ದಾವಣಗೆರೆ ಲೋಕಸಭಾ ಚುನಾವಣೆ 2024 ಫಲಿತಾಂಶ: ಪ್ರಭಾ ಮಲ್ಲಿಕಾರ್ಜುನ ಗೆಲುವು

Davangere Lok Sabha Election Results 2024 Live Counting Updates: ಲೋಕಸಭಾ ಚುನಾವಣೆ-2024 ಫಲಿತಾಂಶ ಪ್ರಕಟವಾಗಿದೆ. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಗಾಯತ್ರಿ ಸಿದ್ದೇಶ್ವರ್​ ಅವರಿಗೆ ಸೋಲಾಗಿದೆ. ಕಾಂಗ್ರೆಸ್​ನ​ ಡಾ. ಪ್ರಭಾ ಮಲ್ಲಿಕಾರ್ಜುನ್​ ಗೆದ್ದಿದ್ದಾರೆ.

ದಾವಣಗೆರೆ ಲೋಕಸಭಾ ಚುನಾವಣೆ 2024 ಫಲಿತಾಂಶ: ಪ್ರಭಾ ಮಲ್ಲಿಕಾರ್ಜುನ ಗೆಲುವು
ಡಾ. ಪ್ರಭಾ, ಗಾಯತ್ರಿ ಸಿದ್ದೇಶ್ವರ್​​
Follow us
ವಿವೇಕ ಬಿರಾದಾರ
|

Updated on:Jun 04, 2024 | 2:48 PM

ದಾವಣಗೆರೆ, ಜೂನ್​ 04: ದಾವಣಗೆರೆ ಲೋಕಸಭಾ ಕ್ಷೇತ್ರ (Davangere Lok Sabha Constituency) ಎರಡು ಕುಟುಂಬಗಳ ಜಿದ್ದಾಜಿದ್ದಿಗೆ ಸಾಕ್ಷಿಯಾಗುತ್ತಾ ಬಂದಿದೆ. ಈ ಬಾರಿ ಆ ಎರಡು ಕುಟುಂಬಗಳ ಮಹಿಳೆಯರು ಕಣಕ್ಕಿಳಿದಿದ್ದರು. ಅಲ್ಲದೆ ಕಾಂಗ್ರೆಸ್​ನ ಬಂಡಾಯ ಅಭ್ಯರ್ಥಿ ಕೂಡ ಕಣದಲ್ಲಿ ಇದ್ದರು. ಜಿ.ಎಂ ಸಿದ್ದೇಶ್ವರ (GM Siddheshwar) ಅವರ ಪತ್ನಿ ಗಾಯತ್ರಿ (Gayatri Siddheshwar) ಸೋಲುಂಡಿದ್ದಾರೆ. ಶಾಮನೂರು ಕುಟುಂಬದ ಸೊಸೆ, ಸಚಿವ ಎಸ್​ಎಸ್​ ಮಲ್ಲಿಕಾರ್ಜುನ್​ ಅವರ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜನ್​ ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್​ನಿಂದ ಸ್ಪರ್ಧಿಸಲು ಅವಕಾಶ ಕೈತಪ್ಪಿದ್ದರಿಂದ ಬಂಡೆದ್ದಿರುವ ಇನ್​ಸೈಟ್ಸ್​ ಸಂಸ್ಥೆಯ ಸ್ಥಾಪಕ ಜಿ.ಬಿ ವಿನಯಕುಮಾರ್ ಪಕ್ಷೇತರವಾಗಿ ಕಣಕ್ಕೆ ಇಳಿದಿದ್ದಾರೆ. ಇದರಿಂದಾಗಿ ಇಬ್ಬರು ಮಹಿಳೆಯ ನಡುವಿನ ನೇರ ಹಣಾಹಣಿಗೆ ವೇದಿಕೆಯಾಗಬೇಕಿದ್ದ ಕ್ಷೇತ್ರದಲ್ಲಿ ಈಗ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಸಾದರ ಲಿಂಗಾಯತ ಸಮುದಾಯದ ಶಾಮನೂರು ಮತ್ತು ಸಿದ್ದೇಶ್ವರ ಎರಡೂ ಕುಟುಂಬಗಳ ಹೆಣ್ಣುಮಕ್ಕಳು ಮೊದಲ ಬಾರಿಗೆ ಚುನಾವಣಗೆ ಸ್ಪರ್ಧಿಸಿದರೂ ಕ್ಷೇತ್ರದ ಮತದಾರರಿಗೆ ಇವರಿಬ್ಬರೂ ಹೊಸಬರು ಎಂಬ ಭಾವನೆ ಇಲ್ಲದೆ.

ಕಳೆದ ಎರಡು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಂ ಸಿದ್ದೇಶ್ವರ ಗೆಲವು ಸಾಧಿಸಿದ್ದಾರೆ. 2014ರ ಲೋಕಸಭೇ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಂ ಸಿದ್ದೇಶ್ವರ 5,18,894 ಮತಗಳನ್ನು ಪಡೆಯುವ ಮೂಲಕ ಎಸ್​​​.ಎಸ್​ ಮಲ್ಲಿಕಾರ್ಜುನ್​ ಅವರಿಗೆ ಸೋಲುಣಿಸಿದ್ದರು. ಈ ಚುನಾವಣೆಯಲ್ಲಿ ಎಸ್​ಎಸ್​ ಮಲ್ಲಿಕಾರ್ಜುನ್​ ಅವರು 5,01,287 ಮತಗಳನ್ನು ಪಡೆದಿದ್ದರು.

2019ರ ಲೋಕಸಭೆ ಚುನಾವಣೆಯಲ್ಲಿ ಜಿ.ಎಂ ಸಿದ್ದೇಶ್ವರ್​ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಈ ಚುನಾವಣೆಲ್ಲಿ ಜಿಎಂ ಸಿದ್ದೇಶ್ವರ ಅವರು 6,52,996 ಮತಗಳನ್ನು ಪಡೆಯುವ ಮೂಲಕ ಗೆಲವು ಸಾಧಿಸಿದ್ದರು. ಇವರ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್​ನಿಂದ ಹೆಚ್​​.ಬಿ ಮಂಜಪ್ಪ ಸ್ಪರ್ಧಿಸಿದ್ದರು. ಇವರು 4,83,294 ಮತಗಳನ್ನು ಪಡೆದಿದ್ದರು.

ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:17 am, Tue, 4 June 24