AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಖಾಲಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

Bangalore Kannada Sahitya Parishad recruitment 2024: ಬೆಂಗಳೂರು ವಾಸಿಯವಾಗಿರುವ ಅರ್ಹ ಅರ್ಜಿದಾರರು ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಛೇರಿಯಿಂದ ಅರ್ಜಿಯನ್ನು ಜುಲೈ 15ರೊಳಗೆ ಪಡೆದು ಭರ್ತಿ ಮಾಡಿ, ಜುಲೈ 31ರೊಳಗೆ ಖುದ್ದಾಗಿ ಸಲ್ಲಿಸ ಬಹುದು, ಇಲ್ಲವೆ ‘ಅಧ್ಯರಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜ ಪೇಟೆ, ಬೆಂಗಳೂರು-18’ ಇಲ್ಲಿಗೆ ತಲಪುವಂತೆ ಕಳುಹಿಸಬೇಕು

ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಖಾಲಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಛೇರಿಯಲ್ಲಿ ನೇಮಕಾತಿ, ಅರ್ಜಿ ಸಲ್ಲಿಸಿ
ಸಾಧು ಶ್ರೀನಾಥ್​
|

Updated on:Jul 06, 2024 | 4:01 PM

Share

ಬೆಂಗಳೂರು, ಜುಲೈನ 06: ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಶತಮಾನವನ್ನು ಕಂಡಿರುವ ಕನ್ನಡಿಗರ ಮಾತೃಸಂಸ್ಥೆ. ರಾಜಾಶ್ರಯದಿಂದ ಹಿಡಿದು ಇಂದಿನ ಪ್ರಜಾಪ್ರಭುತ್ವದವರೆಗೂ ಕನ್ನಡ-ಕನ್ನಡಿಗ-ಕರ್ನಾಟಕದ ಹಿತವನ್ನು ಕಾಪಾಡುತ್ತಾ ಬಂದಿರುವುದು ಈ ಸಂಸ್ಥೆಯ ಹೆಗ್ಗಳಿಕೆ. ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ಕನ್ನಡದ ಸಾಂಸ್ಕೃತಿಕ ಇತಿಹಾಸವೇ ಆಗಿದೆ. ಇಂತಹ ಕನ್ನಡ ಸಾಹಿತ್ಯ ಪರಿಷತ್ತಿನ ಬೆಂಗಳೂರು ಕೇಂದ್ರ ಕಛೇರಿಯಲ್ಲಿ (Bangalore Kannada Sahitya Parishad) ಲಭ್ಯವಿರುವ ಕೆಳಕಂಡ ಹುದ್ದೆಗಳಿಗೆ (vacancies) ಅರ್ಹ ಅಭ್ಯರ್ಥಿಗಳು ಬೇಕಾಗಿದ್ದಾರೆ (Bangalore Kannada Sahitya Parishad recruitment 2024).

1. ಗಣಕ ಸಹಾಯಕರು – ಕಂಪ್ಯೂಟರಿನ ಪ್ರಾಥಮಿಕ ತಿಳಿವಳಿಕೆ ಹೊಂದಿರ ಬೇಕು, ಕನ್ನಡವನ್ನು ತಪ್ಪಿಲ್ಲದೆ ಬೆರಳಚ್ಚು ಮಾಡಲು ಬರಬೇಕು. ಪುಟ ವಿನ್ಯಾಸ – ಕಛೇರಿ ಪತ್ರ ವ್ಯವಹಾರದ ತಿಳಿವಳಿಕೆ ಅಪೇಕ್ಷಣೀಯ

Also Read: Bangalore Metro Recruitment 2024: ಬೆಂಗಳೂರು ಮೆಟ್ರೋದಲ್ಲಿ ಖಾಲಿ ಹುದ್ದೆಗಳು, ಅರ್ಹತಾ ಮಾನದಂಡ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ

2. ಕಛೇರಿ ಸಹಾಯಕರು – ಕಂಪ್ಯೂಟರಿನ ಪ್ರಾಥಮಿಕ ತಿಳಿವಳಿಕೆ, ಕನ್ನಡದಲ್ಲಿ ಸಂವಹನ ನಡೆಸುವ ಕೌಶಲ್ಯ, ಕಛೇರಿ ಕಾರ್ಯ ನಿರ್ವಹಣೆ ಕುರಿತ ತಿಳುವಳಿಕೆ ಅಪೇಕ್ಷಣೀಯ

3. ಲೆಕ್ಕ ಪತ್ರ ಸಹಾಯಕರು – ಕಂಪ್ಯೂಟರ್ ಜ್ಞಾನದ ಜೊತೆಗೆ ಟ್ಯಾಲಿ ಗೊತ್ತಿರ ಬೇಕು, ಲೆಕ್ಕ ಪತ್ರ ನಿರ್ವಹಿಸಿರುವ ಅನುಭವ ಇರಬೇಕು

4. ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣಗಳಿಗೆ ತಾಂತ್ರಿಕ ನಿರ್ವಾಹಕರು – ಸಭಾಂಗಣಗಳ ಧ್ವನಿ ಮತ್ತು ಬೆಳಕಿನ ನಿರ್ವಹಣೆಯಲ್ಲಿ ಪರಿಣಿತಿಯನ್ನು ಪಡೆದಿರಬೇಕು.

ಈ ಉದ್ಯೋಗವು ತಾತ್ಕಾಲಿಕವಾದದ್ದಾಗಿರುತ್ತದೆ. ಸಂಪೂರ್ಣವಾಗಿ ಕನ್ನಡವನ್ನು ಓದಲು – ಬರೆಯಲು ಮತ್ತು ಸಂವಹನ ನಡೆಸಲು ಬರುವವರಿಗೆ ಮಾತ್ರ ಅವಕಾಶ. ಇದು ಕನ್ನಡದ ಮೇಲಿನ ಪ್ರೀತಿ ಮತ್ತು ಗೌರವದಿಂದ ಮಾಡುವ ಕೆಲಸವಾಗಿದ್ದು ಇಲ್ಲಿ ಗೌರವ ಧನವನ್ನು ನೀಡಲಾಗುವುದು. ಯುವಕರಿಗೆ ಆದ್ಯತೆ ಇದ್ದರೂ ಇತ್ತೀಚೆಗೆ ನಿವೃತ್ತಿಯಾದವರೂ ಅರ್ಜಿ ಸಲ್ಲಿಸ ಬಹುದು, ಸಮಂಜಸ ವೃತ್ತಿ ಅನುಭವವನ್ನು ಇಂತಹ ಸಂದರ್ಭದಲ್ಲಿ ಪರಿಗಣಿಸಲಾಗುವುದು.

Also Read: Political Crime Thriller: ಭಾರತದ ಚೊಚ್ಚಲ ಲೈಂಗಿಕ ಹಗರಣದಿಂದಾಗಿ ಆ ನಾಯಕನಿಗೆ ಪ್ರಧಾನಿ ಖುರ್ಚಿ ಜಸ್ಟ್​​ ಮಿಸ್​ ಆಗಿತ್ತು! ಸಂಜಯ್​ ಗಾಂಧಿ ‘ಕೈ’ವಾಡ ಏನಿತ್ತು?

ಬೆಂಗಳೂರು ವಾಸಿಯವಾಗಿರುವ ಅರ್ಹ ಅರ್ಜಿದಾರರು ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಛೇರಿಯಿಂದ ಅರ್ಜಿಯನ್ನು ಜುಲೈ 15ರೊಳಗೆ ಪಡೆದು ಭರ್ತಿ ಮಾಡಿ, ಜುಲೈ 31ರೊಳಗೆ ಖುದ್ದಾಗಿ ಸಲ್ಲಿಸ ಬಹುದು, ಇಲ್ಲವೆ ‘ಅಧ್ಯರಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜ ಪೇಟೆ, ಬೆಂಗಳೂರು-18’ ಇಲ್ಲಿಗೆ ತಲಪುವಂತೆ ಕಳುಹಿಸಬೇಕು

ಹೆಚ್ಚಿನ ಉದ್ಯೋಗ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:59 pm, Sat, 6 July 24

ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು