AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮಾಜವಾದಿ ಪಕ್ಷದ ಮೇಲೆ ಕ್ರಮಕೈಗೊಳ್ಳುತ್ತೀರಿ ಆದರೆ ಬಿಜೆಪಿ ಅಭ್ಯರ್ಥಿ ವಿರುದ್ಧ ಯಾಕಿಲ್ಲ?: ಅಖಿಲೇಶ್ ಯಾದವ್ 

Akhilesh Yadav ಅಖಿಲೇಶ್ ಯಾದವ್ ಅವರು ಹಂಚಿಕೊಂಡ ವಿಡಿಯೊದಲ್ಲಿ ನೂರಾರು ಜನರು - ಹಲವಾರು ಜನರು ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಪ್ರಚಾರ ಮಾಡುತ್ತಿದ್ದಾರೆ.

ಸಮಾಜವಾದಿ ಪಕ್ಷದ ಮೇಲೆ ಕ್ರಮಕೈಗೊಳ್ಳುತ್ತೀರಿ ಆದರೆ ಬಿಜೆಪಿ ಅಭ್ಯರ್ಥಿ ವಿರುದ್ಧ ಯಾಕಿಲ್ಲ?: ಅಖಿಲೇಶ್ ಯಾದವ್ 
ಅಖಿಲೇಶ್ ಯಾದವ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Jan 17, 2022 | 1:51 PM

Share

ಲಖನೌ: ಕೊವಿಡ್ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕಳೆದ ವಾರ ಸಮಾಜವಾದಿ ಪಕ್ಷಕ್ಕೆ (Samajwadi Party) ಚುನಾವಣಾ ಆಯೋಗದ ನೋಟಿಸ್ ನೀಡಿತ್ತು. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಅಖಿಲೇಶ್ ಯಾದವ್ (Akhilesh Yadav) ಇಂದು ಬಿಜೆಪಿ ಶಾಸಕರೊಬ್ಬರು ರೋಡ್‌ಶೋ ನಡೆಸುವ ವಿಡಿಯೊವನ್ನು ಟ್ವೀಟ್ ಮಾಡಿದ್ದಾರೆ. ಮುಂದಿನ ತಿಂಗಳ ಚುನಾವಣೆಗೆ ಮುಂಚಿತವಾಗಿ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ನಡೆದ ರೋಡ್ ಶೋ , ಇದು ನಿಯಮಗಳ ಉಲ್ಲಂಘನೆಯಾಗಿದೆ ಎಂದು ಅಖಿಲೇಶ್ ಟ್ವೀಟ್​​ನಲ್ಲಿ ಬರೆದಿದ್ದಾರೆ.  ಸರ್ಕಾರ ಮತ್ತು ಸ್ವತಃ ಘೋಷಿಸಿದಂತೆ ಕೊವಿಡ್ ಪ್ರೋಟೋಕಾಲ್‌ಗಳನ್ನು ಉಲ್ಲಂಘಿಸುವ ಎಲ್ಲಾ ಪಕ್ಷಗಳ ವಿರುದ್ಧ ಉನ್ನತ ಚುನಾವಣಾ ಸಂಸ್ಥೆ ಏಕರೂಪವಾಗಿ ಕಾರ್ಯನಿರ್ವಹಿಸಬೇಕೆಂದು ಅಖಿಲೇಶ್ ಒತ್ತಾಯಿಸಿದರು.  “ಸಮಾಜವಾದಿ ಪಕ್ಷದ ಕಚೇರಿ ಮತ್ತು ಕಾರ್ಯಕ್ರಮಗಳ ಮೇಲೆ ಸಂಪೂರ್ಣ ನಿಷೇಧವಿದೆ.ಆದರೆ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ ಸೋಲುತ್ತಾರೆ ಎಂದು ವ್ಯಂಗ್ಯದ ಭಾಷೆಯಲ್ಲಿ ಹೇಳಿದ ಅಖಿಲೇಶ್ ‘ಕೆಲವೇ ದಿನ ಬಾಕಿ ಇರುವ ಮುಖ್ಯಮಂತ್ರಿ’ ಮತ್ತು ಅಮ್ರೋಹಾದ ಬಿಜೆಪಿ ಅಭ್ಯರ್ಥಿ ಬಹಿರಂಗವಾಗಿ ಮಾದರಿ ಸಂಹಿತೆ ಮತ್ತು ಕೊವಿಡ್ ಮಾರ್ಗಸೂಚಿಗಳು ಲೇವಡಿ ಮಾಡುತ್ತಿದ್ದಾರೆ ಎಂದಿದ್ದಾರೆ.  ಅಖಿಲೇಶ್ ಯಾದವ್ ಅವರು ಹಂಚಿಕೊಂಡ ವಿಡಿಯೊದಲ್ಲಿ ನೂರಾರು ಜನರು – ಹಲವಾರು ಜನರು ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಪ್ರಚಾರ ಮಾಡುತ್ತಿದ್ದಾರೆ. ಜನವರಿ 22 ರವರೆಗೆ ರ್ಯಾಲಿಗಳು, ರೋಡ್‌ಶೋಗಳು, ನುಕ್ಕಡ್ ಸಭೆಗಳು (ರಸ್ತೆಬದಿಯ ಸಭೆಗಳು) ಅಥವಾ ಇತರ ಸಾರ್ವಜನಿಕ ಕಾರ್ಯಕ್ರಮಗಳನ್ನು ನಿಷೇಧಿಸಿರುವುದಾಗಿ ಚುನಾವಣಾ ಆಯೋಗ ಆದೇಶ ಹೊರಡಿಸಿತ್ತು.

ಬಿಜೆಪಿ ಮತ್ತು ಶಾಸಕ ಮಹೇಂದ್ರ ಖರಗವಂಶಿ ಇಬ್ಬರೂ ಇನ್ನೂ ಪ್ರತಿಕ್ರಿಯಿಸಿಲ್ಲ.

ಸಚಿವರಾದ ಸ್ವಾಮಿ ಪ್ರಸಾದ್ ಮೌರ್ಯ ಮತ್ತು ಧರಮ್ ಸಿಂಗ್ ಸೈನಿ ಸೇರಿದಂತೆ ಏಳು ಮಾಜಿ ಬಿಜೆಪಿ ಶಾಸಕರ ‘ವರ್ಚುವಲ್’ ಅಥವಾ ‘ಆನ್‌ಲೈನ್’ ಸೇರ್ಪಡೆಗಾಗಿ ಹೆಚ್ಚಿನ ಸಂಖ್ಯೆಯ ಜನರು ಜಮಾಯಿಸಿದ ನಂತರ ಶನಿವಾರ ಚುನಾವಣಾ ಆಯೋಗ ಸಮಾಜವಾದಿ ಪಕ್ಷದಿಂದ ವಿವರಣೆಯನ್ನು ಕೋರಿತು. ಸಮಾಜವಾದಿ ಪಕ್ಷದ ಕಾರ್ಯಕರ್ತರು ಎನ್ನಲಾದ 2,500 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಎಲ್ಲಾ ಕೊವಿಡ್ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಅನುಸರಿಸುವಂತೆ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರನ್ನು ಒತ್ತಾಯಿಸುವ ಮೂಲಕ ಅಖಿಲೇಶ್ ಯಾದವ್ ಇದಕ್ಕೆ ಪ್ರತಿಕ್ರಿಯಿಸಿದ್ದರು.

ಕೊವಿಡ್ ಪ್ರಕರಣಗಳ ಭಯಾನಕ ಉಲ್ಬಣ ಮತ್ತು ಸಾವಿರಾರು ಜನರು ಭಾಗವಹಿಸುವ ಚುನಾವಣಾ ರ್ಯಾಲಿಗಳು ಮತ್ತು ರೋಡ್‌ಶೋಗಳು ಸೂಪರ್-ಸ್ಪ್ರೆಡರ್ ಆಗಬಹುದು ಎಂಬ ಆತಂಕದ ಹೊರತಾಗಿಯೂ ಐದು ರಾಜ್ಯಗಳಾದ ಉತ್ತರ ಪ್ರದೇಶ, ಗೋವಾ, ಮಣಿಪುರ, ಉತ್ತರಾಖಂಡ ಮತ್ತು ಪಂಜಾಬ್ ನಲ್ಲಿ ಮುಂದಿನ ಎರಡು ತಿಂಗಳುಗಳಲ್ಲಿ ಚುನಾವಣೆ ನಡೆಯಲಿದೆ.

ಚುನಾವಣೆ ಮುಂದೂಡಬೇಕು ಎಂದು ಅಲಹಾಬಾದ್ ಹೈಕೋರ್ಟಿನ ಒಂದು ಮನವಿಯನ್ನು ಸಂವಿಧಾನವನ್ನು ಉಲ್ಲೇಖಿಸಿ ಚುನಾವಣಾ ಆಯೋಗವು ತಿರಸ್ಕರಿಸಿತು. ಅದೇ ವೇಳೆ ರ್ಯಾಲಿಗಳು ಮತ್ತು ರೋಡ್‌ಶೋಗಳ ನಿಷೇಧದಂತಹ ಕ್ರಮಗಳು ಸರಿಯಾಗಿ ಜಾರಿಯಾಗುವುದಿಲ್ಲ ಎಂದು ಆಯೋಗ ಹೇಳಿದೆ.  ಅಂದಿನಿಂದ ಚುನಾವಣಾ ಸಂಸ್ಥೆಯು ಕಾಂಗ್ರೆಸ್ ವಿರುದ್ಧವೂ ಗರಂ ಆಗಿದೆ. ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರನ್ನು ನಿನ್ನೆ ಉತ್ತರ ಪ್ರದೇಶದ  ನೋಯ್ಡಾದಲ್ಲಿ ಪ್ರಚಾರ ಮಾಡುವಾಗ ಪೊಲೀಸ್ ಪ್ರಕರಣದಲ್ಲಿ ದಾಖಲಾಗಿಸಲಾಗಿದೆ.

ಇದನ್ನೂ ಓದಿ: ಮುಂಬರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಹಸ್ತಿನಾಪುರ ಕದನಕ್ಕೆ ಸಿದ್ಧ ಎಂದ ಕಾಂಗ್ರೆಸ್‌ನ ಅರ್ಚನಾ ಗೌತಮ್

Published On - 1:39 pm, Mon, 17 January 22

ಕಿರೀಟಿ ಧಿಮಾಕು, ಕೊಬ್ಬಲ್ಲಿ ಬರುತ್ತಾನೆ ಅಂದಿಕೊಂಡಿದ್ವಿ: ರವಿಚಂದ್ರನ್
ಕಿರೀಟಿ ಧಿಮಾಕು, ಕೊಬ್ಬಲ್ಲಿ ಬರುತ್ತಾನೆ ಅಂದಿಕೊಂಡಿದ್ವಿ: ರವಿಚಂದ್ರನ್
ಸಿರಿಯಾ ಮೇಲೆ ಇಸ್ರೇಲ್ ದಾಳಿ; ಲೈವ್ ಮಧ್ಯದಲ್ಲೇ ಓಡಿಹೋದ ಟಿವಿ ನಿರೂಪಕಿ
ಸಿರಿಯಾ ಮೇಲೆ ಇಸ್ರೇಲ್ ದಾಳಿ; ಲೈವ್ ಮಧ್ಯದಲ್ಲೇ ಓಡಿಹೋದ ಟಿವಿ ನಿರೂಪಕಿ
ಸಂಧಾನದ ಮಾತು ನಡೆಯುವ ಬಗ್ಗೆ ನಿನ್ನೆ ವಿಜಯೇಂದ್ರ ಸುಳಿವು ನೀಡಿದ್ದರು
ಸಂಧಾನದ ಮಾತು ನಡೆಯುವ ಬಗ್ಗೆ ನಿನ್ನೆ ವಿಜಯೇಂದ್ರ ಸುಳಿವು ನೀಡಿದ್ದರು
ನಾನು ಮಂಗಳೂರು ಹುಡುಗಿ: ಹೆಮ್ಮೆಯಿಂದ ಹೇಳಿದ ಜೆನಿಲಿಯಾ ಡಿಸೋಜಾ
ನಾನು ಮಂಗಳೂರು ಹುಡುಗಿ: ಹೆಮ್ಮೆಯಿಂದ ಹೇಳಿದ ಜೆನಿಲಿಯಾ ಡಿಸೋಜಾ
ಸಿಗಂದೂರು ತೂಗು ಸೇತುವೆ ಮೇಲೆ ಸಂಚರಿಸುವುದೇ ಏನೋ ಒಂಥರಾ ಸಂತೋಷ, ಉಲ್ಲಾಸ
ಸಿಗಂದೂರು ತೂಗು ಸೇತುವೆ ಮೇಲೆ ಸಂಚರಿಸುವುದೇ ಏನೋ ಒಂಥರಾ ಸಂತೋಷ, ಉಲ್ಲಾಸ
ಸಾರಿಗೆ ನೌಕರರಿಗೆ 38 ತಿಂಗಳುಗಳ ಹಿಂಬಾಕಿ ಸರ್ಕಾರ ಕೊಡಬೇಕಿದೆ: ಸುಬ್ಬಾರಾವ್
ಸಾರಿಗೆ ನೌಕರರಿಗೆ 38 ತಿಂಗಳುಗಳ ಹಿಂಬಾಕಿ ಸರ್ಕಾರ ಕೊಡಬೇಕಿದೆ: ಸುಬ್ಬಾರಾವ್
ನಿಗಮಗಳಿಗೆ ಸದಸ್ಯರ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ: ಪರಮೇಶ್ವರ್
ನಿಗಮಗಳಿಗೆ ಸದಸ್ಯರ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ: ಪರಮೇಶ್ವರ್
ಚಾಮುಂಡಿ ತಾಯಿ ಆಶೀರ್ವಾದ ಪಡೆದ ದೊಡ್ಮನೆ ಹುಡುಗ್ರು
ಚಾಮುಂಡಿ ತಾಯಿ ಆಶೀರ್ವಾದ ಪಡೆದ ದೊಡ್ಮನೆ ಹುಡುಗ್ರು
ನಾನು ನೀಡಿದ ಚೆಕ್​ಗಳು ಬೌನ್ಸ್ ಆಗುವ ಚಾನ್ಸೇ ಇಲ್ಲ ಎಂದ ಕೆಜಿಎಫ್ ಬಾಬು
ನಾನು ನೀಡಿದ ಚೆಕ್​ಗಳು ಬೌನ್ಸ್ ಆಗುವ ಚಾನ್ಸೇ ಇಲ್ಲ ಎಂದ ಕೆಜಿಎಫ್ ಬಾಬು
ಬಾಲಸೋರ್​​ನಲ್ಲಿ ಬೃಹತ್ ಪ್ರತಿಭಟನೆ; ಪೊಲೀಸರಿಂದ ಜಲಫಿರಂಗಿ ಪ್ರಯೋಗ
ಬಾಲಸೋರ್​​ನಲ್ಲಿ ಬೃಹತ್ ಪ್ರತಿಭಟನೆ; ಪೊಲೀಸರಿಂದ ಜಲಫಿರಂಗಿ ಪ್ರಯೋಗ