AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Northeast Election Result 2023: ತ್ರಿಪುರಾ, ನಾಗಾಲ್ಯಾಂಡ್‌, ಮೇಘಾಲಯ ಅಧಿಕಾರದ ಚುಕ್ಕಾಣಿ ಯಾರಿಗೆ? ನಾಳೆ ಫಲಿತಾಂಶ

ತ್ರಿಪುರಾ, ನಾಗಾಲ್ಯಾಂಡ್‌ ಹಾಗೂ ಮೇಘಾಲಯ ವಿಧಾನಸಭೆಗೆ ನಡೆದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮಾರ್ಚ್ 2ರಂದು ನಡೆಯಲಿದ್ದು, ಫಲಿತಾಂಶ ಪ್ರಕಟವಾಗಲಿದೆ.

Northeast Election Result 2023: ತ್ರಿಪುರಾ, ನಾಗಾಲ್ಯಾಂಡ್‌, ಮೇಘಾಲಯ ಅಧಿಕಾರದ ಚುಕ್ಕಾಣಿ ಯಾರಿಗೆ? ನಾಳೆ ಫಲಿತಾಂಶ
ಸಾಂದರ್ಭಿಕ ಚಿತ್ರ
Ganapathi Sharma
| Updated By: Digi Tech Desk|

Updated on:Mar 01, 2023 | 6:58 PM

Share

ನವದೆಹಲಿ: ತ್ರಿಪುರಾ, ನಾಗಾಲ್ಯಾಂಡ್‌ ಹಾಗೂ ಮೇಘಾಲಯ ವಿಧಾನಸಭೆಗೆ ನಡೆದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮಾರ್ಚ್ 2ರಂದು ನಡೆಯಲಿದ್ದು, ಫಲಿತಾಂಶ (Northeast Election Result 2023) ಪ್ರಕಟವಾಗಲಿದೆ. ತ್ರಿಪುರಾ (Tripura), ನಾಗಾಲ್ಯಾಂಡ್‌ನಲ್ಲಿ (Nagaland) ಬಿಜೆಪಿ ಭರ್ಜರಿ ಗೆಲುವು ಸಾಧಿಸಲಿದ್ದು, ಮೇಘಾಲಯದಲ್ಲಿ (meghalaya) ಜಿದ್ದಾಜಿದ್ದಿನ ಪೈಪೋಟಿ ಏರ್ಪಡಲಿದೆ ಎಂದು ಎಕ್ಸಿಟ್​​​ಪೋಲ್​ಗಳು ಭವಿಷ್ಯ ನುಡಿದಿರುವುದು ಕುತೂಹಲ ಹೆಚ್ಚಳಕ್ಕೆ ಕಾರಣವಾಗಿದೆ. ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ. ಸಂಜೆ ವೇಳೆಗೆ ಫಲಿತಾಂಶದ ಸ್ಪಷ್ಟ ಚಿತ್ರಣ ಸಿಗಲಿದೆ. ಈಶಾನ್ಯ ರಾಜ್ಯಗಳ ಒಟ್ಟು 180 ಸ್ಥಾನಗಳಿಗೆ ಫೆಬ್ರುವರಿ 16 ಮತ್ತು 28ರಂದು ಮತದಾನ ನಡೆದಿತ್ತು.

ಪ್ರಸ್ತುತ ನಾಗಾಲ್ಯಾಂಡ್‌ನಲ್ಲಿ ಎನ್‌ಡಿಪಿಪಿ ಮತ್ತು ಬಿಜೆಪಿ ಮೈತ್ರಿ ಸರ್ಕಾರಿ ಅಸ್ತಿತ್ವದಲ್ಲಿದ್ದು, ಎನ್‌ಡಿಪಿಪಿಯ ನೀಫಿಯು ರಿಯೊ ಮುಖ್ಯಮಂತ್ರಿಯಾಗಿದ್ದಾರೆ. ತ್ರಿಪುರಾದಲ್ಲಿ ಬಿಜೆಪಿ ಮತ್ತು ಐಪಿಎಫ್‌ಟಿ ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದು, ಮಾಣಿಕ್‌ ಶಾ ಮುಖ್ಯಮಂತ್ರಿಯಾಗಿದ್ದಾರೆ. ಎನ್‌ಪಿಪಿ ಮುಖ್ಯಸ್ಥ ಕಾನ್ರಾಡ್ ಕೆ. ಸಂಗ್ಮಾ ಹಲವು ಪಕ್ಷಗಳ ಜತೆ ಮೈತ್ರಿ ಮಾಡಿಕೊಂಡು ಮೇಘಾಲಯದಲ್ಲಿ ಸರ್ಕಾರ ಮುನ್ನಡೆಸುತ್ತಿದ್ದಾರೆ.

ಚುನಾವಣಾ ಫಲಿತಾಂಶದ ಅಪ್​ಡೇಟ್​​ಗಳು ಟಿವಿ9 ಕನ್ನಡ ಡಿಜಿಟಲ್​​​ನ ‘ಚುನಾವಣೆ​ 2023’ ಪುಟದಲ್ಲಿ ಹಾಗೂ ಚುನಾವಣಾ ಆಯೋಗದ ವೆಬ್​ಸೈಟ್​ನಲ್ಲಿ ದೊರೆಯಲಿದೆ.

ಉಪ ಚುನಾವಣೆ ಫಲಿತಾಂಶವೂ ನಾಳೆ ಪ್ರಕಟ

ಮಹಾರಾಷ್ಟ್ರದ ಕಸಬಾ ಪೇಠ್, ಚಿಂಚವಾಡ್, ತಮಿಳುನಾಡಿನ ಈರೋಡ್, ಪಶ್ಚಿಮ ಬಂಗಾಳದ ಸಾಗರ್​ದಿಘಿ, ಜಾರ್ಖಂಡ್​​​ನ ರಾಮಗಢ ಹಾಗೂ ಅರುಣಾಚಲ ಪ್ರದೇಶದ ಲುಮ್ಲಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಗಳ ಫಲಿತಾಂಶವೂ ನಾಳೆ ಪ್ರಕಟವಾಗಲಿದೆ.

ಎಕ್ಸಿಟ್​ ಪೋಲ್ ನುಡಿದ ಭವಿಷ್ಯವೇನು?

ತ್ರಿಪುರಾದಲ್ಲಿ ಬಿಜೆಪಿ ಸುಲಭವಾಗಿ ಬಹುಮತ ಪಡೆಯಲಿದ್ದು, ನಾಗಾಲ್ಯಾಂಡ್‌ನಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಮೇಘಾಲಯದಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಡೆಯಲಿದೆ ಎಂದು ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಿದ್ದವು. ಮೇಘಾಲಯದಲ್ಲಿ ಕಾನ್ರಾಡ್ ಸಂಗ್ಮಾ ಅವರ ಎನ್‌ಪಿಪಿ (ನ್ಯಾಷನಲ್ ಪೀಪಲ್ಸ್ ಪಾರ್ಟಿ) ಏಕೈಕ ಬೃಹತ್ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆಯಿದೆ ಎಂದು ಎಕ್ಸಿಟ್​ಪೋಲ್​ಗಳು ಹೇಳಿವೆ.

ಇದನ್ನೂ ಓದಿ: Exit Polls: ತ್ರಿಪುರಾ, ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಭರ್ಜರಿ ಗೆಲುವು, ಮೇಘಾಲಯದಲ್ಲಿ ಜಿದ್ದಾಜಿದ್ದಿನ ಪೈಪೋಟಿ; ಎಕ್ಸಿಟ್ ಪೋಲ್‌ ಭವಿಷ್ಯ ನುಡಿ

ತ್ರಿಪುರಾದ 60 ಸ್ಥಾನಗಳ ವಿಧಾನಸಭೆಯಲ್ಲಿ ಬಹುಮತಕ್ಕೆ 31 ಸೀಟು ಬೇಕು. 30 ವರ್ಷಗಳಿಗೂ ಹೆಚ್ಚು ಕಾಲ ರಾಜ್ಯವನ್ನು ಆಳಿದ ಎಡಪಕ್ಷಗಳು ಈ ಬಾರಿ ಕೇವಲ 12 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಇಲ್ಲಿ ಕಾಂಗ್ರೆಸ್​​ಗೆ ಸೀಟು ಸಿಗುವುದಿಲ್ಲ ಎಂದು ಎಕ್ಸಿಟ್​​ಪೋಲ್ ಭವಿಷ್ಯ ನುಡಿದಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:38 pm, Wed, 1 March 23