AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್ -19 ಜಿನ್​​ನ್ನು ಮೋದಿ ಸರ್ಕಾರ ಬಾಟಲಿಯೊಳಗೆ ಹಾಕಿದೆ: ಯೋಗಿ ಆದಿತ್ಯನಾಥ

ಕಾಂಗ್ರೆಸ್, ಎಸ್‌ಪಿ ಅಥವಾ ಬಿಎಸ್‌ಪಿ ಇರಲಿ, ಅವರಿಗೆ ಬಡವರು, ರೈತರು, ಮಧ್ಯಮ ಮತ್ತು ಸಣ್ಣ ಉದ್ಯಮಗಳ (ಎಂಎಸ್‌ಎಂಇ) ಬಗ್ಗೆ ಯಾವುದೇ ಸಹಾನುಭೂತಿ ಇರಲಿಲ್ಲ, ಅವರು ಇವರಿಗಾಗಿ ಏನನ್ನೂ ಮಾಡಲಿಲ್ಲ, ರೈತರ ಸಾಲ ಮನ್ನಾ ಮಾಡಲಿಲ್ಲ, ಶೌಚಾಲಯ, ಮನೆಗಳನ್ನು ನಿರ್ಮಿಸಲಿಲ್ಲ.  ಆರೋಗ್ಯ ಸೌಲಭ್ಯಗಳನ್ನು ಒದಗಿಸಲಾಗಿಲ್ಲ

ಕೊವಿಡ್ -19 ಜಿನ್​​ನ್ನು ಮೋದಿ ಸರ್ಕಾರ ಬಾಟಲಿಯೊಳಗೆ ಹಾಕಿದೆ: ಯೋಗಿ ಆದಿತ್ಯನಾಥ
ಯೋಗಿ ಆದಿತ್ಯನಾಥ
TV9 Web
| Edited By: |

Updated on:Feb 13, 2022 | 5:31 PM

Share

ಲಖನೌ: ಉತ್ತರ ಪ್ರದೇಶದ (Uttar Pradesh) ಹಿಂದಿನ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ (Yogi Adityanath), ಅಯೋಧ್ಯೆಯ ರಾಮಮಂದಿರದೊಳಗೆ ಜಲೇಸರದಲ್ಲಿ ಮಾಡಿದ ಗಂಟೆ ಬಾರಿಸಲು ಪ್ರಾರಂಭಿಸಿದ ನಂತರ ರಾಜ್ಯದ ಅಭಿವೃದ್ಧಿಗೆ ಅಶುಭವಾದವರು ತಾವಾಗಿಯೇ ಮಾಯವಾಗುತ್ತಾರೆ ಎಂದು ಭಾನುವಾರ ಹೇಳಿದ್ದಾರೆ. ಜಲೇಸರದಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರುಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕೊವಿಡ್-19 (Covid-19) ಜಿನ್ ಅನ್ನು ಯಶಸ್ವಿಯಾಗಿ ಬಾಟಲಿಯೊಳಗೆ ಹಾಕಿದೆ ಎಂದು ಹೇಳಿದ್ದಾರೆ. ರಾಮಮಂದಿರದಲ್ಲಿ 2,100 ಕ್ವಿಂಟಾಲ್ ಗಂಟೆಯನ್ನು ಸ್ಥಾಪಿಸಲಾಗುವುದು. ದೇವಸ್ಥಾನದ ಒಳಗೆ ಜಲೇಸರದಲ್ಲಿ ಮಾಡಿದ ಗಂಟೆಗಳನ್ನು ಬಾರಿಸಿದಾಗ ಅಶುಭಗಳು ಮಾಯವಾಗುತ್ತವೆ ಎಂಬುದು ನಂಬಿಕೆಯಾಗಿದೆ ಎಂದು ಯೋಗಿ ಹೇಳಿದ್ದಾರೆ. ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಇಟಾದ ಪಾತ್ರವನ್ನು ಎತ್ತಿ ಹಿಡಿದ ಆದಿತ್ಯನಾಥ, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ದೊಡ್ಡ ಪಾತ್ರ ವಹಿಸಿದ ಜಿಲ್ಲೆಗೆ 70 ವರ್ಷಗಳಿಂದ ಸರಿಯಾದ ಆರೋಗ್ಯ ಸೌಲಭ್ಯಗಳು ಮತ್ತು ವೈದ್ಯಕೀಯ ಕಾಲೇಜುಗಳನ್ನು ಪಡೆಯಲು ಸಾಧ್ಯವಾಗದಿರುವುದು ವಿಪರ್ಯಾಸ ಎಂದು ಹೇಳಿದರು. ಆದರೆ ಈಗ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ ಅವಂತಿಬಾಯಿ ಲೋಧಿ ಅವರ ಹೆಸರಿನ ವೈದ್ಯಕೀಯ ಕಾಲೇಜು ತಲೆ ಎತ್ತಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದರು. ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಜಿಲ್ಲೆಯು ಪ್ರಮುಖ ಪಾತ್ರ ವಹಿಸಿದೆ ಎಂದು ಯೋಗಿ ಹೇಳಿದ್ದಾರೆ. 2017ಕ್ಕಿಂತ ಮೊದಲು ಜಿಲ್ಲೆಯಲ್ಲಿ ಅಧಿಕಾರ ಪ್ರಾಯೋಜಿತ ಮಾಫಿಯಾಗಳು ಮತ್ತು ಕ್ರಿಮಿನಲ್‌ಗಳು ಪ್ರಾಬಲ್ಯ ಹೊಂದಿದ್ದರು ಎಂದು ಆದಿತ್ಯನಾಥ ಹೇಳಿದ್ದಾರೆ. ಕಾಂಗ್ರೆಸ್, ಎಸ್‌ಪಿ ಅಥವಾ ಬಿಎಸ್‌ಪಿ ಇರಲಿ, ಅವರಿಗೆ ಬಡವರು, ರೈತರು, ಮಧ್ಯಮ ಮತ್ತು ಸಣ್ಣ ಉದ್ಯಮಗಳ (ಎಂಎಸ್‌ಎಂಇ) ಬಗ್ಗೆ ಯಾವುದೇ ಸಹಾನುಭೂತಿ ಇರಲಿಲ್ಲ, ಅವರು ಇವರಿಗಾಗಿ ಏನನ್ನೂ ಮಾಡಲಿಲ್ಲ, ರೈತರ ಸಾಲ ಮನ್ನಾ ಮಾಡಲಿಲ್ಲ, ಶೌಚಾಲಯ, ಮನೆಗಳನ್ನು ನಿರ್ಮಿಸಲಿಲ್ಲ.  ಆರೋಗ್ಯ ಸೌಲಭ್ಯಗಳನ್ನು ಒದಗಿಸಲಾಗಿಲ್ಲ. ಅವರ ಸಹಾನುಭೂತಿ ಕೇವಲ ಮಾಫಿಯಾಗಳು ಮತ್ತು ಕ್ರಿಮಿನಲ್‌ಗಳ ಬಗ್ಗೆ ಮಾತ್ರ. 2017 ರ ನಂತರ ಅಂತಹ ಮಾಫಿಯಾಗಳು ಮತ್ತು ಕ್ರಿಮಿನಲ್‌ಗಳ ಮೇಲೆ ಸರ್ಕಾರದ ಬುಲ್ಡೋಜರ್ ಓಡಿಸಿ ಅವರ ಸಂಪತ್ತನ್ನು ವಶಪಡಿಸಿಕೊಳ್ಳುವುದನ್ನು ನೀವು ನೋಡಿಲ್ಲವೇ?” ಎಂದು ಆದಿತ್ಯನಾಥ ಹೇಳಿದ್ದಾರೆ. ಕೊವಿಡ್ -19 ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ರಾಜ್ಯದ ಯಶಸ್ಸನ್ನು ಹೈಲೈಟ್ ಮಾಡಿದ ಅವರು ಉತ್ತಮ ನಿರ್ವಹಣೆಯ ಮೂಲಕ, ರಾಜ್ಯವು ಕೊವಿಡ್ -19 ನ ‘ಜಿನ್’ ಅನ್ನು ಬಾಟಲಿಯೊಳಗೆ ಇರಿಸಿದೆ. ಇದರಿಂದಾಗಿ ರ್ಯಾಲಿಗಾಗಿ ಸ್ಥಳದಲ್ಲಿ ಸಾವಿರಾರು ಜನರು ಸೇರುತ್ತಾರೆ, ವೈರಸ್ ಎಲ್ಲಿಯೂ ಕಂಡುಬರುವುದಿಲ್ಲ ಎಂದಿದ್ದಾರೆ.

ಪ್ರಧಾನಿ ಮೋದಿ ನೇತೃತ್ವದಲ್ಲಿ ಉಚಿತ ಪರೀಕ್ಷೆ, ಚಿಕಿತ್ಸೆ, ಲಸಿಕೆಗಳನ್ನು ನೀಡಲಾಯಿತು. ಬಡವರಿಗೂ ಡಬಲ್ ಡೋಸ್ ಪಡಿತರವನ್ನು ನೀಡಲಾಯಿತು ಎಂದು ಅವರು ಹೇಳಿದರು. ಮುಂದಿನ ಐದು ವರ್ಷಗಳಲ್ಲಿ ರೈತರಿಗೆ ಉಚಿತವಾಗಿ ನೀರು ನೀಡಲಾಗುವುದು ಮತ್ತು ಆ ನಿಟ್ಟಿನಲ್ಲಿ ಕೆಲಸ ಆರಂಭಿಸಲಾಗಿದೆ ಎಂದರು. “ನಾವು ಲವಣಯುಕ್ತ ನೀರಿನ ಬದಲು ಸಿಹಿ ನೀರನ್ನು ಒದಗಿಸುತ್ತೇವೆ. ಜಲ ಜೀವನ್ ಮಿಷನ್ ಅಡಿಯಲ್ಲಿ, ಜನರು ಆರೋಗ್ಯವಾಗಿರಲು ಎಲ್ಲರಿಗೂ ಶುದ್ಧ ಕುಡಿಯುವ ನೀರನ್ನು ನೀಡಲಾಗುವುದು” ಎಂದು ಅವರು ಹೇಳಿದರು. ಇಟಾ ಜಿಲ್ಲೆಯಲ್ಲಿ ಸರ್ಕಾರದ ಪ್ರಯತ್ನಗಳನ್ನು ಎತ್ತಿ ಹಿಡಿದ ಆದಿತ್ಯನಾಥ, ಜಿಲ್ಲೆಯಲ್ಲಿ 64,000 ರೈತರ ಸಾಲ ಮನ್ನಾ ಮಾಡಲಾಗಿದ್ದು, 2.87 ಲಕ್ಷ ರೈತರು ಪಿಎಂ-ಕಿಸಾನ್ ಯೋಜನೆಯ ಲಾಭ ಪಡೆದಿದ್ದಾರೆ ಎಂದು ಹೇಳಿದರು.

ಇಟಾದಲ್ಲಿ 11,500 ಅಂಗವಿಕಲರು, 23,700 ವಿಧವೆಯರು ಮತ್ತು 40,000 ಕ್ಕೂ ಹೆಚ್ಚು ಹಿರಿಯ ನಾಗರಿಕರು ವಾರ್ಷಿಕ ₹ 12,000 ಪಿಂಚಣಿ ಪಡೆಯುತ್ತಿದ್ದಾರ. ರಾಜ್ಯದಲ್ಲಿ 43.5 ಲಕ್ಷ ಮನೆಗಳನ್ನು ಬಡವರಿಗೆ ನೀಡಲಾಗಿದೆ ಮತ್ತು ಜಿಲ್ಲೆಯಲ್ಲಿ 22000 ಕ್ಕೂ ಹೆಚ್ಚು ಬಡವರಿಗೆ ಮನೆಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು. ಉತ್ತರ ಪ್ರದೇಶದಲ್ಲಿ ಮೊದಲ ಹಂತದ ವಿಧಾನಸಭಾ ಚುನಾವಣೆಗೆ ಫೆಬ್ರವರಿ 10 ರಂದು ಮತದಾನ ನಡೆದಿತ್ತು. ಮುಂದಿನ ಹಂತದ ಮತದಾನ ಫೆಬ್ರವರಿ 14 ರಂದು ನಡೆಯಲಿದೆ, ನಂತರ ಫೆಬ್ರವರಿ 20, 23, 27, ಮಾರ್ಚ್ 3 ಮತ್ತು 7 ರಂದು ಇತರ ಐದು ಹಂತಗಳಿಗೆ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

ಇದನ್ನೂ ಓದಿ: ದೇಶದ ಪ್ರಧಾನಿಗೆ ರಕ್ಷಣೆ ನೀಡಲು ವಿಫಲವಾದ ಚನ್ನಿ ಸರ್ಕಾರ, ಪಂಜಾಬ್​​ನ್ನು ಹೇಗೆ ಕಾಪಾಡುತ್ತದೆ?: ಅಮಿತ್ ಶಾ 

Published On - 5:29 pm, Sun, 13 February 22

ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್‌: ಶಾಕಿಂಗ್ ರಿಯಾಕ್ಷನ್
ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್‌: ಶಾಕಿಂಗ್ ರಿಯಾಕ್ಷನ್
ಹೊಸ ವರ್ಷಾಚರಣೆಗೆ ಆಂಧ್ರದಲ್ಲಿ ಅಪರೂಪದ ಟಗರು ಕಾಳಗ
ಹೊಸ ವರ್ಷಾಚರಣೆಗೆ ಆಂಧ್ರದಲ್ಲಿ ಅಪರೂಪದ ಟಗರು ಕಾಳಗ
ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು