AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Agniveer Recruitment 2022: ಅಗ್ನಿವೀರ್ ನೇಮಕಾತಿಗೆ ಅರ್ಜಿ ಸಲ್ಲಿಸುವವರಿಗೆ ಈ ವಿಷಯ ಗೊತ್ತಿರಲೇಬೇಕು

Agniveer Recruitment 2022: ವೈದ್ಯಕೀಯ ಪರೀಕ್ಷೆಯಲ್ಲಿ ಮಹಿಳಾ ಅಭ್ಯರ್ಥಿಯು ಗರ್ಭಿಣಿ ಎಂದು ಕಂಡುಬಂದರೆ, ಆಕೆಯನ್ನು ಅನರ್ಹಗೊಳಿಸಲಾಗುತ್ತದೆ.

Agniveer Recruitment 2022: ಅಗ್ನಿವೀರ್ ನೇಮಕಾತಿಗೆ ಅರ್ಜಿ ಸಲ್ಲಿಸುವವರಿಗೆ ಈ ವಿಷಯ ಗೊತ್ತಿರಲೇಬೇಕು
Indian Army
TV9 Web
| Edited By: |

Updated on: Jul 07, 2022 | 3:06 PM

Share

Agniveer Recruitment 2022: ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯಡಿಯಲ್ಲಿ ಭಾರತೀಯ ಸೇನೆಗೆ ಅಗ್ನಿವೀರ್ ನೇಮಕಾತಿಗಾಗಿ ಅರ್ಜಿ ಪ್ರಕ್ರಿಯೆಯು ನಡೆಯುತ್ತಿದೆ. ಈ ನೇಮಕಾತಿಯು ಲಿಖಿತ ಪರೀಕ್ಷೆ, ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆಯೊಂದಿಗೆ ನಡೆಯಲಿದೆ. ಭಾರತೀಯ ಸಶಸ್ತ್ರ ಪಡೆಗಳಲ್ಲಿ ವೈದ್ಯಕೀಯ ಪರೀಕ್ಷೆಯು ಬಹಳ ಮುಖ್ಯವಾದ ಪ್ರಕ್ರಿಯೆಯಾಗಿದೆ. ಹೀಗಾಗಿಯೇ ಅಭ್ಯರ್ಥಿಗಳು ದೈಹಿಕ ಮಾನದಂಡಗಳು ಮತ್ತು ವೈದ್ಯಕೀಯ ಪರೀಕ್ಷೆಗಳ ಪೂರ್ವ ಜ್ಞಾನವನ್ನು ಹೊಂದಿರಬೇಕು. ಏಕೆಂದರೆ ಆಯಾ ಪ್ರಕ್ರಿಯೆಗೂ ಇಲ್ಲಿ ಕೆಲ ಮಾನದಂಡಗಳಿವೆ. ಅಂದರೆ ಅರ್ಜಿ ಸಲ್ಲಿಸಿದ ಮಾತ್ರ ಉದ್ಯೋಗ ಸಿಗಲಿದೆ ಎಂದು ಹೇಳಲಾಗುವುದಿಲ್ಲ. ಅದರಲ್ಲು ವೈದ್ಯಕೀಯ ಮಾನದಂಡವು ನಿಮ್ಮ ಅರ್ಹತೆಯನ್ನು ನಿರ್ಧರಿಸಲಿದೆ. ಹಾಗಿದ್ರೆ ವೈದ್ಯಕೀಯ ಮಾನದಂಡಗಳೇನು ಎಂದು ನೋಡೋಣ…

ವೈದ್ಯಕೀಯ ಫಿಟ್ನೆಸ್ ಪರೀಕ್ಷೆ: ದೈಹಿಕ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಅಭ್ಯರ್ಥಿಗಳನ್ನು ವೈದ್ಯಕೀಯ ಪರೀಕ್ಷೆಗೆ ಕರೆಯಲಾಗುತ್ತದೆ. ವೈದ್ಯಕೀಯ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಪ್ರವೇಶ ನೀಡಲಾಗುತ್ತದೆ. ಆದರೆ ವೈದ್ಯಕೀಯ ಪರೀಕ್ಷೆಯಲ್ಲಿ ಅನರ್ಹ ಎಂದು ಘೋಷಿಸಲಾದ ಅಭ್ಯರ್ಥಿಗಳು 21 ದಿನಗಳ ಒಳಗಾಗಿ INHS ನಿರ್ವಾನಿನಿ/INHS ಕಲ್ಯಾಣಿಗೆ ಮತ್ತೊಮ್ಮೆ ವೈದ್ಯಕೀಯ ಪರೀಕ್ಷೆಗಾಗಿ  ಮನವಿ ಸಲ್ಲಿಸಬಹುದು.

ಇಲ್ಲಿ ಭಾರತೀಯ ಸೇನೆಯ ವೈದ್ಯಕೀಯ ಮಾನದಂಡಗಳ ಪ್ರಕಾರ, ಮಿಲಿಟರಿ ವೈದ್ಯರು ವೈದ್ಯಕೀಯ ಪರೀಕ್ಷೆಯನ್ನು ನಡೆಸುತ್ತಾರೆ. ಲಿಂಗ- ಬಾಹ್ಯ ದೈಹಿಕ ಪರೀಕ್ಷೆಯ ಸಮಯದಲ್ಲಿ, ಅಭ್ಯರ್ಥಿಗಳಲ್ಲಿ ವಿರುದ್ಧ ಲಿಂಗದ ಗುಣಲಕ್ಷಣಗಳು ಪ್ರಮುಖವಾಗಿ ಕಂಡುಬಂದರೆ, ಅವರನ್ನು ಅನರ್ಹ ಎಂದು ಘೋಷಿಸಲಾಗುತ್ತದೆ. ಇದಲ್ಲದೆ, ಲಿಂಗವನ್ನು ಬದಲಾಯಿಸಲು ಶಸ್ತ್ರಚಿಕಿತ್ಸೆಯನ್ನು ಮಾಡಿದವರನ್ನೂ ಕೂಡ ನೇಮಕಾತಿ ಪ್ರಕ್ರಿಯೆಯಿಂದ ಕೈ ಬಿಡಲಾಗುತ್ತದೆ.

ಇದನ್ನೂ ಓದಿ
Image
ರಾಜ್ಯ ಬೀಜ ನಿಗಮದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ: ವೇತನ 42 ಸಾವಿರ ರೂ.
Image
Agniveer Recruitment 2022: ಭಾರತೀಯ ಸೇನೆಯ ಅಗ್ನಿವೀರ್ ನೇಮಕಾತಿಯ ಅಧಿಸೂಚನೆ ಪ್ರಕಟ
Image
SCI Recruitment 2022: ಸುಪ್ರೀ ಕೋರ್ಟ್ ನೇಮಕಾತಿ: ಪದವಿ ಹೊಂದಿರುವವರಿಗೆ ಅವಕಾಶ, ವೇತನ 63 ಸಾವಿರ ರೂ.
Image
Indian Navy recruitment 2022: ನೌಕಾಪಡೆ ನೇಮಕಾತಿ: 10ನೇ ತರಗತಿ ಪಾಸಾದವರಿಗೆ ಸುವರ್ಣಾವಕಾಶ

ಇನ್ನು ವೈದ್ಯಕೀಯ ಪರೀಕ್ಷೆಯಲ್ಲಿ ಮಹಿಳಾ ಅಭ್ಯರ್ಥಿಯು ಗರ್ಭಿಣಿ ಎಂದು ಕಂಡುಬಂದರೆ, ಆಕೆಯನ್ನು ಅನರ್ಹಗೊಳಿಸಲಾಗುತ್ತದೆ. ಅಲ್ಲದೆ ಅವರ ಉಮೇದುವಾರಿಕೆಯೂ ರದ್ದಾಗಲಿದೆ. ಅಭ್ಯರ್ಥಿಯು ವರದಿ ಮಾಡುವ ಸಮಯದಲ್ಲಿ ಅಥವಾ ಆರಂಭಿಕ ತರಬೇತಿ ಪೂರ್ಣಗೊಳ್ಳುವವರೆಗೆ ಗರ್ಭಿಣಿಯಾಗಿರಬಾರದು. ಹಾಗೆಯೇ ತರಬೇತಿಯ ಸಮಯದಲ್ಲಿ ಅಭ್ಯರ್ಥಿಯು ಗರ್ಭಿಣಿಯಾಗಿದ್ದರೆ ಆ ಅಭ್ಯರ್ಥಿಯನ್ನು ಕೈ ಬಿಡಲಾಗುತ್ತದೆ.

ಭಾರತೀಯ ನೌಕಾಪಡೆಯು ತನ್ನ ಅಧಿಸೂಚನೆಯಲ್ಲಿ, ನೇಮಕಾತಿ ಸಂದರ್ಭಗಳಲ್ಲಿ ಅಭ್ಯರ್ಥಿಗಳ ಕಿವಿಯ ಮೇಣವನ್ನು ಮತ್ತು ಹಲ್ಲುಗಳಿಂದ ಟಾರ್ಟರ್ ಅನ್ನು ಸ್ವಚ್ಛಗೊಳಿಸಿ ಬಳಿಕವಷ್ಟೇ ವೈದ್ಯಕೀಯ ಪರೀಕ್ಷೆಗೆ ಹಾಜರಾಗಲು ಸೂಚಿಸಿದೆ. ಇದರ ಜೊತೆಗೆ ನೌಕಾಪಡೆಯ ಅಗ್ನಿವೀರ್ ಎಸ್‌ಎಸ್‌ಆರ್ ನೇಮಕಾತಿಗೆ ಅಭ್ಯರ್ಥಿಗಳು ಕನಿಷ್ಠ 157 ಸೆಂಟಿ ಮೀಟರ್ ಎತ್ತರವನ್ನು ಹೊಂದಿರಬೇಕು ಎಂದು ತಿಳಿಸಿದೆ.

ಹಾಗೆಯೇ ದೇಹದ ಮೇಲೆ ಪರ್ಮನೆಂಟ್ ಟ್ಯಾಟೂಗಳಿದ್ದರೂ ಭಾರತೀಯ ನೌಕಾಪಡೆಯಲ್ಲಿ ಅಗ್ನಿವೀರ್ ಆಗಲು ಸಾಧ್ಯವಿಲ್ಲ. ಜೊತೆಗೆ ಕಣ್ಣಿನ ದೃಷ್ಟಿ ಕೂಡ ಉತ್ತಮವಾಗಿರಬೇಕೆಂದು ತಿಳಿಸಿದೆ. ಈ ಎಲ್ಲಾ ವಿಷಯಗಳನ್ನು ಗಮನದಲ್ಲಿರಿಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಉತ್ತಮ. ಇಲ್ಲದಿದ್ದರೆ ನಿಮ್ಮ ಸಮಯವೂ ವ್ಯರ್ಥ, ಭಾರತೀಯ ಸೇನೆಯ ಅಮೂಲ್ಯ ಸಮಯವು ವ್ಯರ್ಥವಾಗಲಿದೆ.

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ