Railway Recruitment 2022: ರೈಲ್ವೆ ಇಲಾಖೆಯ 2.65 ಲಕ್ಷ ಹುದ್ದೆಗಳಿಗೆ ನೇಮಕಾತಿ
Railway Recruitment 2022: ಈ ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಈ ಮೂಲಕ ನಿರುದ್ಯೋಗಗಳಿಗೆ ಉದ್ಯೋಗ ಕಲ್ಪಿಸಲು ಸರ್ಕಾರ ಮುಂದಾಗಲಿದೆ ಎಂದು ತಿಳಿಸಿದ್ದಾರೆ.
Railway Recruitment 2022, RRB Recruitment 2022: ಪ್ರಸ್ತುತ, ರೈಲ್ವೆ ಇಲಾಖೆಯಲ್ಲಿ 2 ಲಕ್ಷ 65 ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ ಎಂದು ರಾಜ್ಯಸಭೆಯಲ್ಲಿ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಈ ಮಾಹಿತಿ ನೀಡಿದ್ದಾರೆ. ರೈಲ್ವೆ ಇಲಾಖೆಯಲ್ಲಿ ಒಟ್ಟು 2,65,547 ಹುದ್ದೆಗಳು ಖಾಲಿಯಿದ್ದು, ಇದರಲ್ಲಿ 2,177 ಹುದ್ದೆಗಳು ಗೆಜೆಟೆಡ್ ಮತ್ತು 2,63,370 ಹುದ್ದೆಗಳು ನಾನ್ ಗೆಜೆಟೆಡ್. ಈ ಹುದ್ದೆಗಳ ನೇಮಕಾತಿ ಮೂಲಕ ದೇಶದ ನಿರುದ್ಯೋಗದ ಸಮಸ್ಯೆಗೆ ಪರಿಹಾರ ಕಾಣಬಹುದು ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ರೈಲ್ವೆ ಇಲಾಖೆಯ ಮಾಹಿತಿ ಪ್ರಕಾರ, ಕೇಂದ್ರ ರೈಲ್ವೆಯಲ್ಲಿ 56, ಪೂರ್ವ ಕರಾವಳಿ ರೈಲ್ವೆಯಲ್ಲಿ 87, ಪೂರ್ವ ರೈಲ್ವೆಯಲ್ಲಿ 195, ಪೂರ್ವ ಮಧ್ಯ ರೈಲ್ವೆಯಲ್ಲಿ 170, ಮೆಟ್ರೋ ರೈಲ್ವೆಯಲ್ಲಿ 22, ಉತ್ತರ ಮಧ್ಯ ರೈಲ್ವೆಯಲ್ಲಿ 141, ಈಶಾನ್ಯ ರೈಲ್ವೆಯಲ್ಲಿ 62, ಈಶಾನ್ಯ ಗಡಿ ರೈಲ್ವೆಯಲ್ಲಿ 112 , ಉತ್ತರ ರೈಲ್ವೆ 115, ವಾಯುವ್ಯ ರೈಲ್ವೆ 100, ದಕ್ಷಿಣ ಮಧ್ಯ ರೈಲ್ವೆ 43, ಆಗ್ನೇಯ ಮಧ್ಯ ರೈಲ್ವೆ 88, ಆಗ್ನೇಯ ರೈಲ್ವೆ 137, ದಕ್ಷಿಣ ರೈಲ್ವೆ 65, ಪಶ್ಚಿಮ ಮಧ್ಯ ರೈಲ್ವೆ 59, ಪಶ್ಚಿಮ ರೈಲ್ವೆ 172 ಮತ್ತು ಇತರ ಘಟಕಗಳಲ್ಲಿ 507 ಗೆಜೆಟೆಡ್ ಹುದ್ದೆಗಳು ಖಾಲಿ ಇವೆ.
ಇನ್ನು ನಾನ್ ಗೆಜೆಟೆಡ್ ಹುದ್ದೆಗಳಿಗೆ ಸಂಬಂಧಿಸಿದಂತೆ, ಕೇಂದ್ರ ರೈಲ್ವೆಯಲ್ಲಿ 27,177, ಪೂರ್ವ ಕರಾವಳಿ ರೈಲ್ವೆಯಲ್ಲಿ 8,447, ಪೂರ್ವ ರೈಲ್ವೆಯಲ್ಲಿ 28,204, ಪೂರ್ವ ಮಧ್ಯ ರೈಲ್ವೆಯಲ್ಲಿ 15,268, ಮೆಟ್ರೋ ರೈಲ್ವೆಯಲ್ಲಿ 856, ಉತ್ತರ ಮಧ್ಯ ರೈಲ್ವೆಯಲ್ಲಿ 9,366, ಈಶಾನ್ಯ ರೈಲ್ವೆಯಲ್ಲಿ 14,231 ರೈಲ್ವೆ, ಈಶಾನ್ಯ ಗಡಿ ರೈಲ್ವೆ 15,477, ಉತ್ತರ ರೈಲ್ವೆಯಲ್ಲಿ 37,436, ವಾಯುವ್ಯ ರೈಲ್ವೆಯಲ್ಲಿ 15,049, ದಕ್ಷಿಣ ಮಧ್ಯ ರೈಲ್ವೆಯಲ್ಲಿ 16,741, ಆಗ್ನೇಯ ಮಧ್ಯ ರೈಲ್ವೆಯಲ್ಲಿ 9,422, ಆಗ್ನೇಯ ರೈಲ್ವೆಯಲ್ಲಿ 16,847, ದಕ್ಷಿಣ ಭಾರತೀಯ ರೈಲ್ವೆಯಲ್ಲಿ 9,500, ದಕ್ಷಿಣ ಪಶ್ಚಿಮ ರೈಲ್ವೆಯಲ್ಲಿ 6,5315, ಪಶ್ಚಿಮ ರೈಲ್ವೆಯಲ್ಲಿ 26,227 ಹುದ್ದೆಗಳು ಮತ್ತು ಇತರ ಘಟಕಗಳಲ್ಲಿ 12760 ಗೆಜೆಟೆಡ್ ಹುದ್ದೆಗಳು ಖಾಲಿ ಇವೆ.
ಈ ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಈ ಮೂಲಕ ನಿರುದ್ಯೋಗಗಳಿಗೆ ಉದ್ಯೋಗ ಕಲ್ಪಿಸಲು ಸರ್ಕಾರ ಮುಂದಾಗಲಿದೆ ಎಂದು ತಿಳಿಸಿದ್ದಾರೆ. ಹೀಗಾಗಿ ರೈಲ್ವೆ ಇಲಾಖೆಯಲ್ಲಿ ಶೀಘ್ರದಲ್ಲೇ 2 ಲಕ್ಷ 65 ಸಾವಿರಕ್ಕೂ ಅಧಿಕ ಹುದ್ದೆಗಳ ನೇಮಕಾತಿ ನಡೆಯಲಿದೆ. ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಉತ್ತಮ.
Published On - 11:14 pm, Mon, 14 February 22