ಖಾಸಗಿ ರೆಸಾರ್ಟ್​ನ ವಿಲ್ಲಾದಲ್ಲಿ ದಂಪತಿ ಬರ್ಬರ ಹತ್ಯೆ; ಬಿಹಾರ ಮೂಲದ ಮನೆಗೆಲಸದ ವ್ಯಕ್ತಿ ಕೊಲೆ ಮಾಡಿ ಪರಾರಿ

ಮೊದಲ ಮಹಡಿಯಲ್ಲಿ ಪತಿ ಹಾಗೂ ನೆಲಮಹಡಿಯಲ್ಲಿ ಪತ್ನಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಆರೋಪಿ ಪರಾರಿ ಆಗಿದ್ದಾನೆ. ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಿಡದಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಖಾಸಗಿ ರೆಸಾರ್ಟ್​ನ ವಿಲ್ಲಾದಲ್ಲಿ ದಂಪತಿ ಬರ್ಬರ ಹತ್ಯೆ; ಬಿಹಾರ ಮೂಲದ ಮನೆಗೆಲಸದ ವ್ಯಕ್ತಿ ಕೊಲೆ ಮಾಡಿ ಪರಾರಿ
ಸಾಂದರ್ಭಿಕ ಚಿತ್ರ
Follow us
| Updated By: ganapathi bhat

Updated on: Feb 08, 2022 | 9:14 PM

ರಾಮನಗರ: ಇಲ್ಲಿನ ಖಾಸಗಿ​ ರೆಸಾರ್ಟ್​ನ ವಿಲ್ಲಾದಲ್ಲಿ ದಂಪತಿ ಬರ್ಬರ ಹತ್ಯೆಯಾದ ದುರ್ಘಟನೆ ಸಂಭವಿಸಿದೆ. ರಾಮನಗರ ತಾಲೂಕಿನ ಬಿಡದಿ ಬಳಿಯಿರುವ ರೆಸಾರ್ಟ್​ನಲ್ಲಿ ನಿವೃತ್ತ ಪೈಲಟ್ ರಘುರಾಜ್ (70), ಪತ್ನಿ ಆಶಾ (63) ಕೊಲೆಯಾಗಿದ್ದಾರೆ. ಭಾರತೀಯ ವಾಯುಸೇನೆಯ ನಿವೃತ್ತ ಪೈಲಟ್​ ರಘುರಾಜ್ ಹಾಗೂ ಪತ್ನಿಯನ್ನು ಬಿಹಾರ ಮೂಲದ ಮನೆಗೆಲಸದ ವ್ಯಕ್ತಿಯಿಂದ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗಿದೆ. ಮೊದಲ ಮಹಡಿಯಲ್ಲಿ ಪತಿ ಹಾಗೂ ನೆಲಮಹಡಿಯಲ್ಲಿ ಪತ್ನಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಆರೋಪಿ ಪರಾರಿ ಆಗಿದ್ದಾನೆ. ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಿಡದಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ರಾಜಕುಮಾರ್ ಪಾಟೀಲ್​ ತೇಲ್ಕೂರ್​ಗೆ ಬ್ಲ್ಯಾಕ್​ಮೇಲ್ ಪ್ರಕರಣ: ಮಹಿಳೆ ಪರ ವಕೀಲ ಜಗದೀಶ್ ಪ್ರತಿಕ್ರಿಯೆ

ರಾಜಕುಮಾರ್ ಪಾಟೀಲ್​ ತೇಲ್ಕೂರ್​ಗೆ ಬ್ಲ್ಯಾಕ್​ಮೇಲ್ ಪ್ರಕರಣಕ್ಕೆ ಸಂಬಂಧಿಸಿ ವಿಧಾನಸೌಧ ಠಾಣೆ ಬಳಿ ಮಹಿಳೆ ಪರ ವಕೀಲ ಜಗದೀಶ್ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮಲ್ಲಿ ಇರುವ ಮಾಹಿತಿಯನ್ನು ಪೊಲೀಸರಿಗೆ ಕೊಟ್ಟಿದ್ದೇವೆ. ಸೇಡಂ ಕ್ಷೇತ್ರದ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ಮೇಲೆ ಸಿಬಿಐಯಲ್ಲಿ ಚೀಟಿಂಗ್, ಪೋರ್ಜರಿ ಕೇಸ್ ಇದೆ. ಸುಳ್ಳು ದಾಖಲೆಗಳು, ಮೆಸೆಂಜರ್​ನಲ್ಲಿ ಚಾಟ್ ಮಾಹಿತಿ ಇದೆ. ಇಲ್ಲಿ ಎಸಿಪಿ ರಾಜೇಂದ್ರ ಅವರ ದಬ್ಬಾಳಿಕೆ ನಮಗೆ ಕಾಣುತ್ತಿದೆ. ಪೊಲೀಸರ ಮೇಲೆ ನಮಗೆ ಯಾವುದೇ ರೀತಿಯ ನಂಬಿಕೆ ಇಲ್ಲ. ಶಾಸಕರ ಸರ್ಕಾರವೇ ಇರುವುದರಿಂದ ನಮಗೆ ನಂಬಿಕೆ ಇಲ್ಲ. ನಾಳೆ ಎಲ್ಲ ವಿಷಯ ಕ್ರೋಡಿಕರಿಸಿ ಪಿಸಿಆರ್ ದಾಖಲಿಸುತ್ತೇವೆ. ಎಸಿಪಿ ರಾಜೇಂದ್ರ ವಿರುದ್ಧ ದೂರು ದಾಖಲಿಸಲಿದ್ದೇವೆ ಎಂದು ಜಗದೀಶ್ ಹೇಳಿದ್ದಾರೆ.

ಶಾಸಕ ರಾಜ್ ಕುಮಾರ್ ಪಾಟೀಲ್ ಗೆ ಬ್ಲಾಕ್ ಮೇಲ್ ಪ್ರಕರಣಕ್ಕೆ ಸಂಬಂಧಿಸಿ ಕಳೆದ ನಾಲ್ಕು ಗಂಟೆಯಿಂದ ಮಹಿಳೆಯ ವಿಚಾರಣೆ ನಡೆಸಲಾಗಿದೆ. ಶಾಸಕರ ಕೇಸ್ ಸಂಬಂಧ ಮಹಿಳೆ ಮುಂದೆ ಪ್ರಶ್ನೆಗಳನ್ನಿಟ್ಟು ಹೇಳಿಕೆ ದಾಖಲು ಮಾಡಲಾಗಿದೆ. ಮಹಿಳೆಗೆ ಸಾಲು ಸಾಲು ಪ್ರಶ್ನೆಗಳನ್ನು ಪೊಲೀಸರು ಮುಂದಿಟ್ಟಿದ್ದಾರೆ. ವಿಧಾನಸೌಧ ಪೋಲಿಸರು ಮಹಿಳೆಯಿಂದ ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದಾರೆ. ಮಹಿಳೆ ವಿಚಾರಣೆ ಬಹುತೇಕ ಅಂತಿಮ ಹಂತಕ್ಕೆ ಬಂದಿದೆ. ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದರ ಹಿಂದಿನ ಉದ್ದೇಶವೇನು, ಈ ವಿಚಾರ ಸಂಬಧ ಈ ಹಿಂದೆ ಭೇಟಿಮಾಡಿದ್ದೀರಾ, ಯಾರೊಂದಿಗೆ ಭೇಟಿ ಮಾಡಿದ್ರಿ ಹೀಗೆ ಬ್ಲಾಕ್ ಮೇಲ್ ಪ್ರಕರಣ ಸಂಬಂಧ ಹಲವು ಆಯಾಮಗಳಲ್ಲಿ ಪ್ರಶ್ನೆ ಕೇಳಲಾಗಿದೆ. ವಿಚಾರಣೆ ನಡೆಸಿ‌ ಹೇಳಿಕೆ ದಾಖಲಿಸಿ ಮಹಿಳೆಯನ್ನು‌ ಕಳುಹಿಸಿದ್ದಾರೆ.

ಆನೇಕಲ್: ಉದ್ಯೋಗದ ಅಮಿಷ ತೋರಿ ವೇಶ್ಯಾವಾಟಿಕೆ ದಂಧೆಗೆ ತಳ್ಳಿದರು

ಉದ್ಯೋಗದ ಅಮಿಷ ತೋರಿ ವೇಶ್ಯಾವಾಟಿಕೆ ದಂಧೆಗೆ ತಳ್ಳಿದ ಘಟನೆಗಳು ನಡೆಯುತ್ತಿವೆ. ಈ ರೀತಿ ಕಾರ್ಯನಿರ್ವಹಿಸುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ಮಾಡಲಾಗಿದೆ. ದಾಳಿ ನಡೆಸಿದ ಪೊಲೀಸರು ಅಸ್ಸಾಂ ಮೂಲದ ಮೂರು ಹೆಣ್ಣು ಮಕ್ಕಳ‌ ರಕ್ಷಣೆ ಮಾಡಿದ್ದಾರೆ. ಬೆಂಗಳೂರು ನಗರ‌ ಜಿಲ್ಲೆಯ ಆನೇಕಲ್‌ ಪಟ್ಟಣದ ಆನೇಕಲ್ ರಸ್ತೆಯ VBH ಅಪಾರ್ಟ್ಮೆಂಟ್​ನಲ್ಲಿ ಮೂರು ಆರೋಪಿಗಳ ಬಂಧನ ಮಾಡಲಾಗಿದೆ.

ಇದನ್ನೂ ಓದಿ: ಮಂಡ್ಯದಲ್ಲಿ ಒಂದೇ ಕುಟುಂಬದ ಐವರ ಕೊಲೆ! ರಾತ್ರಿ ಮಲಗಿದ್ದಾಗ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು

ಇದನ್ನೂ ಓದಿ: Crime News: ಯುವತಿ ವಿಚಾರಕ್ಕೆ ವಿದ್ಯಾರ್ಥಿಗೆ ಚಾಕು ಇರಿತ, ಮೊಬೈಲ್ ಬಳಕೆ ಕಡಿಮೆ ಮಾಡಲು ಹೇಳಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ

ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ