BECIL Recruitment 2022: ಬಿಇಸಿಐಎಲ್ನ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ
BECIL Recruitment 2022: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು BECILನ ಅಧಿಕೃತ ವೆಬ್ಸೈಟ್ becil.com ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.
BECIL Recruitment 2022: ಬ್ರಾಡ್‌ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ (BECIL) “ಸಾರ್ವಜನಿಕ ಸಂಪರ್ಕ ಇಲಾಖೆ, ಮಧ್ಯಪ್ರದೇಶ ಸರ್ಕಾರ” ದಲ್ಲಿನ ಡೇಟಾ ಎಂಟ್ರಿ ಆಪರೇಟರ್ / ಆಫೀಸ್ ಬಾಯ್, ಡೇಟಾ ವಿಶ್ಲೇಷಕ / ಸಾಮಾಜಿಕ ಮಾಧ್ಯಮ ವಿಶ್ಲೇಷಕ ಸೇರಿದಂತೆ ಹಲವಾರು ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು BECILನ ಅಧಿಕೃತ ವೆಬ್ಸೈಟ್ becil.com ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.
ಹುದ್ದೆಗಳ ವಿವರಗಳು:
- ಡೇಟಾ ಎಂಟ್ರಿ ಆಪರೇಟರ್/ಆಫೀಸ್ ಬಾಯ್: 50 ಹುದ್ದೆಗಳು
- ಡೇಟಾ ವಿಶ್ಲೇಷಕ/ಸಾಮಾಜಿಕ ಮಾಧ್ಯಮ ವಿಶ್ಲೇಷಕ: 50 ಹುದ್ದೆಗಳು
- ರಿಸರ್ಚ್ ಅಸೋಸಿಯೇಟ್/ಕಂಟೆಂಟ್ ರೈಟರ್: 10 ಹುದ್ದೆಗಳು
- ಅಸೋಸಿಯೇಟ್ ಕನ್ಸಲ್ಟೆಂಟ್/ಕ್ರಿಯೇಟಿವ್ ಕಂಟೆಂಟ್ ರೈಟರ್/ಗ್ರಾಫಿಕ್ ಡಿಸೈನರ್/ವೀಡಿಯೋ ಎಡಿಟರ್: 30 ಹುದ್ದೆಗಳು
- ಸೀನಿಯರ್ ಕನ್ಸಲ್ಟೆಂಟ್/ ಪ್ರಾಜೆಕ್ಟ್ ಲೀಡ್: 05 ಹುದ್ದೆಗಳು
- ಪ್ರಧಾನ ಸಲಹೆಗಾರ / ಪ್ರಾಜೆಕ್ಟ್ ಮ್ಯಾನೇಜರ್: 10 ಹುದ್ದೆಗಳು
- ಒಟ್ಟು ಹುದ್ದೆಗಳ ಸಂಖ್ಯೆ- 160
ಅರ್ಹತಾ ಮಾನದಂಡಗಳು: ಆಯಾ ಹುದ್ದೆಗಳಿಗೆ ವಿಭಿನ್ನ ವಿದ್ಯಾರ್ಹತೆಯನ್ನು ನಿಗದಿ ಮಾಡಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸುವ ಮೂಲಕ ವಿದ್ಯಾರ್ಹತೆಯ ಮಾಹಿತಿ ಪಡೆದುಕೊಳ್ಳಬಹುದು.
ಮಾಸಿಕ ವೇತನ:
- ಡೇಟಾ ಎಂಟ್ರಿ ಆಪರೇಟರ್/ಆಫೀಸ್ ಬಾಯ್: ರೂ. 8000 ರಿಂದ 10000 ರೂ.
- ಡೇಟಾ ವಿಶ್ಲೇಷಕ/ಸಾಮಾಜಿಕ ಮಾಧ್ಯಮ ವಿಶ್ಲೇಷಕ: ರೂ.15000 ರಿಂದ 25000 ರೂ.
- ರಿಸರ್ಚ್ ಅಸೋಸಿಯೇಟ್/ಕಂಟೆಂಟ್ ರೈಟರ್: ರೂ.25000 ರಿಂದ 40000 ರೂ.
- ಸಲಹೆಗಾರ/ಹಿರಿಯ ಕಂಟೆಂಟ್ ರೈಟರ್: ರೂ. 60000 ರಿಂದ 80000 ರೂ.
- ಸೀನಿಯರ್ ಸಲಹೆಗಾರ/ಪ್ರಾಜೆಕ್ಟ್ ಲೀಡ್: ರೂ. 80000 ರಿಂದ 100000 ರೂ.
- ಪ್ರಧಾನ ಸಲಹೆಗಾರ/ಪ್ರಾಜೆಕ್ಟ್ ಮ್ಯಾನೇಜರ್: ರೂ. 100000+
ಪ್ರಮುಖ ದಿನಾಂಕ: ನೇರ ಸಂದರ್ಶನದ ದಿನಾಂಕ- 23 ಮತ್ತು 29 ಸೆಪ್ಟೆಂಬರ್.
ಅರ್ಜಿ ಸಲ್ಲಿಸುವುದು ಹೇಗೆ? ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.