Manipur Assembly Elections 2022: ಮಣಿಪುರ ವಿಧಾನಸಭಾ ಚುನಾವಣೆ ದಿನಾಂಕ ಬದಲಾವಣೆ; ಹೊಸ ಪಟ್ಟಿ ಹೀಗಿದೆ
ಮಣಿಪುರದಲ್ಲಿ ಮೊದಲ ಹಂತದ ಚುನಾವಣೆ ಫೆ. 28ರಂದು ನಡೆಯಲಿದ್ದು, ಎರಡನೇ ಹಂತದ ಮತದಾನ ಮಾರ್ಚ್ 3ರ ಬದಲು ಮಾರ್ಚ್ 5ರಂದು ನಡೆಯಲಿದೆ. ಮಾರ್ಚ್ 10ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ನವದೆಹಲಿ: ಮಣಿಪುರ ವಿಧಾನಸಭಾ ಚುನಾವಣೆ (Manipur Assembly Election) ದಿನಾಂಕವನ್ನು ಬದಲಾವಣೆ ಮಾಡಲಾಗಿದೆ. ಫೆ. 27ರ ಬದಲಿಗೆ ಫೆ. 28ರಂದು ಮಣಿಪುರದಲ್ಲಿ ಮೊದಲ ಹಂತದ ಚುನಾವಣೆ ನಡೆಯಲಿದೆ. ಮಾ. 3ರ ಬದಲಿಗೆ ಮಾ. 5ರಂದು 2ನೇ ಹಂತದ ಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮಾಹಿತಿ ನೀಡಿದೆ. ಇಂದು ಚುನಾವಣಾ ಆಯೋಗವು (Election Commission) ಮಣಿಪುರ ವಿಧಾನಸಭಾ ಚುನಾವಣೆಯ ಮತದಾನದ ದಿನಾಂಕವನ್ನು (Election Date) ಪರಿಷ್ಕರಿಸಿದೆ.
ಮಣಿಪುರದಲ್ಲಿ ಮೊದಲ ಹಂತದ ಚುನಾವಣೆ ಫೆ. 28ರಂದು ನಡೆಯಲಿದ್ದು, ಎರಡನೇ ಹಂತದ ಮತದಾನ ಮಾರ್ಚ್ 3ರ ಬದಲು ಮಾರ್ಚ್ 5ರಂದು ನಡೆಯಲಿದೆ. ಮಾರ್ಚ್ 10ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಮುಂಬರುವ ಚುನಾವಣೆಗೆ ಇಂಫಾಲ್ ಪೂರ್ವ ಜಿಲ್ಲೆಯ ಹೀಂಗಾಂಗ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಮಣಿಪುರದಲ್ಲಿ ಒಟ್ಟು 60 ಸ್ಥಾನಗಳಿವೆ. ಮತದಾರರ ಪಟ್ಟಿಯ ಪ್ರಕಾರ ಒಟ್ಟು ಮತದಾರರ ಸಂಖ್ಯೆ 20,56,901 ಇದೆ.
ಇದನ್ನೂ ಓದಿ: ಮಣಿಪುರ ವಿಧಾನಸಭೆ ಚುನಾವಣೆ; 40 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್
Published On - 7:17 pm, Thu, 10 February 22