ಇಂಡಿಯ ಬ್ಲಾಕ್-ಎನ್​ಡಿಎ ಈ ಎರಡಲ್ಲಿ ಚಂದ್ರಬಾಬು ನಾಯ್ಡು ಆಯ್ಕೆಯೇನು?

ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ದೆಹಲಿಯಲ್ಲಿ ಇಂಡಿಯ ಬ್ಲಾಕ್‌ನ ಸಭೆಯಲ್ಲಿ ಪಾಲ್ಗೊಳ್ಳುವರೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ. 16 ಲೋಕಸಭಾ ಸ್ಥಾನಗಳನ್ನು ಗೆದ್ದು ಕಿಂಗ್‌ಮೇಕರ್ ಆದ ಚಂದ್ರಬಾಬು ನಾಯ್ಡು, ನಾವು ಎನ್‌ಡಿಎಯಲ್ಲಿದ್ದೇವೆ. ಸಭೆಯಲ್ಲಿ ನಾನು ಭಾಗವಹಿಸಲಿದ್ದೇನೆ. ಎನ್‌ಡಿಎ ಸಭೆಯ ನಂತರ ಏನಾದರೂ ಸಂಭವಿಸಿದರೆ, ನಾನು ನಿಮಗೆ ಹೇಳುತ್ತೇನೆ ಎಂದು ತಿಳಿಸಿದ್ದಾರೆ.

ಇಂಡಿಯ ಬ್ಲಾಕ್-ಎನ್​ಡಿಎ ಈ ಎರಡಲ್ಲಿ ಚಂದ್ರಬಾಬು ನಾಯ್ಡು ಆಯ್ಕೆಯೇನು?
ಚಂದ್ರಬಾಬು ನಾಯ್ಡು
Follow us
ಸುಷ್ಮಾ ಚಕ್ರೆ
|

Updated on: Jun 05, 2024 | 3:13 PM

ನವದೆಹಲಿ: ಆಂಧ್ರಪ್ರದೇಶ ಲೋಕಸಭೆ (Andhra Pradesh Lok Sabha Elections) ಮತ್ತು ವಿಧಾನಸಭೆ ಚುನಾವಣೆಯಲ್ಲಿ (Andhra Pradesh Assembly Polls) ಭರ್ಜರಿ ಗೆಲುವು ಸಾಧಿಸಿರುವ ತೆಲುಗು ದೇಶಂ ಪಕ್ಷದ (TDP) ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು (Chandrababu Naidu) ಇದೀಗ ಕಿಂಗ್ ಮೇಕರ್ ಆಗಿದ್ದಾರೆ. ಅವರು ಎನ್​ಡಿಎಗೆ ಬೆಂಬಲ ನೀಡುತ್ತಾರೋ ಅಥವಾ ಇಂಡಿಯ ಬ್ಲಾಕ್​ಗೆ ಬೆಂಬಲ ನೀಡುತ್ತಾರೋ ಎಂಬ ಕುತೂಹಲ ಉಂಟಾಗಿದೆ. ಆದರೆ,

ಮುಂದಿನ ಕೇಂದ್ರ ಸರ್ಕಾರ ರಚಿಸುವ ನಿರೀಕ್ಷೆಯಲ್ಲಿರುವ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ ತಮ್ಮ ಬೆಂಬಲವನ್ನು ನೀಡುವುದಾಗಿ ಒತ್ತಿ ಹೇಳಿದ್ದಾರೆ. ಇಂಡಿಯ ಬಣಕ್ಕೆ ಚಂದ್ರಬಾಬು ನಾಯ್ಡು ಬೆಂಬಲ ನೀಡುತ್ತಾರೆ ಎಂಬ ವದಂತಿಗಳು ಹಬ್ಬಿರುವ ಬೆನ್ನಲ್ಲೇ ಅವರು ಈ ಸ್ಪಷ್ಟೀಕರಣ ನೀಡಿದ್ದಾರೆ.

ಇದನ್ನೂ ಓದಿ: ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎಗೆ ಸಹಾಯವಾಗಲಿದೆಯೇ ನಿತೀಶ್ ಕುಮಾರ್ ಯು-ಟರ್ನ್ ನಿರ್ಧಾರ?

ಇಂದು ದೆಹಲಿಯಲ್ಲಿ ಎನ್‌ಡಿಎ ಪಾಲುದಾರರ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿರುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು “ನಾನು ಎನ್‌ಡಿಎಯಲ್ಲಿದ್ದೇನೆ ಮತ್ತು ಸಭೆಗೆ ಹೋಗುತ್ತಿದ್ದೇನೆ” ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ. ಚಂದ್ರಬಾಬು ನಾಯ್ಡು ಅವರ ಪಕ್ಷವು 175 ಸ್ಥಾನಗಳಲ್ಲಿ 135 ಸ್ಥಾನಗಳೊಂದಿಗೆ ವಿಧಾನಸಭೆ ಚುನಾವಣೆಯಲ್ಲಿ ಮುನ್ನಡೆ ಸಾಧಿಸಿದೆ. ಅವರು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಮರಳಲು ಸಿದ್ಧರಾಗಿದ್ದಾರೆ. ಹಾಗೇ, 28 ಲೋಕಸಭಾ ಸ್ಥಾನಗಳಲ್ಲಿ 16 ಸ್ಥಾನಗಳನ್ನು ಟಿಡಿಪಿ ಗೆದ್ದಿದೆ.

ಟಿಡಿಪಿಯ ರಾಜ್ಯಮಟ್ಟದ ಮಿತ್ರಪಕ್ಷವಾದ ನಟ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷ 2 ಲೋಕಸಭಾ ಸ್ಥಾನಗಳು ಮತ್ತು 21 ವಿಧಾನಸಭಾ ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ. ಇಂದು ದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ಪವನ್ ಕಲ್ಯಾಣ್ ಕೂಡ ಭಾಗವಹಿಸಲಿದ್ದಾರೆ.

ಇದನ್ನೂ ಓದಿ: ಬಿಜೆಪಿ ನಾಯಕರೊಂದಿಗೆ ಇಂದು ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ಭೇಟಿ; ಕಿಂಗ್ ಮೇಕರ್​ಗಳ ನಿಲುವೇನು?

ಟಿಡಿಪಿಯ 16 ಲೋಕಸಭಾ ಸ್ಥಾನಗಳು ಸದ್ಯಕ್ಕೆ ಪ್ರಮುಖವಾಗಿವೆ. ಏಕೆಂದರೆ, ಬಿಜೆಪಿ ಎಕ್ಸಿಟ್ ಪೋಲ್​ನ ಸಮೀಕ್ಷೆಗಳಿಗೆ ವಿರುದ್ಧವಾಗಿ 272 ಸ್ಥಾನಗಳನ್ನು ಪಡೆದಿದೆ. ಬಹುಮತದ ಮಾರ್ಕ್ ಅನ್ನು ದಾಟಲು ವಿಫಲವಾಗಿದೆ ಮತ್ತು ಈಗ ಸರ್ಕಾರವನ್ನು ರಚಿಸಲು ಎನ್‌ಡಿಎ ಪಾಲುದಾರರಿಂದ ಸಕ್ರಿಯ ಬೆಂಬಲದ ಅಗತ್ಯವಿದೆ. ಇಂಡಿಯ ಬಣ ಟಿಡಿಪಿಯ ಬೆಂಬಲ ಪಡೆದರೆ ಎನ್​ಡಿಎಗೆ ಸಮಸ್ಯೆ ಉಂಟಾಗಲಿದೆ.

ಟಿಡಿಪಿ ನಾಯಕ ಅವರು 2019ರ ಸಾರ್ವತ್ರಿಕ ಚುನಾವಣೆಯ ಮೊದಲು ತೊರೆದು ಕಾಂಗ್ರೆಸ್ ನೇತೃತ್ವದ ಯುಪಿಎಗೆ ಸೇರುವ ಮೊದಲು ಎನ್‌ಡಿಎ ಭಾಗವಾಗಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ