India Post Recruitment 2022: 10ನೇ ತರಗತಿ ಪಾಸಾದವರಿಗೆ ಉದ್ಯೋಗಾವಕಾಶ: ವೇತನ 56 ಸಾವಿರ ರೂ.
India Post Recruitment 2022: ಅರ್ಜಿ ಸಲ್ಲಿಸಲು ಬಯಸುವ ಅರ್ಹ ಅಭ್ಯರ್ಥಿಗಳು ಅಂಚೆ ಇಲಾಖೆಯ ಅಧಿಕೃತ ವೆಬ್‌ಸೈಟ್ dopsportsrecruitment.in ಗೆ ಭೇಟಿ ನೀಡುವ ಮೂಲಕ ಆನ್ಲೈನ್ನಲ್ಲೇ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.
India Post Recruitment 2022: ಭಾರತೀಯ ಅಂಚೆ ಇಲಾಖೆಯು ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS), ಪೋಸ್ಟ್‌ಮ್ಯಾನ್, ಪೋಸ್ಟಲ್ ಅಸಿಸ್ಟೆಂಟ್ ಮತ್ತು ವಿಂಗಡಣೆ ಸಹಾಯಕ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿಗಾಗಿ ನೋಂದಣಿ ಪ್ರಕ್ರಿಯೆ ನಡೆಯುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನವೆಂಬರ್ 22 ರೊಳಗೆ ಅರ್ಜಿ ಸಲ್ಲಿಸಬಹುದು. ಹಾಗೆಯೇ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಅಭ್ಯರ್ಥಿಗಳು ಅಂಚೆ ಇಲಾಖೆಯ ಅಧಿಕೃತ ವೆಬ್‌ಸೈಟ್ dopsportsrecruitment.in ಗೆ ಭೇಟಿ ನೀಡುವ ಮೂಲಕ ಆನ್ಲೈನ್ನಲ್ಲೇ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.
ಹುದ್ದೆಗಳ ವಿವರಗಳು:
- ಅಂಚೆ ಸಹಾಯಕ/ವಿಂಗಡಣೆ ಸಹಾಯಕ- 71 ಹುದ್ದೆಗಳು
- ಪೋಸ್ಟ್‌ಮ್ಯಾನ್- 56 ಹುದ್ದೆಗಳು
- MTS- 61 ಹುದ್ದೆಗಳು
ವೇತನ:
- ಅಂಚೆ ಸಹಾಯಕ ಮತ್ತು ವಿಂಗಡಣೆ ಸಹಾಯಕ ಹುದ್ದೆಗಳಿಗೆ – ರೂ.25,500/- ರಿಂದ 81100 ರೂ.
- ಪೋಸ್ಟ್‌ಮ್ಯಾನ್/ಮೇಲ್ ಗಾರ್ಡ್ ಹುದ್ದೆಗಳಿಗೆ- ರೂ.21700 ರಿಂದ 69100 ರೂ.
- MTS ಹುದ್ದೆಗಳಿಗೆ- ರೂ.18000 ರಿಂದ 56900 ರೂ.
ಶೈಕ್ಷಣಿಕ ಅರ್ಹತೆ:
- ಅಂಚೆ ಸಹಾಯಕ ಮತ್ತು ವಿಂಗಡಣೆ ಸಹಾಯಕ – 12ನೇ ತರಗತಿ ಪಾಸ್ ಆಗಿರಬೇಕು. ಹಾಗೆಯೇ ಕಂಪ್ಯೂಟರ್ ಕಲಿತಿರುವ ಪ್ರಮಾಣಪತ್ರ ಹೊಂದಿರಬೇಕು.
- ಪೋಸ್ಟ್‌ಮ್ಯಾನ್/ಮೇಲ್ ಗಾರ್ಡ್ – ಸ್ಥಳೀಯ ಭಾಷೆಯ ಜ್ಞಾನದೊಂದಿಗೆ 12ನೇ ತರಗತಿ ಉತ್ತೀರ್ಣರಾಗಿಬೇಕು. ಹಾಗೆಯೇ ಕಂಪ್ಯೂಟರ್ ಕಲಿತಿರುವ ಪ್ರಮಾಣಪತ್ರ ಹೊಂದಿರಬೇಕು.
- ಎಂಟಿಎಸ್ – 10ನೇ ತರಗತಿ ಪಾಸ್ ಆಗಿರಬೇಕು. ಜೊತೆಗೆ ಸ್ಥಳೀಯ ಭಾಷೆಯ ಜ್ಞಾನ ಹೊಂದಿರಬೇಕು.
ಅರ್ಜಿ ಶುಲ್ಕ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 100 ರೂ. ಪಾವತಿಸಬೇಕಾಗುತ್ತದೆ.
ವಯೋಮಿತಿ:
- ಅಂಚೆ ಸಹಾಯಕ/ವಿಂಗಡಣೆ ಸಹಾಯಕ: 18 ರಿಂದ 27 ವರ್ಷ
- ಪೋಸ್ಟ್‌ಮ್ಯಾನ್/ಮೇಲ್ ಗಾರ್ಡ್: 18 ರಿಂದ 27 ವರ್ಷ
- ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ: 18 ರಿಂದ 25 ವರ್ಷ
ಪ್ರಮುಖ ದಿನಾಂಕ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ನವೆಂಬರ್ 22, 2022
ಅರ್ಜಿ ಸಲ್ಲಿಸುವುದು ಹೇಗೆ? ಅರ್ಹ ಅಭ್ಯರ್ಥಿಗಳು ಅಂಚೆ ಇಲಾಖೆಯ ಅಧಿಕೃತ ವೆಬ್‌ಸೈಟ್ dopsportsrecruitment.in ಗೆ ಭೇಟಿ ನೀಡುವ ಮೂಲಕ ಆನ್ಲೈನ್ನಲ್ಲೇ ಅರ್ಜಿ ಸಲ್ಲಿಸಬಹುದಾಗಿದೆ.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.
Published On - 4:09 pm, Wed, 26 October 22