AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲಂಗಾಣದಲ್ಲಿ ಕಾಂಗ್ರೆಸ್ ಸೂಪರ್ ಕಂಬ್ಯಾಕ್ ಮಾಡಲು ಪ್ರಮುಖ ಕಾರಣಗಳೇನು? ಗ್ಯಾರಂಟಿಗಳಾ, ಮುಸ್ಲಿಮ್ ವೋಟ್​ಗಳಾ?

Reasons of Congress Win In Telangana Elections: ತೆಲಂಗಾಣದ 118 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಸಂಖ್ಯೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಸ್ಥಾನ ಗೆಲ್ಲುತ್ತಿದೆ. ಕೆಸಿಆರ್ ನೇತೃತ್ವದ ಬಿಆರ್​ಎಸ್ ಸರ್ಕಾರ ವಿರುದ್ಧದ ಆಡಳಿತವಿರೋಧಿ ಅಲೆ ಬಿಜೆಪಿಗಿಂತ ಹೆಚ್ಚು ಕಾಂಗ್ರೆಸ್ ಕಡೆ ಬೀಸಿದೆ. ಗ್ಯಾರಂಟಿ ಭರವಸೆಗಳು, ಮುಸ್ಲಿಂ ಮತಗಳು, ಆಡಳಿತವಿರೋಧಿ ಅಲೆ ಇವು ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣವಾಗಿದೆ.

ತೆಲಂಗಾಣದಲ್ಲಿ ಕಾಂಗ್ರೆಸ್ ಸೂಪರ್ ಕಂಬ್ಯಾಕ್ ಮಾಡಲು ಪ್ರಮುಖ ಕಾರಣಗಳೇನು? ಗ್ಯಾರಂಟಿಗಳಾ, ಮುಸ್ಲಿಮ್ ವೋಟ್​ಗಳಾ?
ಕಾಂಗ್ರೆಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 03, 2023 | 1:16 PM

Share

ನವದೆಹಲಿ, ಡಿಸೆಂಬರ್ 3: ತೆಲಂಗಾಣದಲ್ಲಿ ಕೆ ಚಂದ್ರಶೇಖರ್ ರಾವ್ ಅವರ ಪ್ರಬಲ ಕೋಟೆಯನ್ನು ಕಾಂಗ್ರೆಸ್ ಭೇದಿಸುತ್ತಿದೆ. 118 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಪಕ್ಷ 65 ಸ್ಥಾನಗಳಲ್ಲಿ ಮುನ್ನಡೆ ಗಳಿಸಿದೆ. ತೆಲಂಗಾಣ ರಚನೆ ಆದಾಗಿನಿಂದ ಕಾಂಗ್ರೆಸ್ ಮೊದಲ ಬಾರಿಗೆ ಅಧಿಕಾರದ ಗದ್ದುಗೆ ಹಿಡಿಯುವ ಉಮೇದಿನಲ್ಲಿದೆ. ಕೆಸಿಆರ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿ ಅನಿರೀಕ್ಷಿತ ಸೋಲು (Telangana Assembly Elections) ಕಾಣುವ ಸಾಧ್ಯತೆ ಇದೆ. ಸ್ವತಃ ಸಿಎಂ ಕೆಸಿಆರ್ ಅವರೇ ವೈಯಕ್ತಿಕವಾಗಿ ತಮ್ಮ ಕ್ಷೇತ್ರದಲ್ಲಿ ಸೋಲುವ ಹಾದಿಯಲ್ಲಿದ್ದಾರೆ. ಇದೇ ವೇಳೆ, ತೆಲಂಗಾಣದಲ್ಲಿ ಆಡಳಿತಾರೂಢ ಬಿಎಸ್​ಆರ್ ಪಕ್ಷ ಸೋಲಲು ಮತ್ತು ಕಾಂಗ್ರೆಸ್ ಪಕ್ಷ ಗೆಲ್ಲಲು ಏನು ಕಾರಣ? ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ 7 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ಪಕ್ಷ ಈ ಪರಿ ಯಶಸ್ಸು ಕಾಣಲು ಏನು ಕಾರಣ?

ಕರ್ನಾಟಕ ಮಾದರಿಯಲ್ಲಿ ಕಾಂಗ್ರೆಸ್ ಗ್ಯಾರಂಟಿಗಳು

ಕರ್ನಾಟಕದಲ್ಲಿ ಕಾಂಗ್ರೆಸ್ ಕೊಟ್ಟ ಗ್ಯಾರಂಟಿ ಯೋಜನೆಗಳು ಜನಬೆಂಬಲ ಗಿಟ್ಟಿಸಿದ್ದವು. ಅದೇ ಮಾಡಲ್ ಅನ್ನು ಕಾಂಗ್ರೆಸ್ ತೆಲಂಗಾಣದಲ್ಲೂ ಹಾಕಿತು. ಅದು ವರ್ಕೌಟ್ ಆಗಿದೆ. ಮಹಿಳೆಯರ ಕಲ್ಯಾಣಕ್ಕಾಗಿ ಮಹಾಲಕ್ಷ್ಮೀ ಯೋಜನೆ; ರೈತರು ಮತ್ತು ಕೃಷಿ ಕಾರ್ಮಿಕರಿಗೆ ರೈತು ಭರೋಸಾ; ಬಡವರಿಗೆ ವಸತಿ ಕಲ್ಪಿಸುವ ಇಂದಿರಮ್ಮ ಯೋಜನೆ; ವಿದ್ಯುತ್ ಬಿಲ್​ಗೆ ಸಬ್ಸಿಡಿ ಕೊಡುವ ಗೃಹಜ್ಯೋತಿ; ಆರ್ಥಕವಾಗಿ ಹಿಂದುಳಿದ ಕುಟುಂಬದವರ ಮಕ್ಕಳಿಗೆ ನೆರವು ನೀಡುವ ಯುವ ವಿಕಾಸಂ; ಹಾಗು ಆರೋಗ್ಯ ಇನ್ಷೂರೆನ್ಸ್, ಪಿಂಚಣಿ ಒದಗಿಸುವ ಚೇಯುತ ಯೋಜನೆ, ಈ ಆರು ಗ್ಯಾರಂಟಿಗಳನ್ನು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ನೀಡಿತ್ತು.

ಇದನ್ನೂ ಓದಿ: Barrelakka Shireesha: ತೆಲಂಗಾಣದಲ್ಲಿ ಸಂಚಲನ ಸೃಷ್ಟಿಸಿರುವ ಬರ್ರೆಲಕ್ಕ; ಕೊಲ್ಲಾಪುರ ಕ್ಷೇತ್ರದಲ್ಲಿ ಎಮ್ಮೆ ಕಾಯುವ ಹುಡುಗಿ ಲೀಡಿಂಗ್

ಕಾಂಗ್ರೆಸ್ ಕೈ ಹಿಡಿದವಾ ಮುಸ್ಲಿಮ್ ವೋಟುಗಳು?

ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲಲು ಇದ್ದ ಕಾರಣಗಳಲ್ಲಿ ಒಂದು ಅಲ್ಪಸಂಖ್ಯಾತರ ವೋಟು. ಬಹುಸಂಖ್ಯೆಯ ಮುಸ್ಲಿಮ್ ಮತಗಳು ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣವಾಗಿದ್ದು ಹೌದು. ಅದೇ ರೀತಿ ತೆಲಂಗಾಣದಲ್ಲೂ ಹೆಚ್ಚಿನ ಮುಸ್ಲಿಮ್ ಮತಗಳು ಕಾಂಗ್ರೆಸ್​ಗೆ ಬಂದಿರುವಂತಿದೆ.

ಎಐಎಂಐಎಂ ಪಕ್ಷಕ್ಕೆ ಬಹಳ ಕಡಿಮೆ ಸ್ಥಾನಗಳು ಸಿಕ್ಕಿರುವುದು ಇದಕ್ಕೆ ಸಾಕ್ಷಿ. ಮುಸ್ಲಿಮ್ ಮತಗಳು ಕಾಂಗ್ರೆಸ್ ಪರವಾಗಿ ಧ್ರುವೀಕರಣ ಆಗಿರುವುದು ಸ್ಪಷ್ಟವಾಗಿದೆ.

ಬಿಜೆಪಿ ನಾಯಕತ್ವ ದುರ್ಬಲಗೊಂಡಿದ್ದು ಕಾಂಗ್ರೆಸ್​ಗೆ ಅನುಕೂಲವಾಯಿತಾ?

ತೆಲಂಗಾಣದಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಅಚ್ಚರಿ ರೀತಿಯಲ್ಲಿ ಬಲವೃದ್ಧಿ ಕಾಣುತ್ತಾ ಬಂದಿದೆ. ಆದರೆ, ಕೆಲ ತಿಂಗಳ ಹಿಂದೆ ಬಿಜೆಪಿಯ ತೆಲಂಗಾಣ ಘಟಕದ ಅಧ್ಯಕ್ಷ ಸ್ಥಾನದಿಂದ ಬಂಡಿ ಸಂಜಯ್ ಕೆಳಗಿಳಿಸಿ ಕಿಶನ್ ರೆಡ್ಡಿಗೆ ಕೊಡಲಾಯಿತು. ಇದು ಬಿಜೆಪಿಯನ್ನು ತೆಲಂಗಾಣದಲ್ಲಿ ದುರ್ಬಲಗೊಳಿಸಿತು ಎಂದು ಹೇಳಲಾಗುತ್ತಿದೆ.

ಕಳೆದ ಚುನಾವಣೆಯಲ್ಲಿ 5 ಸ್ಥಾನ ಗಳಿಸಿದ್ದ ಬಿಜೆಪಿ ಈ ಬಾರಿ ಸುಮಾರು 10 ಸ್ಥಾನ ಗಳಿಸುವ ಸಾಧ್ಯತೆ ಇದೆ. ಇದು ಬಿಜೆಪಿಯ ಬಲವೃದ್ಧಿ ಹೌದು. ಆದರೆ ಚುನಾವಣೆಗೆ ಮುನ್ನ ಬಿಜೆಪಿಯ ಆಂತರಿಕ ಸಮೀಕ್ಷೆಗಳು ಪಕ್ಷಕ್ಕೆ 25ಕ್ಕೂ ಹೆಚ್ಚು ಸ್ಥಾನಗಳು ಬರಬಹುದು ಎಂದು ಹೇಳಿದ್ದವು. ಆದರೆ ಹಾಗಾಗಲಿಲ್ಲ.

ಇದನ್ನೂ ಓದಿ: ತೆಲಂಗಾಣ: ಬಿಆರ್​ಎಸ್​ಗಿಂತ ಮುನ್ನಡೆ, ಕಾಂಗ್ರೆಸ್​ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ

ತೆಲಂಗಾಣದಲ್ಲಿ ಆಡಳಿತವಿರೋಧಿ ಅಲೆ ಇತ್ತು. ಬಿಜೆಪಿ ನಾಯಕತ್ವ ಪ್ರಬಲವಾಗಿದ್ದರೆ ಈ ಅಲೆಯ ಪ್ರಯೋಜನ ಪಡೆಯಬಹುದಿತ್ತು. ಆದರೆ, ಬಿಜೆಪಿ ನಾಯಕತ್ವ ದುರ್ಬಲಗೊಂಡಿದ್ದು, ಆಡಳಿತ ವಿರೋಧಿ ಅಲೆ ಹೆಚ್ಚಾಗಿ ಕಾಂಗ್ರೆಸ್ ಕಡೆ ವಾಲಿದಂತಿದೆ.

ಕಾಂಗ್ರೆಸ್ ಪ್ರಖರ ಪ್ರಚಾರ

ತೆಲಂಗಾಣ ಸರ್ಕಾರ ವಿರುದ್ಧದ ಭ್ರಷ್ಟಾಚಾರ ಆರೋಪದ ಪ್ರಕರಣಗಳನ್ನು ಕಾಂಗ್ರೆಸ್ ಬಹಳ ಚೆನ್ನಾಗಿ ಬಳಸಿಕೊಂಡಿತು. ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿನ ಸೂತ್ರಧಾರ ಸುನೀಲ್ ಕಾನುಗೋಲು ಅವರು ತೆಲಂಗಾಣ ಕಾಂಗ್ರೆಸ್​ನ ಸೋಷಿಯಲ್ ಮೀಡಿಯಾ ಚುಕ್ಕಾಣಿ ಹಿಡಿದಿದ್ದರು. ಕೆಸಿಆರ್ ನೇತೃತ್ವದ ಸರ್ಕಾರದ ಕರ್ಮಕಾಂಡಗಳನ್ನು ಕಾಂಗ್ರೆಸ್ ಸೋಷಿಯಲ್ ಮೀಡಿಯಾದಲ್ಲಿ ಚೆನ್ನಾಗಿ ಬಿಚ್ಚಿಡಲಾಗಿತ್ತು.

ಇನ್ನಷ್ಟು ಚುನಾವಣೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!