CSL Recruitment 2022: 10ನೇ ತರಗತಿಯಲ್ಲಿ ಪಾಸಾದವರಿಗೆ ಶಿಪ್ಯಾರ್ಡ್ನಲ್ಲಿದೆ ಉದ್ಯೋಗಾವಕಾಶ
CSL Recruitment 2022: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು CSL ನ ಅಧಿಕೃತ ವೆಬ್ಸೈಟ್ cochinshipyard.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
CSL Recruitment 2022: ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ (CSL) ನಲ್ಲಿ ಕೆಲಸ ಮಾಡಲು ಯೋಜಿಸುತ್ತಿರುವ ಯುವಕರಿಗೆ ಇಲ್ಲಿದೆ ಉತ್ತಮ ಅವಕಾಶವಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು CSL ನ ಅಧಿಕೃತ ವೆಬ್ಸೈಟ್ cochinshipyard.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 15 ಆಗಿದ್ದು, ಹೀಗಾಗಿ ಶುಕ್ರವಾರದೊಳಗೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.
ಹುದ್ದೆಗಳ ವಿವರಗಳು: ಒಟ್ಟು ಹುದ್ದೆಗಳ ಸಂಖ್ಯೆ- 330
ಹುದ್ದೆಗಳ ಹೆಸರು:
- ಶೀಟ್ ಮೆಟಲ್ ವರ್ಕರ್-56 ಹುದ್ದೆಗಳು
- ವೆಲ್ಡರ್-68 ಹುದ್ದೆಗಳು
- ಫಿಟ್ಟರ್-21 ಹುದ್ದೆಗಳು
- ಮೆಕ್ಯಾನಿಕ್ ಡೀಸೆಲ್-13 ಹುದ್ದೆಗಳು
- ಮೆಕ್ಯಾನಿಕ್ ಮೋಟಾರ್ ವೆಹಿಕಲ್-05 ಹುದ್ದೆಗಳು
- ಪ್ಲಂಬರ್-40 ಹುದ್ದೆಗಳು
- ಪೇಂಟರ್-14 ಹುದ್ದೆಗಳು
- ಎಲೆಕ್ಟ್ರಿಷಿಯನ್-28 ಹುದ್ದೆಗಳು
- ಕ್ರೇನ್ ಆಪರೇಟರ್ (EOT)-19 ಹುದ್ದೆಗಳು
- ಎಲೆಕ್ಟ್ರಾನಿಕ್ ಮೆಕ್ಯಾನಿಕ್-23 ಹುದ್ದೆಗಳು
- ಇನ್ಸ್ಟ್ರುಮೆಂಟ್ ಮೆಕ್ಯಾನಿಕ್-24 ಹುದ್ದೆಗಳು
- ಶಿಪ್ ರೈಟ್ ಹುಡ್-23 ಹುದ್ದೆಗಳು
- ಮೆಷಿನಿಸ್ಟ್- 02 ಹುದ್ದೆಗಳು
- ಏರ್ ಕಂಡೀಷನರ್ ತಂತ್ರಜ್ಞ -02 ಹುದ್ದೆಗಳು
- ಡ್ರಾಫ್ಟ್ಸ್ಮನ್ (ಸಿವಿಲ್)- 02 ಹುದ್ದೆಗಳು
ಅರ್ಹತಾ ಮಾನದಂಡಗಳು: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್ಎಸ್ಎಲ್ಸಿಯಲ್ಲಿ ಪಾಸ್ ಆಗಿರಬೇಕು. ಜೊತೆಗೆ ಸಂಬಂಧಿತ ವಿಷಯದಲ್ಲಿ ಐಟಿಐ ಮಾಡಿರಬೇಕು.
ವಯೋಮಿತಿ: ಈ ಹುದ್ದೆಗಳ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 30 ವರ್ಷಕ್ಕಿಂತ ಹೆಚ್ಚಿರಬಾರದು.
ಅರ್ಜಿ ಶುಲ್ಕ: ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ ರೂ 300 ಪಾವತಿಸಬೇಕಾಗುತ್ತದೆ.
ಪ್ರಮುಖ ದಿನಾಂಕ: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 15, 2022
ಅರ್ಜಿ ಸಲ್ಲಿಸುವುದು ಹೇಗೆ? ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ನೇರವಾಗಿ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.