AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿಯ ಭಾರತದ ದೃಷ್ಟಿಯಲ್ಲಿ ಒಂದು ಸಿದ್ಧಾಂತ, ಭಾಷೆ ಇತರರಿಗಿಂತ ಶ್ರೇಷ್ಠ ಎಂದು ಭಾವಿಸುತ್ತದೆ: ರಾಹುಲ್ ಗಾಂಧಿ

Manipur Assembly Election 2022: ನಮ್ಮ ದೇಶದ ಪರಿಸ್ಥಿತಿಯ ಬಗ್ಗೆ ನಾನು ಸಂಸತ್ತಿನಲ್ಲಿ ಮಾತನಾಡಿದ್ದೇನೆ. ಅಲ್ಲಿ ನಾನು ನಮ್ಮ ದೇಶವನ್ನು ರಾಜ್ಯಗಳ ಒಕ್ಕೂಟ ಎಂದು ಬಣ್ಣಿಸಿದೆ. ಇದು ಸಂವಿಧಾನದಲ್ಲಿ ನಮ್ಮ ಭಾರತದ ವ್ಯಾಖ್ಯಾನವಾಗಿದೆ.

ಬಿಜೆಪಿಯ ಭಾರತದ ದೃಷ್ಟಿಯಲ್ಲಿ ಒಂದು ಸಿದ್ಧಾಂತ, ಭಾಷೆ ಇತರರಿಗಿಂತ ಶ್ರೇಷ್ಠ ಎಂದು ಭಾವಿಸುತ್ತದೆ: ರಾಹುಲ್ ಗಾಂಧಿ
ಇಂಫಾಲ್​​ನಲ್ಲಿ ರಾಹುಲ್ ಗಾಂಧಿ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Feb 21, 2022 | 2:47 PM

Share

ಇಂಫಾಲ್: ಮಣಿಪುರ  ವಿಧಾನಸಭೆ ಚುನಾವಣೆಗೆ (Manipur Elections 2022)ಪ್ರಚಾರ ನಡೆಸಿ ಇಂಫಾಲ್‌ನ ಹಪ್ತಾ ಕಾಂಗ್ಜೆಬುಂಗ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ (Congress) ಸಂಸದ ರಾಹುಲ್ ಗಾಂಧಿ (Rahul Gandhi), ಭಾರತದ ಎರಡು ದೃಷ್ಟಿಕೋನಗಳಿವೆ ಎಂದು ಹೇಳಿದ್ದಾರೆ. “ಒಂದು, ರಾಜ್ಯಗಳು ತಮ್ಮದೇ ಆದ ಭಾಷೆ, ಸಂಸ್ಕೃತಿ ಮತ್ತು ತಮ್ಮನ್ನು ತಾವು ನೋಡುವ ರೀತಿಯನ್ನು ಹೊಂದಲು ಹಕ್ಕನ್ನು ಹೊಂದಿವೆ – ಇದನ್ನು ಕಾಂಗ್ರೆಸ್ ಬೆಂಬಲಿಸುತ್ತದೆ”. “ಇನ್ನೊಂದು ದೃಷ್ಟಿ ಬಿಜೆಪಿ ಹೊಂದಿದ್ದು, ಒಂದು ಸಿದ್ಧಾಂತ, ಭಾಷೆ ಮತ್ತು ಕಲ್ಪನೆಯು ಇತರರಿಗಿಂತ ಶ್ರೇಷ್ಠವಾಗಿದೆ ಎಂದು ಭಾವಿಸುತ್ತಿದ. ನಾವು ಇದರ ವಿರುದ್ಧ ಹೋರಾಡುತ್ತಿದ್ದೇವೆ. ಬಿಜೆಪಿ ಮಣಿಪುರಕ್ಕೆ ಈ ಶ್ರೇಷ್ಠತೆಯ ಭಾವನೆಯೊಂದಿಗೆ ಬರುತ್ತದೆ ಎಂದು ರಾಹುಲ್ ಹೇಳಿದ್ದಾರೆ.  ಸಂಸತ್ತಿನಲ್ಲಿ ತಮ್ಮ ಭಾಷಣದ ಘಟನೆಯನ್ನು ಪುನರುಚ್ಚರಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಅಮಿತ್ ಶಾ ಅವರು ಮಣಿಪುರದ ನಾಯಕರನ್ನು ತಮ್ಮ ಮನೆಗೆ ಕರೆದು ಶೂಗಳನ್ನು ತೆಗೆಯುವಂತೆ ಹೇಳುವುದು ನನಗೆ ಇಷ್ಟವಾಗಲಿಲ್ಲ” ಎಂದು ಹೇಳಿದರು. ಇದು ನಮ್ಮ ಸಂಸ್ಕೃತಿ ಎಂದು ಸಂಸತ್ತಿನಲ್ಲಿ ಹಿರಿಯ ಸಂಸದರೊಬ್ಬರು ಹೇಳಿದರು. “ಸರಿ, ಯಾರನ್ನಾದರೂ ನನ್ನ ಮನೆಗೆ ಆಹ್ವಾನಿಸಿ ತಾನು ಬೂಟು ಧರಿಸಿಕೊಂಡಿರುವಾಗಲೇ ಅವರ ಬೂಟುಗಳನ್ನು ತೆಗೆಯಲು ಹೇಳುವುದು ಸಂಸ್ಕೃತಿ ಅಲ್ಲ. ಅವರನ್ನು ಹೀಗೆ ಅವಮಾನಿಸಬಾರದು. ಇದು ಅವರ ಸಂಸ್ಕೃತಿಯಾಗಿರಬಹುದು, ನನ್ನದಲ್ಲ” ಎಂದು ರಾಹುಲ್ ಹೇಳಿದರು.

ರಾಹುಲ್ ಭಾಷಣದ ಮುಖ್ಯಾಂಶಗಳು

  1. ನಮ್ಮ ದೇಶದ ಪರಿಸ್ಥಿತಿಯ ಬಗ್ಗೆ ನಾನು ಸಂಸತ್ತಿನಲ್ಲಿ ಮಾತನಾಡಿದ್ದೇನೆ. ಅಲ್ಲಿ ನಾನು ನಮ್ಮ ದೇಶವನ್ನು ರಾಜ್ಯಗಳ ಒಕ್ಕೂಟ ಎಂದು ಬಣ್ಣಿಸಿದೆ. ಇದು ಸಂವಿಧಾನದಲ್ಲಿ ನಮ್ಮ ಭಾರತದ ವ್ಯಾಖ್ಯಾನವಾಗಿದೆ.
  2. ಸಂವಿಧಾನದಲ್ಲಿ, ನಾವು ನಮ್ಮನ್ನು ರಾಜ್ಯಗಳ ಒಕ್ಕೂಟ ಎಂದು ವ್ಯಾಖ್ಯಾನಿಸಲು ಆಯ್ಕೆ ಮಾಡಿಕೊಂಡಿದ್ದೇವೆ. ನಾನು ವಿನಮ್ರತೆಯಿಂದ ಬರುತ್ತೇನೆ ಏಕೆಂದರೆ ನೀವು ನಮಗೆ ಬಹಳಷ್ಟು ನೀಡಿದ್ದಾರೆ, ನಾನು ನಿಮ್ಮಿಂದ ಕಲಿಯಲು ಬಹಳಷ್ಟು ಇದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ವೈವಿಧ್ಯಮಯ ಬುಡಕಟ್ಟುಗಳಿಂದ, ಕಣಿವೆಯಿಂದ, ಬೆಟ್ಟಗಳಿಂದ, ಇಲ್ಲಿನ ಪ್ರತಿಯೊಬ್ಬರಿಂದ ಕಲಿಯಲು ಇದೆ.
  3. ಬಿಜೆಪಿ ಮತ್ತು ಆರ್ ಎಸ್ಎಸ್ ಮಣಿಪುರಕ್ಕೆ ಬಂದಾಗ ಅವರು ಗೌರವದಿಂದ ಬರುವುದಿಲ್ಲ, ತಿಳುವಳಿಕೆಯಿಂದ ಬರುವುದಿಲ್ಲ. ಅವರು ಶ್ರೇಷ್ಠತೆಯ ಭಾವನೆಯೊಂದಿಗೆ ಬರುತ್ತಾರೆ. ನಾನು ಇಲ್ಲಿಗೆ ಬಂದಾಗ, ನಾನು ಶ್ರೇಷ್ಠತೆಯ ಭಾವನೆಯಿಂದ ಬರುವುದಿಲ್ಲ, ವಿನಮ್ರತೆಯಿಂದ ಬರುತ್ತೇನೆ.

ಇದನ್ನೂ ಓದಿ:Viral Video: ಪಾದ ಮುಟ್ಟಿ ನಮಸ್ಕರಿಸಿದ ಬಿಜೆಪಿ ನಾಯಕನಿಗೆ ಸನ್ನೆಯಲ್ಲೇ ಪಾಠ ಮಾಡಿದ ಪ್ರಧಾನಿ ನರೇಂದ್ರ ಮೋದಿ

Published On - 1:58 pm, Mon, 21 February 22

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?