AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Agniveer Recruitment ನವೆಂಬರ್ 1 ರಿಂದ ಮಹಿಳಾ ಅಭ್ಯರ್ಥಿಗಳಿಗೆ ಅಗ್ನಿವೀರ್ ನೇಮಕಾತಿ

ಕರ್ನಾಟಕ, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪ ಮತ್ತು ಮಾಹೆಯ ಮಹಿಳಾ ಅಭ್ಯರ್ಥಿಗಳಿಗೆ ಪ್ರಧಾನ ಕಚೇರಿ ನೇಮಕಾತಿ ವಲಯ ಬೆಂಗಳೂರು ಆಶ್ರಯದಲ್ಲಿ ನೇಮಕಾತಿ ಕಚೇರಿ ಬೆಂಗಳೂರು....

Agniveer Recruitment ನವೆಂಬರ್ 1 ರಿಂದ ಮಹಿಳಾ ಅಭ್ಯರ್ಥಿಗಳಿಗೆ ಅಗ್ನಿವೀರ್ ನೇಮಕಾತಿ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Aug 10, 2022 | 3:37 PM

Share

ಬೆಂಗಳೂರು: ಸೇನಾ ಪೊಲೀಸರ ಸಾಮಾನ್ಯ ಕರ್ತವ್ಯ ವಿಭಾಗದ ಮಹಿಳಾ ಅಭ್ಯರ್ಥಿಗಳ ಅಗ್ನಿವೀರ್ (Agniveer) ನೇಮಕಾತಿ ರ್ಯಾಲಿ ನವೆಂಬರ್ 1 ರಿಂದ 3 ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ರಕ್ಷಣಾ ವಿಭಾಗದ ಹೇಳಿಕೆಯ ಪ್ರಕಾರ, ಕರ್ನಾಟಕ, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪ ಮತ್ತು ಮಾಹೆಯ  ಮಹಿಳಾ ಅಭ್ಯರ್ಥಿಗಳಿಗೆ ಪ್ರಧಾನ ಕಚೇರಿ ನೇಮಕಾತಿ ವಲಯ ಬೆಂಗಳೂರು ಆಶ್ರಯದಲ್ಲಿ ನೇಮಕಾತಿ ಕಚೇರಿ (HQ) ಬೆಂಗಳೂರು ಇಲ್ಲಿನ ಮಾಣೆಕ್ ಶಾ ಪರೇಡ್ ಮೈದಾನದಲ್ಲಿ ನೇಮಕಾತಿಯನ್ನು ನಡೆಸಲು ನಿರ್ಧರಿಸಲಾಗಿದೆ. ಸೇನೆಯಲ್ಲಿ ಸೇನಾ ಪೊಲೀಸ್ ಕಾರ್ಪ್ಸ್‌ನಲ್ಲಿ ಅಗ್ನಿವೀರ್ ಜನರಲ್ ಡ್ಯೂಟಿ (ಮಹಿಳೆಯರು) ನೋಂದಣಿಗಾಗಿ ರ್ಯಾಲಿಯನ್ನು ನಡೆಸಲಾಗುತ್ತಿದೆ. ಆಗಸ್ಟ್ 7 ರಂದು ಪ್ರಧಾನ ಕಚೇರಿ ನೇಮಕಾತಿ ವಲಯ, ಬೆಂಗಳೂರು ಪ್ರಕಟಿಸಿದ ಅಧಿಸೂಚನೆಯಲ್ಲಿ ಸೇನೆಗೆ ನಿಗದಿತ ವರ್ಗಕ್ಕೆ ಸೇರ್ಪಡೆಗೊಳ್ಳಲು ವಯಸ್ಸು, ಶಿಕ್ಷಣ ಅರ್ಹತೆ ಮತ್ತು ಇತರ ಮಾನದಂಡಗಳ ವಿವರಗಳನ್ನು ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮಹಿಳಾ ಅಭ್ಯರ್ಥಿಗಳು ಅಗ್ನಿವೀರ್ ನೇಮಕಾತಿ 2022 ರ ವಯಸ್ಸಿನ ಮಿತಿ 17.5- 23 ವರ್ಷಗಳು. ಆನ್‌ಲೈನ್ ನೋಂದಣಿ ಆಗಸ್ಟ್ 10 ರಿಂದ ಸೆಪ್ಟೆಂಬರ್ 7 ರವರೆಗೆ ತೆರೆದಿರುತ್ತದೆ.

www.Joinindianarmy.nic.in ವೆಬ್‌ಸೈಟ್‌ನಲ್ಲಿ ಅಭ್ಯರ್ಥಿಗಳ ಆನ್‌ಲೈನ್ ನೋಂದಣಿ ಮಾಡುವುದು ಕಡ್ಡಾಯವಾಗಿದೆ. ಯಶಸ್ವಿಯಾದಿ ನೋಂದಾಯಿಸಿದ ಅಭ್ಯರ್ಥಿಗಳ ಪ್ರವೇಶ ಕಾರ್ಡ್‌ಗಳನ್ನು ಅವರ ನೋಂದಾಯಿತ ಇಮೇಲ್‌ಗೆ 12 ಮತ್ತು 13 ಅಕ್ಟೋಬರ್, 2022 ರ ನಡುವೆ ಕಳುಹಿಸಲಾಗುತ್ತದೆ.

ಉದ್ಯೋಗ ವಿಭಾಗದಲ್ಲಿನ ಇನ್ನಷ್ಟು  ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:07 pm, Wed, 10 August 22