
ಗೂಗಲ್‌ನಂತಹ ಜಾಗತಿಕ ಸಂಸ್ಥೆಯಲ್ಲಿ ಕೆಲಸ ಮಾಡುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕನಸು. ಈಗ ಆ ಕನಸನ್ನು ನನಸಾಗಿಸಿಕೊಳ್ಳಲು ಒಂದು ಸುವರ್ಣಾವಕಾಶ ಒದಗಿಬಂದಿದೆ. ಗೂಗಲ್ ವಿಶೇಷ ಫೆಲೋಶಿಪ್ ಪ್ರೋಗ್ರಾಂ ಅನ್ನು ಪ್ರಕಟಿಸಿದ್ದು, ಇದರಲ್ಲಿ ಭಾಗವಹಿಸುವವರಿಗೆ ಬರೋಬ್ಬರಿ 10 ಲಕ್ಷ ರೂಪಾಯಿಗಳವರೆಗೆ ಸ್ಟೈಫಂಡ್ ಪಡೆಯುವ ಅವಕಾಶವಿದೆ.
ವಾಷಿಂಗ್ಟನ್ ಡಿಸಿಯಲ್ಲಿ ನಡೆಯಲಿರುವ ಈ ವಿಶೇಷ ಫೆಲೋಶಿಪ್ ಕಾರ್ಯಕ್ರಮವು ಕೇವಲ ಅನುಭವವನ್ನು ಮಾತ್ರವಲ್ಲದೆ, ಆರ್ಥಿಕವಾಗಿಯೂ ವಿದ್ಯಾರ್ಥಿಗಳಿಗೆ ದೊಡ್ಡ ಬೆಂಬಲ ನೀಡಲಿದೆ. ಪದವಿ ಓದುತ್ತಿರುವ ವಿದ್ಯಾರ್ಥಿಗಳಿಂದ ಹಿಡಿದು ಪಿಎಚ್‌ಡಿ ಸಂಶೋಧಕರವರೆಗೆ ಯಾರು ಬೇಕಾದರೂ ಇದಕ್ಕೆ ಅರ್ಜಿ ಸಲ್ಲಿಸಬಹುದು.
ನೀವು ಪದವಿ (UG), ಸ್ನಾತಕೋತ್ತರ ಪದವಿ (PG) ಅಥವಾ ಪಿಎಚ್‌ಡಿ ವ್ಯಾಸಂಗ ಮಾಡುತ್ತಿರಬೇಕು. ನೀವು ಪೂರ್ಣ ಸಮಯದ (Full-time) ಅಥವಾ ಅರೆಕಾಲಿಕ (Part-time) ವಿದ್ಯಾರ್ಥಿಯಾಗಿದ್ದರೂ ಅರ್ಜಿ ಸಲ್ಲಿಸಲು ಅವಕಾಶವಿದೆ.
ಜನವರಿ 1, 2026 ರ ವೇಳೆಗೆ ಅಭ್ಯರ್ಥಿಗೆ ಕನಿಷ್ಠ 18 ವರ್ಷ ತುಂಬಿರಬೇಕು. ಇಂಟರ್ನೆಟ್ ತಂತ್ರಜ್ಞಾನ ಮತ್ತು ನೀತಿಗಳ ಬಗ್ಗೆ ಆಸಕ್ತಿ ಇರಬೇಕು. ಉತ್ತಮ ಸಂಶೋಧನಾ ಮನೋಭಾವ, ಬರವಣಿಗೆ ಮತ್ತು ಸಂವಹನ ಕೌಶಲ್ಯ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಕೆಲಸದ ಅವಧಿಗೆ ಅನುಗುಣವಾಗಿ ಸ್ಟೈಫಂಡ್ ನೀಡಲಾಗುತ್ತದೆ:
ಇದನ್ನೂ ಓದಿ: ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವವರಿಗೆ ಸುವರ್ಣಾವಕಾಶ: 10th ಪಾಸಾಗಿದ್ರೆ ಸಾಕು!
ಆಸಕ್ತ ಮತ್ತು ಅರ್ಹ ವಿದ್ಯಾರ್ಥಿಗಳು ಗೂಗಲ್‌ನ ಅಧಿಕೃತ ವೃತ್ತಿ ಪೋರ್ಟಲ್ (Google Careers Portal) ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ನಿಮ್ಮ ಶೈಕ್ಷಣಿಕ ಜೀವನಕ್ಕೆ ಹೊಸ ತಿರುವು ನೀಡಬಲ್ಲ ಈ ಅವಕಾಶವನ್ನು ಕೈಬಿಡಬೇಡಿ. ಇಂದೇ ಅರ್ಜಿ ಸಲ್ಲಿಸಿ ನಿಮ್ಮ ವೃತ್ತಿಜೀವನಕ್ಕೆ ಗೂಗಲ್ ವೇಗ ನೀಡಿ!
ಅಭ್ಯರ್ಥಿಗಳು ಅಮೆರಿಕದಲ್ಲಿ ಕೆಲಸ ಮಾಡಲು ಕಾನೂನುಬದ್ಧ ಅನುಮತಿ (Work Authorization) ಹೊಂದಿರಬೇಕು. ವೀಸಾ ಪ್ರಕ್ರಿಯೆಗೆ ಗೂಗಲ್ ಯಾವುದೇ ನೆರವು ನೀಡುವುದಿಲ್ಲ.
ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ