AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೇಮಿಗಾಗಿ ಒಂದೇ ಕುಟುಂಬದ ಐವರನ್ನು ಕೊಂದ ಕೊಲೆಗಾರ್ತಿ ಅರೆಸ್ಟ್, ಡಿಸೆಂಬರ್ನಿಂದಲೇ ಮಚ್ಚು ಹಿಡಿದು ಸಿದ್ಧತೆ ನಡೆಸಿದ್ದಳು!

ಕೊಲೆಯಾದ ಮಹಿಳೆ ಲಕ್ಷ್ಮೀಯ ಪತಿ ಗಂಗಾರಾಮ್ ಮೇಲೆ ಆರೋಪಿ ಲಕ್ಷ್ಮೀಗೆ ಕ್ರಷ್ ಇತ್ತು. ಈ ಹಿನ್ನೆಲೆ ಮದುವೆಯಾಗುವಂತೆ ಗಂಗಾರಾಮ್‌ನನ್ನು ಪೀಡಿಸ್ತಿದ್ದಳು. ಸದ್ಯ ಈ ಸಣ್ಣ ಸುಳಿವಿನಿಂದ ಪ್ರಕರಣ ಭೇದಿಸಿದ ಪೊಲೀಸರು ಐವರನ್ನು ಕೊಲೆ ಮಾಡಿ ಅಮಾಯಕಿಯಂತೆ ಕುಳಿತಿದ್ದ ಹಂತಕಿ ಮಹಿಳೆಯನ್ನು ಬಂಧಿಸಿದ್ದಾರೆ.

ಪ್ರೇಮಿಗಾಗಿ ಒಂದೇ ಕುಟುಂಬದ ಐವರನ್ನು ಕೊಂದ ಕೊಲೆಗಾರ್ತಿ ಅರೆಸ್ಟ್, ಡಿಸೆಂಬರ್ನಿಂದಲೇ ಮಚ್ಚು ಹಿಡಿದು ಸಿದ್ಧತೆ ನಡೆಸಿದ್ದಳು!
ಐವರನ್ನು ಕೊಂದ ಕೊಲೆಗಾರ್ತಿ ಲಕ್ಷ್ಮೀ
TV9 Web
| Edited By: ಆಯೇಷಾ ಬಾನು|

Updated on:Feb 09, 2022 | 1:37 PM

Share

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಒಂದೇ ಕುಟುಂಬದ ಐವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಹಿಳೆ, ನಾಲ್ವರು ಮಕ್ಕಳನ್ನು ಕೊಂದಿದ್ದ ಹಂತಕಿ ಲಕ್ಷ್ಮೀಯನ್ನು ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಫೆ.6ರಂದು ಕೆಆರ್‌ಎಸ್‌ ಗ್ರಾಮದಲ್ಲಿ ಮಾರಕಾಸ್ತ್ರದಿಂದ ಕೊಚ್ಚಿ ನಾಲ್ವರು ಮಕ್ಕಳು, ಮಹಿಳೆಯನ್ನು ಹತ್ಯೆ ಮಾಡಲಾಗಿತ್ತು. ಲಕ್ಷ್ಮೀ(26), ರಾಜ್(12), ಕೋಮಲ್(7), ಕುನಾಲ್(4), ಗೋವಿಂದ(8) ಕೊಲೆಯಾದವರು. ಸದ್ಯ ಪೊಲೀಸರು ಐವರನ್ನು ಕೊಲೆ ಮಾಡಿದ ಹಂತಕಿಯನ್ನು ಅರೆಸ್ಟ್ ಮಾಡಿದ್ದಾರೆ.

ಕೊಲೆಗೆ ಕಾರಣ ಕೊಲೆಯಾದ ಮಹಿಳೆ ಲಕ್ಷ್ಮೀಯ ಪತಿ ಗಂಗಾರಾಮ್ ಮೇಲೆ ಆರೋಪಿ ಲಕ್ಷ್ಮೀಗೆ ಕ್ರಷ್ ಇತ್ತು. ಈ ಹಿನ್ನೆಲೆ ಮದುವೆಯಾಗುವಂತೆ ಗಂಗಾರಾಮ್‌ನನ್ನು ಪೀಡಿಸ್ತಿದ್ದಳು. ಸದ್ಯ ಈ ಸಣ್ಣ ಸುಳಿವಿನಿಂದ ಪ್ರಕರಣ ಭೇದಿಸಿದ ಪೊಲೀಸರು ಐವರನ್ನು ಕೊಲೆ ಮಾಡಿ ಅಮಾಯಕಿಯಂತೆ ಕುಳಿತಿದ್ದ ಹಂತಕಿ ಮಹಿಳೆಯನ್ನು ಬಂಧಿಸಿದ್ದಾರೆ. ತಾನು ಪ್ರೀತಿಸಿದ ವ್ಯಕ್ತಿಯನ್ನು ಪಡೆಯಲು ಮುದ್ದಾದ ನಾಲ್ಕು ಮಕ್ಕಳು ಹಾಗೂ ಮಹಿಳೆಯನ್ನು ಕೊಂದು ಮೃತದೇಹದ ಮುಂದೆ ಅಳುತ್ತಾ ಕುಳಿತಿದ್ದ ಆರೋಪಿ ಲಕ್ಷ್ಮೀಯ ಬಣ್ಣ ಬಯಲಾಗಿದೆ. ಮೊದಲಿಗೆ ಕೊಲೆ ನಡೆದಾಗ ಹಂತಕರನ್ನು ಪತ್ತೆ ಹಚ್ಚಲು ಪೊಲೀಸರಿಗೆ ತಲೆನೋವಾಗಿತ್ತು. ಬಳಿಕ ಗಂಗಾರಾಮ್ ಮೇಲೆ ಲಕ್ಷ್ಮೀಗೆ ಕ್ರಷ್ ಇತ್ತು ಎಂಬ ಸುಳಿವು ಸಿಕ್ಕಿ ಮೇಲೆ ಸಣ್ಣ ಸುಳಿವಿನಿಂದ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಡಿಸೆಂಬರ್ನಿಂದಲೇ ಕೊಲೆಗೆ ಸಂಚು ಹಾಕಿದ್ದ ಕೊಲೆಗಾರ್ತಿ ಆರೋಪಿ ಲಕ್ಷ್ಮೀ ಡಿಸೆಂಬರ್‌ನಿಂದಲೇ ಕೊಲೆ‌ ಮಾಡಲು ಸಂಚು ರೂಪಿಸಿದ್ದಳು. ಹರಿತವಾದ ಮಚ್ಚು ಖರೀದಿ ಮಾಡಿದ್ದಳು. ಕೊಲೆಯಾದ ಲಕ್ಷ್ಮಿ‌ ಮನೆಯ ಬಾತ್‌ರೂಂನಲ್ಲೇ ಮಚ್ಚು ಬಚ್ಚಿಟ್ಟಿದ್ದಳು. ಗಂಗಾರಾಮ್ ವ್ಯಾಪಾರಕ್ಕೆ ಹೋದ ನಂತರ ಮನೆಗೆ ಬಂದಿದ್ದ ಆರೋಪಿ ಲಕ್ಷ್ಮೀ ಶನಿವಾರ ಕೊಲೆಯಾದ ಲಕ್ಷ್ಮಿ ಮನೆಯಲ್ಲಿ ಉಳಿದುಕೊಂಡಿದ್ದಳು. ರಾತ್ರಿ ಊಟ ಆದ ನಂತರ ಬಚ್ಚಲು ಮನೆಯಿಂದ ಮಚ್ಚು ತಂದಿದ್ದಾಳೆ. ಅಷ್ಟರಲ್ಲಿ ಗಂಗಾರಾಮ್ ಅಣ್ಣನ ಮಗ ಗೋವಿಂದ ಮನೆಗೆ ಬಂದಿದ್ದಾನೆ. ಹೀಗಾಗಿ ಮತ್ತೆ ಮಚ್ಚು ವಾಪಸ್ಸು ಇಟ್ಟಿದ್ದಾಳೆ. ಎಲ್ಲರೂ ಮಲಗುವುದನ್ನು ಕಾದು ಎಲ್ಲರೂ ಮಲಗಿದ ನಂತರ ಲಕ್ಷ್ಮೀ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಶಬ್ಧ ಕೇಳಿ ಎಚ್ಚೆತ್ತ ಗೋವಿಂದನ‌ ಮೇಲೂ ಹಲ್ಲೆ ಮಾಡಿ ಬಳಿಕ ಮೂರು ಮಕ್ಕಳ ಮೇಲೂ ನಿರ್ದಯವಾಗಿ ಮಚ್ಚು ಬೀಸಿ ಕೊಲೆ ಮಾಡಿದ್ದಾಳೆ. ಹತ್ಯೆ ನಂತರ ಮುಂಜಾನೆವರೆಗೂ ಅಲ್ಲೇ ಇದ್ದು ಬೆಳಗಿನ ಜಾವ ಮೈಸೂರಿನ ಮನೆಗೆ ವಾಪಾಸ್ ಆಗಿದ್ದಾಳೆ. ಬಳಿಕ ರಕ್ತದ ಬಟ್ಟೆಯನ್ನು ವರುಣ ನಾಲೆಗೆ ಎಸೆದಿದ್ದಾಳೆ. ಮತ್ತೆ ಬೆಳಗ್ಗೆ 7 ಗಂಟೆ ಸುಮಾರಿಗೆ ಹತ್ಯೆ ನಡೆದ ಸ್ಥಳಕ್ಕೆ ಬಂದು ಎಲ್ಲರ ಜೊತೆ ಸೇರಿ ಅಳುವ ನಾಟಕವಾಡಿ ಡ್ರಾಮ ಮಾಡಿದ್ದಾಳೆ.

ಆರೋಪಿ ಲಕ್ಷ್ಮೀ, ಗಂಗಾರಾಮ್ ಸಂಬಂಧಿ. ಆಂಧ್ರ ಪ್ರದೇಶದಲ್ಲಿ ವಾಸವಿದ್ದ ಮಹಿಳೆ ಇದೀಗಾ ಎರಡು ತಿಂಗಳಿಂದ ಮೈಸೂರಿನಲ್ಲಿ ವಾಸ ಮಾಡುತ್ತಿದ್ರು. ಫೆಬ್ರವರಿ 06ರಂದು ಐವರನ್ನು ಕೊಲೆ ಮಾಡಿ ಅಮಾಯಕಿಯಂತೆ ಜನರ ಮಧ್ಯ ಅಳುತ್ತ ಯಾರಿಗೂ ಅನುಮಾನ ಬಾರದಂತೆ ಡ್ರಾಮ ಮಾಡಿದ್ದಳು. ಮೃತ ಲಕ್ಷ್ಮೀ ಪತಿ ಗಂಗಾರಾಮ್ ಘಟನೆ ನಡೆದ 10 ದಿನದ ಹಿಂದೆ ವ್ಯಾಪಾರಕ್ಕೆ ಹೋಗಿದ್ದರು. ಗಂಗಾರಾಮ್ ಪ್ಲಾಸ್ಟಿಕ್ ಹೂವು ಸೇರಿ ಹಲವು ವಸ್ತುಗಳ ಮಾರಾಟ ಮಾಡುತ್ತಿದ್ದರು. ಒಮ್ಮೆ ವ್ಯಾಪಾರಕ್ಕೆ ಹೋದರೆ 15 ದಿನ, 1 ತಿಂಗಳು ಬಿಟ್ಟು ಬರುತ್ತಿದ್ದರು. ಗಂಗಾರಾಮ್ ಅಣ್ಣ ಗಣೇಶ್ ಪತ್ನಿ ಚಂಪಾಡಿ ಸಹಾ ವ್ಯಾಪಾರಕ್ಕೆ ತೆರಳಿದ್ದರು. ಇವರೆಲ್ಲಾ ಒಟ್ಟಿಗೆ ವಾಸವಾಗಿದ್ದರು.

ಐವರ ಕೊಲೆಗೆ ಅಕ್ರಮ ಸಂಬಂಧವೇ ಕಾರಣ ಇನ್ನು ಘಟನೆ ಸಂಬಂಧ ಮೃತ ಮಹಿಳೆ ಪತಿ ಗಂಗಾರಾಮ್ ಹೇಳಿಕೆ ನೀಡಿದ್ದು ಕೃತ್ಯಕ್ಕೆ ಟ್ವಿಸ್ಟ್ ಸಿಕ್ಕಿದೆ. ಪ್ರಿಯತಮನನ್ನು ಪಡೆಯುವ ದುರಾಸೆಗೆ ಆರೋಪಿ ಮಹಿಳೆ ಇಡೀ ಕುಟುಂಬವನ್ನೇ ಕೊಲೆ ಮಾಡಿದ್ದಾಳೆ. ಆರೋಪಿ ಮಹಿಳೆ ಜೊತೆಗಿನ ಅಕ್ರಮ ಸಂಬಂಧದ ಬಗ್ಗೆ ಗಂಗಾರಾಮ್‌ ಒಪ್ಪಿಕೊಂಡಿದ್ದಾನೆ. ಕೊಲೆ ಮಾಡಿದ ಆರೋಪಿ ಲಕ್ಷ್ಮೀ ನನ್ನ ಸಂಬಂಧಿ. ಆಕೆ ಬಾಲ್ಯದಲ್ಲೇ ಟೀಚರ್ ಜೊತೆ ಓಡಿ ಹೋಗಿದ್ದಳು. ನನ್ನ ಮದುವೆಯಾದ ಬಳಿಕ ಅವಳಿಗೂ ಮದುವೆ ಆಗಿತ್ತು. ನನ್ನನ್ನು ಲಕ್ಷ್ಮಿ ಇಷ್ಟ ಪಡುತ್ತಿದ್ದಳು. ನಮ್ಮಿಬ್ಬರ ನಡುವೆ ಆಫೇರ್ ಇತ್ತು. ಹಿರಿಯರೆಲ್ಲ ನ್ಯಾಯ ಪಂಚಾಯಿತಿ ಮಾಡಿ ಸೀರೆ ಹಾಕಿಸಿದ್ದರು‌. ನಮ್ಮ ಸಂಪ್ರದಾಯದ ಪ್ರಕಾರ ಸೀರೆ ಹಾಕಿದರೆ ಅಣ್ಣ- ತಂಗಿ ಆಗುತ್ತೇವೆ. ಅದಾದ ನಂತರ ನಾನು ದೂರ ಆಗಿದ್ದೆ. ಬಳಿಕವೂ ಬೇರೆ ಬೇರೆ ನಂಬರ್‌ನಿಂದ ನನಗೆ ನನ್ನ ಪತ್ನಿಗೆ ಕಾಲ್ ಮಾಡಿ ಟಾರ್ಚರ್ ಮಾಡುತ್ತಿದ್ದಳು. ಅದು ಲಕ್ಷ್ಮಿಯೇ ಅನ್ನೋದು ನಮಗೆ ಗೊತ್ತಿರಲಿಲ್ಲ. ನಾನು ನನ್ನ ಹೆಂಡತಿ- ಮಕ್ಕಳೊಂದಿಗೆ ಚೆನ್ನಾಗಿದ್ದೆ. ಐವರನ್ನೂ ಯಾಕೆ ಕೊಲೆ ಮಾಡಿದಳೋ ಗೊತ್ತಿಲ್ಲ ಎಂದು ಮೃತ ಲಕ್ಷ್ಮೀ ಪತ್ನಿ ಗಂಗಾರಾಮ್ ಹೇಳಿದ್ದಾರೆ.

ಕೊಲೆಯಾದವರ ಮನೆಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಭೇಟಿ ಕೊಲೆಯಾದವರ ಮನೆಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಭೇಟಿ ನೀಡಿ ಮೃತರ ಪತಿ ಹಾಗೂ ಸಂಬಂಧಿಕರಿಗೆ ಸಾಂತ್ವನ ನೀಡಿದ್ದಾರೆ. ಈ ವೇಳೆ ಶಾಸಕರ ಮುಂದೆ ಸಂಬಂಧಿಕರು ಕಣ್ಣೀರು ಹಾಕಿದ್ದು ಶಾಸಕ ರವೀಂದ್ರ ಶ್ರೀಕಂಠಯ್ಯ ಮೃತರ ಕುಟುಂಬಕ್ಕೆ ಧನ ಸಹಾಯ ಮಾಡಲು ಮುಂದಾದ್ರು. ಆಗ ಸಂಬಂಧಿಕರು ನಮಗೆ ಹಣ ಬೇಡ ಆರೋಪಿಗೆ ತಕ್ಕ ಶಿಕ್ಷೆ ಕೊಡಿಸಿ ಎಂದು ಹಣ ಪಡೆಯಲು ನಿರಾಕರಿಸಿದರು. ನಂತರ ಶಾಸಕ ರವೀಂದ್ರ ಶ್ರೀಕಂಠಯ್ಯ ಶಿಕ್ಷೆ ಕೊಡಿಸುವ ಭರವಸೆ ನೀಡಿದ ಬಳಿಕ ಸಂಬಂಧಿಕರು ಹಣ ಪಡೆದ್ರು.

ಇದನ್ನೂ ಓದಿ: ಖಾಸಗಿ ರೆಸಾರ್ಟ್​ನ ವಿಲ್ಲಾದಲ್ಲಿ ದಂಪತಿ ಬರ್ಬರ ಹತ್ಯೆ; ಬಿಹಾರ ಮೂಲದ ಮನೆಗೆಲಸದ ವ್ಯಕ್ತಿ ಕೊಲೆ ಮಾಡಿ ಪರಾರಿ

Published On - 8:19 am, Wed, 9 February 22

Follow Us
Web contact
Web contact

TV9 Kannada

Read More