ITBP Recruitment 2023: ITBP ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ
c: ಈ ನೇಮಕಾತಿ ಅಡಿಯಲ್ಲಿ ಕಾನ್ಸ್‌ಟೇಬಲ್ (ಚಾಲಕ) ಮತ್ತು ಹೆಡ್ ಕಾನ್ಸ್‌ಟೇಬಲ್ (ಸೂಲಗಿತ್ತಿ) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ITBP Recruitment 2023: ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ ವಿಭಾಗದಲ್ಲಿನ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ ಪ್ರಕಟಣೆ ಹೊರಡಿಸಲಾಗಿದೆ. ಈ ನೇಮಕಾತಿ ಅಡಿಯಲ್ಲಿ ಕಾನ್ಸ್‌ಟೇಬಲ್ (ಚಾಲಕ) ಮತ್ತು ಹೆಡ್ ಕಾನ್ಸ್‌ಟೇಬಲ್ (ಸೂಲಗಿತ್ತಿ) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ನ ಅಧಿಕೃತ ವೆಬ್ಸೈಟ್ recruitment.itbpolice.nic.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.
ಹುದ್ದೆಗಳ ವಿವರಗಳು:
- ಕಾನ್ಸ್ಟೇಬಲ್ (ಚಾಲಕ) – 458 ಹುದ್ದೆಗಳು
- ಹೆಡ್ ಕಾನ್‌ಸ್ಟೆಬಲ್ (ಸೂಲಗಿತ್ತಿ)- 81 ಹುದ್ದೆಗಳು
ಶೈಕ್ಷಣಿಕ ಅರ್ಹತೆಗಳು:
- ಕಾನ್ಸ್ಟೇಬಲ್ (ಚಾಲಕ) – ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಮಾನ್ಯ ಚಾಲನಾ ಪರವಾನಗಿಯನ್ನು ಹೊಂದಿರಬೇಕು.
- ಹೆಡ್ ಕಾನ್‌ಸ್ಟೆಬಲ್ (ಸೂಲಗಿತ್ತಿ)- ಅಭ್ಯರ್ಥಿಯು 10ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು ಮತ್ತು ಮಿಡ್‌ವೈಫರಿ ಪ್ರಮಾಣಪತ್ರವನ್ನು ಹೊಂದಿರಬೇಕು.
ವಯೋಮಿತಿ:
- ಕಾನ್ಸ್ಟೇಬಲ್ (ಚಾಲಕ)- 21 ರಿಂದ 27 ವರ್ಷಗಳು
- ಹೆಡ್ ಕಾನ್ಸ್‌ಟೇಬಲ್ (ಸೂಲಗಿತ್ತಿ) – 18 ರಿಂದ 25 ವರ್ಷಗಳು
ಆಯ್ಕೆ ಪ್ರಕ್ರಿಯೆ:
- ದೈಹಿಕ ದಕ್ಷತೆಯ ಪರೀಕ್ಷೆ
- ದೈಹಿಕ ಪ್ರಮಾಣಿತ ಪರೀಕ್ಷೆ
- ಲಿಖಿತ ಪರೀಕ್ಷೆ
- ಡಾಕ್ಯುಮೆಂಟ್ ಪರಿಶೀಲನೆ
- ವೈದ್ಯಕೀಯ ಪರೀಕ್ಷೆಗಳ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ವೇತನ:
- ಕಾನ್ಸ್ಟೇಬಲ್ (ಚಾಲಕ)- ರೂ.21,700/- ರಿಂದ ರೂ.69,100/-
- ಹೆಡ್ ಕಾನ್ಸ್‌ಟೇಬಲ್ (ಸೂಲಗಿತ್ತಿ)- ರೂ .25,500/- ರಿಂದ Rs.81,100/-
ಪ್ರಮುಖ ದಿನಾಂಕ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 26/07/2023
ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.
Published On - 3:01 pm, Mon, 26 June 23