Joginder Singh Mann ಕಾಂಗ್ರೆಸ್ ಪಕ್ಷ ತೊರೆದ ಪಂಜಾಬ್​​ನ ಮಾಜಿ ಸಚಿವ ಜೋಗಿಂದರ್ ಸಿಂಗ್ ಮಾನ್

ವಾಲ್ಮೀಕಿ ಮಾಧ್ವಿ ಸಿಖ್ ಆಗಿರುವ ಮಾನ್ ಅವರು ತಮ್ಮ ಭವಿಷ್ಯದ ಯೋಜನೆಗಳನ್ನು ಬಹಿರಂಗಪಡಿಸದಿದ್ದರೂ, ಅವರು ಆಮ್ ಆದ್ಮಿ ಪಕ್ಷದೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಮತ್ತು ಮುಂಬರುವ ದಿನಗಳಲ್ಲಿ ಎಎಪಿ ಸೇರುವ ಸಾಧ್ಯತೆಯಿದೆ.

Joginder Singh Mann ಕಾಂಗ್ರೆಸ್ ಪಕ್ಷ ತೊರೆದ ಪಂಜಾಬ್​​ನ ಮಾಜಿ ಸಚಿವ ಜೋಗಿಂದರ್ ಸಿಂಗ್ ಮಾನ್
ಜೋಗಿಂದರ್ ಸಿಂಗ್ ಮಾನ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jan 14, 2022 | 2:21 PM

ಜಲಂಧರ್: ಪಂಜಾಬ್‌ನ (Punjab) ಮಾಜಿ ಸಚಿವ ಮತ್ತು ಫಗ್ವಾರಾದಲ್ಲಿ ಪಕ್ಷದ ಪರಿಶಿಷ್ಟ ಜಾತಿ (SC) ನಾಯಕ ಜೋಗಿಂದರ್ ಸಿಂಗ್ ಮಾನ್ ( Joginder Singh Mann) ಅವರು ಕಾಂಗ್ರೆಸ್‌ನೊಂದಿಗೆ ಐದು ದಶಕಗಳ ಕಾಲದ ಸಂಬಂಧವನ್ನು ಮುರಿದುಕೊಂಡು ಶುಕ್ರವಾರ ಕಾಂಗ್ರೆಸ್‌ಗೆ ಮತ್ತು ಪಂಜಾಬ್ ಆಗ್ರೋ ಇಂಡಸ್ಟ್ರೀಸ್ ಕಾರ್ಪೊರೇಷನ್‌ನ(ಕ್ಯಾಬಿನೆಟ್ ಶ್ರೇಣಿ) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ವಾಲ್ಮೀಕಿ ಮಾಧ್ವಿ ಸಿಖ್ ಆಗಿರುವ ಮಾನ್ ಅವರು ತಮ್ಮ ಭವಿಷ್ಯದ ಯೋಜನೆಗಳನ್ನು ಬಹಿರಂಗಪಡಿಸದಿದ್ದರೂ, ಅವರು ಆಮ್ ಆದ್ಮಿ (Aam Aadmi Party) ಪಕ್ಷದೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಮತ್ತು ಮುಂಬರುವ ದಿನಗಳಲ್ಲಿ ಎಎಪಿ ಸೇರುವ ಸಾಧ್ಯತೆಯಿದೆ ಎಂದು ದಿ ಇಂಡಿಯನ್ ಎಕ್ಸ್​​ಪ್ರೆಸ್ ವರದಿ ಮಾಡಿದೆ.

ಬಿಯಾಂತ್ ಸಿಂಗ್, ಎಚ್‌ಎಸ್ ಬ್ರಾರ್, ರಾಜಿಂದರ್ ಕೌರ್ ಭಟ್ಟಾಲ್ ಮತ್ತು ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಸಂಪುಟದಲ್ಲಿ ಸಚಿವರಾಗಿದ್ದ, ಫಗ್ವಾರದಿಂದ ಮೂರು ಬಾರಿ ಶಾಸಕರಾಗಿರುವ ಮಾನ್, ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರಿಗೆ ಬರೆದ ಭಾವನಾತ್ಮಕ ಪತ್ರದಲ್ಲಿ, “ನಾನು ಸತ್ತಾಗ ಕಾಂಗ್ರೆಸ್ ತ್ರಿವರ್ಣ ಧ್ವಜವನ್ನು ನನ್ನ ದೇಹಕ್ಕೆ ಸುತ್ತಿಕೊಳ್ಳಬಹುದು ಎಂದು ನಾನು ಕನಸು ಕಂಡೆ. ಆದರೆ ಪೋಸ್ಟ್- ಮೆಟ್ರಿಕ್ ವಿದ್ಯಾರ್ಥಿವೇತನ ಹಗರಣದಲ್ಲಿ ಕಾಂಗ್ರೆಸ್ ತಪ್ಪಿತಸ್ಥ ಎಂದಾಗ ನನ್ನ ಆತ್ಮಸಾಕ್ಷಿಯು ನನ್ನನ್ನು ಇಲ್ಲಿ ಉಳಿಯಲು ಬಿಡುವುದಿಲ್ಲ ಎಂದಿದ್ದಾರೆ.

ಕ್ಯಾಪ್ಟನ್ ಅಮರಿಂದರ್ ಸಿಂಗ್, ನವಜೋತ್ ಸಿಂಗ್ ಸಿಧು ಮುಂತಾದ ಮಹಾರಾಜರು, ಜಮೀನ್ದಾರರು, ಹಣದ ಚೀಲಗಳು ಮತ್ತು ಅವಕಾಶವಾದಿಗಳು ಪಟ್ಟಭದ್ರ ರಾಜಕೀಯ ಹಿತಾಸಕ್ತಿಗಳಿಗಾಗಿ ಪಕ್ಷಕ್ಕೆ ಬಂದರು.ಇದರಿಂದಾಗಿ ಪಕ್ಷವು ತನ್ನ ಮೂಲ ಮೌಲ್ಯಗಳಿಂದ ದೂರ ಸರಿಯಿತು ಮತ್ತು ಕೇವಲ ಚುನಾವಣೆಯಲ್ಲಿ ಸ್ಪರ್ಧಿಸುವತ್ತ, ಅಧಿಕಾರ ಹಿಡಿಯುವ ಬಗ್ಗೆ ಗಮನ ಹರಿಸಿತು ಎಂದಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ಅವರು ಹಗರಣದಿಂದ ವೃತ್ತಿಜೀವನವನ್ನು ನಾಶಪಡಿಸಿದ ಲಕ್ಷಾಂತರ ಎಸ್‌ಸಿ ವಿದ್ಯಾರ್ಥಿಗಳ ಆಲೋಚನೆಗಳಿಂದ ನಾನು ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೇನೆ ಎಂದು ಅವರು ಹೇಳಿದರು. “ಅದೇ ಪಕ್ಷದ ನಾಯಕಿ ದಿವಂಗತ ಇಂದಿರಾಗಾಂಧಿ ಅವರು ಬೆಲ್ಚಿ (ಬಿಹಾರ) ದಲ್ಲಿ ಕೊಲ್ಲಲ್ಪಟ್ಟ ಎಸ್‌ಸಿ ಸಮುದಾಯದ ಸದಸ್ಯರ ಸಾವಿಗೆ ಸಂತಾಪ ಸೂಚಿಸಲು, ಕೆಟ್ಟ ವಾತಾವರಣದಲ್ಲಿ ಬೇರೆ ಯಾವುದೇ ವಾಹನ ಲಭ್ಯವಿಲ್ಲದ ಕಾರಣ ಆನೆಯ ಮೇಲೆ ಸವಾರಿ ಮಾಡಿದರು. ಮೆಟ್ರಿಕ್ ನಂತರದ ಸ್ಕಾಲರ್‌ಶಿಪ್ ಹಗರಣದಿಂದ ವೃತ್ತಿ ಜೀವನವೇ ನಾಶವಾಗಿರುವ ಎಸ್‌ಸಿ ವಿದ್ಯಾರ್ಥಿಗಳ ರಕ್ತದಲ್ಲಿ ಇಂದು ಕಾಂಗ್ರೆಸ್ ನಾಯಕರು ಒದ್ದೆಯಾಗಿದ್ದಾರೆ” ಎಂದು ಮಾನ್ ಟೀಕಿಸಿದರು.

ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ಹಾಲಿ ಸಿಎಂ ಚರಣ್​​ಜಿತ್ ಸಿಂಗ್ ಚನ್ನಿ ಅವರ ಮುಂದೆ ಫಗ್ವಾರಾಗೆ ಜಿಲ್ಲಾ ಸ್ಥಾನಮಾನ ನೀಡಿ ಎಂದು ಪದೇ ಪದೇ ಕೇಳಿದ್ದೇನೆ ಎಂದು ಮಾನ್ ಹೇಳಿದರು. ಏಕೆಂದರೆ ಈ ಪ್ರದೇಶದ ನಿವಾಸಿಗಳು ಜಿಲ್ಲಾ ಕೇಂದ್ರದಲ್ಲಿ ಆಡಳಿತಾತ್ಮಕ ಕೆಲಸಗಳನ್ನು ಮಾಡಲು ಕಪುರ್ಥಾಲಾಕ್ಕೆ 40 ಕಿ.ಮೀ. ಪ್ರಯಾಣಿಸಬೇಕು. ಫಗ್ವಾರಾ ನಿವಾಸಿಗಳ ಬಹುಕಾಲದ ಬೇಡಿಕೆಯನ್ನು ಮುಖ್ಯಮಂತ್ರಿಗಳು ನಿರ್ಲಕ್ಷಿಸಿದ್ದಾರೆ ಎಂದು ಮಾನ್ ಹೇಳಿದ್ದಾರೆ.

ಇದನ್ನೂ ಓದಿ: Uttar Pradesh Election 2022: ಬಿಜೆಪಿಯಿಂದ 8 ಬಂಡಾಯ ನಾಯಕರು ಇಂದು ಸಮಾಜವಾದಿ ಪಕ್ಷ ಸೇರ್ಪಡೆ ಸಾಧ್ಯತೆ

Published On - 2:01 pm, Fri, 14 January 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್