IB Recruitment 2022: ಕೇಂದ್ರ ಗುಪ್ತಚರ ಸಂಸ್ಥೆಯ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ

IB Recruitment 2022: ಈ ಹುದ್ದೆಗಳಿಗೆ ಡೆಪ್ಯುಟೇಶನ್ ಆಧಾರದ ಮೇಲೆ ನೇಮಕಾತಿ ನಡೆಯಲಿದ್ದು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

IB Recruitment 2022: ಕೇಂದ್ರ ಗುಪ್ತಚರ ಸಂಸ್ಥೆಯ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ
IB Recruitment 2022
TV9kannada Web Team

| Edited By: Zahir PY

Jul 06, 2022 | 3:25 PM

IB Recruitment 2022: ಕೇಂದ್ರ ಗುಪ್ತಚರ ಸಂಸ್ಥೆ (IB) ಯ ಹಲವು ಹುದ್ದೆಗಳ ನೇಮಕಾತಿ ಪ್ರಕಟಣೆ ಹೊರಡಿಸಲಾಗಿದೆ. ಈ ನೇಮಕಾತಿ ಅಡಿಯಲ್ಲಿ ಭದ್ರತಾ ಸಹಾಯಕ, ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ, ಗ್ರೂಪ್ ಬಿ ಮತ್ತು ಗ್ರೂಪ್ ಸಿ ಹುದ್ದೆಗಳು ಮತ್ತು ಹಲ್ವಾಯಿ ಕಮ್ ಕುಕ್ ಮತ್ತು ಕೇರ್‌ಟೇಕರ್ ಸೇರಿದಂತೆ 766 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಈ ಹುದ್ದೆಗಳಿಗೆ ಡೆಪ್ಯುಟೇಶನ್ ಆಧಾರದ ಮೇಲೆ ನೇಮಕಾತಿ ನಡೆಯಲಿದ್ದು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.

ಹುದ್ದೆಗಳ ವಿವರಗಳು:

 • ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ I- 70 ಹುದ್ದೆಗಳು
 • ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ II- 350 ಹುದ್ದೆಗಳು
 • ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್ I- 50 ಹುದ್ದೆಗಳು
 • ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್ II- 100 ಹುದ್ದೆಗಳು
 • ಭದ್ರತಾ ಸಹಾಯಕ – 100 ಹುದ್ದೆಗಳು
 • ಜೂನಿಯರ್ ಇಂಟೆಲಿಜೆನ್ಸ್ (ಆಫೀಸರ್ ಮೋಟಾರ್ ಟ್ರಾನ್ಸ್‌ಪೋರ್ಟ್) I- 20 ಹುದ್ದೆಗಳು
 • ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್ (ಮೋಟಾರು ಸಾರಿಗೆ) II- 35 ಹುದ್ದೆಗಳು
 • ಭದ್ರತಾ ಸಹಾಯಕ (ಮೋಟಾರು ಸಾರಿಗೆ) – 20 ಹುದ್ದೆಗಳು
 • ಹಲ್ವಾಯಿ ಕಮ್ ಕುಕ್ – 9 ಹುದ್ದೆಗಳು
 • ಕೇರ್‌ಟೇಕರ್ – 5 ಹುದ್ದೆಗಳು
 • ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್ (ತಾಂತ್ರಿಕ) – 7 ಹುದ್ದೆಗಳು

ವಿದ್ಯಾರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ ಪದವಿಯನ್ನು ಹೊಂದಿರಬೇಕು. ಭದ್ರತೆ ಅಥವಾ ಇಂಟೆಲಿಜೆನ್ಸ್‌ನಲ್ಲಿ 2 ವರ್ಷಗಳ ಅನುಭವವನ್ನೂ ಪಡೆದಿರಬೇಕು. ಇತರೆ ಅರ್ಹತಾ ಮಾನದಂಡಗಳ ವಿವರವಾದ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಅಧಿಸೂಚನೆಯನ್ನು ಪರಿಶೀಲಿಸಬಹುದು.

ವಯೋಮಿತಿ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 56 ವರ್ಷಕ್ಕಿಂತ ಮೀರಿರಬಾರದು.

ವೇತನ: ಈ ಹುದ್ದೆಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಪೇ ಮ್ಯಾಟ್ರಿಕ್ಸ್ ಲೆವೆಲ್ 8 ರ ಅಡಿಯಲ್ಲಿ ತಿಂಗಳಿಗೆ ರೂ 47600 ರಿಂದ ರೂ 151100 ರವರೆಗಿನ ವೇತನವನ್ನು ನೀಡಲಾಗುತ್ತದೆ. ಆದರೆ, ಪೇ ಲೆವೆಲ್ 3 ಅಡಿಯಲ್ಲಿ ಸೆಕ್ಯುರಿಟಿ ಅಸಿಸ್ಟೆಂಟ್ ಮತ್ತು ಕುಕ್ ಹುದ್ದೆಗೆ ತಿಂಗಳಿಗೆ 21700 ರೂ.ನಿಂದ 69100 ರೂ. ವೇತನ ನಿಗದಿ ಮಾಡಲಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ? ಈ ಹುದ್ದೆಗಳಿಗೆ ಆಫ್​ಲೈನ್​ ಮೋಡ್​ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಅಂದರೆ mha.gov.in ಭೇಟಿ ನೀಡಿ ಅರ್ಜಿ ಭರ್ತಿ ಮಾಡಿ ಅದನ್ನು ಅಂಚೆ ಮೂಲಕ ಕಳುಹಿಸಬೇಕಾಗುತ್ತದೆ.

ಅರ್ಜಿ ಕಳುಹಿಸಬೇಕಾದ ವಿಳಾಸ: the Assistant Director/G-3, Intelligence Bureau, Ministry of Home Affairs, 35 S P Marg, Bapu Dham, New Delhi-110021.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada