ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಚರಣ್‌ಜಿತ್ ಸಿಂಗ್ ಸಹೋದರ ಮನೋಹರ್ ಸಿಂಗ್ ಚನ್ನಿ
ವೈದ್ಯರಾಗಿರುವ ಮತ್ತು ಸರ್ಕಾರದ ಹಿರಿಯ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಮನೋಹರ್ ಸಿಂಗ್, ಕುಟುಂಬದಿಂದ ಯಾವುದೇ ಒತ್ತಡವಿಲ್ಲ ಮತ್ತು ಅವರ ನಿರ್ಧಾರವು ಕೇವಲ ಸಾರ್ವಜನಿಕರ ಬೇಡಿಕೆಯನ್ನು ಆಧರಿಸಿದೆ ಎಂದು ಹೇಳಿದರು.
ಚಂಡೀಗಢ: ಪಂಜಾಬ್ (Punjab) ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ(Charanjit Singh) ಅವರ ಸಹೋದರ ಮನೋಹರ್ ಸಿಂಗ್ ಅವರು ಕಾಂಗ್ರೆಸ್ನಿಂದ ಟಿಕೆಟ್ ಪಡೆಯುವ ನಿರೀಕ್ಷೆಯಲ್ಲಿದ್ದ ಬಸ್ಸಿ ಪಠಾನಾ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷವು ಶಾಸಕ ಗುರುಪ್ರೀತ್ ಸಿಂಗ್ ಜಿಪಿ ಅವರನ್ನು ಕ್ಷೇತ್ರದಿಂದ ಕಣಕ್ಕಿಳಿಸಿದೆ. ಪಕ್ಷದ ನಿರ್ಧಾರವನ್ನು ‘ಅನ್ಯಾಯ’ ಎಂದು ಕರೆದಿರುವ ಮನೋಹರ್ ಸಿಂಗ್ ಚನ್ನಿ ಇದು ಕ್ಷೇತ್ರದ ಜನತೆಗೆ ಮಾಡುತ್ತಿರುವ ಅನ್ಯಾಯವಾಗಿದೆ. “ಬಸ್ಸಿ ಪಠಾಣ ಪ್ರದೇಶದ ಹಲವಾರು ಪ್ರಮುಖರು ಪಕ್ಷೇತರರಾಗಿ ಕಣಕ್ಕಿಳಿಯುವಂತೆ ನನ್ನನ್ನು ಕೇಳಿದ್ದಾರೆ ಮತ್ತು ಅವರು ಹೇಳಿದಂತೆ ನಾನು ಪಾಲಿಸುತ್ತೇನೆ. ಹಿಂದೆ ಸರಿಯುವ ಯಾವುದೇ ಅವಕಾಶವಿಲ್ಲ ಮತ್ತು ನಾನು ಖಂಡಿತವಾಗಿಯೂ ಚುನಾವಣೆಯಲ್ಲಿ ಹೋರಾಡುತ್ತೇನೆ ಎಂದು ಮನೋಹರ್ ಸಿಂಗ್ ಫೋನ್ ಮೂಲಕ ಪಿಟಿಐಗೆ ತಿಳಿಸಿದ್ದಾರೆ.ಮನೋಹರ್ ಅವರು ಸಹೋದರನ ಜೊತೆ ಮಾತನಾಡಿ ತಮ್ಮ ನಿರ್ಧಾರವನ್ನು ಮನವರಿಕೆ ಮಾಡಿಕೊಡುವುದಾಗಿ ಹೇಳಿದರು. ಅವರನ್ನು ಕಣಕ್ಕಿಳಿಸದಿರುವ ನಿರ್ಧಾರ ಕಾಂಗ್ರೆಸ್‌ನ ಒಂದು ಕುಟುಂಬ ಒಂದು ಟಿಕೆಟ್ ಸೂತ್ರದ ಪ್ರಕಾರ ಅಲ್ಲ ಎಂದು ಮನೋಹರ್ ಸಿಂಗ್ ಅವರು ಸಂಸದರ ಸಂಬಂಧಿಕರಿಗೆ ಟಿಕೆಟ್ ಪಡೆದ ಕನಿಷ್ಠ ಎರಡು ಉದಾಹರಣೆಗಳನ್ನು ಉಲ್ಲೇಖಿಸಿದ್ದಾರೆ. ಪಕ್ಷವು ಜಲಂಧರ್ ಸಂಸದ ಸಂತೋಖ್ ಸಿಂಗ್ ಚೌಧರಿ ಅವರ ಪುತ್ರ ವಿಕ್ರಮಜಿತ್ ಸಿಂಗ್ ಚೌಧರಿ ಅವರನ್ನು ಫಿಲೌರ್ ಕ್ಷೇತ್ರದಿಂದ ಕಣಕ್ಕಿಳಿಸಿದೆ ಎಂದು ಅವರು ಹೇಳಿದರು. ಫತೇಘರ್ ಸಾಹಿಬ್ ಸಂಸದ ಅಮರ್ ಸಿಂಗ್ ಅವರ ಪುತ್ರ ಕಮಿಲ್ ಅಮರ್ ಸಿಂಗ್ ಅವರಿಗೆ ರಾಯ್ಕೋಟ್ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಶನಿವಾರ ಪಕ್ಷವು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ, ಚಮ್ಕೌರ್ ಸಾಹಿಬ್ ನಿಂದ ಸ್ಪರ್ಧಿಸಲಿದ್ದಾರೆ.
ವೈದ್ಯರಾಗಿರುವ ಮತ್ತು ಸರ್ಕಾರದ ಹಿರಿಯ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಮನೋಹರ್ ಸಿಂಗ್, ಕುಟುಂಬದಿಂದ ಯಾವುದೇ ಒತ್ತಡವಿಲ್ಲ ಮತ್ತು ಅವರ ನಿರ್ಧಾರವು ಕೇವಲ ಸಾರ್ವಜನಿಕರ ಬೇಡಿಕೆಯನ್ನು ಆಧರಿಸಿದೆ ಎಂದು ಹೇಳಿದರು. ಕಳೆದ ವರ್ಷ ಸರ್ಕಾರಿ ಸೇವೆಗೆ ರಾಜೀನಾಮೆ ನೀಡಿದ್ದರು. ಮೊಹಾಲಿಯ ಖರಾರ್ ಸಿವಿಲ್ ಆಸ್ಪತ್ರೆಯಲ್ಲಿ ಅವರ ಕೊನೆಯ ಪೋಸ್ಟಿಂಗ್ ಆಗಿತ್ತು. ಸರ್ಕಾರಿ ಸೇವೆಗೆ ರಾಜೀನಾಮೆ ನೀಡಿದ್ದರಿಂದ ರಾಜಕೀಯಕ್ಕೆ ಪಾದಾರ್ಪಣೆ ಮಾಡುವ ಇಚ್ಛೆ ಇದೆ ಎಂದರು.
ಮನೋಹರ್ ಅರಿವಳಿಕೆ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು, ಕುರುಕ್ಷೇತ್ರ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ. ಚಂಡೀಗಢದ ಪಂಜಾಬ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿಯನ್ನೂ ಪಡೆದಿದ್ದಾರೆ. ಅವರು ಪಂಜಾಬ್ ಸಿವಿಲ್ ಮೆಡಿಕಲ್ ಸರ್ವಿಸಸ್ ಅಸೋಸಿಯೇಷನ್‌ನ ಉಪಾಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
ಇದನ್ನೂ ಓದಿ: Joginder Singh Mann ಕಾಂಗ್ರೆಸ್ ಪಕ್ಷ ತೊರೆದ ಪಂಜಾಬ್ನ ಮಾಜಿ ಸಚಿವ ಜೋಗಿಂದರ್ ಸಿಂಗ್ ಮಾನ್