Uttar Pradesh Elections ಸ್ವಾಮಿ ಪ್ರಸಾದ್ ಮೌರ್ಯ, ಧರಂ ಸಿಂಗ್ ಸೈನಿ ಜತೆ 6 ಶಾಸಕರು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ
Samajwadi Party ಬಿಜೆಪಿಯ ವಿಕೆಟ್‌ಗಳು ಒಂದರ ಹಿಂದೆ ಒಂದರಂತೆ ಬೀಳುತ್ತಿವೆ, ಆದರೂ ನಮ್ಮ ಸಿಎಂಗೆ ಕ್ರಿಕೆಟ್ ಆಡುವುದು ಗೊತ್ತಿಲ್ಲ. ತಾವು ಹೋದಲ್ಲೆಲ್ಲಾ ಸರ್ಕಾರ ರಚನೆಯಾಗುತ್ತದೆ ಎಂದು ಸ್ವಾಮಿ ಪ್ರಸಾದ್ ಮೌರ್ಯ ಅವರು ಹೇಳಿದಂತೆ, ಈ ಬಾರಿಯೂ ತಮ್ಮೊಂದಿಗೆ ಅಪಾರ ಸಂಖ್ಯೆಯ ನಾಯಕರನ್ನು ಕರೆತಂದರು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.
ಲಖನೌ: ಈ ವಾರದ ಆರಂಭದಲ್ಲಿ ಬಿಜೆಪಿ ತೊರೆದ ಸ್ವಾಮಿ ಪ್ರಸಾದ್ ಮೌರ್ಯ (Swami Prasad Maurya) , ಧರಂ ಸಿಂಗ್ ಸೈನಿ (Dharam Singh Saini) ಮತ್ತು ಇತರ ಐದು ಶಾಸಕರನ್ನು ಸಮಾಜವಾದಿ ಪಕ್ಷವು ಶುಕ್ರವಾರ ಪಕ್ಷಕ್ಕೆ ಸ್ವಾಗತಿಸಿದೆ. ಬಿಜೆಪಿಯಿಂದ ನಾಯಕರು ಒಬ್ಬರ ಹಿಂದೆ ಒಬ್ಬರು ರಾಜೀನಾಮೆ ನೀಡುತ್ತಿದ್ದು ಸಮಾಜವಾದಿ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav), “ವಿಕೆಟ್ಸ್ ಗಿರ್ ರಹೇ ಹೈ (ವಿಕೆಟ್‌ಗಳು ಬೀಳುತ್ತಿವೆ)” ಎಂದು ಹೇಳಿದರು. ಭಗವತಿ ಸಾಗರ್ (ಕಾನ್ಪುರದ ಬಿಲ್ಹೌರ್), ರೋಷನ್‌ಲಾಲ್ ವರ್ಮಾ (ಶಹಜಹಾನ್‌ಪುರದ ತಿಲ್ಹಾರ್), ವಿನಯ್ ಶಕ್ಯಾ (ಔರೈಯಾದಲ್ಲಿ ಬಿಧುನಾ), ಬ್ರಿಜೇಶ್ ಪ್ರಜಾಪತಿ (ಬಹ್ರೈಚ್‌ನಲ್ಲಿ ತಿಂದವಾರಿ) ಮತ್ತು ಮುಖೇಶ್ ವರ್ಮಾ (ಫಿರೋಜಾಬಾದ್‌ನ ಶಿಕೋಹಾಬಾದ್) ಎಸ್‌ಪಿಗೆ ಸೇರ್ಪಡೆಯಾದ ಐವರು ಬಿಜೆಪಿ ಶಾಸಕರು. ಅಪ್ನಾ ದಳ (ಸೋನೆಲಾಲ್) ಶಾಸಕ ಅಮರ್ ಸಿಂಗ್ ಚೌಧರಿ ಕೂಡ ಎಸ್‌ಪಿಗೆ ಸೇರ್ಪಡೆಗೊಂಡರು. ಉತ್ತರ ಪ್ರದೇಶದ ಚುನಾವಣೆಯ ಮುಂಬರುವ ಹಂತ 1 ಕ್ಕೆ ಚುನಾವಣಾ ಆಯೋಗವು ಅಧಿಸೂಚನೆಯನ್ನು ಹೊರಡಿಸಿದೆ. 58 ವಿಧಾನಸಭಾ ಕ್ಷೇತ್ರಗಳಿಗೆ ನಾಮನಿರ್ದೇಶನ ಪ್ರಕ್ರಿಯೆಯು ಅಧಿಸೂಚನೆ ಹೊರಡಿಸುವುದರೊಂದಿಗೆ ಪ್ರಾರಂಭವಾಗುತ್ತದೆ.
Notification for Phase 1 of Uttar Pradesh #AssemblyElections2022 has been issued today. The nomination process for 58 Assembly Constituencies begins with the issue of notification.https://t.co/OEmsxaAHuR#ElectionCommissionOfIndia #ECI pic.twitter.com/f0oxowS4Dn
— Election Commission of India #SVEEP (@ECISVEEP) January 14, 2022
ಫೆಬ್ರವರಿ 14 ರಂದು ಪಂಜಾಬ್, ಉತ್ತರಾಖಂಡ ಮತ್ತು ಗೋವಾ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10 ರಿಂದ ಮಾರ್ಚ್ 7 ರವರೆಗೆ 403 ಶಾಸಕರನ್ನು ಆಯ್ಕೆ ಮಾಡಲು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮತಗಳ ಎಣಿಕೆ ಮಾರ್ಚ್ 10 ರಂದು ನಡೆಯಲಿದೆ.
After quitting BJP, MLAs Swami Prasad Maurya, Dharam Singh Saini, Bhagwati Sagar and Vinay Shakya join Samajwadi Party in presence of SP chief Akhilesh Yadav pic.twitter.com/Dz6M7yiRSk
— ANI UP/Uttarakhand (@ANINewsUP) January 14, 2022
ಬಿಜೆಪಿಯ ವಿಕೆಟ್‌ಗಳು ಒಂದರ ಹಿಂದೆ ಒಂದರಂತೆ ಬೀಳುತ್ತಿವೆ, ಆದರೂ ನಮ್ಮ ಸಿಎಂಗೆ ಕ್ರಿಕೆಟ್ ಆಡುವುದು ಗೊತ್ತಿಲ್ಲ. ತಾವು ಹೋದಲ್ಲೆಲ್ಲಾ ಸರ್ಕಾರ ರಚನೆಯಾಗುತ್ತದೆ ಎಂದು ಸ್ವಾಮಿ ಪ್ರಸಾದ್ ಮೌರ್ಯ ಅವರು ಹೇಳಿದಂತೆ, ಈ ಬಾರಿಯೂ ತಮ್ಮೊಂದಿಗೆ ಅಪಾರ ಸಂಖ್ಯೆಯ ನಾಯಕರನ್ನು ಕರೆತಂದರು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.
ಡಿಜಿಟಲ್ ಇಂಡಿಯಾ ದೋಷವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ರೈಡ್ ಬೇರೆಡೆ ನಡೆಯಬೇಕಿತ್ತು ಆದರೆ ಅವರ ಮನೆಯಲ್ಲಿಯೇ ಕೊನೆಗೊಂಡಿದೆ. ನಾವು ವಿಧಾನಸಭೆ ಚುನಾವಣೆಗಾಗಿ ಕಾಯುತ್ತಿದ್ದೆವು. ಸಮಾಜವಾದಿ ಮತ್ತು ಅಂಬೇಡ್ಕರ್‌ವಾದಿ ಒಗ್ಗೂಡಿರುವುದರಿಂದ ಸೈಕಲ್ ತುಂಬಾ ಪ್ರಬಲವಾಗಿದೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ ಅಖಿಲೇಶ್.
ಕಳೆದ ಐದು ವರ್ಷಗಳಲ್ಲಿ ಒಬಿಸಿಗಳು, ದಲಿತರು ಶೋಷಣೆಗೆ ಒಳಗಾಗಿದ್ದಾರೆ – ಧರಂ ಸಿಂಗ್ ಸೈನಿ
“ಕಳೆದ 5 ವರ್ಷಗಳಲ್ಲಿ ರಾಜಕೀಯ, ಆರ್ಥಿಕತೆ, ಉದ್ಯೋಗ ಮತ್ತು ಮೀಸಲಾತಿ ಕ್ಷೇತ್ರದಲ್ಲಿ ಒಬಿಸಿಗಳು ಮತ್ತು ದಲಿತರು ಸಂಪೂರ್ಣವಾಗಿ ಶೋಷಣೆಗೆ ಒಳಗಾಗಿದ್ದಾರೆ, ಈ ಹಿನ್ನೆಲೆಯಲ್ಲಿ ನಾವು ಹಿಂದುಳಿದ, ದಲಿತ ಜನರು ಮಕರ ಸಂಕ್ರಾಂತಿಯ ಸಮಯದಲ್ಲಿ ಸಮಾಜವಾದಿ ಪಕ್ಷಕ್ಕೆ ಸೇರಿದ್ದೇವೆ ಎಂದು ಧರಂ ಸಿಂಗ್ ಸೈನಿ ಶುಕ್ರವಾರ ಹೇಳಿದ್ದಾರೆ.
‘ಬಿಜೆಪಿಯ ಅಂತ್ಯ ಬರೆಯಲಾಗುತ್ತಿದೆ’ – ಸ್ವಾಮಿ ಪ್ರಸಾದ್ ಮೌರ್ಯ
“ಜನವರಿ 14, ಮಕರ ಸಂಕ್ರಾಂತಿ ಸಂದರ್ಭದಲ್ಲಿ, ಬಿಜೆಪಿಯ ಅಂತ್ಯವನ್ನು ಬರೆಯಲಾಗುತ್ತಿದೆ” ಎಂದು ಸ್ವಾಮಿ ಪ್ರಸಾದ್ ಮೌರ್ಯ ಅವರು ಶುಕ್ರವಾರ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡಾಗ ಹೇಳಿದರು. ಅಧಿಕಾರ ಹಿಡಿಯಲು ಬಿಜೆಪಿ, ಬಡವರು, ದಲಿತರು ಮತ್ತು ಒಬಿಸಿಗಳನ್ನು ವಂಚಿಸಿದೆ ಎಂದು ಅವರು ಕಿಡಿಕಾರಿದರು. ಸ್ವಾಮಿ ಪ್ರಸಾದ್ ಮೌರ್ಯ ಅಥವಾ ಕೇಶವ್ ಮೌರ್ಯ ಅವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಲಾಗುವುದು ಎಂದು ಬಿಜೆಪಿ ಈ ಹಿಂದೆ ಚರ್ಚಿಸಿತ್ತು ಆದರೆ ನಂತರ ಅವರು ಆದಿತ್ಯನಾಥ ಅವರನ್ನು ಕರೆತಂದಿತು ಎಂದು ಅವರು ಹೇಳಿದರು.
Published On - 4:23 pm, Fri, 14 January 22