ಪ್ರದೇಶ ಸೇರಿದಂತೆ ಉತ್ತರದ ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಪಾರಮ್ಯ ಈ ಬಾರಿಯೂ ಮುಂದುವರಿಯಲಿದೆ ಎಂಬುದು ಸಮೀಕ್ಷೆಯಿಂದ ತಿಳಿದುಬಂದಿದೆ.
ಇದನ್ನೂ ಓದಿ: ಲೋಕಸಭೆ ಚುನಾವಣೆ ಸಮೀಕ್ಷೆ, ಎನ್ಡಿಎ vs ಇಂಡಿಯಾ ಬಲಾಬಲ ಹೀಗಿದೆ
ಈ ಸಮೀಕ್ಷೆಯನ್ನು ‘ಟಿವಿ9’ ಇತರ ಸಮೀಕ್ಷೆಗಳಿಗಿಂತ ಭಿನ್ನವಾಗಿ ಮಾಡಿದೆ. ಸಮೀಕ್ಷೆಯಲ್ಲಿ 20 ಲಕ್ಷ ಮಂದಿಯ ಅಭಿಪ್ರಾಯ ಪಡೆಯಲಾಗಿದೆ. ಜನರ ಒಳನೋಟದ ಬಗ್ಗೆ ಪೋಲ್ಸ್ಟ್ರಾಟ್ ಮತ್ತು ಟಿವಿ9ನಿಂದ ಅತ್ಯಂತ ವಿಶ್ವಾಸಾರ್ಹವಾದ ಭರವಸೆಯ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ದೇಶದ ಎಲ್ಲಾ 543 ಸ್ಥಾನಗಳ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಒಂದು ಲೋಕಸಭಾ ಕ್ಷೇತ್ರದೊಳಗಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಅಂಕಿಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ