ಗುರು ರವಿದಾಸ್ ಜನ್ಮದಿನ ಹಿನ್ನೆಲೆ; ಪಂಜಾಬ್ ವಿಧಾನಸಭಾ ಚುನಾವಣೆ ದಿನಾಂಕ ಮುಂದೂಡುವಂತೆ ಸಿಎಂ ಚನ್ನಿ ಮನವಿ

ಗುರು ರವಿದಾಸ್ ಜನ್ಮದಿನ ಹಿನ್ನೆಲೆ; ಪಂಜಾಬ್ ವಿಧಾನಸಭಾ ಚುನಾವಣೆ ದಿನಾಂಕ ಮುಂದೂಡುವಂತೆ ಸಿಎಂ ಚನ್ನಿ ಮನವಿ
ಚರಣ್​​ಜಿತ್ ಸಿಂಗ್ ಚನ್ನಿ

ರಾಜ್ಯದಿಂದ ಎಸ್​ಸಿ ಸಮಾಜದ ಅನೇಕರು ಗುರು ರವಿದಾಸ್ ಜನ್ಮದಿನ ಹಿನ್ನೆಲೆ ವಾರಾಣಸಿಗೆ ತೆರಳುತ್ತಾರೆ. ಹಾಗಾಗಿ ಫೆಬ್ರವರಿ 14ರ ಚುನಾವಣೆ ಮುಂದೂಡುವಂತೆ ಮನವಿ ಮಾಡಿದ್ದಾರೆ. 6 ದಿನಗಳ ಕಾಲ ಚುನಾವಣೆ ಮುಂದೂಡಲು ಮನವಿ ಮಾಡಿದ್ದಾರೆ.

TV9kannada Web Team

| Edited By: ganapathi bhat

Jan 16, 2022 | 11:01 AM

ದೆಹಲಿ: ಪಂಜಾಬ್ ವಿಧಾನಸಭಾ ಚುನಾವಣೆ ದಿನಾಂಕ ಮುಂದೂಡುವಂತೆ ಪಂಜಾಬ್ ಮುಖ್ಯಮಂತ್ರಿ ಚರಣ್​ಜಿತ್ ಸಿಂಗ್ ಚನ್ನಿ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ. ಕೇಂದ್ರ ಚುನಾವಣಾ ಆಯೋಗದ (Central Election Commission) ಸಿಇಸಿ ಸುಶೀಲ್ ಚಂದ್ರ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗೆ (Assembly Elections 2021) ದಿನಾಂಕ ಪ್ರಕಟ ಮಾಡಿದ್ದರು. ಉತ್ತರ ಪ್ರದೇಶ, ಉತ್ತರಾಖಂಡ್, ಮಣಿಪುರ, ಪಂಜಾಬ್, ಗೋವಾ ರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟ ಮಾಡಿದ್ದರು. ಅದರಂತೆ, ಫೆಬ್ರವರಿ 14ರಂದು ಪಂಜಾಬ್‌ನ 117 ಕ್ಷೇತ್ರಗಳಿಗೆ ಮತದಾನ ಎಂದು ಘೋಷಣೆ ಆಗಿತ್ತು.

ಆದರೆ, ಫೆಬ್ರವರಿ 16 ರಂದು ಗುರು ರವಿದಾಸ್​ ಜನ್ಮದಿನ ಹಿನ್ನೆಲೆ ಚುನಾವಣೆ ಮುಂದೂಡುವಂತೆ ಪಂಜಾಬ್​ ಮುಖ್ಯಮಂತ್ರಿ ಚರಣ್​ಜಿತ್ ಸಿಂಗ್ ಚನ್ನಿ ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಫೆಬ್ರವರಿ 14ರ ವಿಧಾನಸಭೆ ಚುನಾವಣೆಯನ್ನು 6 ದಿನ ಮುಂದೂಡಲು ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಮುಖ್ಯ ಚುನಾವಣಾ ಆಯುಕ್ತರಿಗೆ ಜನವರಿ 13ರಂದು ಪತ್ರ ಬರೆದು ಚನ್ನಿ ಮನವಿ ಮಾಡಿದ್ದಾರೆ.

ರಾಜ್ಯದಿಂದ ಎಸ್​ಸಿ ಸಮಾಜದ ಅನೇಕರು ಗುರು ರವಿದಾಸ್ ಜನ್ಮದಿನ ಹಿನ್ನೆಲೆ ವಾರಣಾಸಿಗೆ ತೆರಳುತ್ತಾರೆ. ಹಾಗಾಗಿ ಫೆಬ್ರವರಿ 14ರ ಚುನಾವಣೆ ಮುಂದೂಡುವಂತೆ ಮನವಿ ಮಾಡಿದ್ದಾರೆ. 6 ದಿನಗಳ ಕಾಲ ಚುನಾವಣೆ ಮುಂದೂಡಲು ಮನವಿ ಮಾಡಿದ್ದಾರೆ.

ಅಭ್ಯರ್ಥಿಗಳಿಗೆ ಚುನಾವಣಾ ವೆಚ್ಚವನ್ನು ಮಿತಿಗೊಳಿಸಿದ ಆಯೋಗ

ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆ ಬಗ್ಗೆ ಮಾಹಿತಿ ಪ್ರಕಟಿಸಬೇಕು. ಆಯಾ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಬೇಕು. KNOW YOUR CANDIDATE ಆ್ಯಪ್‌ನಲ್ಲಿ ಮಾಹಿತಿ ನೀಡಬೇಕು. ಪಕ್ಷದ ವೆಬ್​ಸೈಟ್​ನ ಮುಖಪುಟದಲ್ಲಿ ಮಾಹಿತಿ ನೀಡಬೇಕು. ಗೋವಾ, ಮಣಿಪುರದಲ್ಲಿ ಚುನಾವಣಾ ವೆಚ್ಚ 28 ಲಕ್ಷ ರೂ. ಆಗಿರಲಿದೆ. ಉತ್ತರಾಖಂಡ್, ಉತ್ತರ ಪ್ರದೇಶ, ಪಂಜಾಬ್​ನಲ್ಲಿ 40 ಲಕ್ಷ ಆಗಿರಲಿದೆ ಎಂದು ಅಭ್ಯರ್ಥಿಗಳಿಗೆ ಚುನಾವಣಾ ವೆಚ್ಚವನ್ನು ಆಯೋಗ ಮಿತಿಗೊಳಿಸಿತ್ತು.

ರಾಜಕೀಯ ಪಕ್ಷಗಳು ವರ್ಚುವಲ್ ರಾಲಿ ಮಾಡಲು ಆದ್ಯತೆ; ಕೊರೊನಾ ಹಿನ್ನೆಲೆ ಹಲವು ನಿರ್ಬಂಧ

ಮತದಾನ ಅವಧಿ 1 ಗಂಟೆ ವಿಸ್ತರಿಸಲಾಗುವುದು. ರಾಜಕೀಯ ಪಕ್ಷಗಳು ವರ್ಚುವಲ್ ರಾಲಿ ಮಾಡಲು ಆದ್ಯತೆ ನೀಡಲಾಗುವುದು ಎಂದು ಹೇಳಲಾಗಿತ್ತು. ಪಾದಯಾತ್ರೆ, ರೋಡ್‌ಶೋ, ರಾಲಿಗಳಿಗೆ, ಸಾರ್ವಜನಿಕ ಸಭೆಗಳಿಗೆ ಅವಕಾಶವಿಲ್ಲ. ಸಾರ್ವಜನಿಕ ಸಭೆಗಳಿಗೆ ಜನವರಿ 15ರವರೆಗೆ ನಿರ್ಬಂಧ ಇರಲಿದೆ. ಗೆಲುವಿನ ಬಳಿಕ ಸಾರ್ವಜನಿಕ ಸಂಭ್ರಮಾಚರಣೆಗೆ ಅವಕಾಶವಿಲ್ಲ. ಮನೆ ಮನೆ ಪ್ರಚಾರಕ್ಕೆ ಐವರು ಮಾತ್ರ ತೆರಳಲು ಅವಕಾಶ ಇರಲಿದೆ. ರಾತ್ರಿ 8 ಗಂಟೆ ಬಳಿಕ ಚುನಾವಣಾ ಪ್ರಚಾರಕ್ಕೆ ನಿರ್ಬಂಧ ಹಾಕಲಾಗಿದೆ. ದ್ವೇಷದ ಭಾಷಣ ಮಾಡುವಂತಿಲ್ಲ ಎಂದು ಸೂಚಿಸಲಾಗಿತ್ತು.

ಇದನ್ನೂ ಓದಿ: ಪಂಜಾಬ್​ನಲ್ಲಿ ಪ್ರಧಾನಿ ಭದ್ರತೆಯಲ್ಲಿ ಲೋಪ ವಿಚಾರ; ನರೇಂದ್ರ ಮೋದಿ ಕ್ಷಮೆ ಕೋರಿದ ಪಂಜಾಬ್ ಸಿಎಂ ಚನ್ನಿ

ಇದನ್ನೂ ಓದಿ: Congress Candidate List Punjab: ಪಂಜಾಬ್​ನಲ್ಲಿ ಕಾಂಗ್ರೆಸ್​ನಿಂದ ನವಜೋತ್ ಸಿಂಗ್ ಸಿಧು, ಸಿಎಂ ಚನ್ನಿ ಸೇರಿ 86 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

Follow us on

Related Stories

Most Read Stories

Click on your DTH Provider to Add TV9 Kannada