West Bengal Elections 2021: ಸುಸೂತ್ರವಾಗಿ ನಡೆಯದ 5ನೇ ಹಂತದ ಮತದಾನ; ಟಿಎಂಸಿ-ಬಿಜೆಪಿ ಕಾರ್ಯಕರ್ತರ ನಡುವೆ ಕಲ್ಲುತೂರಾಟ

ಬಿದನ್ನಗರದ ಶಾಂತಿನಗರದಲ್ಲಿ ಈ ಗಲಾಟೆ ನಡೆದಿದೆ. ಗಲಾಟೆ ಶುರುವಾಗಿದ್ದು ಮತಗಟ್ಟೆಯ ಬಳಿ. ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರು ಮೊದಲು ಪರಸ್ಪರ ವಾಗ್ವಾದ ನಡೆಸಿದರು. ಅದಾದ ಬಳಿಕ ಕಲ್ಲುತೂರಾಟ ಮಾಡಿಕೊಂಡಿದ್ದಾರೆ.

  • TV9 Web Team
  • Published On - 13:05 PM, 17 Apr 2021
West Bengal Elections 2021: ಸುಸೂತ್ರವಾಗಿ ನಡೆಯದ 5ನೇ ಹಂತದ ಮತದಾನ; ಟಿಎಂಸಿ-ಬಿಜೆಪಿ ಕಾರ್ಯಕರ್ತರ ನಡುವೆ ಕಲ್ಲುತೂರಾಟ
ಪಶ್ಚಿಮ ಬಂಗಾಳದಲ್ಲಿ ಮತದಾನ

ಕೋಲ್ಕತ್ತ: ಇಂದು ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ನಡೆಯುತ್ತಿದ್ದು, ಈ ಮತದಾನ ಕೂಡ ಶಾಂತಿಯುತವಾಗಿ ನಡೆದಿಲ್ಲ. ಇಂದು ಒಟ್ಟು 45 ಕ್ಷೇತ್ರಗಳಲ್ಲಿ ಬೆಳಗ್ಗೆಯಿಂದಲೇ ಮತದಾನ ಪ್ರಾರಂಭವಾಗಿದೆ. ಈ ಮಧ್ಯೆ ಉತ್ತರ 24 ಪರಗಣ ಜಿಲ್ಲೆಯಲ್ಲಿ ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್​ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ. ಪರಸ್ಪರ ಕಲ್ಲು ತೂರಾಟ ನಡೆಸಿಕೊಂಡದ್ದಾರೆ.

ಬಿದನ್ನಗರದ ಶಾಂತಿನಗರದಲ್ಲಿ ಈ ಗಲಾಟೆ ನಡೆದಿದೆ. ಗಲಾಟೆ ಶುರುವಾಗಿದ್ದು ಮತಗಟ್ಟೆಯ ಬಳಿ. ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರು ಮೊದಲು ಪರಸ್ಪರ ವಾಗ್ವಾದ ನಡೆಸಿದರು. ಅದಾದ ಬಳಿಕ ಕಲ್ಲುತೂರಾಟ ಮಾಡಿಕೊಂಡಿದ್ದಾರೆ. ಗಲಾಟೆ ನಡೆಯುವ ಹೊತ್ತಲ್ಲಿ ಬಿದನ್ನಗರ ಬಿಜೆಪಿ ಅಭ್ಯರ್ಥಿ ಸವ್ಯಸಾಚಿ ದತ್ತಾ ಕೂಡ ಸ್ಥಳದಲ್ಲಿ ಇದ್ದರು. ಗಲಾಟೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸವ್ಯಸಾಚಿ ದತ್ತಾ, ತೃಣಮೂಲ ಕಾಂಗ್ರೆಸ್​ ಕಾರ್ಯಕರ್ತರು ಮತಗಟ್ಟೆಯನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿದರು. ಅದರಲ್ಲಿ ವಿಫಲವಾದ ನಂತರ ಹಿಂಸಾಚಾರ ಸೃಷ್ಟಿಸಿದರು ಎಂದು ಹೇಳಿದ್ದಾರೆ.

ಪಶ್ಚಿಮಬಂಗಾಳದಲ್ಲಿ ವಿಧಾನಸಭೆ ಚುನಾವಣೆ ಒಟ್ಟು 8ಹಂತದಲ್ಲಿ ನಡೆಯಲಿದ್ದು, ಇದೀಗ 5ನೇ ಹಂತದ ಮತದಾನ ನಡೆಯುತ್ತಿದೆ. ಬಹುತೇಕ ಎಲ್ಲ ಹಂತದಲ್ಲೂ ಒಂದಲ್ಲ ಒಂದು ಕಡೆ ಗಲಾಟೆ ನಡೆಯುತ್ತಲೇ ಬಂದಿದೆ. ಇನ್ನು ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರ ನಡುವೆ ಹಿಂಸಾಚಾರ, ಗಲಾಟೆಗಳು ಇಲ್ಲಿ ತೀರ ಸಾಮಾನ್ಯ.

ಇದನ್ನೂ ಓದಿ: ಕೊವಿಡ್ ಲಸಿಕೆ ಪೋಲಾಗುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ತಮಿಳುನಾಡಿಗೆ ಅಗ್ರಸ್ಥಾನ; ಕೇರಳ, ಪಶ್ಚಿಮ ಬಂಗಾಳದಲ್ಲಿ ವ್ಯರ್ಥವಾಗಿಲ್ಲ ಲಸಿಕೆ

Thalaivi: ಜಯಲಲಿತಾ ಬಯೋಪಿಕ್ ‘ತಲೈವಿ’​ಗೆ ಕುಟುಂಬದವರಿಂದಲೇ ವಿರೋಧ; ಹೈಕೋರ್ಟ್​ನಲ್ಲಿ ಕಂಗನಾ ಚಿತ್ರಕ್ಕೆ ಗ್ರೀನ್​ ಸಿಗ್ನಲ್​

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೂ ತಟ್ಟಿದ ಬೆಡ್​ ಬಿಸಿ: ಬೆಡ್​ ಖಚಿತ ಪಡಿಸಿದ ನಂತರವಷ್ಟೇ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್