NDA Government Formation Highlights: ಜೂನ್ 9ರಂದು ಮೋದಿ ಪ್ರಮಾಣವಚನ ಸ್ವೀಕಾರ

| Updated By: ಗಂಗಾಧರ​ ಬ. ಸಾಬೋಜಿ

Updated on: Jun 06, 2024 | 8:02 PM

Lok Sabha Election Result 2024 Highlights Updates: ಕೇಂದ್ರದಲ್ಲಿ ಮತ್ತೆ ಅಧಿಪತ್ಯ ಸ್ಥಾಪನೆಗೆ ಎನ್​ಡಿಎ ತವಕದಲ್ಲಿದೆ. ಸತತ 3ನೇ ಬಾರಿ ಮೋದಿ ಪ್ರಧಾನಿಯಾಗಿ ಪಟ್ಟಕ್ಕೇರೋಕೆ ಕ್ಷಣಗಣನೆ ಶುರುವಾಗಿದೆ. ಲೋಕಸಭಾ ಚುನಾವಣೆಯಲ್ಲಿ NDA ಗೆಲುವಿನ ನಗೆ ಬೀರಿದೆ. ಎನ್​ಡಿಎ 292 ಸ್ಥಾನಗಳಲ್ಲಿ ಗೆದ್ದಿದ್ರೆ, ಇಂಡಿಯಾ ಒಕ್ಕೂಟ 234 ಸ್ಥಾನಗಳಲ್ಲಿ ವಿಜಯವನ್ನ ಸಾಧಿಸಿದೆ. ಆದ್ರೆ ಕೇಂದ್ರದಲ್ಲಿ ಸಂಪೂರ್ಣವಾಗಿ ಬಹುಮತ ಪಡೆದು, ತಾನೇ ಸರ್ವಶಕ್ತನಾಗಿ ಅಧಿಕಾರಕ್ಕೇರುವ ಬಿಜೆಪಿಯ ಕನಸು ಕಮರಿದೆ, ಸದ್ಯ ಮಿತ್ರ ಪಕ್ಷಗಳ ಮರ್ಜಿಯಲ್ಲೇ ಸರ್ಕಾರ ರಚನೆ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮಹತ್ವದ ರಾಜಕೀಯ ಬೆಳವಣಿಗಳು ನಡೆಯುತ್ತಿದ್ದು, ಅದರ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

NDA Government Formation Highlights: ಜೂನ್ 9ರಂದು ಮೋದಿ ಪ್ರಮಾಣವಚನ ಸ್ವೀಕಾರ

Lok Sabha Election Result 2024 Highlights News Updates: ಲೋಕಸಭೆ ಚುನಾವಣೆ(Lok Sabha Election) ಗೆ ಮೊದಲ ಹಂತದ ಮತದಾನ ಏಪ್ರಿಲ್ 19 ರಂದು ನಡೆಯಿತು ಮತ್ತು 7 ನೇ ಮತ್ತು ಅಂತಿಮ ಹಂತದ ಮತದಾನ ಜೂನ್ 1 ರಂದು ನಡೆದಿತ್ತು. ದೇಶದ 543 ಲೋಕಸಭಾ ಕ್ಷೇತ್ರಗಳ ಪೈಕಿ 542 ಕ್ಷೇತ್ರಗಳ ಮತ ಎಣಿಕೆ ಮಂಗಳವಾರ 8 ಗಂಟೆಯಿಂದ ಆರಂಭವಾಗಿತ್ತು. 543 ಸ್ಥಾನಗಳ ಪೈಕಿ ಉತ್ತರ ಪ್ರದೇಶದ 80 ಸ್ಥಾನಗಳು ಪ್ರಮುಖವಾಗಿವೆ. ಈ 80 ಸ್ಥಾನಗಳ ಪೈಕಿ ಒಂದು ಸ್ಥಾನ ವಾರಾಣಸಿಯಾಗಿದ್ದು, ಭಾರತೀಯ ಜನತಾ ಪಕ್ಷದ ನಾಯಕ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೇ ಅಭ್ಯರ್ಥಿಯಾಗಿದ್ದಾರೆ. ಇದಲ್ಲದೆ ರಾಯ್ ಬರೇಲಿಯಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಅಮೇಥಿಯಿಂದ ಬಿಜೆಪಿ ನಾಯಕಿ ಸ್ಮೃತಿ ಇರಾನಿ ಅಭ್ಯರ್ಥಿಯಾಗಿದ್ದರು, ಇದೀಗ ಸ್ಮೃತಿ ಇರಾನಿ ಸೋಲು ಅನುಭವಿಸಿದ್ದಾರೆ.

ಪ್ರಮುಖ ಮೈತ್ರಿಕೂಟಗಳಾದ ಎನ್‌ಡಿಎ ಮತ್ತು ಭಾರತ ಎರಡೂ ತಮ್ಮ ತಮ್ಮ ಗೆಲುವನ್ನು ಹೇಳಿಕೊಂಡಿದ್ದವು. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅದ್ಭುತ ಪ್ರದರ್ಶನ ನೀಡಿ ದೆಹಲಿಯಲ್ಲಿ ತನ್ನ ಅಧಿಕಾರವನ್ನು ಉಳಿಸಿಕೊಂಡಿದ್ದು, ಈ ಬಾರಿ ಮೈತ್ರಿಕೂಟ 400 ಸ್ಥಾನಗಳ ಗಡಿ ದಾಟುವ ನಿರೀಕ್ಷೆಯಲ್ಲಿತ್ತು. ಅದೇ ಸಮಯದಲ್ಲಿ, ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿ 10 ವರ್ಷಗಳ ನಂತರ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ನಿರೀಕ್ಷೆಯಲ್ಲಿತ್ತು. ಮತದಾನದ ನಂತರ ಬಿಜೆಪಿ ಮತ್ತು ಕಾಂಗ್ರೆಸ್ ಸೇರಿದಂತೆ ದೇಶದ ಎಲ್ಲಾ ರಾಜಕೀಯ ಪಕ್ಷಗಳ ಭವಿಷ್ಯ ಇಂದು ನಿರ್ಧಾರವಾಗಿದೆ.

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

LIVE NEWS & UPDATES

The liveblog has ended.
  • 06 Jun 2024 05:19 PM (IST)

    ಉತ್ತರ ಪ್ರದೇಶ ವಿಪಕ್ಷ ನಾಯಕ ಸ್ಥಾನಕ್ಕೆ ಅಖಿಲೇಶ್ ಯಾದವ್ ರಾಜೀನಾಮೆ ಸಾಧ್ಯತೆ

    ಲೋಕಸಭಾ ಚುನಾವಣೆಯ ಗೆಲುವಿನ ಹಿನ್ನೆಲೆಯಲ್ಲಿ ಅಖಿಲೇಶ್ ಯಾದವ್ ಉತ್ತರ ಪ್ರದೇಶ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಅವರ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಲಾಗುತ್ತದೆ ಎಂಬ ಬಗ್ಗೆ ಪಕ್ಷದಲ್ಲಿ ಇನ್ನೂ ನಿರ್ಧಾರವಾಗಿಲ್ಲ.

  • 06 Jun 2024 05:18 PM (IST)

    ಅಯೋಧ್ಯೆಯ ಜನರಿಗೆ ಅನ್ಯಾಯ ಮಾಡಿದ್ದೇ ಬಿಜೆಪಿ ಸೋಲಿಗೆ ಕಾರಣ: ಅಖಿಲೇಶ್

    ಉತ್ತರ ಪ್ರದೇಶದಲ್ಲಿ ತಮ್ಮ ಪಕ್ಷದ ಯಶಸ್ಸಿಗೆ ಕಾರಣರಾಗಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಫೈಜಾಬಾದ್ (ಅಯೋಧ್ಯೆ) ನಲ್ಲಿ ಬಿಜೆಪಿಯ ಆಘಾತಕಾರಿ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಜನವರಿಯಲ್ಲಿ ಅಯೋಧ್ಯೆಯಲ್ಲಿ (Ayodhya) ರಾಮ ಮಂದಿರ ಉದ್ಘಾಟನೆ ನಡೆದ ಕಾರಣ ಈ ಕ್ಷೇತ್ರದಲ್ಲಿ ಬಿಜೆಪಿ (BJP) ಸುಲಭ ಗೆಲುವು ಸಾಧಿಸಲಿದೆ ಎಂದು ಚುನಾವಣಾ ಪಂಡಿತರು ಭವಿಷ್ಯ ನುಡಿದಿದ್ದರು ಆದರೆ, ಅಚ್ಚರಿಯ ಬೆಳವಣಿಗೆ ಎಂದರೆ ಚುನಾವಣಾ ಫಲಿತಾಂಶ ಪ್ರಕಟವಾದಾಗ ಅಖಿಲೇಶ್ ಯಾದವ್ ಅವರ ಪಕ್ಷ ಸಮಾಜವಾದಿ ಪಾರ್ಟಿ ಇಲ್ಲಿ ಬಿಜೆಪಿಗಿಂತ ಮೇಲುಗೈ ಸಾಧಿಸಿತು.


  • 06 Jun 2024 03:25 PM (IST)

    NDA Government Formation Live: ರಾಹುಲ್​ ಗಾಂಧಿ ವಿರೋಧ ಪಕ್ಷದ ನಾಯಕರಾಗ್ತಾರಾ?

    ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷವು 99 ಸೀಟುಗಳನ್ನು ಗೆದ್ದಿದ್ದು, ರಾಹುಲ್​ ಗಾಂಧಿ ವಿರೋಧ ಪಕ್ಷದ ನಾಯಕರಾಗ್ತಾರಾ ಎಂದು ಕಾದುನೋಡಬೇಕಿದೆ.

  • 06 Jun 2024 03:11 PM (IST)

    NDA Government Formation Live: ದೆಹಲಿಗೆ ಆಗಮಿಸಲಿದ್ದಾರೆ ಯೋಗಿ ಆದಿತ್ಯನಾಥ್

    ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಇಂದು ದೆಹಲಿಗೆ ಆಗಮಿಸಲಿದ್ದಾರೆ.

  • 06 Jun 2024 03:09 PM (IST)

    NDA Government Formation Live: ಮೂವರು ಬಿಜೆಪಿ ಸಂಸದರು ನಮ್ಮ ಜತೆ ಸಂಪರ್ಕದಲ್ಲಿದ್ದಾರೆ ಎಂದ ಟಿಎಂಸಿ

    ಮೂವರು ಬಿಜೆಪಿ ಸಂಸದರು ನಮ್ಮ ಜತೆಗಿದ್ದಾರೆ ಎಂದು ಟಿಎಂಸಿ ಹೇಳಿದ್ದು, ಬಿಜೆಪಿ ಅದನ್ನು ನಿರಾಕರಿಸಿದೆ.

  • 06 Jun 2024 03:01 PM (IST)

    NDA Government Formation Live: ಬಿಜೆಪಿ ಐದು ವರ್ಷಗಳ ಕಾಲ ಸ್ಥಿರ ಸರ್ಕಾರ ನೀಡಲು ಸಾಧ್ಯವಿಲ್ಲ: ವಿಸಿಕೆ ಸಂಸ್ಥಾಪಕ

    ಬಿಜೆಪಿ ಐದು ವರ್ಷಗಳ ಕಾಲ ಸ್ಥಿರ ಸರ್ಕಾರ ನೀಡಲು ಸಾಧ್ಯವಿಲ್ಲ ಎಂದು ವಿಸಿಕೆ ಸಂಸ್ಥಾಪಕ ತೋಲ್ ಹೇಳಿದ್ದಾರೆ.

  • 06 Jun 2024 03:00 PM (IST)

    NDA Government Formation Live: : ಅಗ್ನಿವೀರ್ ಯೋಜನೆ, ಯುಸಿಸಿ ಕುರಿತು ಜೆಡಿಯು ವಕ್ತಾರ ಕೆಸಿ ತ್ಯಾಗಿ ಮಾತು

    ಜೆಡಿಯು ವಕ್ತಾರ ಕೆಸಿ ತ್ಯಾಗಿ ಮಾತನಾಡಿ, ಅಗ್ನಿವೀರ್ ಯೋಜನೆ ಬಗ್ಗೆ ಮತದಾರರ ಒಂದು ವರ್ಗ ಅಸಮಾಧಾನಗೊಂಡಿದೆ ಎಂದು ಹೇಳಿದ್ದಾರೆ.

  • 06 Jun 2024 02:53 PM (IST)

    NDA Government Formation Live: ಅಜಿತ್​ ಪವಾರ್​ ನಿವಾಸದಲ್ಲಿ ಸಭೆ ಸೇರಿದ ಎನ್​ಸಿಪಿ ನಾಯಕರು

    ಎನ್​ಸಿಪಿ ನಾಯಕರು ಅಜಿತ್ ಪವಾರ್ ನಿವಾಸದಲ್ಲಿ ಸಭೆ ನಡೆಸುತ್ತಿದ್ದಾರೆ.

  • 06 Jun 2024 02:51 PM (IST)

    NDA Government Formation Live: ವಿಕಸಿತ ಭಾರತವನ್ನು ನಿರ್ಮಿಸಲು ಮೋದಿಯವರಿಗೆ ಮೂರನೇ ಅವಕಾಶ ನೀಡಲಾಗಿದೆ: ರಾಧಾ ಮೋಹನ್ ಸಿಂಗ್

    ಮೋದಿಯವರಿಗೆ ವಿಕಸಿತ ಭಾರತವನ್ನು ನಿರ್ಮಿಸುವ ನಿಟ್ಟಿನಲ್ಲಿ ಜನರು ಮೂರನೇ ಅವಕಾಶ ನೀಡಿದ್ದಾರೆ ಎಂದು ಸಂಸದ ರಾಧಾ ಮೋಹನ್ ಸಿಂಗ್ ಹೇಳಿದ್ದಾರೆ.

  • 06 Jun 2024 01:57 PM (IST)

    NDA Government Formation Live: ಜೂನ್ 9ರಂದು ಮೋದಿ ಪ್ರಮಾಣವಚನ ಸಾಧ್ಯತೆ

    ಪ್ರಧಾನಿ ನರೇಂದ್ರ ಮೋದಿ ಜೂನ್​ 9ರಂದು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

  • 06 Jun 2024 12:26 PM (IST)

    NDA Government Formation Live: ಮೋದಿ ಪ್ರಮಾಣವಚನಕ್ಕೆ ಆಗಮಿಸಲಿದ್ದಾರೆ ನೇಪಾಳ ಪ್ರಧಾನಿ

    ಮೋದಿ ಪ್ರಮಾಣವಚನಕ್ಕೆ ನೇಪಾಳ ಪ್ರಧಾನಿ ಪುಷ್ಪಾ ಕಮಲ್​ ದಾಹಲ್ ಆಗಮಿಸಲಿದ್ದಾರೆ.

  • 06 Jun 2024 12:25 PM (IST)

    NDA Government Formation Live: ಕೇಜ್ರಿವಾಲ್ ನಿವಾಸದಲ್ಲಿ ಆಮ್​ ಆದ್ಮಿ ಪಕ್ಷದ ಎಲ್ಲಾ ಶಾಸಕರ ಸಭೆ

    ಇಂದು ಅರವಿಂದ್ ಕೇಜ್ರಿವಾಲ್ ನಿವಾಸದಲ್ಲಿ ಆಮ್​ ಆದ್ಮಿ ಪಕ್ಷದ ಎಲ್ಲಾ ಶಾಸಕರ ಸಭೆ ನಡೆಯಲಿದೆ.

  • 06 Jun 2024 11:25 AM (IST)

    NDA Government Formation Live: ಪ್ರಧಾನಿ ಮೋದಿ ಪ್ರಮಾಣ ವಚನ ಸ್ವೀಕಾರದಲ್ಲಿ ಪಾಲ್ಗೊಳ್ಳಲು ಹೊರಟ ಬಾಂಗ್ಲಾದೇಶ ಪ್ರಧಾನಿ

    ಪ್ರಧಾನಿ ಮೋದಿ ಪ್ರಮಾಣ ವಚನ ಸ್ವೀಕಾರದಲ್ಲಿ ಪಾಲ್ಗೊಳ್ಳಲು ಹೊರಟ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ

  • 06 Jun 2024 10:23 AM (IST)

    NDA Government Formation Live: ಅಜಿತ್​ ಪವಾರ್, ಏಕನಾಥ್​ ಶಿಂಧೆ ಇಂದು ದೇವೇಂದ್ರ ಫಡ್ನವಿಸ್​ ಭೇಟಿಯಾಗುವ ಸಾಧ್ಯತೆ

    ಇಂದು ಅಜಿತ್​ ಪವಾರ್​ ಹಾಗೂ ಏಕನಾಥ್​ ಶಿಂಧೆ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ.

  • 06 Jun 2024 10:03 AM (IST)

    NDA Government Formation Live:ಎಲ್ಲಾ ಸಂಸದರು, ಸಿಎಂಗಳು ದೆಹಲಿಗೆ ತಲುಪುವಂತೆ ಬಿಜೆಪಿ ಸೂಚನೆ

    ಇಂದು ರಾತ್ರಿಯೊಳಗೆ ಎಲ್ಲಾ ಸಂಸದರು, ಮುಖ್ಯಮಂತ್ರಿಗಳನ್ನು ದೆಹಲಿಗೆ ಬರುವಂತೆ ಬಿಜೆಪಿ ಸೂಚನೆ ನೀಡಿದೆ.

  • 06 Jun 2024 09:29 AM (IST)

    Lok Sabha Election Results Live: ಏರ್​ಪೋರ್ಟ್​ನಲ್ಲಿ ಚಂದ್ರಬಾಬು ನಾಯ್ಡು, ಎಂಕೆ ಸ್ಟಾಲಿನ್ ಭೇಟಿ

    ದೆಹಲಿ ಏರ್​ಪೋರ್ಟ್​ನಲ್ಲಿ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮಾತುಕತೆ ನಡೆಸಿದರು.

  • 06 Jun 2024 09:08 AM (IST)

    NDA Government Formation Live: ಜೂನ್​ 8 ರಂದು ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸಾಧ್ಯತೆ

    ಜೂನ್​ 8 ರಂದು ನರೆಂದ್ರ ಮೋದಿ 3ನೇ ಬಾರಿ ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸಾಧ್ಯತೆ

  • 05 Jun 2024 07:27 PM (IST)

    ದೆಹಲಿಯಲ್ಲಿ INDIA ಮೈತ್ರಿಕೂಟದ ನಾಯಕರ ಸಭೆ ಅಂತ್ಯ

    ದೆಹಲಿಯ ರಾಜಾಜಿ ಮಾರ್ಗದಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ನಡೆದ INDIA ಮೈತ್ರಿಕೂಟದ ನಾಯಕರ ಸಭೆ ಅಂತ್ಯವಾಗಿದೆ. ಸಭೆಯಲ್ಲಿ ಜಾರ್ಖಂಡ್ ಸಿಎಂ ಚಂಪೈ ಸೊರೇನ್, ತಮಿಳುನಾಡು ಸಿಎಂ ಸ್ಟಾಲಿನ್, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್​, ಜಾರ್ಖಂಡ್ ಮಾಜಿ ಸಿಎಂ ಹೇಮಂತ್​ ಸೊರೇನ್ ಪತ್ನಿ ಕಲ್ಪನಾ, ಶರದ್ ಪವಾರ್, ಸುಪ್ರಿಯಾ ಸುಳೆ, ತೇಜಸ್ವಿ ಯಾದವ್, ಎಸ್​ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಸೀತಾರಾಮ್ ಯಚೂರಿ. ರಾಜ್ಯಸಭೆಯ ಆಪ್ ಸದಸ್ಯ ರಾಘವ್ ಚಡ್ಡಾ, ಜೈರಾಮ್ ರಮೇಶ್, ಸಂಜಯ್ ರಾವತ್, ಟಿ.ಆರ್.ಬಾಲು ಮತ್ತಿತರರು ಭಾಗಿಯಾಗಿದ್ದರು

  • 05 Jun 2024 07:20 PM (IST)

    ಇಂಡಿಯಾ ಸಭೆಗೆ ಉದ್ದವ ಠಾಕ್ರೆ ಮಮತಾ ಬ್ಯಾನರ್ಜಿ ಗೈರು

    ನವದೆಹಲಿಯ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಐಎನ್​ಡಿಐಎ ಮೈತ್ರಿಕೂಟ ನಾಯಕರ ಸಭೆ ನಡೆದಿದ್ದು, ಈ ಸಭೆಗೆ ಪ್ರಮುಖವಾಗಿ ಉದ್ಧವ್​ ಠಾಕ್ರೆ, ಮಮತಾ ಬ್ಯಾನರ್ಜಿ ಗೈರಾಗಿದ್ದಾರೆ. ಉದ್ಧವ್​ ಠಾಕ್ರೆ ಅವರು ತಮ್ಮ ಬದಲಿಗೆ ಸಂಜಯ್ ರಾವತ್​​ರನ್ನು ಕಳುಹಿಸಿದ್ದು, ಅಗತ್ಯವಿದ್ದರೆ ಮಾತ್ರ ದೆಹಲಿಗೆ ಬರುವುದಾಗಿ ಹೇಳಿದ್ದಾರಂತೆ. ಇನ್ನು ಮಮತಾ ಬ್ಯಾನರ್ಜಿ ತಮ್ಮ ಬದಲು ಅಭಿಷೇಕ್​ರನ್ನ ಕಳಿಸಿದ್ದಾರೆ.

  • 05 Jun 2024 06:06 PM (IST)

    ದೆಹಲಿಯಲ್ಲಿ INDIA ಮೈತ್ರಿಕೂಟದ ನಾಯಕರ ಸಭೆ ಆರಂಭ

    ನರೇಂದ್ರ ಮೋದಿ ನಿವಾಸದಲ್ಲಿ ಎನ್​ಡಿಎ ಮೈತ್ರಿಕೂಟ ನಾಯಕರ ಸಭೆ ಮುಕ್ತಾಯದ ಬೆನ್ನಲ್ಲೇ ಇತ್ತ INDIA ಮೈತ್ರಿಕೂಟದ ನಾಯಕರ ಸಭೆ ಆರಂಭ ಆರಂಭವಾಗಿದೆ. ದೆಹಲಿಯ ರಾಜಾಜಿ ಮಾರ್ಗದಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಸಭೆ ಆರಂಭವಾಗಿದ್ದು, ಸಭೆಯಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್, ಪ್ರಿಯಾಂಕಾ ಗಾಂಧಿ, ಕೆ,.ಸಿ.ವೇಣುಗೋಪಾಲ್, ಜೈರಾಮ್ ರಮೇಶ್, ​ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್​ ಯಾದವ್, ಟಿ.ಆರ್.ಬಾಲು, ಜಾರ್ಖಂಡ್ ಮಾಜಿ ಸಿಎಂ ಹೇಮಂತ್​ ಸೊರೇನ್ ಪತ್ನಿ ಕಲ್ಪನಾ ಸೇರಿದಂತೆ ಹಲವು ಭಾಗಿಯಾಗಿದ್ದಾರೆ.

  • 05 Jun 2024 05:36 PM (IST)

    ಎನ್​ಡಿಎ ನಾಯಕರ ಸಭೆ ಮುಕ್ತಾಯ

    ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ನಡೆದ ಎನ್​ಡಿಎ ನಾಯಕರ ಸಭೆ ಮುಕ್ತಾಯವಾಗಿದೆ. ಸಭೆಯಲ್ಲಿ ಸರ್ಕಾರ ರಚನೆ ಸೇರಿದಂತೆ ಇತರೆ ಕೆಲ ಮಹತ್ವದ ವಿಚಾರಗಳನ್ನು ಚರ್ಚೆಯಾಗಿದೆ ಎಂದು ತಿಳಿದುಬಂದಿದೆ. ಇನ್ನು ಈ ಸಭೆಯಲ್ಲಿ ಎನ್​ಡಿಎ ಮೈತ್ರಿಕೂಟದ ಎಲ್ಲಾ ಪ್ರಮುಖ ನಾಯಕರು ಭಾಗಿಯಾಗಿದ್ದರು.

  • 05 Jun 2024 04:52 PM (IST)

    ದೆಹಲಿಯಲ್ಲಿ ಎನ್​ಡಿಎ ನಾಯಕರ ಸಭೆ ಆರಂಭ

    ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಇದೇ ಮೊದಲ ಬಾರಿಗೆ ಎನ್​ಡಿಎ ಮೈತ್ರಿಕೂಟ ನಾಯಕರು ಸಭೆ ನಡೆಸಿದ್ದಾರೆ. ನವದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನಿವಾಸದಲ್ಲಿ ಸಭೆ ಆರಂಭವಾಗಿದೆ. ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಅಮಿತ್ ಶಾ, ಜೆಡಿಯು ನಾಯಕ, ಬಿಹಾರ ಸಿಎಂ ನಿತೀಶ್ ಕುಮಾರ್​, ಜೆಡಿಎಸ್​ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಕುಮಾರಸ್ವಾಮಿ, ಟಿಡಿಪಿ ಅಧ್ಯಕ್ಷ, ಮಾಜಿ ಸಿಎಂ ಚಂದ್ರಬಾಬು ನಾಯ್ಡು, ಜನಸೇನಾ, ಪಕ್ಷದ ಸಂಸ್ಥಾಪಕ, ಶಾಸಕ ಪವನ್ ಕಲ್ಯಾಣ್​​. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷ ಚಿರಾಗ್ ಪಾಸ್ವಾನ್ ಸೇರಿದಂತೆ ಇತರೆ ಎನ್​ಡಿಎ ಮೈತ್ರಿಕೂಟ ಪಕ್ಷಗಳ ಪ್ರಮುಖರು ಸಭೆಯಲ್ಲಿ ಭಾಗಿಯಾಗಿದ್ದು, ಸರ್ಕಾರ ರಚನೆ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ.

  • 05 Jun 2024 04:04 PM (IST)

    ಮೋದಿ ನಿವಾಸದತ್ತ ಎನ್​ಡಿಎ ಮೈತ್ರಿಕೂಟದ ನಾಯಕರು

    ಇಂದು (ಜೂನ್ 05) ಸಂಜೆ ನವದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ಎನ್​ಡಿಎ ಮೈತ್ರಿಕೂಟ ನಾಯಕರ ಸಭೆ ನಿಗದಿಯಾಗಿದೆ, ಈ ಹಿನ್ನೆಲೆಯಲ್ಲಿ ಎನ್​ಡಿಎ ಮೈತ್ರಿಕೂಟದ ನಾಯಕರು ಮೋದಿ ನಿವಾಸದತ್ತ ತೆರಳುತ್ತಿದ್ದಾರೆ. ಅಮಿತ್ ಶಾ ಅವರು ಈಗಾಗಲೇ ಮೋದಿ ನಿವಾಸ ತಲುಪಿದ್ದಾರೆ. ಇನ್ನು ಮಂಡ್ಯ ಲೋಕಸಭಾ ಸದಸ್ಯ ಎಚ್​ಡಿ ಕುಮಾರಸ್ವಾಮಿ ಸಹ ಕರ್ನಾಟಕ ಭವನದಿಂದ ಮೋದಿ ಮನೆಯತ್ತ ಹೊರಟ್ಟಿದ್ದಾರೆ.

  • 05 Jun 2024 03:36 PM (IST)

    Lok Sabha Election Results Live: ಐಎನ್​ಡಿಐಎ ಸಭೆ, ಲಕ್ನೋನಿಂದ ದೆಹಲಿಗೆ ಹೊರಟ ಅಖಿಲೇಶ್​ ಯಾದವ್

    ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್​ ಯಾದವ್ ಇಂಡಿ ಮೈತ್ರಿಕೂಟದ ಸಭೆ ಇರುವ ಹಿನ್ನೆಲೆಯಲ್ಲಿ ದೆಹಲಿಗೆ ಹೊರಟಿದ್ದಾರೆ.

  • 05 Jun 2024 03:03 PM (IST)

    Lok Sabha Election Results Live: ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ರಾಜೀನಾಮೆ

    ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ರಾಜೀನಾಮೆ ನೀಡಿದ್ದಾರೆ.

  • 05 Jun 2024 02:41 PM (IST)

    Lok Sabha Election Results Live: ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ

    ಪ್ರಧಾನಿ ನರೇಂದ್ರ ಮೋದಿ ತಮ್ಮ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿದ್ದಾರೆ.

  • 05 Jun 2024 02:16 PM (IST)

    Lok Sabha Election Results Live: ದೆಹಲಿಗೆ ಬಂದಿಳಿದ ಚಂದ್ರಬಾಬು ನಾಯ್ಡು

    ಟಿಡಿಪಿ ಮುಖ್ಯಸ್ಥ ಎನ್​ ಚಂದ್ರಬಾಬು ನಾಯ್ಡು ಎನ್​ಡಿಎ ಸಭೆಗಾಗಿ ದೆಹಲಿಗೆ ಆಗಮಿಸಿದ್ದಾರೆ.

     

  • 05 Jun 2024 12:58 PM (IST)

    Lok Sabha Election Results Live: ಪ್ರಧಾನಿ ಮೋದಿ ಜೂನ್​8 ರಂದು ಪ್ರಮಾಣವಚನ ಸಾಧ್ಯತೆ

    ಜೂನ್​ 8ರಂದು ನರೇಂದ್ರ ಮೋದಿ 3ನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.

  • 05 Jun 2024 12:18 PM (IST)

    Lok Sabha Election Results Live: ಒಂದೇ ವಿಮಾನದಲ್ಲಿ ದೆಹಲಿಗೆ ತೇಜಸ್ವಿ, ನಿತೀಶ್​

    ನಿತೀಶ್​ ಕುಮಾರ್ ಹಾಗೂ ತೇಜಸ್ವಿ ಯಾದವ್ ಒಂದೇ ವಿಮಾನದಲ್ಲಿ ದೆಹಲಿಗೆ ಹೊರಟಿದ್ದಾರೆ.

  • 05 Jun 2024 12:11 PM (IST)

    Lok Sabha Election Results Live: ಎನ್​ಡಿಯ ಸಭೆಗಾಗಿ ವಿಜಯವಾಡದಿಂದ ಹೊರಟ ಚಂದ್ರಬಾಬು ನಾಯ್ಡು

    ಟಿಡಿಪಿ ಮುಖ್ಯಸ್ಥ ಎನ್​ ಚಂದ್ರಬಾಬು ನಾಯ್ಡು ದೆಹಲಿಯಲ್ಲಿ ನಡೆಯಲಿರುವ ಎನ್​ಡಿಎ ಸಭೆಗಾಗಿ ವಿಜಯವಾಡದಿಂದ ಹೊರಟಿದ್ದಾರೆ.

  • 05 Jun 2024 10:54 AM (IST)

    Lok Sabha Election Results Live: ಜಗನ್ನಾಥನ ಆಶೀರ್ವಾದದಿಂದ ಒಡಿಶಾದಲ್ಲಿ 20 ಸೀಟುಗಳನ್ನು ಗೆದ್ದಿದ್ದೇವೆ: ಧರ್ಮೇಂದ್ರ ಪ್ರಧಾನ್

    ಜಗನ್ನಾಥನ ಆಶೀರ್ವಾದದಿಂದ ಒಡಿಶಾದಲ್ಲಿ 21 ಸೀಟುಗಳ ಪೈಕಿ 20 ಸೀಟುಗಳನ್ನು ಗೆದ್ದಿದ್ದೇವೆ, ಜನರ ಭರವಸೆಯನ್ನು ನಾವೆಂದೂ ಸುಳ್ಳು ಮಾಡುವುದಿಲ್ಲ: ಧರ್ಮೇಂದ್ರ ಪ್ರಧಾನ್

  • 05 Jun 2024 10:13 AM (IST)

    Lok Sabha Election Results Live:ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ ಚಂದ್ರಬಾಬು ನಾಯ್ಡು

    ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಇಂದು ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.

  • 05 Jun 2024 09:32 AM (IST)

    Lok Sabha Election Results Live: ದೆಹಲಿಗೆ ಆಗಮಿಸಿದ ಎಂಕೆ ಸ್ಟಾಲಿನ್

    ಇಂಡಿ ಮೈತ್ರಿಕೂಟದ ಸಭೆ, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ದೆಹಲಿಗೆ ಆಗಮಿಸಿದ್ದಾರೆ.

  • 05 Jun 2024 09:04 AM (IST)

    Lok Sabha Election Results Live: ಅಮೇಥಿಯಲ್ಲಿ ನನ್ನ ಸೇವೆ ಮುಂದುವರೆಯಲಿದೆ: ಸ್ಮೃತಿ ಇರಾನಿ

    ಅಮೇಥಿಯಲ್ಲಿ ನನ್ನ ಸೇವೆ ನಿರಂತರವಾಗಿ ಮುಂದುವರೆಯಲಿದೆ, ಇದು ಗೆದ್ದವರಿಗೆ ಶುಭ ಕೋರುವ ಸಮಯ ಎಂದರು.

  • 04 Jun 2024 10:55 PM (IST)

    Lok Sabha Election Results Live: ನಿಮ್ಮ ವಿಶ್ವಾಸಕ್ಕೆ ಧಕ್ಕೆಯಾಗಲು ಬಿಡುವುದಿಲ್ಲ

    ಛತ್ತಿಸ್ಗಡ್, ದೆಹಲಿ, ಹಿಮಾಚಲ, ಮಧ್ಯಪ್ರದೇಶ ಸೇರಿದಂತೆ ಹಲವು ಕಡೆ ಕ್ಲಿನ್ ಸ್ವೀಪ್ ಮಾಡಿದೆ. ವಿಧಾನಸಭೆ ಮತದಾರರಿಗೂ ವಿಶೇಷ ಧನ್ಯವಾದಗಳು. ನಿಮ್ಮ ವಿಶ್ವಾಸಕ್ಕೆ ಧಕ್ಕೆಯಾಗಲು ಬಿಡುವುದಿಲ್ಲ ನಾನು ಭರವಸೆ ನೀಡುತ್ತೇನೆ ಎಂದು ಹೇಳಿದ್ದಾರೆ.

  • 04 Jun 2024 10:19 PM (IST)

    Lok Sabha Election Results Live: ಬಿಜೆಪಿ ಒಡಿಶಾದಲ್ಲಿ ಸರ್ಕಾರ ಮಾಡುತ್ತಿದೆ

    ಬಿಜೆಪಿ ಒಡಿಶಾದಲ್ಲಿ ಸರ್ಕಾರ ಮಾಡುತ್ತಿದೆ. ಜಗನಾಥ್ ಕೃಪೆಯಿಂದ ಒಡಿಶಾದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುತ್ತಿದೆ. ಕೇರಳದಲ್ಲಿ ಮೊದಲ ಬಾರಿಗೆ ಗೆಲುವು ಸಾಧಿಸಿದ್ದೇವೆ. ಕೇರಳದಲ್ಲಿ ಸೇವೆ ಜೊತೆಗೆ ನಮ್ಮ ಕಾರ್ಯಕರ್ತರು ಸಂಘರ್ಷ ಮಾಡಿದ್ದಾರೆ ಎಂದು ಮೋದಿ ಹೇಳಿದ್ದಾರೆ.

  • 04 Jun 2024 09:57 PM (IST)

    Lok Sabha Election Results Live: ಕಾಂಗ್ರೆಸ್ ನಾಶವಾಗಿದೆ: ಮೋದಿ

    ಅರುಣಾಚಲ, ಆಂಧ್ರಪ್ರದೇಶ, ಒಡಿಶಾ, ಸಿಕ್ಕಿಂನಲ್ಲಿ ಕಾಂಗ್ರೆಸ್ ನಾಶವಾಗಿದೆ. ಅವರಿಗೆ ಠೇವಣಿ ಪಡೆಯುವುದು ಕಷ್ಟವಾಗಿದೆ ಎಂದು ಪ್ರಧಾನಿ ಮೋದಿ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

  • 04 Jun 2024 09:55 PM (IST)

    Lok Sabha Election Results Live: ವಿಧಾನಸಭೆ ಚುನಾವಣೆಗಳಲ್ಲಿ ಎನ್‌ಡಿಎಗೆ ಭವ್ಯ ವಿಜಯ ಸಿಕ್ಕಿದೆ

    ಮೊದಲ ಬಾರಿಗೆ ಎರಡು ಅವಧಿಯ ಬಳಿಕ ಮೂರನೇ ಬಾರಿಗೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ. ವಿಧಾನಸಭೆ ಚುನಾವಣೆಗಳಲ್ಲಿ ಎನ್‌ಡಿಎಗೆ ಭವ್ಯ ವಿಜಯ ಸಿಕ್ಕಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

  • 04 Jun 2024 09:16 PM (IST)

    Lok Sabha Election Results Live: ಸೇವ ಭಾವನೆಯ ಮುಂದೆ ರಾಜಕೀಯ ಏನು ಅಲ್ಲ

    ಕೊರೊನಾ ಅವಧಿಯಲ್ಲಿ ವ್ಯಾಕ್ಸಿನ್ ಮೂಲಕ ವಿಶ್ವಕ್ಕೆ ನೆರವು ನೀಡಿತು. ಕೆಲಸ ಮಾಡುವುದು ನಮ್ಮ ಜವಾಬ್ದಾರಿ ಎಂದು ಭಾವಿಸಿದ್ದೇವೆ. ಭ್ರಷ್ಟಾಚಾರ ವಿರುದ್ಧ ವೇಗವಾಗಿ ಪ್ರಹಾರ ಮಾಡಬೇಕಿದೆ. ಡಿಜಿಟಲ್ ಇಂಡಿಯಾ ಭ್ರಷ್ಟಾಚಾರವನ್ನು ತಡೆದಿದೆ. ಭ್ರಷ್ಟಾಚಾರ ವಿರುದ್ಧ ಕ್ರಮ ದಿನದಿಂದ ದಿನಕ್ಕೆ ಕಠಿಣವಾಗುತ್ತಿದೆ. ಸೇವ ಭಾವನೆಯ ಮುಂದೆ ರಾಜಕೀಯ ಏನು ಅಲ್ಲ ಎಂದು ಮೋದಿ ಹೇಳಿದ್ದಾರೆ.

  • 04 Jun 2024 09:15 PM (IST)

    Lok Sabha Election Results Live: ಪ್ರತಿ ಕ್ಷೇತ್ರವನ್ನು ಆತ್ಮ ನಿರ್ಭರ ಮಾಡಲಿದ್ದೇವೆ

    ನಮ್ಮ ರಕ್ಷಣಾ ಇಲಾಖೆ ಸ್ವಾವಲಂಬಿಯಾಗುವುದಿಲ್ಲವೋ ಅಲ್ಲಿವರೆಗೂ ನಿಲ್ಲುವುದಿಲ್ಲ. ಪ್ರತಿ ಕ್ಷೇತ್ರವನ್ನು ಆತ್ಮ ನಿರ್ಭರ ಮಾಡಲಿದ್ದೇವೆ. ಮುಂದಿನ ಅವಧಿ ಗ್ರೀನ್ ಎನರ್ಜಿ ಕಾಲ, ಇದಕ್ಕೆ ಆದ್ಯತೆ ನೀಡಲಿದ್ದೇವೆ. ಇಂದಿನ ಭಾರತ ವಿಶ್ವದ ಭಾಗವಾಗಿದೆ ಎಂದಿದ್ದಾರೆ.

  • 04 Jun 2024 09:14 PM (IST)

    Lok Sabha Election Results Live: ವಿಜಯೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ

    ನಮ್ಮ 3ನೇ ಅವಧಿಯಲ್ಲಿ ದೇಶವು ದೊಡ್ಡ ನಿರ್ಧಾರಗಳಗಳನ್ನು ಕೈಗೊಳ್ಳಲಿದೆ. ಹೊಸ ಅಧ್ಯಾಯವನ್ನು ಬರೆಯುತ್ತದೆ ಎಂದು ಗ್ಯಾರಂಟಿ ನೀಡಿದ್ದಾರೆ.

  • 04 Jun 2024 09:06 PM (IST)

    Lok Sabha Election Results Live: ನೀವು 2 ಹೆಜ್ಜೆ ನಡೆದರೆ, ನಾನು 4 ಹೆಜ್ಜೆ ನಡೆಯುತ್ತೇನೆ

    ನನ್ನ ತಾಯಿ ನಿಧನದ ಬಳಿಕ ಇದು ಮೊದಲ ಚುನಾವಣೆ. ನನ್ನ ತಾಯಿ ನಿಧನದ ಬಳಿಕ ದೇಶದ ತಾಯಂದಿರು, ಸಹೋದರಿಯರ ಪ್ರೀತಿಯಿಂದ ಒಂಟಿತನ ಅನುಭವಿಸಿಲ್ಲ. ನಿಮ್ಮ ಬೆಂಬಲ ನನ್ನನ್ನು ಕೆಲಸ ಮಾಡಲು ಪ್ರೇರೇಪಿಸುತ್ತೆ. ನೀವು 10 ಗಂಟೆಗಳ ಕಾಲ ಕೆಲಸ ಮಾಡಿದರೆ, ನಾನು 18 ಗಂಟೆಗಳ ಕಾಲ ಕೆಲಸವನ್ನು ಮಾಡುತ್ತೇನೆ. ನೀವು 2 ಹೆಜ್ಜೆ ನಡೆದರೆ, ನಾನು 4 ಹೆಜ್ಜೆ ನಡೆಯುತ್ತೇನೆ ಎಂದಿದ್ದಾರೆ.

  • 04 Jun 2024 09:02 PM (IST)

    Lok Sabha Election Results Live: ದೇಶದಲ್ಲಿ ಬದಲಾವಣೆಗಾಗಿ ಜನ ಆಶೀರ್ವಾದ ಮಾಡಿದ್ದಾರೆ

    ದೇಶದಲ್ಲಿ ಬದಲಾವಣೆಗಾಗಿ ಜನ ಆಶೀರ್ವಾದ ಮಾಡಿದ್ದಾರೆ. ಎನ್‌ಡಿಎ ಬೆಂಬಲಿಸಿದ್ದಕ್ಕೆ ಮಹಿಳೆಯರು, ಯುವಕರಿಗೆ ಧನ್ಯವಾದ. ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರಿಂದ ದಾಖಲೆ ಮತದಾನವಾಗಿದೆ. ಅಭಿವೃದ್ಧಿ ಗ್ಯಾರಂಟಿಗೆ ಜನ ಆಶೀರ್ವಾದ ಮಾಡಿದ್ದಾರೆ.

  • 04 Jun 2024 08:58 PM (IST)

    Lok Sabha Election Results Live: ಕೇರಳದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆದ್ದಿದೆ

    ದೇಶದ ಅಭಿವೃದ್ಧಿಗೆ ಎನ್‌ಡಿಎ ಮೈತ್ರಿಕೂಟ ಬದ್ಧವಾಗಿದೆ. ಆಂಧ್ರದಲ್ಲೂ ಎನ್‌ಡಿಎ ಮೈತ್ರಿ ಪಕ್ಷ ಟಿಡಿಪಿಗೆ ಆಶೀರ್ವಾದ ಸಿಕ್ಕಿದೆ. ಕೇರಳದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆದ್ದಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

  • 04 Jun 2024 08:55 PM (IST)

    Lok Sabha Election Results Live: ಹಲವು ರಾಜ್ಯಗಳಲ್ಲಿ ಬಿಜೆಪಿಗೆ ಭಾರಿ ಗೆಲುವು ಸಿಕ್ಕಿದೆ: ಮೋದಿ

    ತೆಲಂಗಾಣದಲ್ಲೂ ನಮ್ಮ ಸಂಖ್ಯೆ ದ್ವಿಗುಣವಾಗಿದೆ. ಮಧ್ಯಪ್ರದೇಶ, ಛತ್ತೀಸ್‌ಗಢ, ದೆಹಲಿ, ಹಿಮಾಚಲಪ್ರದೇಶ ಸೇರಿ ಹಲವು ರಾಜ್ಯಗಳಲ್ಲಿ ಬಿಜೆಪಿಗೆ ಭಾರಿ ಗೆಲುವು ಸಿಕ್ಕಿದೆ.

  • 04 Jun 2024 08:51 PM (IST)

    Lok Sabha Election Results Live: ಜನರಿಗೆ ನಮ್ಮ ಮೇಲೆ ವಿಶ್ವಾಸವಿದೆ: ಪ್ರಧಾನಿ ಮೋದಿ

    ಸತತ 3ನೇ ಬಾರಿಗೆ ಮತದಾರರು ಎನ್‌ಡಿಎಗೆ ಆರ್ಶೀವಾದ ಮಾಡಿದ್ದಾರೆ. ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತನಿಗೂ ಧನ್ಯವಾದ. ಜನರಿಗೆ ನಮ್ಮ ಮೇಲೆ ವಿಶ್ವಾಸವಿದೆ. ವಿಶ್ವದ ಅತ್ಯಂತ ದೊಡ್ಡ ಚುನಾವಣೆ ಮುಕ್ತಾಯವಾಗಿದೆ ಎಂದು ಮೋದಿ ಹೇಳಿದ್ದಾರೆ.

  • 04 Jun 2024 08:48 PM (IST)

    Lok Sabha Election Results Live: ಇದು ಅತಿದೊಡ್ಡ ಪ್ರಜಾಪ್ರಭುತ್ವ ಜಯ

    ನಿಮ್ಮ ಈ ಪ್ರೀತಿ, ಈ ಆರ್ಶಿವಾದಕ್ಕಾಗಿ ನಾನು ದೇಶದ ಜನರಿಗೆ ಖುಣಿಯಾಗಿದ್ದೇನೆ. ಇಂದು ಮಂಗಳಕರ ದಿನ. ಈ ಪಾವನ ದಿನದಂದು ಮೂರನೇ ಬಾರಿ ಸರ್ಕಾರ ರಚನೆಗೆ ಸಿದ್ದವಾಗಿದೆ. ನಾವು ಎಲ್ಲರೂ ಜನರಿಗೆ ಆಭಾರಿಯಾಗಿದ್ದೇವೆ. ದೇಶದ ಜನರು ಬಿಜೆಪಿ ಮೇಲೆ ಎನ್‌ಡಿಎ ಮೇಲೆ ಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ವಿಜಯ ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ಜಯ ಎಂದು ಹೇಳಿದ್ದಾರೆ.

  • 04 Jun 2024 08:44 PM (IST)

    Lok Sabha Election Results Live: ಸಬ್​​ಕಾ ಸಾಥ್,​ ಸಬ್​ಕಾ ವಿಕಾಸದ ಜಯ: ಮೋದಿ

    ದೇಶದ ಜನರಿಗೆ ನಾನು ಆಭಾರಿಯಾಗಿದ್ದೇನೆ. ಈ ಜಯ ಲೋಕತಂತ್ರದ ಜಯ. ಇದು ಸಬ್​​ಕಾ ಸಾಥ್,​ ಸಬ್​ಕಾ ವಿಕಾಸದ ಜಯ ಎಂದು ದೆಹಲಿಯ ಬಿಜೆಪಿ ಕಚೇರಿಯಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.

  • 04 Jun 2024 08:37 PM (IST)

    Lok Sabha Election Results Live: ದೇಶದ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದ ನಡ್ಡಾ

    ಅಧಿಕಾರಕ್ಕಾಗಿ ಸುಳ್ಳು ಭರವಸೆ ನೀಡುವವರಿಗೆ ದೇಶದ ಜನರು ತಕ್ಕ ಪಾಠ ಕಲಿಸುತ್ತಾರೆ. ಪ್ರಧಾನಿ ಮೋದಿ 3ನೇ ಬಾರಿಗೆ ಪ್ರಧಾನಿಯಾಗ್ತಿದ್ದಾರೆ. ದೇಶದ ಅರ್ಥವ್ಯವಸ್ಥೆ ಮೂರನೇ ಸ್ಥಾನಕ್ಕೆ ಏರಲಿದೆ ಎಂದು ದೆಹಲಿಯ ಬಿಜೆಪಿ ಕಚೇರಿಯಲ್ಲಿ ಜೆ.ಪಿ.ನಡ್ಡಾ ಭಾಷಣ ಮಾಡಿದ್ದಾರೆ.

  • 04 Jun 2024 08:19 PM (IST)

    Lok Sabha Election Results Live: ದೆಹಲಿಯ ಬಿಜೆಪಿ ಕಚೇರಿಗೆ ಆಗಮಿಸಿದ ನರೇಂದ್ರ ಮೋದಿ

    ಲೋಕಸಭೆ ಚುನಾವಣೆ ಫಲಿತಾಂಶದ ನಂತರ ದೆಹಲಿಯ ಬಿಜೆಪಿ ಕಚೇರಿಗೆ ನರೇಂದ್ರ ಮೋದಿ ಆಗಮಿಸಿದ್ದಾರೆ. ಪ್ರಧಾನಿ ಮೋದಿಗೆ ಬಿಜೆಪಿ ಕಾರ್ಯಕರ್ತರಿಂದ ಸ್ವಾಗತ ಕೋರಿದ್ದಾರೆ.

  • 04 Jun 2024 06:44 PM (IST)

    Karnataka Lok Sabha Election Results 2024 LIVE: ಈ ಬಾರಿ 9 ಸ್ಥಾನ ಗೆದ್ದಿದ್ದೇವೆ: ಸಿಎಂ

    18ರಿಂದ 20 ಗೆಲ್ಲುವ ವಿಶ್ವಾಸ ಇತ್ತು, ಆದರೆ ಅದು ಸಾಧ್ಯವಾಗಿಲ್ಲ. ಕಳೆದ ಬಾರಿ 1 ಸ್ಥಾನ ಗೆದ್ದಿದ್ದೆವು, ಈ ಬಾರಿ 9 ಸ್ಥಾನ ಗೆದ್ದಿದ್ದೇವೆ. ಕಾಂಗ್ರೆಸ್ ಪಕ್ಷದ​ ಪರ 45.34% ಮತದಾನವಾಗಿದ್ದು, ಬಿಜೆಪಿಗೆ 46.06% ಮತ ಪ್ರಮಾಣ ಮತದಾನವಾಗಿದೆ ಎಂದು ತಿಳಿಸಿದರು.

  • 04 Jun 2024 06:28 PM (IST)

    ನಾಳೆ INDIA ಮೈತ್ರಿಕೂಟ ಎಲ್ಲವನ್ನೂ ನಿರ್ಧಾರ: ರಾಹುಲ್

    INDIA ಮೈತ್ರಿಕೂಟದ ನಾಯಕರ ಜೊತೆ ನಾಳೆ ಸಭೆಯಿದೆ. ನಾವು ಸರ್ಕಾರ ಮಾಡುತ್ತೇವೆಯೋ ಇಲ್ವೋ ನಾಳೆ ಹೇಳ್ತೇವೆ. ಇಂಡಿಯಾ ಒಕ್ಕೂಟದ ಸಹಪಾಠಿಗಳನ್ನು ಕೇಳದೆಯೇ ಹೇಳಲ್ಲ. ನಾವು ಈಗಲೇ ಯಾವುದನ್ನೂ ನಿರ್ಧಾರ ಮಾಡುವುದಿಲ್ಲ. ನಾಳೆ INDIA ಮೈತ್ರಿಕೂಟ ಎಲ್ಲವನ್ನೂ ನಿರ್ಧಾರ ಮಾಡಲಿದೆ. ಸರ್ಕಾರ ರಚನೆಗೆ ಬಹಳ ಫೈನ್​ಲೈನ್ ಇದೆ. ಎಲ್ಲವನ್ನೂ ನಾಳೆಯ ಸಭೆಯಲ್ಲಿ ನಿರ್ಧಾರ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದರು.

  • 04 Jun 2024 06:22 PM (IST)

    ಇಂಡಿಯಾ ಘಟಬಂಧನ್ ಬಹಳ ಕಷ್ಟದ ಪರಿಸ್ಥಿತಿಯಲ್ಲಿ ಚುನಾವಣೆ ಎದುರಿಸಿದೆ

    ಕಾಂಗ್ರೆಸ್ ಹಾಗೂ ಇಂಡಿಯಾ ಘಟಬಂಧನ್ ಬಹಳ ಕಷ್ಟದ ಪರಿಸ್ಥಿತಿಯಲ್ಲಿ ಚುನಾವಣೆ ಎದುರಿಸಿದೆ. ಬ್ಯಾಂಕ್ ಸೀಜ್ ಮಾಡಿದ್ದರು . ನಾಯಕರ ಮೇಲೆ ದಾಳಿ ಮಾಡಿದ್ದರು. ಆದರೆ ಕಾಂಗ್ರೆಸ್ ಪಾಸಿಟಿವ್ ದೃಷ್ಟಿಯಿಂದ ಲೇ ಕ್ಯಾಂಪೇನ್ ಮಾಡಿ ಜನರ ಮುಂದೆ ಹೋದೆವು. ಜನರು ನಮ್ಮೊಂದಿಗೆ ಸೇರಿದರು ನಮ್ಮನ್ನು ಬೆಂಬಲಿಸಿದರು. ಮೋದಿ ಮಾಡಿದ ಕ್ಯಾಂಪೇನ್ ಹಾಗೂ ಮಾತುಗಳನ್ನು ಇತಿಹಾಸ ನೆನಪಿಡುತ್ತದೆ. ಕಾಂಗ್ರೆಸ್ ನ ಪ್ರಣಾಳಿಕೆ ವಿರುದ್ಧ ಕೂಡ ಪ್ರಧಾನಿ ಅಪಪ್ರಚಾರ ಮಾಡಿದರು. ಭಾರತ್ ಜೋಡೋ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದಿದ್ದು. ಐದು ನ್ಯಾಯ್ ಹಾಗೂ ನಮ್ಮ ಗ್ಯಾರಂಟಿ ಗಳು ಮನೆ ಮನೆಗೆ ತಲುಪಿದವು. ಬಿಜೆಪಿಯ ಅಹಂಕಾರದಿಂದ ಸಂವಿಧಾನ ದುರ್ಬಳಕೆ ಮಾಡಿಕೊಂಡರು. ಸರ್ಕಾರಿ ಸಂಸ್ಥೆಗಳನ್ನು ದಬ್ಬಾಳಿಕೆಯಿಂದ ತಮ್ಮ ಕಡೆ ಮಾಡಿಕೊಂಡರು. ಮೋದಿಗೆ ಮತ್ತೊಮ್ಮೆ ಅವಕಾಶ ನೀಡಿದರೆ ಸಂವಿಧಾನವನ್ನೇ ಉಳಿಸುವುದಿಲ್ಲ ಎಂಬುದು ಜನರಿಗೂ ಗೊತ್ತಾಗಿದೆ ಎಂದು ಖರ್ಗೆ ಹೇಳಿದರು.

  • 04 Jun 2024 06:13 PM (IST)

    ಇದು ಬಿಜೆಪಿಯ ನೈತಿಕ ಸೋಲು ಎಂದ ಖರ್ಗೆ

    ಇದು ಜನರ ಗೆಲುವು, ಪ್ರಜಾಪ್ರಭುತ್ವದ ಗೆಲುವು. ಇದು ಮೋದಿ, ಜನರ ನಡುವಿನ ಯುದ್ಧ ಅಂದಿದ್ವಿ ಈ ಸಲ ಜನ ಯಾರಿಗೂ ಪೂರ್ಣ ಬಹುಮತ ನೀಡಿಲ್ಲ. ಒಬ್ಬ ವ್ಯಕ್ತಿಯ ಮುಖ ಇಟ್ಕೊಂಡು ಬಿಜೆಪಿ ಚುನಾವಣೆ ಮಾಡಿದೆ. ಅದನ್ನು ಜನರು ಸೋಲಿಸಿದ್ದಾರೆ. ಇದು ಬಿಜೆಪಿಯ ನೈತಿಕ ಸೋಲು. ನೈತಿಕ ದೃಷ್ಟಿಯಿಂದ ಇದರಿಂದ ದೊಡ್ಡ ನಷ್ಟ ಅವರಿಗೆ ಆಗಿದೆ . ಚುನಾವಣೆ ಪ್ರಚಾರದ ವೇಳೆ ಮೋದಿ ಸುಳ್ಳುಗಳನ್ನ ಹೇಳಿದ್ದಾರೆ. ಆಡಳಿತರೂಢ ಸರ್ಕಾರ ಹೆಜ್ಜೆ ಹೆಜ್ಜೆಗೂ ಅಡ್ಡಿ ಮಾಡುತ್ತಿದ್ದರು. ನಮ್ಮ ಪಕ್ಷದ ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಿದ್ರು. ಇಂಡಿಯಾ ಮೈತ್ರಿಕೂಟದ ಗೆಲುವಿಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದ ಹೇಳಿದರು

  • 04 Jun 2024 06:11 PM (IST)

    Lok Sabha Election Results Live: ರಾಹುಲ್, ಖರ್ಗೆ ಸುದ್ದಿಗೋಷ್ಠಿ

    ಲೋಕಸಭಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ನವದೆಹಲಿಯ ಎಐಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

  • 04 Jun 2024 04:29 PM (IST)

    Lok Sabha Election Results Live: ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಯ ತೇಜಸ್ವಿ ಸೂರ್ಯಗೆ ಗೆಲುವು

    ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ತೇಜಸ್ವಿ ಸೂರ್ಯ 265649 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

  • 04 Jun 2024 04:26 PM (IST)

    Lok Sabha Election Results Live: ಮತಎಣಿಕೆ ನಿಧಾನವಾಗಿದೆ, ಕಾಂಗ್ರೆಸ್​ನಿಂದ ಆರೋಪ

    ನಿಧಾನಗತಿಯ ಮತ ಎಣಿಕೆ ನಡೆಯುತ್ತಿದೆ ಎಂದು ದೂರಿ ಕಾಂಗ್ರೆಸ್‌ ನಿಯೋಗ ಚುನಾವಣಾ ಆಯೋಗದ ಮೊರೆ ಹೋಗಿದೆ.

  • 04 Jun 2024 04:10 PM (IST)

    Lok Sabha Election Results Live: ಅಯೋಧ್ಯೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಹಿನ್ನಡೆ

    ಫೈಜಾಬಾದ್ ಲೋಕಸಭೆಯಲ್ಲಿ ಐಎನ್​ಡಿಐಎ ಅಭ್ಯರ್ಥಿ ಅವಧೇಶ್ ಪ್ರಸಾದ್ ಮುನ್ನಡೆ ಕಾಯ್ದುಕೊಂಡಿದ್ದಾರೆ.

  • 04 Jun 2024 04:04 PM (IST)

    Lok Sabha Election Results Live: ಇಂದು ಸಂಜೆ 7 ಗಂಟೆಗೆ ಪ್ರಧಾನಿ ಮೋದಿ ಭಾಷಣ

    ಇಂದು ಸಂಜೆ 7 ಗಂಟೆಗೆ ಪ್ರಧಾನಿ ಮೋದಿ ಲೋಕಸಭಾ ಚುನಾವಣಾ ಫಲಿತಾಂಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.

  • 04 Jun 2024 03:59 PM (IST)

    Lok Sabha Election Results Live: ಚಂಡೀಗಢ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಮನೀಶ್​ ತಿವಾರಿ ಗೆಲುವು

    ಚಂಡೀಗಢ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಮನೀಶ್​ ತಿವಾರಿ ಗೆಲುವು ಸಾಧಿಸಿದ್ದಾರೆ, ಬಿಜೆಪಿಯ ಸಂಜಯ್ ಟಂಡನ್ ಅವರನ್ನು 2580 ಮತಗಳಿಂದ ಸೋಲಿಸಿದ್ದಾರೆ.

  • 04 Jun 2024 03:51 PM (IST)

    Maharashtra Lok Sabha Election Results Live: ಬಾರಾಮತಿ ಲೋಕಸಭಾ ಕ್ಷೇತ್ರದಿಂದ ಸುಪ್ರಿಯಾ ಸುಳೆ ಗೆಲುವು

    ಬಾರಾಮತಿ ಲೋಕಸಭಾ ಕ್ಷೇತ್ರದಿಂದ ಎನ್‌ಸಿಪಿ (ಶರದ್) ಅಭ್ಯರ್ಥಿ ಸುಪ್ರಿಯಾ ಸುಳೆ ಗೆಲುವು ಸಾಧಿಸಿದ್ದಾರೆ.

  • 04 Jun 2024 03:45 PM (IST)

    Lok Sabha Election Results Live: ಚುನಾವಣಾ ಆಯೋಗ ಭೇಟಿ ಮಾಡಲಿದೆ ಕಾಂಗ್ರೆಸ್ ಪಕ್ಷದ ನಿಯೋಗ

    ಕಾಂಗ್ರೆಸ್ ಪಕ್ಷದ ನಿಯೋಗ ಇಂದು ಚುನಾವಣಾ ಆಯೋಗವನ್ನು ಭೇಟಿ ಮಾಡಲಿದೆ.

  • 04 Jun 2024 03:40 PM (IST)

    Maharashtra Lok Sabha Election Results Live: ಶರದ್ ಪವಾರ್ ಸುದ್ದಿಗೋಷ್ಠಿ

    ಮಹಾರಾಷ್ಟ್ರದಲ್ಲಿ ಬದಲಾವಣೆ ಆರಂಭವಾಗಿದೆ ಎಂದು ಎನ್​ಸಿಪಿಯ ಶರದ್ ಪವಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಜನರು ಎಂವಿಎಗೆ ಬೆಂಬಲ ನೀಡಿದ್ದಾರೆ ಎಂದರು.

  • 04 Jun 2024 03:31 PM (IST)

    Lok Sabha Election Results Live: ಬಿಜೆಪಿ 238 ಸ್ಥಾನಗಳಲ್ಲಿ ಮುನ್ನಡೆ

    ಚುನಾವಣಾ ಆಯೋಗದ ಪ್ರಕಾರ ಬಿಜೆಪಿ 238 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 98 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಎಸ್‌ಪಿ 35, ಟಿಎಂಸಿ 29, ಡಿಎಂಕೆ 21, ಟಿಡಿಪಿ 16, ಜೆಡಿಯು 14 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

  • 04 Jun 2024 03:24 PM (IST)

    Gujarat Lok Sabha Election Results Live: ಪುರುಷೋತ್ತಮ್ ರೂಪಾಲ ಗೆಲುವು

    ಗುಜರಾತ್‌ನ ರಾಜ್‌ಕೋಟ್‌ ಕ್ಷೇತ್ರದ ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ಪುರುಷೋತ್ತಮ್‌ ರೂಪಾಲ ಗೆಲುವು ಸಾಧಿಸಿದ್ದಾರೆ. ರೂಪಾಲಾ ಅವರು ಕಾಂಗ್ರೆಸ್ ನಾಯಕ ಧನನಿ ಪರೇಶ್ ಅವರನ್ನು ಭಾರಿ ಅಂತರದಿಂದ ಸೋಲಿಸಿದ್ದಾರೆ.

  • 04 Jun 2024 03:17 PM (IST)

    West Bengal Lok Sabha Election Results Live: ಕೃಷ್ಣನಗರದಲ್ಲಿ ಗೆಲುವು ಸಾಧಿಸಿದ ಟಿಎಂಸಿಯ ಮಹುವಾ ಮೊಯಿತ್ರಾ

    ಟಿಎಂಸಿಯ ಮಹುವಾ ಮೊಯಿತ್ರಾ ಕೃಷ್ಣನಗರದಲ್ಲಿ ಗೆಲುವಿನ ನಗೆ ಬೀರಿದ್ದಾರೆ.

  • 04 Jun 2024 03:08 PM (IST)

    Madhya Pradesh Lok Sabha Election Results Live: 6 ಲಕ್ಷ ಮತಗಳಿಂದ ಮುಂದಿದ್ದಾರೆ ಶಿವರಾಜ್ ಸಿಂಗ್ ಚೌಹಾಣ್

    ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ 6 ಲಕ್ಷ ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.

  • 04 Jun 2024 02:55 PM (IST)

    Lok Sabha Election Results Live: ಕಾಂಗ್ರೆಸ್​ ಪ್ರಧಾನ ಕಚೇರಿ ಬಳಿ ರಾಹುಲ್​ ಗಾಂಧಿಯನ್ನು ಅಪ್ಪಿಕೊಂಡ ಕಾಂಗ್ರೆಸ್​ ಕಾರ್ಯಕರ್ತ

    ಕಾಂಗ್ರೆಸ್​ ಕಾರ್ಯಕರ್ತರೊಬ್ಬರು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಯನ್ನು ತಬ್ಬಿಕೊಂಡು ಶುಭಾಶಯ ತಿಳಿಸಿದ ವಿಡಿಯೋ ಇಲ್ಲಿದೆ.

  • 04 Jun 2024 02:46 PM (IST)

    Uttar Pradesh Lok Sabha Election Results Live: ಅಮೇಥಿಯಲ್ಲಿ ಸ್ಮೃತಿ ಇರಾನಿಗಿಂತ 50,758 ಮತಗಳಿಂದ ಕೆಎಲ್ ಶರ್ಮಾ ಮುನ್ನಡೆ

    ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆಎಲ್ ಶರ್ಮಾ 50,758 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

  • 04 Jun 2024 02:43 PM (IST)

    Punjab Lok Sabha Election Results Live: ಜಲಂಧರ್‌ನಿಂದ ಚನ್ನಿಗೆಲುವು, ರಿಂಕುಗೆ ಸೋಲು

    ಪಂಜಾಬ್ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಚರಣ್‌ಜಿತ್ ಸಿಂಗ್ ಚನ್ನಿ ಜಲಂಧರ್ ಲೋಕಸಭಾ ಕ್ಷೇತ್ರದಿಂದ ಗೆದ್ದಿದ್ದಾರೆ. ಬಿಜೆಪಿ ಅಭ್ಯರ್ಥಿ ಸುಶೀಲ್ ಕುಮಾರ್ ರಿಂಕು ಅವರನ್ನು 1,75,993 ಮತಗಳಿಂದ ಸೋಲಿಸಿದ್ದಾರೆ.

  • 04 Jun 2024 02:32 PM (IST)

    Lok Sabha Election Results Live: ಬಿಜೆಪಿ ನಾಯಕಿ ಮೇನಕಾ ಗಾಂಧಿಗೆ ಸೋಲು

    ಸುಲ್ತಾನ್​ಪುರದ ಬಿಜೆಪಿ ಅಭ್ಯರ್ಥಿ ಮೇನಕಾ ಗಾಂಧಿ ಸೋಲು ಅನುಭವಿಸಿದ್ದಾರೆ.

  • 04 Jun 2024 02:20 PM (IST)

    Himachal Pradesh Lok Sabha Election Results Live: ಅನುರಾಗ್​ ಠಾಕೂರ್​ ಹೊತ್ತು ಮೆರವಣಿಗೆ ಮಾಡಿದ ಕಾರ್ಯಕರ್ತರು

    ಅನುರಾಗ್​ ಠಾಕೂರ್​ ಗೆಲುವು ಬಹುತೇಕ ಖಚಿತವಾಗಿದ್ದು, ಚುನಾವಣಾ ಆಯೋಗದ ಅಧಿಕೃತ ಘೋಷಣೆ ಬಾಕಿ ಇದೆ. ಕಾರ್ಯಕರ್ತರು ಅನುರಾಗ್​ ಠಾಕೂರ್ ಅವರನ್ನು ಹೊತ್ತು ಮೆರವಣಿಗೆ ಮಾಡಿದ ದೃಶ್ಯ

  • 04 Jun 2024 02:15 PM (IST)

    Delhi Lok Sabha Election Results Live: ದೆಹಲಿ ಬಿಜೆಪಿ ಕಚೇರಿಯಲ್ಲಿ ಹನುಮಾನ್ ಚಾಲೀಸ ಪಠಣ

    ದೆಹಲಿಯ ಬಿಜೆಪಿ ಕಚೇರಿಯಲ್ಲಿ ಹನುಮಾನ್​ ಚಾಲೀಸ ಪಠಿಸಿದ ಬಿಜೆಪಿ ಕಾರ್ಯಕರ್ತರು

     

  • 04 Jun 2024 02:12 PM (IST)

    Lok Sabha Election Results Live: ಒಮರ್ ಅಬ್ದುಲ್ಲಾಗೆ ಸೋಲು

    ಜೆಕೆಎನ್‌ಸಿ ಉಪಾಧ್ಯಕ್ಷ ಮತ್ತು ಬಾರಾಮುಲ್ಲಾ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದು, ನಾವು ಅನಿವಾರ್ಯವಾಗಿ ತೀರ್ಪು ಒಪ್ಪಿಕೊಳ್ಳುವ ಸಮಯ ಬಂದಿದೆ. ಉತ್ತರ ಕಾಶ್ಮೀರದಲ್ಲಿ ಗೆಲುವಿಗಾಗಿ ರಶೀದ್ ಅವರಿಗೆ ಅಭಿನಂದನೆಗಳು ಎಂದು ಬರೆದಿದ್ದಾರೆ.

  • 04 Jun 2024 02:06 PM (IST)

    Jammu and Kashmir Lok Sabha Election Results Live: ಸೋಲೊಪ್ಪಿಕೊಂಡ ಮೆಹಬೂಬಾ ಮುಫ್ತಿ

    ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ತಮ್ಮ ಸೋಲೊಪ್ಪಿಕೊಂಡಿದ್ದಾರೆ ಅವರು ಅನಂತನಾಗ್‌ನಿಂದ ಚುನಾವಣೆಗೆ ಸ್ಪರ್ಧಿಸಿದ್ದರು.

  • 04 Jun 2024 02:01 PM (IST)

    Kerala Lok Sabha Election Results Live: ಕೇರಳದಲ್ಲಿ ಅರಳಿದ ಕಮಲ

    ಕೇರಳದ ತ್ರಿಶೂರ್​ನಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ್​ ಗೋಪಿ ಗೆಲುವು ಸಾಧಿಸಿದ್ದಾರೆ.

  • 04 Jun 2024 01:57 PM (IST)

    Lok Sabha Election Results Live: ದೇಶದಲ್ಲಿ ಎನ್‌ಡಿಎ ಸರ್ಕಾರ ರಚಿಸಲಿದೆ: ಪಿಯುಷ್ ಗೋಯಲ್

    ನಮ್ಮನ್ನು ಆಶೀರ್ವದಿಸಿದ ಮುಂಬೈ ಉತ್ತರದ ಮತದಾರರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಟ್ರೆಂಡ್‌ಗಳ ಪ್ರಕಾರ ಬಿಜೆಪಿ ಸುಮಾರು 1.25 ಲಕ್ಷ ಮತಗಳಿಂದ ಮುನ್ನಡೆ ಸಾಧಿಸಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ದೇಶದಲ್ಲಿ ಸರ್ಕಾರ ರಚಿಸಿ ದೇಶದ ಜನತೆಗೆ ಸೇವೆ ಸಲ್ಲಿಸಲಿದೆ ಎಂದು ಪಿಯುಷ್ ಗೋಯಲ್ ಹೇಳಿದ್ದಾರೆ.

     

  • 04 Jun 2024 01:48 PM (IST)

    Haryana Lok Sabha Election Results Live: ಕರ್ನಾಲ್​ನಲ್ಲಿ ಮಾಜಿ ಸಿಎಂ ಮನೋಹರ್​ ಲಾಲ್ ಖಟ್ಟರ್​ಗೆ ಮುನ್ನಡೆ

    ಹರ್ಯಾಣದ ಕರ್ನಾಲ್​ನಲ್ಲಿ ಮನೋಹರ್​ ಲಾಲ್​ ಖಟ್ಟರ್​ ಮುನ್ನಡೆ ಸಾಧಿಸಿದ್ದಾರೆ.

  • 04 Jun 2024 01:38 PM (IST)

    Kerala Lok Sabha Election Results Live: ಕೇರಳದಲ್ಲಿ ಖಾತೆ ತೆರೆಯುವತ್ತ ಬಿಜೆಪಿ

    ಕೇರಳ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ತನ್ನ ಖಾತೆ ತೆರೆಯುವತ್ತ ವೇಗವಾಗಿ ಸಾಗುತ್ತಿದೆ. ಈ ಚುನಾವಣೆಯಲ್ಲಿ ಬಿಜೆಪಿ 2 ಸ್ಥಾನ ಗೆಲ್ಲಬಹುದು ಎಂದು ಹೇಳಲಾಗುತ್ತಿದೆ.

  • 04 Jun 2024 01:37 PM (IST)

    Lok Sabha Election Results Live: ಮಥುರಾದಲ್ಲಿ ಹೇಮಾಮಾಲಿನಿಗೆ ಮುನ್ನಡೆ

    ಮಥುರಾದಲ್ಲಿ ಬಿಜೆಪಿ ಅಭ್ಯರ್ಥಿ ಹೇಮಾ ಮಾಲಿನಿ 1 ಲಕ್ಷದ 22 ಸಾವಿರದ 311 ಮತಗಳಿಂದ ಮುನ್ನಡೆಯಲ್ಲಿದ್ದರೆ, ಕಾಂಗ್ರೆಸ್‌ನ ಮುಖೇಶ್ ಧಂಗರ್​ಗೆ ಹಿನ್ನಡೆಯಾಗಿದೆ.

  • 04 Jun 2024 01:03 PM (IST)

    Himachal Pradesh Lok Sabha Election Results Live: ಹಿಮಾಚಲದ ಎಲ್ಲಾ 4 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ

    ಬಿಜೆಪಿಯು ಹಿಮಾಚಲಪ್ರದೇಶದಲ್ಲಿ ಎಲ್ಲಾ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ದೇಶದಲ್ಲಿ ಎನ್​ಡಿಎ ಮುಂಚೂಣಿಯಲ್ಲಿದೆ. ಮತ್ತೆ ಸರ್ಕಾರ ರಚಿಸಲಿದೆ ಎಂದು ಅನುರಾಗ್ ಠಾಕೂರ್​ ಹೇಳಿದ್ದಾರೆ.

  • 04 Jun 2024 12:52 PM (IST)

    Uttar Pradesh Lok Sabha Election Results Live: ಜನರು ಬದಲಾವಣೆಗಾಗಿ ಮತ ಹಾಕಿದ್ದಾರೆ: ಹರೀಶ್ ರಾವತ್

    ಕಾಂಗ್ರೆಸ್ ನಾಯಕ ಹರೀಶ್ ರಾವತ್ ಮಾತನಾಡಿ, ಎಕ್ಸಿಟ್ ಪೋಲ್‌ಗಳು ಸಂಪೂರ್ಣವಾಗಿ ವಿರುದ್ಧ ಫಲಿತಾಂಶಗಳನ್ನು ನೀಡುತ್ತಿವೆ, ಅಲ್ಲಿ ಎನ್‌ಡಿಎ ಮುಂದಿದ್ದರೂ ಸಹ ಅದು ಕಡಿಮೆ ಮತಗಳಿಂದ ಮುಂದಿದೆ. ಜನರು ಬದಲಾವಣೆಗಾಗಿ ಮತ ಹಾಕಿದ್ದಾರೆ.

  • 04 Jun 2024 12:47 PM (IST)

    Uttar Pradesh Lok Sabha Election Results Live: ಅಖಿಲೇಶ್ ಯಾದವ್ 64,511 ಮತಗಳಿಂದ ಮುನ್ನಡೆ

    ಉತ್ತರ ಪ್ರದೇಶದ ಕನೌಜ್ ಲೋಕಸಭಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿ ಅಖಿಲೇಶ್ ಯಾದವ್ 64,511 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

  • 04 Jun 2024 12:43 PM (IST)

    Uttar Pradesh Lok Sabha Election Results Live: ಯುಪಿಯಲ್ಲಿ ಎಸ್‌ಪಿ ಮತ್ತು ಬಿಜೆಪಿ ನಡುವೆ ನಿಕಟ ಪೈಪೋಟಿ

    ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಯುಪಿಯಲ್ಲಿ ಎಸ್ಪಿ 35 ಸ್ಥಾನಗಳಲ್ಲಿ ಮತ್ತು ಬಿಜೆಪಿ 35 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 7 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆರ್‌ಎಲ್‌ಡಿ 2 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

  • 04 Jun 2024 12:34 PM (IST)

    Gujarat Lok Sabha Election Results Live: ಅಮಿತ್​ ಶಾ ಗೆಲುವು ಬಹುತೇಕ ಖಚಿತವಾಗಿದೆ

    ಗುಜರಾತ್​ನ ಗಾಂಧಿನಗರದಿಂದ ಸ್ಪರ್ಧಿಸಿರುವ ಅಮಿತ್ ಶಾ ಗೆಲುವು ಬಹುತೇಕ ಖಚಿತವಾಗಿದೆ.

  • 04 Jun 2024 12:30 PM (IST)

    Lok Sabha Election Results Live: ಪ್ರಿಯಾಂಕಾ ಗಾಂಧಿ ವಾದ್ರಾ ನಿವಾಸಕ್ಕೆ ಸೋನಿಯಾ ಗಾಂಧಿ ಆಗಮನ

    ಕಾಂಗ್ರೆಸ್​ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ದೆಹಲಿಯಲ್ಲಿರುವ ತಮ್ಮ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ನಿವಾಸಕ್ಕೆ ಆಗಮಿಸಿದ್ದಾರೆ.

     

  • 04 Jun 2024 12:22 PM (IST)

    Lok Sabha Election Results Live: ಜಮ್ಮು, ಉಧಂಪುರದಲ್ಲಿ ಬಿಜೆಪಿ ಮುನ್ನಡೆ

    ಜಮ್ಮು ಹಾಗೂ ಉಧಂಪುರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.

  • 04 Jun 2024 12:19 PM (IST)

    Uttar Pradesh Lok Sabha Election Results Live: ಅಮೇಥಿಯಲ್ಲಿ ಸ್ಮೃತಿ ಇರಾನಿ ಮುನ್ನಡೆ

    ಅಮೇಥಿಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಕಿಶೋರಿ ಲಾಲ್ ಶರ್ಮಾರನ್ನು ಹಿಂದಿಕ್ಕಿದ್ದಾರೆ.

  • 04 Jun 2024 12:14 PM (IST)

    Bihar Lok Sabha Election Results Live: ಬಿಹಾರದಲ್ಲಿ ಜೆಡಿಯು 15 ಸ್ಥಾನಗಳಲ್ಲಿ, ಬಿಜೆಪಿ 11 ಸ್ಥಾನಗಳಲ್ಲಿ ಮುನ್ನಡೆ

    ಬಿಹಾರದ 40 ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಯು 15, ಬಿಜೆಪಿ 11, ಎಲ್​ಜೆಪಿಆರ್​ವಿ 5, ಆರ್​ಜೆಡಿ 4 ಹಾಗೂ ಇತರರು 3ರಲ್ಲಿ ಮುನ್ನಡೆ ಸಾಧಿಸಿದ್ದಾರೆ.

  • 04 Jun 2024 12:10 PM (IST)

    Andhra Pradesh Lok Sabha Election Results Live: ಪಕ್ಷದ ಕಚೇರಿ ಹೊರಗೆ ಟಿಡಿಪಿ ಕಾರ್ಯಕರ್ತರ ಸಂಭ್ರಮಾಚರಣೆ

    ಆಂಧ್ರಪ್ರದೇಶದಲ್ಲಿ ಟಿಡಿಪಿ ಕಾರ್ಯಕರ್ತರು ಪಕ್ಷದ ಕಚೇರಿ ಹೊರಗೆ ಸಂಭ್ರಮಿಸಿದ್ದು ಹೀಗೆ

  • 04 Jun 2024 12:06 PM (IST)

    Lok Sabha Election Results Live: ಸರ್ಕಾರ ರಚಿಸಲು ಪ್ರಯತ್ನ ಆರಂಭಿಸಿದ ಇಂಡಿಯಾ ಒಕ್ಕೂಟ

    ಇಂಡಿಯಾ ಮೈತ್ರಿಕೂಟವು ಸರ್ಕಾರ ರಚಿಸಲು ಪ್ರಯತ್ನಗಳನ್ನು ಆರಂಭಿಸಿವೆ. ಮೂಲಗಳ ಪ್ರಕಾರ, ಕಾಂಗ್ರೆಸ್​ ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್ ಮತ್ತು ಟಿಡಿಪಿ ಜತೆ ಮಾತನಾಡಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

  • 04 Jun 2024 12:01 PM (IST)

    Karnataka Lok Sabha Election Results Live: ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್​ ಮುನ್ನಡೆ

    ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್​ ಮುನ್ನಡೆ ಸಾಧಿಸಿದ್ದು, 65,262 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.

  • 04 Jun 2024 11:54 AM (IST)

    Lok Sabha Election Results Live: ಯಾವ ಪಕ್ಷ ಎಷ್ಟು ಸ್ಥಾನಗಳಲ್ಲಿ ಮುಂದಿದೆ?

    ಬಿಜೆಪಿ 235, ಕಾಂಗ್ರೆಸ್​ 99, ಸಮಾಜವಾದಿ ಪಕ್ಷ 34, ಡಿಎಂಕೆ 21, ಶಿವಸೇನೆ 11 ಸ್ಥಾನಗಳಲ್ಲಿ ಮುಂದಿದೆ.

  • 04 Jun 2024 11:48 AM (IST)

    Gujarat Lok Sabha Election Results Live: ಅಮಿತ್​ ಶಾ 5 ಲಕ್ಷ ಮತಗಳ ಅಂತರದಿಂದ ಮುನ್ನಡೆ

    ಅಮಿತ್ ಶಾ ಗುಜರಾತ್​ನ ಗಾಂಧಿನಗರದಿಂದ 5 ಲಕ್ಷ ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.

  • 04 Jun 2024 11:44 AM (IST)

    Bihar Lok Sabha Election Results Live: ಹಾಜಿಪುರದಲ್ಲಿ ಚಿರಾಗ್ ಪಾಸ್ವಾನ್ ಮುನ್ನಡೆ

    ಬಿಹಾರದ ಹಾಜಿಪುರದಲ್ಲಿ ಎಲ್​ಜೆಪಿ ಅಭ್ಯರ್ಥಿ ಚಿರಾಗ್ ಪಾಸ್ವಾನ್ ಮುನ್ನಡೆ ಸಾಧಿಸಿದ್ದಾರೆ. ಇಲ್ಲಿಯವರೆಗೆ 45561 ಮತಗಳನ್ನು ಪಡೆದಿದ್ದಾರೆ. ಚಿರಾಗ್ 13393 ಮತಗಳಿಂದ ಮುನ್ನಡೆಯಲ್ಲಿದ್ದಾರೆ.

  • 04 Jun 2024 11:39 AM (IST)

    Himachal Pradesh Results Live: ಮೋದಿಯವರ ಅಭಿವೃದ್ಧಿಯ ಕನಸಿಗೆ ನಾನು ಕೊಡುಗೆ ನೀಡುತ್ತೇನೆ: ಕಂಗನಾ ರಣಾವತ್

    ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್ ಮಾತನಾಡಿ, ಇದು ನನ್ನ ಜನ್ಮಸ್ಥಳ ಮತ್ತು ನಾನು ಇಲ್ಲಿನ ಜನರ ಸೇವೆ ಮಾಡಲು ಸಿದ್ಧನಿದ್ದೇನೆ. ಮೋದಿಯವರ ಕನಸಿನ ಸಬ್ಕಾ ಸಾಥ್, ಸಬ್ಕಾ ವಿಕಾಸ್‌ಗೆ ನಾನು ಕೊಡುಗೆ ನೀಡುತ್ತೇನೆ ಎಂದರು.

  • 04 Jun 2024 11:33 AM (IST)

    Lok Sabha Election Results Live: ಸಂಜಯ್ ರಾವತ್​ ಹೇಳಿದ್ದೇನು?

    ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ಮಾತನಾಡಿ, ದೇಶಾದ್ಯಂತ ಭಾರತ ಮೈತ್ರಿ ಸಾಧಿಸುತ್ತಿರುವ ಯಶಸ್ಸಿನ ಹಿಂದಿನ ಶಕ್ತಿ ರಾಹುಲ್ ಗಾಂಧಿ. ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ 150 ಸ್ಥಾನಗಳಿಗೆ ಜಿಗಿದಿದೆ. ಇದು ಬಹಳ ದೊಡ್ಡ ವಿಷಯ. ಭಾರತ ಮೈತ್ರಿಕೂಟ ಬಹುಮತದತ್ತ ಸಾಗುತ್ತಿದೆ ಎಂದರು.

  • 04 Jun 2024 11:26 AM (IST)

    Lok Sabha Election Results Live: ದೆಹಲಿಯ ಎಲ್ಲಾ ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ

    ದೆಹಲಿಯ ಎಲ್ಲಾ ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ

  • 04 Jun 2024 11:22 AM (IST)

    Lok Sabha Election Results Live: ಪೂರ್ಣ ಬಹುಮತದೊಂದಿಗೆ ಮತ್ತೊಮ್ಮೆ ಮೋದಿ ಸರ್ಕಾರ ರಚನೆಯಾಗಲಿದೆ: ಮೋಹನ್ ಯಾದವ್

    ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್, ಮೋದಿ ಸರ್ಕಾರ ಪೂರ್ಣ ಬಹುಮತದೊಂದಿಗೆ ಮತ್ತೆ ರಚನೆಯಾಗುತ್ತಿರುವುದು ನನಗೆ ತೃಪ್ತಿ ತಂದಿದೆ. ಮಧ್ಯಪ್ರದೇಶದ 29 ರಲ್ಲಿ 29 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತಿದೆ ಎಂದು ಹೇಳಿದರು.

  • 04 Jun 2024 11:19 AM (IST)

    Lok Sabha Election Results Live: ವಿದಿಶಾದಲ್ಲಿ ಶಿವರಾಜ್ ಸಿಂಗ್ ಮುನ್ನಡೆ

    ಮಧ್ಯಪ್ರದೇಶದ ವಿದಿಶಾದಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಜ್​ ಸಿಂಗ್ ಚೌಹಾಣ್​ ಮುಂದಿದ್ದಾರೆ.

Published On - 8:14 am, Tue, 4 June 24

Follow us on