ಪಾಂಡವರ ರಾಜಧಾನಿ ಹಸ್ತಿನಾಪುರದಲ್ಲಿ ಜಯ ಸಾಧಿಸುವವರೇ ಉತ್ತರ ಪ್ರದೇಶದಲ್ಲಿ ಸದಾ ಅಧಿಕಾರಕ್ಕೆ ಬರುವುದು, ಇದು ನಿಜ!!

| Updated By: Digi Tech Desk

Updated on: Feb 09, 2022 | 10:56 AM

Uttar Pradesh Assembly election 2022: 1957ರಿಂದ ಜಾರಿಯಲ್ಲಿರುವ ಇತಿಹಾಸವನ್ನು ಕೆದಕಿದಾಗ 2012ರವರೆಗೂ ಮೀರತ್ ಜಿಲ್ಲೆಯ ಹಸ್ತಿನಾಪುರ ವಿಧಾನಸಭಾ​ ಕ್ಷೇತ್ರವನ್ನು ಗೆದ್ದ ಪಕ್ಷವೇ ಉತ್ತರ ಪ್ರದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವುದು ದಾಖಲಾರ್ಹ! ಹಾಗಂತ ಇದೇನೂ ರಾಜಕೀಯ ಮೂಢನಂಬಿಕೆ (superstition) ಅಲ್ಲ ಬದಲಿಗೆ ಮಂಗಳಕರ (auspicious) ಎನ್ನುತ್ತಾರೆ ರಾಜಕೀಯ ನಾಯಕರು. ಪಾಂಡವರ ರಾಜಧಾನಿ ಅಷ್ಟರಮಟ್ಟಿಗೆ ಇಂದಿಗೂ ತನ್ನ ಐತಿಹಾಸಿಕ, ಪೌರಾಣಿಕ ಮಹತ್ವ ಬೀರುತ್ತಿದೆ

ಪಾಂಡವರ ರಾಜಧಾನಿ ಹಸ್ತಿನಾಪುರದಲ್ಲಿ ಜಯ ಸಾಧಿಸುವವರೇ ಉತ್ತರ ಪ್ರದೇಶದಲ್ಲಿ ಸದಾ ಅಧಿಕಾರಕ್ಕೆ ಬರುವುದು, ಇದು ನಿಜ!!
ಪಾಂಡವರ ರಾಜಧಾನಿ ಹಸ್ತಿನಾಪುರದಲ್ಲಿ ಜಯ ಸಾಧಿಸುವವರೇ ಉತ್ತರ ಪ್ರದೇಶದಲ್ಲಿ ಸದಾ ಅಧಿಕಾರಕ್ಕೆ ಬರುವುದು, ಇದು ನಿಜ್ಜಾ!
Follow us on

ಇದು ಯಾವುದೋ ಮಹಾಭಾರತದ ಕಾಲದ ಸ್ಟೋರಿ ಹೇಳ್ತಿದ್ದಾರೆ ಅಂದ್ಕೋಬೇಡಿ. ಇದು ಪಾಂಡವರ ರಾಜಧಾನಿ, ಉತ್ತರ ಪ್ರದೇಶದಲ್ಲಿರುವ ಮೀರತ್​ ಜಿಲ್ಲೆಯ ಹಸ್ತಿನಾಪುರದ (Pandavas Capital Hastinapur) ಇಂದಿನ ರೋಚಕ ರಾಜಕೀಯದ ಕತೆ! ಹಿಂದೊಮ್ಮೆ ಹಸ್ತಿನಾಪುರದ ಅಂದರೆ ಆನೆಗಳ ಊರು ಎಂಬರ್ಥವಿತ್ತು. ಇದರ ಆಜುಬಾಜಿನಲ್ಲಿ ನೋಯ್ಡಾ ಮತ್ತು ಲಖ್ನೋದ ರಸ್ತೆಗಳಲ್ಲಿ ಉದ್ದೋ ಉದ್ದಕ್ಕೂ ಆನೆಗಳ ಪ್ರತಿಮೆಗಳನ್ನು ಸ್ಥಾಪಿಸಿ, ಸಾವಿರಾರು ಕೋಟಿ ರೂಪಾಯಿ ಹಣ ದೋಚಿರುವ ರಾಜಕೀಯ ಇತಿಹಾಸವಿದೆ. ಪುರಾಣ ಕಾಲದ ಕತೆ ಹೇಳದೆ ಆಧುನಿಕ ಭಾರತದ ರಾಜಕೀಯ ಕುರುಕ್ಷೇತ್ರದ ಬಗ್ಗೆ ಹೇಳುವುದಾದರೆ… ಲೇಟೆಸ್ಟ್​ ಮಾಹಿತಿಯನ್ನು ನೋಡುವುದಾದರೆ ‘ಹಸ್ತಿನಾಪುರದ ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ. ಹಾಲಿ ಶಾಸಕ, ಬಿಜೆಪಿಯ ದಿನೇಶ್ ಖಟಿಕ್ ಅವರನ್ನು ಸೋಲಿಸುವೆ’ ಎಂದು ಹಾಲಿ ಕಾಂಗ್ರೆಸ್​ ಉಮೇದುವಾರರಾದ ಅರ್ಚನಾ ಗೌತಮ್ ಉಮೇದಿ ವ್ಯಕ್ತಪಡಿಸಿರುವುದು ಕುತೂಹಲಕಾರಿಯಾಗಿದೆ (Uttar Pradesh Assembly election 2022).

1957ರಿಂದ ಜಾರಿಯಲ್ಲಿರುವ ಇತಿಹಾಸವನ್ನು ಕೆದಕಿದಾಗ 2012ರವರೆಗೂ ಮೀರತ್ ಜಿಲ್ಲೆಯ ಹಸ್ತಿನಾಪುರ ವಿಧಾನಸಭಾ​ ಕ್ಷೇತ್ರವನ್ನು ಗೆದ್ದ ಪಕ್ಷವೇ ಉತ್ತರ ಪ್ರದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವುದು ದಾಖಲಾರ್ಹ! ಹಾಗಂತ ಇದೇನೂ ರಾಜಕೀಯ ಮೂಢನಂಬಿಕೆ (superstition) ಅಲ್ಲ ಬದಲಿಗೆ ಮಂಗಳಕರ (auspicious) ಎನ್ನುತ್ತಾರೆ ರಾಜಕೀಯ ನಾಯಕರು. ಪಾಂಡವರ ರಾಜಧಾನಿ ಅಷ್ಟರಮಟ್ಟಿಗೆ ಇಂದಿಗೂ ತನ್ನ ಐತಿಹಾಸಿಕ, ಪೌರಾಣಿಕ ಮಹತ್ವ ಬೀರುತ್ತಿದೆ ಎಂದು ರಾಜಕೀಯ ಪಂಡಿತರು ನಂಬಿದ್ದಾರೆ. ಹಾಗಾಗಿಯೇ ರಾಜಕೀಯ ಪಕ್ಷಗಳು ಈ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡುತ್ತವೆ. ದೌರ್ಭಾಗ್ಯವೆಂದರೆ ಇಲ್ಲಿನ ಅಭ್ಯರ್ಥಿಗಳೇನೋ ಸಾಕಷ್ಟು ಕಸರತ್ತು ನಡೆಸಿ, ಅಧಿಕಾರಕ್ಕೆ ಬರುತ್ತಾರೆ, ಆದರೆ ಮರು ಘಳಿಗೆಯೇ ಹಸ್ತಿನಾಪುರ ಎಂಬ ವಿಧಾನಸಭಾ ಕ್ಷೇತ್ರವನ್ನು ಮರೆತು, ಕ್ಷೇತ್ರದ ಪುರೋಭಿವೃದ್ಧಿಯತ್ತ ಗಮನವನ್ನೇ ನೀಡುವುದಿಲ್ಲ ಎಂಬ ಕೂಗು, ಕೊರಗು ಇಲ್ಲಿನ ಮತದಾರರದ್ದಾಗಿದೆ.

ಅಂದಹಾಗೆ 1967 ರಿಂದಲೂ ಪರಿಶಿಷ್ಟ ಜಾತಿ (Scheduled Caste) ಅಭ್ಯರ್ಥಿಗಳಿಗಾಗಿ ಮೀಸಲು ಕ್ಷೇತ್ರವಾಗಿದೆ. ಇಲ್ಲಿನ ಜನಸಂಖ್ಯೆ ನೋಡುವುದಾದರೆ ಮುಸಲ್ಮಾನರು 80,000 ಮಂದಿ, ಗುಜ್ಜಾರ್ 50,000, ಜಾಟ್​ ಜನರು 30,000, ಠಾಕೂರರು 30,000, ಬೆಂಗಾಲಿಗಳು ಇತರರು ಸೇರಿದರೆ 30,000 ಮಂದಿ ಇಲ್ಲಿ ನೆಲೆಸಿದ್ದಾರೆ.

ಕಾಂಗ್ರೆಸ್ ಪಕ್ಷ 1957ರಲ್ಲಿ ಮೊದಲ ಬಾರಿಗೆ ಇಲ್ಲಿನ ಅಸೆಂಬ್ಲಿ ಚುನಾವಣೆಯನ್ನು ಗೆದ್ದು ಬೀಗಿತ್ತು. ಅಲ್ಲಿಂದ ಹಿಂದಕ್ಕೆ ತಿರುಗಿ ನೋಡಲಿಲ್ಲ ಆ ಪಕ್ಷ. ಇದು ಎಲ್ಲಿಯವರಗೆ ಸಾಗಿತು ಅಂದರೆ 2012ರಲ್ಲಿ ಸಮಾಜವಾದಿ ಪಕ್ಷ ಇಲ್ಲಿ ಮೊದಲ ಬಾರಿಗೆ ಚುನಾವಣೆಯನ್ನು ಗೆದ್ದು, ಅದೇ ಉಮೇದಿಯಲ್ಲಿ ರಾಜ್ಯದಲ್ಲಿ ಅಧಿಕಾರ ಹಿಡಿಯಿತು.

1969ರಲ್ಲಿ ಏನಾಯಿತೆಂದರೆ ಭಾರತೀಯ ಕ್ರಾಂತಿ ದಳದ (BKD) ಆಶಾ ರಾಮ್​ ಇಂದು ಇಲ್ಲಿ ಗೆದ್ದುಬಿಟ್ಟರು. ಲೆಕ್ಕಾಚಾರ ತಲೆಕೆಳಗಾಯಿತಾ ಎಂದು ರಾಜಕೀಯ ಪಂಡಿತರ ಆಶ್ಚರ್ಯೊಟ್ಟರು. ಆದರೆ 1967ರಲ್ಲಿ ಚೌಧರಿ ಚರಣ್​ ಸಿಂಗ್​ ಕಾಂಗ್ರೆಸ್ಸಿನಿಂದ ಸಿಡಿದೆದ್ದು BKD ಪಕ್ಷಕ್ಕೆ ಅಂಕಿತ ಹಾಕಿದ್ದರು. ಹಾಗಾಗಿ ಚೌಧರಿ ಚರಣ್​ ಸಿಂಗ್​ ಅವರೇ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದರು.

ಈ ಬಾರಿಯ ಉತ್ತರ ಪ್ರದೇಶ ಅಸೆಂಬ್ಲಿ ಚುನಾವಣೆಗೆ ನಾಳೆ ಫೆಬ್ರವರಿ 10 ರಿಂದ ಆರಂಭವಾಗಿ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಹಸ್ತಿನಾಪುರಕ್ಕೂ ನಾಳೆ ಗುರವಾರವೇ ಮತದಾನ ನಡೆಯಲಿದೆ.

ಇದನ್ನೂ ಓದಿ:
ಪ್ರೇಮಿಗಾಗಿ ಒಂದೇ ಕುಟುಂಬದ ಐವರನ್ನು ಕೊಂದ ಕೊಲೆಗಾರ್ತಿ ಅರೆಸ್ಟ್, ಡಿಸೆಂಬರ್ನಿಂದಲೇ ಮಚ್ಚು ಹಿಡಿದು ಸಿದ್ಧತೆ ನಡೆಸಿದ್ದಳು!

ಇದನ್ನೂ ಓದಿ:
Healthy food: ಸಂಸತ್ತಿಗೆ ಸೈಕಲ್ಲಿನಲ್ಲಿ ಬರುವ ಆರೋಗ್ಯ ಸಚಿವ ತಮ್ಮ ಕ್ಯಾಂಟೀನ್​​ನಲ್ಲಿ ಇನ್ನು ಆರೋಗ್ಯಕರ ಆಹಾರವಷ್ಟೇ ಲಭ್ಯ ಎಂದರು!

Published On - 8:53 am, Wed, 9 February 22