ಟಿಕೆಟ್ ಪಕ್ಕಾ ಎಂದೇ ನಂಬಿಕೊಂಡಿದ್ದ ಕಾರ್ಯಕರ್ತನಿಗೆ ನಿರಾಸೆ; ಲಖನೌದಲ್ಲಿರುವ ಸಮಾಜವಾದಿ ಪಾರ್ಟಿ ಕಚೇರಿ ಎದುರು ಆತ್ಮಹತ್ಯೆಗೆ ಯತ್ನ
ಲಖನೌದ ವಿಕ್ರಮಾದಿತ್ಯ ಮಾರ್ಗದಲ್ಲಿ ಸಮಾಜವಾದಿ ಪಕ್ಷದ ಪ್ರಧಾನಕಚೇರಿಯಿದೆ. ಇಂದು ಅಲ್ಲಿಗೆ ಹೋದ ಆದಿತ್ಯಠಾಕೂರ್ ಕೂಗಾಡಿದ್ದಾರೆ. ನಂತರ ಏಕಾಏಕಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡಿದ್ದಾರೆ.
ಉತ್ತರಪ್ರದೇಶ ವಿಧಾನಸಭೆ ಚುನಾವಣೆ(Uttar Pradesh Assembly Election)ಯಲ್ಲಿ ಸ್ಪರ್ಧಿಸಲು ಪಕ್ಷದಿಂದ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ, ಸಮಾಜವಾದಿ ಪಾರ್ಟಿಯ ಕಾರ್ಯಕರ್ತನೊಬ್ಬ ಲಖನೌದಲ್ಲಿರುವ ಪಕ್ಷದ ಪ್ರಧಾನ ಕಚೇರಿ ಎದುರು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಇಂದು ನಡೆದಿದೆ. ಇವರು ಸಮಾಜವಾದಿ ಪಕ್ಷದ ಕಚೇರಿ ಎದುರು ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ್ದಾರೆ. ಈ ಕಾರ್ಯಕರ್ತನ ಹೆಸರು ಆದಿತ್ಯ ಠಾಕೂರ್. ಅಲಿಗಢ್ನ ಎಸ್ಪಿ ಕಾರ್ಯಕರ್ತ.
ಲಖನೌದ ವಿಕ್ರಮಾದಿತ್ಯ ಮಾರ್ಗದಲ್ಲಿ ಸಮಾಜವಾದಿ ಪಕ್ಷದ ಪ್ರಧಾನಕಚೇರಿಯಿದೆ. ಇಂದು ಅಲ್ಲಿಗೆ ಹೋದ ಆದಿತ್ಯಠಾಕೂರ್ ಕೂಗಾಡಿದ್ದಾರೆ. ನಂತರ ಏಕಾಏಕಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡಿದ್ದಾರೆ. ಅಲ್ಲಿಯೇ ಇದ್ದ ಇತರರು ಮತ್ತು ಪೊಲೀಸ್ ಸಿಬ್ಬಂದಿ ಆತನನ್ನು ತಡೆದಿದ್ದಾರೆ. ನಂತರ ಪೊಲೀಸರು ಆದಿತ್ಯ ಠಾಕೂರ್ನನ್ನು ವಶಕ್ಕೆ ಪಡೆದಿದ್ದಾರೆ. ಅಷ್ಟರಲ್ಲಿ ಸ್ಥಳದಲ್ಲಿ ಸೇರಿದ ಮಾಧ್ಯಮಗಳ ಎದುರು ಕೂಗಾಡಿದ ಆದಿತ್ಯ ಠಾಕೂರ್, ನಾನು ಇಂದು ಇಲ್ಲಿಯೇ ನನ್ನ ಪ್ರಾಣ ಕಳೆದುಕೊಳ್ಳುತ್ತಿದ್ದೇನೆ. ನನ್ನನ್ನು ಜೈಲಿಗೆ ಹಾಕಿ ತಡೆಯಲು ಸಾಧ್ಯವಿಲ್ಲ. ನನಗೆ ನ್ಯಾಯ ಬೇಕು ಎಂದು ತುಂಬ ಭಾವನಾತ್ಮಕವಾಗಿ, ಕಣ್ಣಲ್ಲಿ ನೀರು ಹಾಕುತ್ತ ಹೇಳಿದ್ದಾರೆ.
ಅಷ್ಟೇ ಅಲ್ಲ, ಟಿಕೆಟ್ ಕೊಡುತ್ತೇನೆ ಎಂದು ಭರವಸೆ ನೀಡಿದ್ದ ಸಮಾಜವಾದಿ ಪಕ್ಷದ ವರಿಷ್ಠರು ನನ್ನನ್ನು ದಿವಾಳಿ ಮಾಡಿದರು. ಆದರೆ ಹೊರಗಿನಿಂದ ಬಂದವರಿಗೇ ಟಿಕೆಟ್ ಕೊಡುತ್ತಿದ್ದಾರೆ. ನನಗೆ ಯಾವುದೇ ಕ್ರಿಮಿನಲ್ ಹಿನ್ನೆಲೆಯಲ್ಲಿ, ಪಕ್ಷಕ್ಕಾಗಿ ದುಡಿದಿದ್ದೇನೆ. ಆದರೆ ಸಮಾಜವಾದಿ ಪಕ್ಷ ಕ್ರಿಮಿನಲ್ಗಳಿಗೆ ಟಿಕೆಟ್ ಕೊಡುತ್ತಿದೆ. ನನಗೆ ಕೊಡುತ್ತಿಲ್ಲ ಎಂದೂ ಆದಿತ್ಯಠಾಕೂರ್ ಕೂಗಾಡಿದ್ದು ವಿಡಿಯೋದಲ್ಲಿ ಕೇಳಿಸುತ್ತದೆ.
ಈ ಬಾರಿ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಅಲಿಗಢ್ನ ಚಹರಾ ಕ್ಷೇತ್ರದಿಂದ ತಮಗೆ ಟಿಕೆಟ್ ಪಕ್ಕ ಎಂದೇ ಆದಿತ್ಯ ಠಾಕೂರ್ ಭರವಸೆ ಇಟ್ಟುಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ. ಆದರೆ ಅವರಿಗೆ ಟಿಕೆಟ್ ಕೈ ತಪ್ಪಿದೆ. ಇದು ಗೊತ್ತಾಗುತ್ತಿದ್ದಂತೆ ತೀವ್ರ ದುಃಖಿತರಾದ ಆದಿತ್ಯ ಠಾಕೂರ್ ಆತ್ಮಹತ್ಯೆಗೆ ಪ್ರಯತ್ನಪಟ್ಟಿದ್ದಾರೆ. ಅಂದಹಾಗೆ, ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಲೋಕ ದಳ ಮೈತ್ರಿಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಜನವರಿ 13ರಂದು 29 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿವೆ. ಈ 29ಜನರ ಪಟ್ಟಿಯಲ್ಲಿ ಸಮಾಜವಾದಿ ಪಕ್ಷದ 10 ಮತ್ತು ಆರ್ಎಲ್ಡಿಯ 19 ಜನರ ಹೆಸರು ಇದೆ.
Published On - 3:25 pm, Sun, 16 January 22