Army Dental Corps Recruitment 2022: ಭಾರತೀಯ ಸೇನೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ

| Updated By: ಝಾಹಿರ್ ಯೂಸುಫ್

Updated on: Jul 14, 2022 | 4:27 PM

Army Dental Corps Recruitment 2022: ಆಸಕ್ತ ಅಭ್ಯರ್ಥಿಗಳು ಭಾರತೀಯ ಸೇನೆಯ ಅಧಿಕೃತ ವೆಬ್‌ಸೈಟ್ www.joinindianarmy.nic.in ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

Army Dental Corps Recruitment 2022: ಭಾರತೀಯ ಸೇನೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ
Army Dental Corps Recruitment 2022
Follow us on

Army Dental Corps Recruitment 2022: ಭಾರತೀಯ ಸೇನೆಯಲ್ಲಿ ಪುರುಷ ಮತ್ತು ಮಹಿಳಾ ದಂತ ವೈದ್ಯ ವಿದ್ಯಾರ್ಥಿಗಳಿಗೆ ಸೇವೆ ಸಲ್ಲಿಸುವ ಸುವರ್ಣಾವಕಾಶವಿದೆ. ಆರ್ಮಿ ಡೆಂಟಲ್ ಕಾರ್ಪ್ಸ್ 2022 ರ ಅಡಿಯಲ್ಲಿ ಶಾರ್ಟ್ ಸರ್ವಿಸ್ ಕಮಿಷನ್ಡ್ ಆಫೀಸರ್‌ಗಳನ್ನು ನೇಮಿಸಿಕೊಳ್ಳಲಾಗುತ್ತದೆ. ಈ ಹುದ್ದೆಗಳಿಗೆ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (NEET- MDS 2022) ಕಾಣಿಸಿಕೊಂಡ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ಆಸಕ್ತ ಅಭ್ಯರ್ಥಿಗಳು ಭಾರತೀಯ ಸೇನೆಯ ಅಧಿಕೃತ ವೆಬ್‌ಸೈಟ್ www.joinindianarmy.nic.in ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

ಹುದ್ದೆಗಳ ವಿವರಗಳು:
ಒಟ್ಟು ಹುದ್ದೆಗಳು- 30

  • ಮಹಿಳಾ – 3 ಹುದ್ದೆಗಳು
  • ಪುರುಷ – 27 ಹುದ್ದೆಗಳು

ಅರ್ಹತಾ ಮಾನದಂಡ:
ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ, ನೀಟ್ (MDS)-2022 ರಲ್ಲಿ ಕಾಣಿಸಿಕೊಂಡ ಅಭ್ಯರ್ಥಿಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಅರ್ಜಿಯೊಂದಿಗೆ NEET (MDS)-2022 ರ ಮಾರ್ಕ್ ಶೀಟ್ / ಸ್ಕೋರ್ ಕಾರ್ಡ್‌ನ ಪ್ರತಿಯನ್ನು ಸಲ್ಲಿಸಬೇಕಾಗುತ್ತದೆ.

ಇದನ್ನೂ ಓದಿ
ರಾಜ್ಯ ಬೀಜ ನಿಗಮದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ: ವೇತನ 42 ಸಾವಿರ ರೂ.
Agniveer Recruitment 2022: ಭಾರತೀಯ ಸೇನೆಯ ಅಗ್ನಿವೀರ್ ನೇಮಕಾತಿಯ ಅಧಿಸೂಚನೆ ಪ್ರಕಟ
SCI Recruitment 2022: ಸುಪ್ರೀ ಕೋರ್ಟ್ ನೇಮಕಾತಿ: ಪದವಿ ಹೊಂದಿರುವವರಿಗೆ ಅವಕಾಶ, ವೇತನ 63 ಸಾವಿರ ರೂ.
Indian Navy recruitment 2022: ನೌಕಾಪಡೆ ನೇಮಕಾತಿ: 10ನೇ ತರಗತಿ ಪಾಸಾದವರಿಗೆ ಸುವರ್ಣಾವಕಾಶ

ವಯೋಮಿತಿ:
ಇಂಡಿಯನ್ ಆರ್ಮಿ ಡೆಂಟಲ್ ಕಾರ್ಪ್ಸ್ ನೇಮಕಾತಿ 2022 ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 45 ವರ್ಷಕ್ಕಿಂತ ಹೆಚ್ಚಿರಬಾರದು .

ಪ್ರಮುಖ ದಿನಾಂಕಗಳು:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 14 ಆಗಸ್ಟ್ 2022

ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.