Recruitment 2023: ಚಿತ್ರದುರ್ಗದ ನಿರ್ಮಿತಿ ಕೇಂದ್ರದ ಹುದ್ದೆಗೆ ಅರ್ಜಿ ಆಹ್ವಾನ
Chitradurga Nirmithi Kendra Recruitment 2023: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
Chitradurga Nirmithi Kendra Recruitment 2023: ಚಿತ್ರದುರ್ಗದ ನಿರ್ಮಿತಿ ಕೇಂದ್ರದಲ್ಲಿನ ಖಾಲಿ ಹುದ್ದೆಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ನೇಮಕಾತಿ ಅಡಿಯಲ್ಲಿ ಪ್ರಾಜೆಕ್ಟ್ ಡೈರೆಕ್ಟರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಆಸಕ್ತ ಮತ್ತು ಅರ್ಹ ಇಮೇಲ್ ಮೂಲಕ ಅರ್ಜಿ ಸಲ್ಲಿಸಬೇಕು. ಈ ನೇಮಕಾತಿ ಕುತಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.
ಹುದ್ದೆಗಳ ವಿವರಗಳು:
- ಸಂಸ್ಥೆಯ ಹೆಸರು : ಚಿತ್ರದುರ್ಗ ನಿರ್ಮಿತಿ ಕೇಂದ್ರ
- ಹುದ್ದೆಗಳ ಸಂಖ್ಯೆ: 01
- ಉದ್ಯೋಗ ಸ್ಥಳ: ಚಿತ್ರದುರ್ಗ – ಕರ್ನಾಟಕ
- ಹುದ್ದೆಯ ಹೆಸರು: ಯೋಜನಾ ನಿರ್ದೇಶಕ
ಶೈಕ್ಷಣಿಕ ಅರ್ಹತೆ:
ಚಿತ್ರದುರ್ಗ ನಿರ್ಮಿತಿ ಕೇಂದ್ರದ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಸಿವಿಲ್‌ನಲ್ಲಿ ಎಂಜಿನಿಯರಿಂಗ್/ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ , ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಸ್ಟ್ರಕ್ಚರಲ್ ಎಂಜಿನಿಯರಿಂಗ್‌ನಲ್ಲಿ ಎಂಟೆಕ್ ಅನ್ನು ಪೂರ್ಣಗೊಳಿಸಿರಬೇಕು .
ಆಯ್ಕೆ ಪ್ರಕ್ರಿಯೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಕಳುಹಿಸಬೇಕಾದ ಇಮೇಲ್ ಐಡಿ?
ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ನಮೂನೆಯನ್ನು ಭರ್ತಿ ಮಾಡಿ, ಇ-ಮೇಲ್ ಐಡಿ, dc.chitradurga@ka.gov.in ಗೆ ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಕಳುಹಿಸಬೇಕು.
ಪ್ರಮುಖ ದಿನಾಂಕಗಳು:
ಇ-ಮೇಲ್ ಕಳುಹಿಸಬೇಕಾದ ಕೊನೆಯ ದಿನಾಂಕ: 18-07-2023
ಇದನ್ನೂ ಓದಿ: Indian Coast Guard Recruitment 2023: ಭಾರತೀಯ ಕರಾವಳಿ ಪಡೆ ನೇಮಕಾತಿ: ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.
ಅಧಿಕೃತ ವೆಬ್‌ಸೈಟ್: chitradurganirmithikendra.com