ಕರ್ನಾಟಕ ಹಾಲು ಒಕ್ಕೂಟ ನಿಯಮಿತ ಒಟ್ಟು 487 ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು 19.11.2022 ಒಳಗಾಗಿ ಅರ್ಜಿ ಸಲ್ಲಿಸಬೇಕು. ಕೆಎಂಎಫ್ 487 ಖಾಲಿರುವ ಹುದ್ದೆಗಳಿಗೆ ಹೇಗೆ ಅರ್ಜಿ ಸಲ್ಲಿಸುವುದು ಎಂಬ ಮಾಹಿತಿ ಇಲ್ಲಿ ನೀಡಲಾಗಿದೆ. ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ವಿವರಗಳಿಗಾಗಿ https://www.kmfnandini.coop/kn ಈ ಲಿಂಕ್ಗೆ ಭೇಟಿ ನೀಡಿ
ಹುದ್ದೆಗಳ ವಿವರ
ಒಟ್ಟು 487 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ತಕ್ಷಣವೇ ಅರ್ಜಿ ಸಲ್ಲಿಸಿ, ಹೆಚ್ಚಿನ ವಿವರಗಳಿಗಾಗಿ ಕೆಎಂಎಫ್ನ ಅಧಿಕೃತ ವೆಬ್ ಸೈಟ್ಗೆ ಭೇಟಿ ನೀಡಿ.
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಮತ್ತು ಅರ್ಜಿ ಸಲ್ಲಿಸಲು 20.10.2022 ಆರಂಭವಾಗಿದೆ. 19.11.2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
ಹುದ್ದೆಯ ವಯೋಮಿತಿ
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಗರಿಷ್ಠ 35 ವರ್ಷಗಳಾಗಿರಬೇಕು. ಪ್ರವರ್ಗ 2ಎ,2ಬಿ,3ಎ ಮತ್ತು 3ಬಿ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಗರಿಷ್ಠ 38 ವರ್ಷವಾಗಿರಬೇಕು. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಗರಿಷ್ಠ 40 ವರ್ಷಗಳ ವಯೋಮಿತಿ ಮೀರಿರಬಾರದು ಎಂದು ಹೇಳಿದೆ.
ಅರ್ಜಿ ಶುಲ್ಕ :
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 500 ರೂ. ಇತರೆ ವರ್ಗದ ಅಭ್ಯರ್ಥಿಗಳು 1000 ರೂ. ಶುಲ್ಕವನ್ನು ಪಾವತಿಸಬೇಕು.
ಶೈಕ್ಷಣಿಕ ಆರ್ಹತೆ
ಹುದ್ದೆಗಳಿಗೆ ಅರ್ಜಿ ಅಭ್ಯರ್ಥಿಗಳು ಬಿಎಸ್ಸಿ, ಎಂವಿಎಸ್ಸಿ, ಎಂಟೆಕ್,ಎಂಬಿಎ, ಎಂಬಿಬಿಎಸ್, ಐಸಿಡಬ್ಯೂಎ ಮಾನ್ಯತೆ ಪಡೆದ ವಿಶ್ವವಿದ್ಯಾಯಲಗಳಿಂದ ಮಾನ್ಯತೆ ಪಡೆದಿರಬೇಕು.
ಆಯ್ಕೆ ಪ್ರಕ್ರಿಯೆ :
ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ನೇಮಕಾತಿ ಮಾಡಲಾಗುವುದು.
ವೇತನ:
ಕರ್ನಾಟಕ ಹಾಲು ಒಕ್ಕೂಟ ನಿಯಮಿತ ಆಯ್ಕೆಯಾದ ಅಭ್ಯರ್ಥಿಗೆ 17000 ರಿಂದ 99600 ರೂ. ವೇತನ ನೀಡಲಾಗುವುದು
Published On - 1:14 pm, Tue, 25 October 22