N Biren Singh: 2ನೇ ಬಾರಿಗೆ ಮುಖ್ಯಮಂತ್ರಿ ಪಟ್ಟಕ್ಕೇರಲು ಸಜ್ಜಾದ ಹಿಗಾಂಗ್​ ಸರದಾರ ಬಿರೆನ್​ ಸಿಂಗ್​; ಕೈ ಬಿಟ್ಟು ಬಂದವರ ಅದೃಷ್ಟ !

ಎನ್​.ಬಿರೆನ್​ ಸಿಂಗ್​​ಗೆ ಈಗ 61 ವರ್ಷ. ಇವರ ಪೂರ್ತಿ ಹೆಸರು ನಾಂಗ್ತೋಂಬಮ್ ಬಿರೆನ್​ ಸಿಂಗ್. 1979ರಿಂದ 1993ರವರೆಗೆ ಸೇನೆಯಲ್ಲಿದ್ದವರು. ಗಡಿ ಭದ್ರತಾ ಪಡೆಯಲ್ಲಿ ಕೆಲಸ ಮಾಡಿ ವಾಪಸ್ ಬಂದ ಮೇಲೆ ಪತ್ರಕರ್ತರಾಗಿ ಕೆಲಸ ಮಾಡಿದ್ದಾರೆ.

N Biren Singh: 2ನೇ ಬಾರಿಗೆ ಮುಖ್ಯಮಂತ್ರಿ ಪಟ್ಟಕ್ಕೇರಲು ಸಜ್ಜಾದ ಹಿಗಾಂಗ್​ ಸರದಾರ ಬಿರೆನ್​ ಸಿಂಗ್​; ಕೈ ಬಿಟ್ಟು ಬಂದವರ ಅದೃಷ್ಟ !
ಎನ್​. ಬಿರೆನ್​ ಸಿಂಗ್​
Follow us
TV9 Web
| Updated By: Lakshmi Hegde

Updated on:Mar 10, 2022 | 3:10 PM

ಮಣಿಪುರದಲ್ಲಿ ಎರಡು ಹಂತದಲ್ಲಿ ನಡೆದ ವಿಧಾನಸಭೆ ಚುನಾವಣೆ (Manipur Assembly Election)  ಮತ ಎಣಿಕೆ ಇಂದು ನಡೆಯುತ್ತಿದೆ. ಅಲ್ಲಿ ಬಿಜೆಪಿ ಮುನ್ನಡೆಯಲ್ಲಿದ್ದು, ಕಾಂಗ್ರೆಸ್​ ಎರಡನೇ ಸ್ಥಾನದಲ್ಲಿದೆ. ಹಿಗಾಂಗ್​ ಕ್ಷೇತ್ರದಲ್ಲಿ ಗೆದ್ದಿರುವ ಎನ್​.ಬಿರೆನ್​ ಸಿಂಗ್ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಹುದ್ದೆಗೆ ಏರುವ ಸಿದ್ಧತೆಯಲ್ಲಿದ್ದಾರೆ. ಇಂದು ಬೆಳಗ್ಗೆ ಮತ ಎಣಿಕೆಗೂ ಮೊದಲು ದೇವರಿಗೆ ಪೂಜೆ ಸಲ್ಲಿಸಿದ್ದ ಬಿರೆನ್​ ಸಿಂಗ್​, ಮುಂದಿನ ಐದುವರ್ಷದಲ್ಲೂ ಬಿಜೆಪಿ ಆಡಳಿತ ಇರಲಿದೆ ಎಂಬ ಭರವಸೆ ವ್ಯಕ್ತಪಡಿಸಿದ್ದರು. ಅದರಂತೆ ಅವರೀಗ ಸಿಎಂ ಹುದ್ದೆಗೆ ಮತ್ತೊಮ್ಮೆ ಏರಿದ್ದಾರೆ. ಎನ್​.ಬಿರೆನ್​ ಸಿಂಗ್​​ಗೆ ಈಗ 61 ವರ್ಷ. ಇವರ ಪೂರ್ತಿ ಹೆಸರು ನಾಂಗ್ತೋಂಬಮ್ ಬಿರೆನ್​ ಸಿಂಗ್. 1979ರಿಂದ 1993ರವರೆಗೆ ಸೇನೆಯಲ್ಲಿದ್ದವರು. ಗಡಿ ಭದ್ರತಾ ಪಡೆಯಲ್ಲಿ ಕೆಲಸ ಮಾಡಿ ವಾಪಸ್ ಬಂದ ಮೇಲೆ ಪತ್ರಕರ್ತರಾಗಿ ಕೆಲಸ ಮಾಡಿದ್ದಾರೆ. ಇವರೊಬ್ಬ ಫೂಟ್​ಬಾಲ್ ಆಟಗಾರ ಕೂಡ ಹೌದು. ಒಂದು ಬಹುಮುಖ ಪ್ರತಿಭೆಯುಳ್ಳ ವ್ಯಕ್ತಿತ್ವ ಎಂದರೆ ತಪ್ಪಾಗಲಾರದು.

ರಾಜಕೀಯ ಜೀವನ

ಎನ್. ಬಿರೆನ್​ ಸಿಂಗ್ ರಾಜಕೀಯಕ್ಕೆ ಸೇರಿದ್ದು 2002ರಲ್ಲಿ. ಮೊದಲು ಅವರು ಡೆಮಾಕ್ರಟಿಕ್ ರೆವಲ್ಯೂಷನರಿ ಪೀಪಲ್ಸ್ ಪಾರ್ಟಿ ಸೇರ್ಪಡೆಗೊಂಡು, ಹಿಗಾಂಗ್​​​ನಿಂದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಆದರೆ 2003ರಲ್ಲಿ ಕಾಂಗ್ರೆಸ್​ ಪಕ್ಷಕ್ಕೆ ಸೇರಿದ್ದರು. 2007ರಲ್ಲಿ ಕಾಂಗ್ರೆಸ್​ನಿಂದ ಇದೇ ಕ್ಷೇತ್ರದಲ್ಲಿ ಗೆದ್ದರು. ಮಣಿಪುರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಯುವಜನ ಅಭಿವೃದ್ಧಿ ಮತ್ತು ಕ್ರೀಡಾ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮತ್ತೆ 2012ರಲ್ಲೂ ಹೈಜಾಂಗ್ ಕ್ಷೇತ್ರದಿಂದ ಗೆದ್ದು, ಅದು ತಮಗೆ ಸೋಲುಣಿಸದ ಕ್ಷೇತ್ರ ಎಂಬುದನ್ನು ಸಾಧಿಸಿ ತೋರಿಸಿದರು. ಆದರೆ 2016ರ ಹೊತ್ತಿಗೆ ಮತ್ತೊಮ್ಮೆ ಪಕ್ಷಾಂತರ ಮಾಡಿದ ಅವರು ಬಿಜೆಪಿಗೆ ಸೇರ್ಪಡೆಯಾದರು. 2017ರ ವಿಧಾನಸಭೆ ಚುನಾವಣೆಯಲ್ಲಿ ಹಿಗಾಂಗ್​  ​​ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದಿದ್ದಾರೆ. ಬಳಿಕ ಇಲ್ಲಿ ಬಿಜೆಪಿ ಇನ್ನಿತರ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದ ನಂತರ ಎನ್. ಬಿರೆನ್​ ಸಿಂಗ್​ ಮುಖ್ಯಮಂತ್ರಿಯಾಗಿ ನೇಮಕಗೊಂಡರು.

ಕಾರ್ಯವೈಖರಿ ಹೇಗಿತ್ತು?

2017ರಲ್ಲಿ ಚುನಾವಣೆ ನಂತರ ಅದೇ ವರ್ಷ ಮಾರ್ಚ್​ 15ರಂದು ಎನ್​. ಬಿರೆನ್​ ಸಿಂಗ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ಮಣಿಪುರದ ಮೊದಲ ಬಿಜೆಪಿ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು.  2018ರಲ್ಲಿ ಮಣಿಪುರದ ಸಾರ್ವಜನಿಕ ಶಾಲೆಯ ಹೊಸ ಕಟ್ಟಡ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದಾರೆ. ಈ ಯೋಜನೆಯನ್ನು ಮಣಿಪುರ ಅಲ್ಪಸಂಖ್ಯಾತ ಮತ್ತು ಒಬಿಸಿ ಆರ್ಥಿಕ ಅಭಿವೃದ್ಧಿ ಸೊಸೈಟಿ ಕೈಗೆತ್ತಿಕೊಂಡಿದೆ. ಇದು ಸುಮಾರು 10.80 ಕೋಟಿ ರೂಪಾಯಿ ವೆಚ್ಚದ ಯೋಜನೆಯಾಗಿದೆ. ಈ ಹೊಸ ಕಟ್ಟಡದಲ್ಲಿ ತರಗತಿ ಕೋಣೆಗಳು, ಮುಖ್ಯ ಶಿಕ್ಷಕರ ಕೊಠಡಿ, ಕಾಮನ್​ ರೂಂ, ಲೈಬ್ರರಿ, ಪ್ರಯೋಗಾಲಯಗಳು, ಶೌಚಗೃಹಗಳು, ಬಾಲಕರು-ಬಾಲಕಿಯರಿಗೆ ಪ್ರತ್ಯೇಕ ಹಾಸ್ಟೆಲ್​ಗಳು ಇರಲಿವೆ.

ಹಾಗೇ, 2018ರಲ್ಲಿ ಬಿರೆನ್​ ಸಿಂಗ್, ಫರ್ಜಾಲ್ ಜಿಲ್ಲೆಯಲ್ಲಿ ಪರ್ಬಂಗ್​​ನಲ್ಲಿ ರಾಜ್ಯ ಮಟ್ಟದ ಶುಂಠಿ ಉತ್ಸವಕ್ಕೆ ಚಾಲನೆ ನೀಡಿದ್ದಾರೆ. ಗುಡ್ಡಗಾಡು ಪ್ರದೇಶಗಳಲ್ಲಿ ಜನರು ಶುಂಠಿ ಕೃಷಿ ಮಾಡುತ್ತಿದ್ದು, ಅದಕ್ಕೆ ಉತ್ತೇಜನ ನೀಡುವ ಸಲುವಾಗಿ ಈ ಉತ್ಸವ ಪ್ರಾರಂಭಿಸಿದ್ದು, ಅಂದಿನಿಂದಲೂ ನಡೆದುಕೊಂಡು ಬಂದಿದೆ. ಇದರಿಂದ ಶುಂಠಿ ಬೆಳೆಗಾರರಿಗೆ ತುಂಬ ಅನುಕೂಲವಾಗಿದ್ದಾಗಿ ಅವರೇ ಹೇಳಿಕೊಂಡಿದ್ದಾರೆ.  ಇನ್ನು 2020ರಲ್ಲಿ ಒಂದು ಬಾರಿ ಮಣಿಪುರ ಬಿಜೆಪಿ ಸರ್ಕಾರದಲ್ಲಿ ಅಸ್ಥಿರತೆ ಮೂಡಿದ್ದರೂ, ಬಳಿಕ ಸರಿಯಾಗಿದೆ. ಈ ಬಾರಿಯೂ ಹಿಗಾಂಗ್​​ನಲ್ಲಿ 18 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದಾರೆ.

ಇದನ್ನೂ ಓದಿ: Yogi Adityanath: ಯೋಗಿಯಿಂದ ನೊಯ್ಡಾದ ಶಾಪ ವಿಮೋಚನೆ​; ಅಪಶಕುನವಾಗಿದ್ದ ಸ್ಥಳಕ್ಕೆ ಹೋದರೂ ಗೆದ್ದ ಸಿಎಂ ಆದಿತ್ಯನಾಥ್!

Published On - 3:09 pm, Thu, 10 March 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ