Healthy food: ಸಂಸತ್ತಿಗೆ ಸೈಕಲ್ಲಿನಲ್ಲಿ ಬರುವ ಆರೋಗ್ಯ ಸಚಿವ ತಮ್ಮ ಕ್ಯಾಂಟೀನ್​​ನಲ್ಲಿ ಇನ್ನು ಆರೋಗ್ಯಕರ ಆಹಾರವಷ್ಟೇ ಲಭ್ಯ ಎಂದರು!

Mansukh Mandaviya: ಸ್ವತಃ ಆರೋಗ್ಯ ಸಚಿವ ಮನಸುಖ್ ಮಾಂಡವೀಯಾ ಅವರೇ ಆರೋಗ್ಯಕ್ಕೆ ಹೆಚ್ಚು ನೀಡುವ ವ್ಯಕ್ತಿ. ಅವರು ಸಂಸತ್ತಿಗೆ ಸೈಕಲ್ಲಿನಲ್ಲಿ ಬರುತ್ತಾರೆ. ನಿಯಮಿತ ಆರೋಗ್ಯ ವ್ಯಾಯಾಮಗಳು, ಯೋಗ ಅವರ ದಿನಚರಿಯಲ್ಲಿದೆ. ಹಾಗಾಗಿ ಮನೆಯೇ ಪಾಠಶಾಲೆ ಎಂಬಂತೆ ತಮ್ಮ ಸಚಿವಾಲಯದಿಂದಲೇ ಬದಲಾವಣೆ ಬಯಸಿ, Healthy foodಗೆ ಮಣೆ ಹಾಕಿದ್ದಾರೆ.

Healthy food: ಸಂಸತ್ತಿಗೆ ಸೈಕಲ್ಲಿನಲ್ಲಿ ಬರುವ ಆರೋಗ್ಯ ಸಚಿವ ತಮ್ಮ ಕ್ಯಾಂಟೀನ್​​ನಲ್ಲಿ ಇನ್ನು ಆರೋಗ್ಯಕರ ಆಹಾರವಷ್ಟೇ ಲಭ್ಯ ಎಂದರು!
ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯಾ ತಮ್ಮ ಕ್ಯಾಂಟೀನ್​​ನಲ್ಲಿ ಇನ್ನು ಆರೋಗ್ಯಕರ ಆಹಾರವಷ್ಟೇ ಲಭ್ಯ ಎಂದರು!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Feb 09, 2022 | 6:58 AM

ನವದೆಹಲಿ: ಕೇಂದ್ರ ಸರ್ಕಾರ ಕಾಲಕಾಲಕ್ಕೆ ದೇಶೀಯ ಸಂಪ್ರದಾಯ ಪಾಲನೆಗೆ ಒತ್ತುನೀಡುತ್ತಾ ಬಂದಿದೆ. ಆಗಾಗ್ಗೆ ಈ ನಿಟ್ಟಿನಲ್ಲಿ ಅನೇಕ ಮಾರ್ಪಾಡುಗಳನ್ನು ತರುವುದು ಸಹಜವಾಗಿದೆ. ಮುಂದುವರಿದ ಭಾಗವಾಗಿ ಇದೀಗ ಕೇಂದ್ರ ಆರೋಗ್ಯ ಸಚಿವಾಲಯದ (Union Health Ministry) ಕ್ಯಾಂಟೀನ್​​ನಲ್ಲಿ (canteen) ಆರೋಗ್ಯಕರ ಆಹಾರ ಸರಬರಾಜಿಗಷ್ಟೇ ಪ್ರಾಮುಖ್ಯತೆ ನೀಡಿದೆ. ಕರಿದ ಆಹಾರ ಪದಾರ್ಥ ಮತ್ತು ಕುರುಕುಲು ತಿಂಡಿಗೆ ಕೊಕ್​ ನೀಡಲಾಗಿದೆ. ಸಮೋಸಾ (samosas), ಬ್ರೆಡ್​ ಪಕೋಡಾಗಳಿಗೆ ಗುಡ್​ಬೈ ಹೇಳಲಾಗಿದೆ. ದಾಲ್​, ದಾಲ್​ ದೋಸೆ, ಗ್ರೀನ್​ ಪೀ, ಸಾಂಬಾರು, ಮಿಲೆಟ್​ ರೊಟ್ಟಿ (millet rotis), ಮಿಲೆಟ್​ ಪಲಾವ್ ಇವೇ ಮುಂತಾದ ಆರೋಗ್ಯಕರ ಆಹಾರಕ್ಕೆ ಮಣೆ ಹಾಕಲಾಗಿದೆ.

ಕೇಂದ್ರ ಆರೋಗ್ಯ ಸಚಿವಾಲಯದಲ್ಲಿ ಇನ್ನು ಕರಿದ, ಕುರುಕುಲು ತಿಂಡಿ ಸಿಗುವುದಿಲ್ಲ! ಕೇಂದ್ರ ಆರೋಗ್ಯ ಸಚಿವಾಲಯದ ಮೂಲಗಳ ಪ್ರಕಾರ ಈ ವ್ಯವಸ್ಥೆ ಅದಾಗಲೇ ಪ್ರಯೋಗಾರ್ಥ ಚಾಲ್ತಿಯಲ್ಲಿದೆ. ಗ್ರಾಹಕರ ಪ್ರತಿಕ್ರಿಯೆ ನೋಡಿಕೊಂಡು ಅಲ್ಪಸ್ವಲ್ಪ ಏರ್ಪಾಡುಗಳೊಂದಿಗೆ ಇದನ್ನೇ ಕಾಯಂ ವ್ಯವಸ್ಥೆಯನ್ನಾಗಿಸಲಾಗುವುದು ಎಂದು ತಿಳಿದುಬಂದಿದೆ. ದಾಲ್​ ದೋಸೆ ಸದ್ಯಕ್ಕೆ 10 ರೂಪಾಯಿ ದರ ನಿಗದಿಪಡಿಸಲಾಗಿದೆ. ಅಪ್ಪಟ ದೇಶೀಯ ಬೆಳಗಿನ ತಿಂಡಿ 25 ರೂಪಾಯಿಗೆ ಸಿಗಲಿದೆ. ಇನ್ನು ಮಧ್ಯಾಹ್ನದ ವೇಳೆಗೆ ಊಟ 40 ರೂಪಾಯಿಗೆ ಸಿಗಲಿದೆ.

ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯಾ ಅವರ ಒತ್ತಾಸೆಯ ಫಲವಾಗಿ ಈ ವ್ಯವಸ್ಥೆ ಏರ್ಪಾಡಾಗಿದೆ. ಕಳೆದ ವರ್ಷ ಅಕ್ಟೋಬರ್​ ತಿಂಗಳಲ್ಲಿ ತಾವು ಅಧಿಕಾರಕ್ಕೆ ಬಂದಾಗಲೇ ಇಂತಹ ದಾಲ್​, ದಾಲ್​ ದೋಸೆ, ಗ್ರೀನ್​ ಪೀ, ಸಾಂಬಾರು, ಮಿಲೆಟ್​ ರೊಟ್ಟಿ, ಮಿಲೆಟ್​ ಪಲಾವ್ ದೇಶೀಯ ಆಹಾರಕ್ಕೆ ಒತ್ತು ನೀಡುವುದಾಗಿ ಅವರು ಘೋಷಿಸಿದ್ದರು. ಹಾಗಂತ ಕಳೆದ ಅಕ್ಟೋಬರ್​ ತಿಂಗಳಿಂದಲೇ ಈ ವ್ಯವಸ್ಥೆ ಜಾರಿಗೆ ಬಂದಿದೆ. ಗ್ರಾಹಕರೂ ದನ್ನುಇಷ್ಟಪಟ್ಟಿದ್ದಾರೆ. ಹಾಗಾಗಿ ಇದನ್ನು ಮುಂದುವರಿಸಲಾಗುವುದು ಆರೋಗ್ಯಕ್ಕೆ ಕುತ್ತು ತರುವಂತಹ ಕರಿದ ಆಹಾರ ಪದಾರ್ಥ ಮತ್ತು ಕುರುಕುಲು ತಿಂಡಿಗಳಿಗೆ ಗುಡ್​ಬೈ ಹೇಳಲಾಗಿದೆ.

ಸ್ವತಃ ಆರೋಗ್ಯ ಸಚಿವ ಮನಸುಖ್ ಮಾಂಡವೀಯಾ ಅವರೇ ಆರೋಗ್ಯಕ್ಕೆ ಹೆಚ್ಚು ನೀಡುವ ವ್ಯಕ್ತಿ. ಅವರು ಸಂಸತ್ತಿಗೆ ಸೈಕಲ್ಲಿನಲ್ಲಿ ಬರುತ್ತಾರೆ. ಪ್ರತಿ ದಿನಾ 20 ಕಿಮೀ ಸೈಕ್ಲಿಂಗ್​ ಮಾಡುವ ಅಭ್ಯಾಸ ಅವರಿಗಿದೆ. ನಿಯಮಿತ ಆರೋಗ್ಯ ವ್ಯಾಯಾಮಗಳು, ಯೋಗ ಅವರ ದಿನಚರಿಯಲ್ಲಿದೆ. ಹಾಗಾಗಿ ಮನೆಯೇ ಪಾಠಶಾಲೆ ಎಂಬಂತೆ ತಮ್ಮ ಸಚಿವಾಲಯದಿಂದಲೇ ಬದಲಾವಣೆ ಬಯಸಿ, Healthy foodಗೆ ಮಣೆ ಹಾಕಿದ್ದಾರೆ. (ANI)

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ